Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ನಮ್ಮ ಇಷ್ಟಾರ್ಥ ನೆರವೇರಲು ಸಾಯಿ ಬಾಬಾರನ್ನು ಮನೆಯಲ್ಲಿ ಹೇಗೆ ಪೂಜಿಸಬೇಕು?
ಶಿರಡಿ ಸಾಯಿಬಾಬಾನ ದರ್ಶನಕ್ಕೆ ವಿಶ್ವದ ಎಲ್ಲಾ ಕಡೆಯಿಂದ ಭಕ್ತರು ಬರುತ್ತಾರೆ. ಶಿರಡಿ ಸಾಯಿಬಾಬಾನ ಆರಾಧಿಸುವುದರಿಂದ ಸಾಯಿಬಾಬಾ ನಮ್ಮನ್ನು ಎಲ್ಲಾ ಕಷ್ಟದ ಸಂದರ್ಭಗಳಲ್ಲಿ ಮಾಡುತ್ತಾನೆ ಎಂಬುವುದನ್ನು ಬಾಬಾನ ಆರಾಧಿಸುವ ಭಕ್ತರು ಬಲವಾಗಿ ನಂಬುತ್ತಾರೆ.
ಕೆಲವರು ವರ್ಷಕ್ಕೊಮ್ಮೆ ಅಥವಾ ತಮಗೆ ಎಷ್ಟು ಬಾರಿ ಸಾಧ್ಯವೋ ಅಷ್ಟು ಬಾರಿ ಹೋಗಿ ಬಾಬಾನ ದರ್ಶನ ಪಡೆದು ಬರುತ್ತಾರೆ. ಆದರೆ ಎಲ್ಲರಿಗೆ ಶಿರಡಿಗೆ ಆಗಾಗ ಹೋಗಿ ಬರಲು ಸಾಧ್ಯವಾಗುವುದಿಲ್ಲ. ಬಾಬಾನ ಮೂರ್ತಿಯನ್ನು ಮನೆಯಲ್ಲಿ ಆರಾಧಿಸುತ್ತಾರೆ. ನೀವು ಶಿರಡಿ ಸಾಯಿ ಬಾಬಾನನ್ನು ಮನೆಯಲ್ಲಿ ಆರಾಧಿಸುವಾಗ ಕೆಲವೊಂದು ಪೂಜಾ ನಿಯಮಗಳಿವೆ, ಅದರಂತೆ ಪೂಜೆ ಮಾಡಿದರೆ ಶಿರಡಿ ಬಾಬಾನ ಕೃಪೆ ನಿಮ್ಮ ಮೇಲೆ ಇರಲಿದೆ.

ಸಾಯಿಬಾಬಾ ಮೂರ್ತಿಯನ್ನು ನಿಮ್ಮ ಮನೆಯ ದೇವರ ಕೋಣೆಯಲ್ಲಿ ಇಡಿ
ನೀವು ಸಾಯಿಬಾಬಾನ ಮಾರ್ಬಲ್ ಮೂರ್ತಿಯನ್ನು ನಿಮ್ಮ ಮನೆಯಲ್ಲಿಡಬೇಕು. ಮನೆಯಲ್ಲಿ ಸಾಯಿಬಾಬಾನ ಮೂರ್ತಿ ಇದ್ದರೆ ದೇವರೇ ನಿಮ್ಮ ಮನೆಯಲ್ಲಿ ಇರುವ ಭಾವನೆ ಮೂಡುವುದು. ಆ ಮೂರ್ತಿಯನ್ನು ನೋಡಿದಾಗ ಧನಾತ್ಮಕ ಭಾವನೆ ಮೂಡಿಸುತ್ತದೆ. ಪ್ರತಿದಿನ ಶಿರಡಿ ಸಾಯಿಬಾಬಾನ ಮೂರ್ತಿಗೆ ನಮಸ್ಕರಿಸಿ ನಮ್ಮ ದಿನವನ್ನು ಪ್ರಾರಂಭಿಸುವುದರಿಂದ ದೇವರ ಕೃಪೆ ನಮ್ಮ ಮೇಲಿದೆ ಎಂಭ ಭಾವನೆಯೊಂದೇ ಸಾಕು ಎಂಥ ಸವಾಲನ್ನು ಕೂಡ ಎದುರಿಸುವ ಶಕ್ತಿ ದೊರೆಯುವುದು.
ಸಾಯಿ ಬಾಬಾ ಮೂರ್ತಿಯನ್ನು ಸ್ವಚ್ಛಗೊಳಿಸಿ
ನಿಮ್ಮ ಮನೆಯಲ್ಲಿ ಸಾಯಿಬಾಬಾರ ಮಾರ್ಬಲ್ ಮೂರ್ತಿ ಇದ್ದರೆ ರೋಸ್ ವಾಟರ್ ಬಳಸಿ ಮೂರ್ತಿಯನ್ನು ಸ್ವಚ್ಛಗೊಳಿಸಿ. ಕೆಲವರು ಹಾಲು, ಮೊಸರು, ಗಂಗಾ ಜಲ ಬಳಸಿ ಸ್ವಚ್ಛಗೊಳಿಸುತ್ತಾರೆ. ನಂತರ ಬಾಬಾ ಮೂರ್ತಿಯನ್ನು ಸ್ವಚ್ಛ ಬಟ್ಟೆಯಿಂದ ವರ್ತಿಸಿ. ಸಾಯಿಬಾಬಾನ ಭಕ್ತರು ಪೂಜಿಸುವಾಗ ಯಾವುದೇ ಆಡಂಭರ ಅಗ್ಯತವಿಲ್ಲ, ಮನಸ್ಸಿನಲ್ಲಿ ಪವಿತ್ರವಾದ ಭಕ್ತಿಯೊಂದಿದ್ದರೆ ಸಾಕು.
ದೀಪ ಹಚ್ಚಿ
ನೀವು ದೇವರ ಮೂರ್ತಿಯನ್ನು ಸ್ವಚ್ಛಗೊಳಿಸಿ, ಹೂವಿನಿಂದ ಅಲಂಕರಿಸಿ ತುಪ್ಪದ ದೀಪವನ್ನು ಬೆಳಗಿ. ನೀವು ಸಾಯಿಬಾಬಾಗೆ ಮಲ್ಲಿಗೆ , ಚೆಂಡು ಹೂ, ಗುಲಾಬಿ ಹೂ ಹೀಗೆ ಹೂಗಳಿಂದ ಅಲಂಕರಿಸಿ.
ಸಾಯಿಬಾಬಾನಿಗೆ ಯಾವ ನೈವೇದ್ಯ ಅರ್ಪಿಸಬೇಕು?
ಸಾಯಿಬಾಬಾನಿಗೆ ಯಾವುದೇ ಸಾತ್ವಿಕ ಆಹಾರ ನೀವು ಸೆವಿಸುವ ಮುನ್ನ ರುಚಿ ನೋಡದೆ ನೈವೇದ್ಯವಾಗಿ ಅರ್ಪಿಸಬೇಕು. ಸಾಯಿಬಾಬಾಗೆ ಇಂಥದ್ದೇ ನೈವೇದ್ಯ ಅರ್ಪಿಸಬೇಕೆಂಬ ಕಡ್ಡಾಯ ನಿಯಮವೇನೂ ಇಲ್ಲ. ನೀವು ಪ್ರತಿದಿನ ನೀವು ಮಾಡಿದ ಅಡುಗೆಯಲ್ಲಿ ದೇವರಿಗೆ ಸ್ವಲ್ಪ ನೈವೇದ್ಯವಾಗಿ ಅರ್ಪಿಸಿ ನಂತರ ಸೇವಿಸಬಹುದು.
ಆರತಿ ಬೆಳಗಿ
ಸಾಯಿಬಾಬಾಗೆ ಆರತಿ ಬೆಳಗಿ, ಭಕ್ತಿಗೀತೆ ಅಥವಾ ಮಂತ್ರಗಳನ್ನು ಹೇಳುವ ಮೂಲಕ ಆರಾಧಿಸಿ.
ಸಾಯಿ ಬಾಬಾ ಮಂತ್ರ ಪಠಿಸಿ
ಓಂ ಸಾಯಿನಾಥಾಯ ನಮಃ
ಓಂ ಲಕ್ಷ್ಮೀ ನಾರಾಯಣಾಯ ನಮಃ
ಓಂ ಶ್ರೀ ರಾಮಕೃಷ್ಣ ಮಾರುತ್ಯಾದಿ ರೂಪಾಯ ನಮಃ
ಓಂ ಶೇಷಶಾಯಿನೇ ನಮಃ
ಓಂ ಗೋದಾವರೀತಟ ಶಿರಡೀ ವಾಸಿನೇ ನಮಃ
ಓಂ ಭಕ್ತ ಹೃದಾಲಯಾಯ ನಮಃ
ಓಂ ಸರ್ವಹೃದ್ವಾಸಿನೇ ನಮಃ
ಓಂ ಭೂತಾವಾಸಾಯ ನಮಃ
ಓಂ ಭೂತ ಭವಿಷ್ಯದ್ಭಾವವರ್ಜತಾಯ ನಮಃ
ಓಂ ಕಾಲಾತೀ ತಾಯ ನಮಃ
ಗುರುವಾರ ವಿಶೇಷ ಪೂಜೆ ಸಲ್ಲಿಸಿ
ಶಿರಡಿ ಸಾಯಿಬಾಬಾರನ್ನು ನೀವು ಪ್ರತಿದಿನ ಪೂಜೆ ಸಲ್ಲಿಸಬಹುದು, ಅದರಲ್ಲೂ ಗುರುವಾರ ಸಾಯಿಬಾಬಾರಿಗೆ ಉಪವಾಸವಿದ್ದು ಪೂಜೆ ಸಲ್ಲಿಸಿದರೆ ಇನ್ನೂ ಒಳ್ಳೆಯದು.
ಶಿರಡಿ ಸಾಯಿಬಾಬಾ ಸದಾ ಅವನ ಭಕ್ತರನ್ನು ರಕ್ಷಿಸುತ್ತಾನೆ, ಸಾಯಿಬಾಬಾರ ಸ್ಮರಣೆಯೇ ಸಾಯಿಬಾಬಾರನ್ನು ಆರಾಧಿಸುತ್ತಿರುವ ಭಕ್ತರ ಶಕ್ತಿ... ಓಂ ಸಾಯಿನಾಥಾಯ ನಮಃ



Click it and Unblock the Notifications
