Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಶನಿದೋಷ ನಿವಾರಣೆ ಮಾಡುತ್ತೆ ಶನಿ ಸಿಂಗಾಪುರದ ಕುದುರೆ ಲಾಳ, ಎಲ್ಲಿ ಸಿಗುತ್ತೆ?
ಶನಿದೋಷ ಇರುವವರು ಶನಿ ಕುದುರೆ ಲಾಳ (ಶನಿ ಉಂಗುರ) ಬಳಸಿದರೆ ಒಳ್ಳೆಯದು ಎಂದು ಹೇಳಲಾಗುವುದು. ಶನಿ ಕುದುರೆ ಲಾಳ ಮಹಾರಾಷ್ಟ್ರದ ಶನಿ ಸಿಂಗಾಪುರದಲ್ಲಿ ದೊರೆಯುತ್ತದೆ. ಕೆಲವರು ಶನಿದೋಷ ನಿವಾರಣೆ ಕಬ್ಬಿಣದ ರಿಂಗ್ ಧರಿಸುತ್ತಾರೆ.
ಈ ಶನಿ ಕುದುರೆ ಲಾಳ ಹಾಗೇ ಧರಿಸುವಂತಿಲ್ಲ, ಇದನ್ನು ಧರಿಸುವಾಗ ಕೆಲವೊಂದು ನಿಯಮಗಳನ್ನು ಅನುಸರಿಸಬೇಕು, ಆವಾಗ ಮಾತ್ರ ಇದರ ಸಂಪೂರ್ಣ ಪ್ರಯೋಜನ ಪಡೆಯಲು ಸಾಧ್ಯವಾಗುವುದು. ಈ ಶನಿ ಕುದುರೆ ಲಾಳ ಬಗ್ಗೆ ಹೆಚ್ಚಿನ ಮಾಹಿತಿ ನೋಡುವುದಾದರೆ:

ಶನಿದೋಷ ನಿವಾರಣೆಗೆ ಕುದುರೆಲಾಳ ಬಳಸಲಾಗುವುದು
ಇದು ನಿಮಗೆ ಶನಿ ಸಿಂಗಾಪುರದಲ್ಲಿ ದೊರೆಯುವುದು. ಶನಿ ಸಿಂಗಾಪುರದ ಮಹತ್ವದ ಬಗ್ಗೆ ನೋಡುವುದಾದರೆ:
ಶನಿ ಸಿಂಗಾಪುರ ಎಂಬುವುದು ಒಂದು ಗ್ರಾಮ. ಈ ಗ್ರಾಮ ಮಹಾರಾಷ್ಟ್ರದ ನಾಸಿಕ್ ಸಮೀಪದಲ್ಲಿದೆ. ಈ ಗ್ರಾಮದ ವಿಶೇಷತೆಯೆಂದರೆ ಇಲ್ಲಿಯ ಬ್ಯಾಂಕ್‌ಗಳಿಗೂ ಬೀಗ ಹಾಕುವುದಿಲ್ಲ.
ಶನಿದೇವ ಈ ಗ್ರಾಮವನ್ನು ರಕ್ಷಣೆ ಮಾಡುತ್ತದೆ ಎಂಬ ಬಲವಾದ ನಂಬಿಕೆ ಜನರಲ್ಲಿದೆ. ಜನರ ನಂಬಿಕೆಗೆ ತಕ್ಕಂತೆ ಅನೇಕ ಪವಾಡಗಳು ನಡೆದಿರುವುದರಿಂದ ಇಲ್ಲಿ ಕಳ್ಳತನ ಮಾಡುವ ಧೈರ್ಯ ಯಾವೊಬ್ಬ ಕಳ್ಳನಿಗೆ ಇರಲ್ಲ. ಕಳ್ಳತನ ಇತಿಹಾಸವಿಲ್ಲದ ಗ್ರಾಮ ಇದಾಗಿದೆ. ಇಲ್ಲಿ ಶನಿದೇವನ ಮೂರ್ತಿಯಿಲ್ಲ, ಆದರೆ ಒಂದು ಕಲ್ಲು ಇದೆ, ಆ ಕಲ್ಲನ್ನು ಶನಿದೇವ ಎಂದು ಪೂಜಿಸಲಾಗುವುದು.
ಯಾವುದೇ ಪೂಜಾರಿಯಿಲ್ಲ
ಈ ದೇವಾಲಯದ ಮತ್ತೊಂದು ವಿಶೇಷತೆಯೆಂದರೆ ಇಲ್ಲಿ ಪೂಜೆ ಮಾಡಲು ಯಾವುದೇ ಪೂಜಾರಿಯಿಲ್ಲ ಜನರೇ ಪೂಜೆ ಮಾಡುತ್ತಾರೆ. ಈ ದೇವಾಲಯಕ್ಕೆ ಹೋಗುವ ಮುನ್ನ ಪುರುಷರು ತಲೆಗೆ ನೀರು ಹಾಕಿ ಕೇಸರಿ ಬಟ್ಟೆ ಧರಿಸಿ ಹೋಗುತ್ತಾರೆ. ಮಂತ್ರಗಳನ್ನು ಹೇಳುತ್ತಾ ಪ್ರದಕ್ಷಿಣೆ ಬರುವುದೇ ಇಲ್ಲಿಯ ಪೂಜಾ ವಿಧಾನವಾಗಿದೆ. ಜನರು ಎಳ್ಳೆಣ್ಣೆ ಅಭಿಷೇಕ, ನೀರಿನ ಅಭಿಷೇಕ ಮಾಡುತ್ತಾರೆ. ಈ ದೇವಾಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಾರೆ. ಇಲ್ಲಿಯ ಮನೆಗಳಿಗೂ ಭೀಗ, ಭದ್ರತೆ ಎಂಬುವುದು ಇರುವುದಿಲ್ಲ. ಇಲ್ಲಿ ಕಳ್ಳತನ ಮಾಡುವ ಧೈರ್ಯ ಯಾರಿಗೂ ಇಲ್ಲ, ಹಾಗಾಗಿ ಕಳ್ಳನ ಭಯವಿಲ್ಲದೆ ಜನ ನೆಮ್ಮದಿಯಾಗಿ ಜೀವನ ಮಾಡುತ್ತಾರೆ. ಇಲ್ಲಿ ಸಿಗುವ ರಿಂಗ್ ಅನ್ನು ಶನಿದೋಷ ನಿವಾರಣೆಗೆ ಬಳಸಲಾಗುವುದು.
ಕುದುರೆ ಲಾಳದ ರಿಂಗ್ ಹೇಗೆ ಬಳಸಲಾಗುವುದು
ಇದನ್ನು ತಂದು ಮನೆಯ ಮುಂಬಾಗಿಲಿನಲ್ಲಿ ಕಟ್ಟಲಾಗುವುದು. ಇದರಿಂದ ಕೆಟ್ಟದೃಷ್ಟಿಯಿಂದ ರಕ್ಷಣೆ ಸಿಗುವುದು, ಕೆಲಸ, ಉದ್ಯೋಗದಲ್ಲಿ ಪ್ರಗತಿ ಉಂಟಾಗುವುದು ಎಂಬ ನಂಬಿಕೆ ಇದೆ.
ಕುದುರೆ ಲಾಳ ಮನೆಮುಂದೆ ನೇತು ಹಾಕುವುದರಿಂದ ದೊರೆಯುವ ಪ್ರಯೋಜನಗಳು
* ಇದು ಮನೆಯನ್ನು ಕೆಟ್ಟ ದೃಷ್ಟಿಯಿಂದ ರಕ್ಷಿಸುತ್ತದೆ
* ಮನೆಯೊಳಗಡೆ ಸೋಂಕಾಣುಗಳು ಬರುವುದನ್ನು ತಡೆಗಟ್ಟುತ್ತದೆ
* ಅದೃಷ್ಟದ ಸಂಕೇತವಾಗಿದೆ
* ಮಾಟ-ಮಂತ್ರದಿಂದ ರಕ್ಷಣೆ ನೀಡುವುದು
* ಶನಿಯ ಕೆಟ್ಟದೃಷ್ಟಿ ಕಡಿಮೆ ಮಾಡಿ, ಕಷ್ಟಗಳನ್ನು ನೀಗಿಸುವುದು.



Click it and Unblock the Notifications
