Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಅಯೋಧ್ಯೆ: ಶ್ರೀರಾಮನಿಗೆ ಚಿನ್ನದ ಚಪ್ಪಲಿ ಅರ್ಪಿಸಲು 8000 ಕಿ. ಮೀ ಕಾಲ್ನಡಿಗೆಯಲ್ಲಿ ಹೋಗುತ್ತಿರುವ ಹೈದರಾಬಾದ್‌ನ ವ್ಯಕ್ತಿ
ಜನವರಿ 22, ಎಲ್ಲಾ ಶ್ರೀರಾಮ ಭಕ್ತರು ಕಾತುರದಿಂದ ಎದುರು ನೋಡುತ್ತಿರುವ ದಿನ. ಅಯೋಧ್ಯೆಯಲ್ಲಿ ಶ್ರೀರಾಮನನ್ನು ಕಣ್ತುಂಬಿಕೊಳ್ಳಲು ಪ್ರತಿದಿನ ರಾಮ... ರಾಮ ಎಂದು ಜಪಿಸುತ್ತಿದ್ದಾರೆ. ಈಗಾಗಲೇ ಭಕ್ತರು ಅಯೋಧ್ಯೆಯೆಡೆಗೆ ಪ್ರಯಾಣ ಮಾಡುತ್ತಿದ್ದಾರೆ.
ಕೆಲವರು ಕಾಲ್ನಡಿಗೆಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ, ತುಂಬಾ ಭಕ್ತರು ತಮ್ಮ ಕೈಯಲ್ಲಾದ ಅಳಿವು ಸೇವೆಯನ್ನು ಆ ಭಗವಂತನಿಗೆ ಮಾಡುತ್ತಿದ್ದಾರೆ. ಗುಜರಾತಿ ಚಿನ್ನದ ವ್ಯಾಪಾರಿಯೊಬ್ಬರು ರಾಮಮಂದಿರ ಹೋಲುವ ವಜ್ರಖಚಿತ ಹಾರವನ್ನು ಶ್ರೀರಾಮನಿಗೆ ಅರ್ಪಿಸಿದ್ದಾರೆ. ಹೈದರಾಬಾದ್‌ನ ಹಿರಿಯ ಜೀವವೊಂದು ರಾಮನಿಗೆ ಚಿನ್ನದ ಕೋಟ್‌ನ ಚಪ್ಪಲಿ ಮಾಡಿಸಿಕೊಂಡು ಅಯೋಧ್ಯೆಗೆ ಬರಿಗಾಲಿನಲ್ಲಿ ಹೋಗುತ್ತಿದ್ದಾರೆ. ಅವರ ಹೆಸರು ಚಲ್ಲ ಶ್ರೀನಿವಾಸ ಶಾಸ್ತ್ರಿ

ಹೈದರಾಬಾದ್‌ನಿಂದ ಅಯೋಧ್ಯೆಗೆ ಸುಮಾರು 8000 ಕಿ.ಮೀ ಅನ್ನು ನಡೆದುಕೊಂಡೇ ಹೋಗಿ ರಾಮನ ದರ್ಶನ ಮಾಡುತ್ತೇನೆ ಎಂಬ ಸಂಕಲ್ಪ ಅವರದ್ದು. ಅವರು ಜನವರಿ 22ಕ್ಕೆ ಅಯೋಧ್ಯೆಗೆ ತಲುಪಲಿದ್ದಾರೆ. ಸುಮಾರು 65 ಲಕ್ಷ ಮೌಲ್ಯದ ಚಿನ್ನದ ಪಾದುಕೆಗಳನ್ನು ಹೊತ್ತುಕೊಂಡು ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದಾರೆ. ಅವರು ಈ ಮೊದಲು 5 ಬೆಳ್ಳಿಯ ಇಟ್ಟಿಗೆಗಳನ್ನು ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ನೀಡಿದ್ದರು.
ಪಂಚ ಲೋಹವನ್ನು ಬಳಸಿ ಪಾದುಕೆಯನ್ನು ಮಾಡಿ ಅದಕ್ಕೆ ಚಿನ್ನದ ಲೇಪನ ಮಾಡಲಾಗಿದೆ. ಅವರು ಅಯೋಧ್ಯೆಗೆ ಹೋಗುವ ಮುನ್ನ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥನನ್ನು ಬೇಟಿ ಮಾಡಿ ನಂತರ ಅಯೋಧ್ಯೆ ಮಂದಿರಕ್ಕೆ ಹೋಗಲಿದ್ದಾರೆ.
ಅವರ ಈ ಸೇವೆಗೆ ಸ್ಪೂರ್ತಿಯೇನು?
ಅವರ ತಂದೆ ಕರಸೇವಾದಲ್ಲಿ ಭಾಗಿಯಾಗಿದ್ದರು ಅವರು ಹನುಮಂತನ ಭಕ್ತರಾಗಿದ್ದರು, ಅಯೋಧ್ಯೆಯಲ್ಲಿ ಶ್ರೀರಾಮನನ್ನು ನೋಡಬೇಕೆಂಬುವುದು ಅವರ ಆಸೆಯಾಗಿತ್ತು. ಈಗ ಅವರಿಲ್ಲ ಅವರ ಆಸೆಯನ್ನು ನಾನು ಪೂರೈಸಲು ಇಚ್ಛಿಸುತ್ತೇನೆ ಎಂದು ಹೇಳುತ್ತಾರೆ. ಶಾಸ್ತ್ರಿಗಳ ಜೊತೆ ಐವರು ಈ ಧಾರ್ಮಿಕ ಪ್ರಯಾಣ ಕೈಗೊಂಡಿದ್ದಾರೆ.
ಶಾಸ್ತ್ರಿಗೆ ಅಯೋಧ್ಯೆಯಲ್ಲಿ ನೆಲನಿಲ್ಲುವ ಆಸೆಯಂತೆ, ಅಲ್ಲಿಯೇ ಮನೆ ಖರೀದಿಸಿ ವಾಸಿಸಬೇಕೆಂಬ ಇಚ್ಛೆ ವ್ಯಕ್ತಪಡಿಸುತ್ತಿದ್ದಾರೆ.
ಜುಲೈನಿಂದ ಪ್ರಯಾಣ ಆರಂಭಿಸಿರುವ ಶಾಸ್ತ್ರಿ
ಶಾಸ್ತ್ರಿ ತಮ್ಮ ಪ್ರಯಾಣವನ್ನು ಜುಲೈನಿಂದ ಪ್ರಾರಂಭಿಸಿದ್ದಾರೆ. ಶಿವ ದೇವಾಲಯಗಳಲ್ಲಿ ತಂಗುತ್ತಾ ಪ್ರಯಾಣ ಮಾಡುತ್ತಿದ್ದಾರೆ. ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಟಾಪನೆ ದಿನ ತಲುಪುವ ಗುರಿ ಹೊಂದಿದ್ದಾರೆ.
ಆದರ್ಶಪುರುಷ ಶ್ರೀರಾಮ ಅಯೋಧ್ಯೆಯಲ್ಲಿ ಜನಿಸಿದ ಎಂದು ರಾಮಾಯಣದಲ್ಲಿ ಹೇಳಲಾಗಿದೆ. ಮೊಘಲರು ಭಾರತದ ಮೇಲೆ ದಾಳಿ ಮಾಡಿದಾಗ ಅಲ್ಲಿದ್ದ ಶ್ರೀರಾಮನ ಮಂದಿರ ನಾಶ ಮಾಡಿ ಬಾಬ್ರಿ ಮಸೀದಿ ನಿರ್ಮಾಣ ಮಾಡಲಾಯ್ತು, ಆದರೆ ಶ್ರೀರಾಮನ ಭಕ್ತರು ನಿರಂತರ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿತ್ತು, ಇದೀ ಅಯೋಧ್ಯೆಯಲ್ಲಿ ಭವ್ಯ ಮಂದಿರ ತಲೆ ಎತ್ತಿದ, ಜನವರಿ 22ಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುವುದು. ಪ್ರವಾಸಿಗರು ಅತಿ ಹೆಚ್ಚಾಗಿ ಬರಲಿದ್ದಾರೆ, ಜನರು ತಮ್ಮ ಕೈಯಲ್ಲಾದ ಕಾಣಿಕೆ ನೀಡಿ, ಅಯೋಧ್ಯೆ ಮಂದಿರ ಕಟ್ಟಲು ನೆರವಾಗಿದ್ದಾರೆ. ಆ ಶ್ರೀರಾಮನ ಕೃಪೆಯಿಂದ ಭಾರತ ದೇಶ ಮತ್ತಷ್ಟು ಸದೃಢವಾಗಲಿ.



Click it and Unblock the Notifications
