Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಶ್ರಾವಣ ಮಾಸ: ಶಿವನಿಗೆ ಬಿಲ್ವಪತ್ರೆ ಎಲೆಗಳನ್ನು ಅರ್ಪಿಸುವಾಗ ಈ ನಿಯಮಗಳು ತಿಳಿದಿರಲಿ
ಶ್ರಾವಣ ಮಾಸ ಶಿವನ ಆರಾಧನೆಗೆ ಮೀಸಲಾದ ಮಾಸ, ಶಿವನ ಆರಾಧನೆಯಲ್ಲಿ ಬಿಲ್ವಪತ್ರೆ ಎಲೆಗಳಿಗೆ ತುಂಬಾನೇ ಮಹತ್ವವಿದೆ, ಶಿವ ಪೂಜೆಯಲ್ಲಿ ಏನೇನೂ ಅರ್ಪಿಸದಿದ್ದರೂ ಸರಿ, ಬಿಲ್ವಪತ್ರೆ ಮಾತ್ರ ಅರ್ಪಿಸಲೇಬೇಕು, ಇಲ್ಲದಿದ್ದರೆ ಶಿವನು ನಮ್ಮ ಪೂಜೆಯಿಂದ ತೃಪ್ತನಾಗುವುದಿಲ್ಲ ಎಂದು ಹೇಳಲಾಗುವುದು.
ಆದರೆ ಶಿವ ಪೂಜೆಗೆ ಬಿಲ್ವಪತ್ರೆಗಳನ್ನು ಹೇಗೆ ಅರ್ಪಿಸಬೇಕು ಎಂಬುವುದಕ್ಕೆ ಕೆಲವು ನಿಯಮಗಳಿವೆ, ಭಕ್ತರು ಆ ನಿಯಮ ಪ್ರಕಾರ ಮಾತ್ರ ಶಿವನಿಗೆ ಬಿಲ್ವಪತ್ರೆ ಅರ್ಪಿಸಬೇಕು. ನೀವು ಶಿವನ ಆರಾಧನೆ ಮಾಡುವಾಗ ಬಿಲ್ವಪತ್ರೆ ಹೇಗೆ ಅರ್ಪಿಸಬೇಕು, ಶಿವಪೂಜೆಯಲ್ಲಿ ಬಿಲ್ವಪತ್ರೆಗೆ ಏಕಿಷ್ಟು ಮಹತ್ವ ಎಂದು ನೋಡೋಣ ಬನ್ನಿ:

ಬಿಲ್ವಪತ್ರೆ ಶಿವನಿಗೆ ಏಕಿಷ್ಟು ಪ್ರಿಯ?
ಪೌರಾಣಿಕ ಕತೆ ಪ್ರಕಾರ ಬಿಲ್ವ ಪತ್ರೆ ಮರವು ಪಾರ್ವತಿ ದೇವಿಯ ಬೆವರಿನಿಂದ ಹುಟ್ಟಿಕೊಂಡಿತು. ಬಿಲ್ವಪತ್ರೆಯಲ್ಲಿ ಪಾರ್ವತಿ ದೇವಿ ನೆಲೆಸಿರುತ್ತಾಳೆ, ಗಿರಿಜೆಯಾಗಿ ಈ ಮರದ ಬೇರುಗಳಲ್ಕಿ, ಮಹೇಶ್ವರಿಯಾಗಿ ಈ ಮರದ ಕಾಂಡದಲ್ಲಿ, ದಾಕ್ಷಾಯಣಿಯಾಗಿ ಕೊಂಬೆಗಳಲ್ಲಿ, ಪಾರ್ವತಿಯಾಗಿ ಇದರ ಎಲೆಗಳಲ್ಲಿ, ಕಾತ್ಯಾಯನಿಯಾಗಿ ಈ ಮರದ ಹಣ್ಣುಗಳಲ್ಲಿ, ಗೌರಿಯಾಗಿ ಬಿಲ್ವಪತ್ರೆ ಹೂಗಳಲ್ಲಿ ನೆಲೆಸಿರುತ್ತಾಲೆ. ಪಾರ್ವತಿಯ ಎಲ್ಲಾ ಸ್ವರೂಪಗಳು ಈ ಮರದ ರೂಪದಲ್ಲಿ ಆದ್ದರಿಂದ ಶಿವನಿಗೆ ಬಿಲ್ವಪತ್ರೆ ಅಚ್ಚುಮೆಚ್ಚು ಎಂದು ಕರೆಯಲಾಗುವುದು. ಬಿಲ್ವಪತ್ರೆ ಮರ ಸ್ವರ್ಗದಲ್ಲಿರುವ ಕಲ್ಪ ವೃಕ್ಷಕ್ಕೆ ಸಮ ಎಂದು ಹೇಳಲಾಗುವುದು.
ಬಿಲ್ವ ಪತ್ರೆ ಎಲೆಗಳನ್ನು ಅರ್ಪಿಸುವಾಗ ಈ ನಿಯಮಗಳನ್ನು ಪಾಲಿಸಿ
* ಬಿಲ್ವಪತ್ರೆ ಎಲೆಯನ್ನು ಒಂದಾಗಿ ಅರ್ಪಿಸಬಾರದು, ಮೂರು ಎಲೆಗಳನ್ನು ಜೊತೆಯಾಗಿ ಶಿವನಿಗೆ ಅರ್ಪಿಸಬೇಕು.
* ಶಿವನಿಗೆ ಅರ್ಪಿಸುವ ಬಿಲ್ವಪತ್ರೆ ಎಲೆಗಳು ಹರಿದಿರಬಾರದು, ಹುಳು ಕಚ್ಚಿರಬಾರದು, ರಂಧ್ರಗಳಿರಬಾರದು.
* ಬಿಲ್ವ ಪತ್ರೆ ಎಲೆಗಳನ್ನು ಸೋಮವಾರ ಕೀಳಲೇಬಾರದು.ಸೋಮವಾರದ ಪೂಜೆಗೆ ಬಿಲ್ವಪತ್ರೆ ಅರ್ಪಿಸಲು ನೀವು ಭಾನುವಾರವೇ ಕೀಳಬೇಕು.
* ಬಿಲ್ವಪತ್ರೆ ಯಾವತ್ತಿಗೂ ಅಪವಿತ್ರವಾಗುವುದಿಲ್ಲ, ಒಮ್ಮೆ ಪೂಜೆಗೆ ಅರ್ಪಿಸಿದ ಎಲೆಗಳನ್ನು ಶಿವ ಪೂಜೆಯಲ್ಲಿ ಬಳಸುವುದಿಲ್ಲ, ಆದರೆ ಇತರ ಪೂಜೆಯಲ್ಲಿ ಬಳಸಬಹುದು.
* ಬಿಲ್ವಪತ್ರೆಯ ಮೃದು ಭಾಗ ಮೇಲಿರುವಂತೆ ಎಲೆಗಳನ್ನು ಅರ್ಪಿಸಬೇಕು, ಮಗುಚಿ ಅರ್ಪಿಸಬೇಡಿ.
* ಶಿವನಿಗೆ ಜಲಾಭಿಷೇಕ ಮಾಡುವಾಗ ಬಿಲ್ವಪತ್ರೆ ಅರ್ಪಿಸಿ.
* ಶಿವನಿಗೆ ಬಿಲ್ವಪತ್ರೆ ಅರ್ಪಿಸುವಾಗ ಉಂಗುರ ಬೆರಳು, ಮಧ್ಯ ಬೆರಳು, ಹೆಬ್ಬರಳು ಬಳಸಿ ಅರ್ಪಿಸಬೇಕು.
ಬಿಲ್ವ ಪತ್ರೆ ಎಲೆ ಕೀಳುವಾಗ ಈ ನಿಯಮಗಳನ್ನು ಅನುಸರಿಸಬೇಕು
ಎಲೆಗಳನ್ನು ಕೀಳುವಾಗ ಓಂ ನಮಃ ಶಿವಾಯ ಮಂತ್ರ ಪಠಿಸುತ್ತಾ ಕೀಳಬೇಕು.
ಬಿಲ್ವಪತ್ರೆ ಎಲೆಗಳನ್ನು ಕೀಳುವಾಗ ಕೈಗಳು ಶುದ್ಧವಾಗಿರಬೇಕು. ಸ್ನಾನ ಮಾಡಿ, ಮಡಿ ಬಟ್ಟೆ ಧರಿಸಿ, ಬಿಲ್ವ ಪತ್ರೆ ಮರವನ್ನು ಪೂಜಿಸಿ ಅದರ ಅನುಮತಿ ಕೇಳಿ ನಂತರವಷ್ಟೇ ಎಲೆಗಳನ್ನು ಕೀಳಬೇಕು.
* ಬಿಲ್ವಪತ್ರೆ ಕಿತ್ತ ಬಳಿಕ ಅವುಗಳನ್ನು ಶುದ್ಧ ನೀರಿನಿಂದ ತೊಳೆಯಬೇಕು.
* ನಂತರ ಎಲೆಗಳ ಮೇಲೆ ಓಂ ಅಂತ ಚಂದನ ಪೇಸ್ಟ್‌ನಿಂದ ಬರೆದು ನಂತರ ಶಿವನಿಗೆ ಅರ್ಪಿಸಿ. ಬಿಲ್ವ ಪತ್ರೆ ಎಲೆಗಳನ್ನು ತೊಟ್ಟು ಸಹಿತ ಅರ್ಪಿಸಬೇಕು.
ಯಾವ ದಿನಗಳಲ್ಲಿ ಬಿಲ್ವಪತ್ರೆ ಕೀಳಬಾರದು?
ಸೋಮವಾರ, ಅಮವಾಸ್ಯೆ, ಮಕರ ಸಂಕ್ರಾಂತಿ, ಪೂರ್ಣಿಮಾ, ಅಷ್ಟಮಿ, ನವಮಿಯಂದು ಬಿಲ್ವಪತ್ರೆ ಎಲೆಗಳನ್ನು ಕೀಳಬಾರದು.



Click it and Unblock the Notifications