Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಗಣೇಶನಿಗೆ ಎಷ್ಟು ಗರಿಕೆ ಅರ್ಪಿಸಬೇಕು? ಹೇಗೆ ಅರ್ಪಿಸಬೇಕು?
ಗಣಪತಿ ಪೂಜೆಯನ್ನು ಮಾಡಲು ಕಠಿಣ ನಿಯಮಗಳಿಲ್ಲ, ಆದರೆ ಶುದ್ಧ ಮನಸ್ಸಿನಿಂದ ಶ್ರೀ ಗಣೇಶನ ಆರಾಧನೆ ಮಾಡಿದರೆ ಸಾಕು ಗಣೇಶನ ಕೃಪೆಗೆ ಪಾತ್ರರಾಗುತ್ತೇವೆ. ಆದರೆ ಗಣಪತಿ ಪೂಜೆಯಲ್ಲಿ ಎಲ್ಲಾ ವಸ್ತುಗಳಿಗಿಂತ ಗರಿಕೆಗೆ ತುಂಬಾ ಶ್ರೇಷ್ಠವಾದ ಸ್ಥಾನವಿದೆ. ನೀವು ಪೂಜೆಗೆ ಇತರ ಯಾವುದೇ ವಸ್ತುಗಳನ್ನು ಅರ್ಪಿಸದಿದ್ದರೂ ಬರೀ ಗರಿಕೆಯನ್ನು ಅರ್ಪಿಸಿದರೂ ಸಾಕು ಗಣೇಶ ತೃಪ್ತನಾಗುತ್ತಾನೆ.
ಗಣಪತಿ ಪೂಜೆಯಲ್ಲಿ ಗರಿಕೆಯನ್ನು ಏಕೆ ಅರ್ಪಿಸಲಾಗುವುದು? ಇದರ ಹಿಂದಿರುವ ಧಾರ್ಮಿಕ ಕಾರಣಗಳೇನು ಎಂದು ನೋಡೋಣ ಬನ್ನಿ:

ದಂಥಕತೆ ಪ್ರಕಾರ
ದೇವಲೋಕದ ನರ್ತಕಿ ಗಣಪತಿಯನ್ನು ಮದುವೆಯಾಗ ಬಯಸುತ್ತಾಳೆ. ಗಣೇಶ ಧ್ಯಾನ ಮಾಡುತ್ತಿದ್ದಾಗ ಆಕೆ ಗಣಪತಿಯ ಧ್ಯಾನಕ್ಕೆ ಭಂಗ ಮಾಡಲು ಯತ್ನಿಸುತ್ತಾಳೆ, ನಂತರ ಗಣೇಶನ ಬಳಿ ತನ್ನ ಆಸೆಯನ್ನು ಹೇಳುತ್ತಾಳೆ, ಗಣಪತಿ ಆಕೆಯನ್ನು ಮದುವೆಯಾಗಲು ನಿರಾಕರಿಸುತ್ತಾನೆ, ಇದರಿಂದ ಕೋಪಗೊಂಡ ಆಕೆ ಶಾಪವನ್ನು ನೀಡುತ್ತಾರೆ. ಇದರಿಂದ ಗಣಪತಿಗೆ ಮೈಯೆಲ್ಲಾ ಉರಿಯ ಅನುಭವ ಉಂಟಾಗುವುದು ಆವಾಗ ಗರಿಕೆಯನ್ನು ಕಿತ್ತು ತಲೆ ಮೇಲೆ ಇಟ್ಟಾಗ ಉರಿ ಕಡಿಮೆಯಾಯಿತು, ಹೀಗಾಗಿ ಗಣಪತಿಗೆ ಗರಿಕೆಯೆಂದರೆ ತುಂಬಾನೇ ಪ್ರಿಯ ಎಂದು ಹೇಳಲಾಗುವುದು.
ಅನಾಲಸುರ ಎಂಬ ರಾಕ್ಷಸ ತನ್ನ ಪೈಶಾಚಿಕ ಕೃತ್ಯ ಮೂಲಕ ದೇವ ಲೋಕದ ನೆಮ್ಮದಿ ಕೆಡಿಸಿದ್ದ , ದೇವತೆಗಳು ಶ್ರೀ ಗಣೇಶನ ಬಳಿ ಬಂದು ಕಾಪಾಡುವಂತೆ ಕೋರುತ್ತಾರೆ. ಆವಾಗ ಶ್ರೀ ಗಣೇಶ ಅನಾಲಸುರ ಎಂಬ ರಾಕ್ಷಸನನ್ನು ನುಂಗಿ ಭೂ ಲೋಕವನ್ನು ಕಾಪಾಡುತ್ತಾನೆ. ಆದರೆ ರಾಕ್ಷಸನ ನುಂಗಿದ ಬಳಿಕ ದೇಹದಲ್ಲಿ ತುಂಬಾ ಉರಿ ಉಂಟಾಗುವುದು, ಶ್ರೀ ವಿಷ್ಣು ಕಮಲವನ್ನು, ಇಂದ್ರ ಚಂದ್ರನನ್ನು ನೀಡುತ್ತಾನೆ, ಆದರೆ ಉರಿ ಕಡಿಮೆಯಾಗಲಿಲ್ಲ, ಆವಾಗ 21 ಗರಿಕೆಯನ್ನು ಗಣೇಶನಿಗೆ ಅರ್ಪಿಸಿದಾಗ ಉರಿ ಕಡಿಮೆಯಾಗುತ್ತದೆ, ಹೀಗಾಗಿ ಶ್ರೀ ಗಣೇಶನ ಪೂಜೆಯಲ್ಲಿ ಗರಿಕೆಯನ್ನು ಕಡ್ಡಾಯವಾಗಿ ಬಳಸಬೇಕು ಎಂದು ಹೇಳಲಾಗುವುದು.
ಎಷ್ಟು ಗರಿಕೆಯನ್ನು ಅರ್ಪಿಸಬೇಕು?
ಗಣೇಶನಿಗೆ ಗರಿಕೆಯನ್ನು ಅರ್ಪಿಸುವಾಗ ಬೆಸ ಸಂಖ್ಯೆಯಲ್ಲಿ ಅರ್ಪಿಸಬೇಕು. ಗರಿಕೆಯನ್ನು 3 ಅಥವಾ 5, 7, 21ರಂತೆ ಅರ್ಪಿಸಬೇಕು. ಸಾಮಾನ್ಯವಾಗಿ 21 ಗರಿಕೆಯನ್ನು ಅರ್ಪಿಸಲಾಗುವುದು.
ಗಣೇಶನಿಗೆ ಗರಿಕೆಯನ್ನು ಹೇಗೆ ಅರ್ಪಿಸಬೇಕು?
ಶ್ರೀ ಗಣೇಶನ ಮುಖ ಬಿಟ್ಟು ದೇಹದ ಉಳಿದ ಭಾಗವನ್ನು ಗರಿಕೆಯಿಂದ ಅಲಂಕರಿಸಿದರೆ ಒಳ್ಳೆಯದು ಎಂದು ಹೇಳಲಾಗುವುದು. ಗರಕೆಯನ್ನು ಬಳಸಿದರೆ 3 ದಿನಗಳಿಗೊಮ್ಮೆ ಬದಲಾಯಿಸಿದರೆ ಸಾಕು.



Click it and Unblock the Notifications
