ಜನವರಿ 22ಕ್ಕೆ ರಾಮಮಂದಿರ ಉದ್ಘಾಟನೆ: ಅಯೋಧ್ಯೆ ರಾಮಮಂದಿರದ ತಿಳಿದಿರಲೇಬೇಕಾದ ಇತಿಹಾಸವಿದು

2024 ರ ಜನವರಿ 22 ರಂದು ಭಗವಾನ್ ರಾಮನ ನಗರವಾದ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆ ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ಧತೆಗಳೂ ನಡೆಯುತ್ತಿದೆ. ದೇವಾಲಯದ ಉದ್ಘಾಟನೆಯೊಂದಿಗೆ, ಅಯೋಧ್ಯೆ ರಾಮಮಂದಿರವು ಭಾರತ ಸೇರಿದಂತೆ ಪ್ರಪಂಚದಾದ್ಯಂತ ಇರುವ ಹಿಂದೂಗಳ ನಂಬಿಕೆಯ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಲಿದೆ. ಇಂದು ನಿರ್ಮಾಣವಾಗುತ್ತಿರುವ ಭವ್ಯ ರಾಮಮಂದಿರದ ಹಿಂದೆ ಅನೇಕ ಹೋರಾಟದ ಕತೆಗಳಿವೆ, ದೀರ್ಘ ಸುದೀರ್ಘ ಕಾನೂನು ಹೋರಾಟವಿದೆ.

Shri Ram Mandir Ayodya

ಅಯೋಧ್ಯೆ ಇತಿಹಾಸ ಕಥೆ
ಅಯೋಧ್ಯೆ ಇತಿಹಾಸ ಕಥೆ 1526 ರಿಂದ ಪ್ರಾರಂಭವಾಗುತ್ತದೆ. ಮೊಘಲ್ ದೊರೆ ಬಾಬರ್ ಭಾರತಕ್ಕೆ ಬಂದ ವರ್ಷವಿದು. ಭಾರತಕ್ಕೆ ಬಂದು ಎರಡು ವರ್ಷಗಳ ನಂತರ, ಬಾಬರನ ಸುಬೇದಾರ್ ಮಿರ್ಬಕಿ ಅಯೋಧ್ಯೆಯಲ್ಲಿ ಮಸೀದಿಯನ್ನು ನಿರ್ಮಿಸಿದನು. ಈ ಮಸೀದಿಯನ್ನು ರಾಮನು ಜನಿಸಿದ ಸ್ಥಳದಲ್ಲಿಯೇ ನಿರ್ಮಿಸಲಾಗಿದೆ. ಬಾಬರ್ ನಿರ್ಮಿಸಿರುವುದರಿಂದ ಈ ಮಸೀದಿಗೆ ಬಾಬರಿ ಮಸೀದಿ ಎಂದು ಹೆಸರಿಡುತ್ತಾನೆ. ಮೊಘಲರ ಆಳ್ವಿಕೆ ದೇಶಾದ್ಯಂತ ಹರಡುತ್ತಿದ್ದ ಕಾಲವಿದು. 1528 ರಿಂದ 1853 ರವರೆಗೆ ಮೊಘಲರು, ನವಾಬರ ಆಳ್ವಿಕೆಯಲ್ಲಿ ಅನೇಕ ದೇವಾಲಯಗಳನ್ನು ನಾಶ ಮಾಡಲಾಯಿತು. . 19 ನೇ ಶತಮಾನದಲ್ಲಿ, ಮೊಘಲರು ಮತ್ತು ನವಾಬರ ಆಳ್ವಿಕೆಯು ದುರ್ಬಲಗೊಳ್ಳುತ್ತಾ ಬಂದಿತ್ತು, ಅಷ್ಟರಲ್ಲಿ ಬ್ರಿಟಿಷರ ಆಳ್ವಿಕೆ ಶುರುವಾಗಿತ್ತು, ಈ ಅವಧಿಯಲ್ಲಿ ಹಿಂದೂಗಳು ಭಗವಾನ್ ರಾಮನ ಜನ್ಮಸ್ಥಳವಾದ ದೇವಾಲಯವನ್ನು ಕೆಡವಿ ಮಸೀದಿಯನ್ನು ನಿರ್ಮಿಸಲಾಯಿತು, ರಾಮನ ಜನ್ಮ ಸ್ಥಳ ಮರಳಿಬೇಕೆಂದು ಹೋರಾಟಕ್ಕಿಳಿದರು. ಹೀಗೆ ರಾಮಲಾಲ ಜನ್ಮಸ್ಥಳವನ್ನು ಪಡೆಯುವ ಹೋರಾಟ ಆರಂಭವಾಯಿತು.

ಬಾಬರಿ ಮಸೀದಿಯ ನಿರ್ಮಾಣದ 330 ವರ್ಷಗಳ ನಂತರ ಮೊದಲ ಎಫ್‌ಐಆರ್ ಪ್ರಾರಂಭವಾಯಿತು
1858 ರಲ್ಲಿ, ಮಿರ್ಬಾಕಿ ಮಸೀದಿಯನ್ನು ನಿರ್ಮಿಸಿದ 330 ವರ್ಷಗಳ ನಂತರ, ಮೊದಲ ಬಾರಿಗೆ ಆ ಸ್ಥಳದಲ್ಲಿ ಹವನ, ಪೂಜೆ ಮಾಡುವುದರ ವಿರುದ್ಧ ಎಫ್‌ಐಆರ್ ದಾಖಲಿಸಿದಾಗ ಹೋರಾಟವು ಕಾನೂನುಬದ್ಧವಾಯಿತು. ಇದರಿಂದಾಗಿ ತಂತಿ ಬೇಲಿ ನಿರ್ಮಿಸಿ ವಿವಾದಿತ ಜಮೀನಿನ ಒಳ ಮತ್ತು ಹೊರ ಆವರಣದಲ್ಲಿ ಮುಸ್ಲಿಮರು ಹಾಗೂ ಹಿಂದೂಗಳು ಪ್ರತ್ಯೇಕವಾಗಿ ಪೂಜೆ, ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಲಾಯಿತು

ಅದಾಗಿ 27 ವರ್ಷಗಳ ನಂತರ 1885ರಲ್ಲಿ ರಾಮ ಜನ್ಮಭೂಮಿಯ ಹೋರಾಟವು ನ್ಯಾಯಾಲಯವನ್ನು ತಲುಪಿತು. ಸಿವಿಲ್ ದಾವೆ ಹೂಡಿ ಬಾಬ್ರಿ ಕಟ್ಟಡದ ಹೊರ ಪ್ರಾಂಗಣದಲ್ಲಿರುವ ರಾಮನ ವೇದಿಕೆಯ ಮೇಲೆ ನಿರ್ಮಿಸಲಾಗಿರುವ ತಾತ್ಕಾಲಿಕ ಮಂದಿರವನ್ನು ಕಾಂಕ್ರೀಟ್ ಮತ್ತು ಮೇಲ್ಛಾವಣಿ ಮಾಡಬೇಕೆಂದು ವಾದ ಮಂಡಿಸಲಾಯಿತು. ಅಲ್ಲಿ ಪೂಜಿಸುವ ಹಕ್ಕು ಹಿಂದೂಗಳಿಗೆ ಇದೆ ಎಂದು ನ್ಯಾಯಾಧೀಶರು ತೀರ್ಪು ನೀಡಿದರು. ಜಿಲ್ಲಾಧಿಕಾರಿಗಳು ತೀರ್ಪು ವಿರೋಧಿಸಿ ದೇವಸ್ಥಾನವನ್ನು ಕಾಂಕ್ರೀಟ್ ಮಾಡಲು ಅನುಮತಿ ನೀಡಲಿಲ್ಲ.

ಸ್ವಾತಂತ್ರ್ಯಾನಂತರ ತೀವ್ರಗೊಂಡ ಅಭಿಯಾನ
ಒಂದೆಡೆ ಬ್ರಿಟಿಷರ ವಿರುದ್ಧ ಹೋರಾಟ ಮುಂದುವರಿದರೆ ಮತ್ತೊಂದು ಕಡೆ ರಾಮಜನ್ಮಭೂಮಿ ಹೋರಾಟವೂ ಮುಂದುವರಿದಿತ್ತು. ದೇಶವು ಸ್ವಾತಂತ್ರ್ಯ ಪಡೆದ ಎರಡು ವರ್ಷಗಳ ನಂತರ 22 ಡಿಸೆಂಬರ್ 1949 ರಂದು ಗುಮ್ಮಟದ ಅಡಿಯಲ್ಲಿ ಪ್ರತಿಮೆಗಳನ್ನು ಬಹಿರಂಗಪಡಿಸಲಾಯಿತು. ಸ್ವಾತಂತ್ರ್ಯದ ನಂತರ ಮೊದಲ ಪ್ರಕರಣವನ್ನು ಹಿಂದೂ ಮಹಾಸಭಾ ಸದಸ್ಯ ಗೋಪಾಲ್ ಸಿಂಗ್ ವಿಶಾರದ್ ಅವರು ಜನವರಿ 16, 1950 ರಂದು ಫೈಜಾಬಾದ್‌ನ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಸಲ್ಲಿಸಿದರು. ರಚನೆಯ ಮುಖ್ಯ ಗುಮ್ಮಟದ ಕೆಳಗೆ ಇರುವ ದೇವರ ವಿಗ್ರಹಗಳನ್ನು ಪೂಜಿಸಲು ವಿಶಾರದ್ ಒತ್ತಾಯಿಸಿದರು. ಸುಮಾರು 11 ತಿಂಗಳ ನಂತರ, ಡಿಸೆಂಬರ್ 5, 1950 ರಂದು, ಮಹಂತ್ ರಾಮಚಂದ್ರ ಪರಮಹಂಸರು ಸಿವಿಲ್ ನ್ಯಾಯಾಧೀಶರ ಮುಂದೆ ಇದೇ ರೀತಿಯ ಬೇಡಿಕೆಯನ್ನು ಸಲ್ಲಿಸಿದರು. ಸಂಬಂಧಪಟ್ಟ ಸ್ಥಳದಲ್ಲಿ ಪೂಜೆಗೆ ಅಡ್ಡಿಪಡಿಸುವುದನ್ನು ತಡೆಯಬೇಕೆಂದು ಮೊಕದ್ದಮೆಯಲ್ಲಿ ಒತ್ತಾಯಿಸಲಾಯಿತು.

ಮಾರ್ಚ್ 3, 1951 ರಂದು, ಗೋಪಾಲ್ ಸಿಂಗ್ ವಿಶಾರದ್ ಪ್ರಕರಣದಲ್ಲಿ, ಪೂಜೆಗೆ ಅಡ್ಡಿ ಮಾಡದಂತೆ ನ್ಯಾಯಾಲಯವು ಮುಸ್ಲಿಂ ಕಡೆಯವರಿಗೆ ಸೂಚನೆ ನೀಡಿತು. ಪರಮಹಂಸ ಅವರು ಸಲ್ಲಿಸಿದ್ದ ಪ್ರಕರಣದಲ್ಲೂ ಇದೇ ರೀತಿಯ ಆದೇಶ ನೀಡಲಾಗಿದೆ.

ನಿರ್ಮೋಹಿ ಅಖಾಡ ಪೂಜೆಗೆ ಅನುಮತಿ ಕೇಳಿದೆ
ಡಿಸೆಂಬರ್ 17, 1959 ರಂದು, ರಮಾನಂದ್ ಪಂಥದ ಪರವಾಗಿ ನಿರ್ಮೋಹಿ ಅಖಾರದ ಆರು ವ್ಯಕ್ತಿಗಳು ಪ್ರಕರಣವನ್ನು ದಾಖಲಿಸಿದರು ಮತ್ತು ಈ ಸ್ಥಳದಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಅಲ್ಲದೆ ಪ್ರಿಯದತ್ ರಾಮ್ ಅವರನ್ನು ತೆಗೆದು ಪೂಜೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಆದರೆ ಉತ್ತರ ಪ್ರದೇಶದ ಕೇಂದ್ರ ಸುನ್ನಿ ವಕ್ಫ್ ಬೋರ್ಡ್ ಈ ಸ್ಥಳ ಮುಸ್ಲಿಮರಿಗೆ ಸೇರಿದ್ದು ಎಂದು ಹೇಳಿತು. ಚಳುವಳಿ ಮತ್ತಷ್ಟು ತೀವ್ರವಾಯಿತು.

ರಾಮ, ಕೃಷ್ಣ ಮತ್ತು ಶಿವನ ಸ್ಥಳಗಳಲ್ಲಿ ಮಸೀದಿ ನಿರ್ಮಾಣದ ವಿರುದ್ಧ ಅಭಿಯಾನ
ಇದು 1982 ರಿಂದ. ವಿಶ್ವ ಹಿಂದೂ ಪರಿಷತ್ತು ರಾಮ, ಕೃಷ್ಣ ಮತ್ತು ಶಿವನ ಸ್ಥಳಗಳಲ್ಲಿ ಮಸೀದಿಗಳ ನಿರ್ಮಾಣವನ್ನು ವಿರೋಧಿಸಿ ಹೋರಾಟಕ್ಕಿಳಿದರು. ಎರಡು ವರ್ಷಗಳ ನಂತರ, 8 ಏಪ್ರಿಲ್ 1984 ರಂದು, ದೆಹಲಿಯ ಸಂತರು, ಮಹಾತ್ಮರು ಮತ್ತು ಹಿಂದೂ ಮುಖಂಡರು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಜಾಗ ವಿಮೋಚನೆಗಾಗಿ ಮತ್ತು ಬೀಗವನ್ನು ತೆರೆಯಲು ಚಳುವಳಿಯನ್ನು ಪ್ರಾರಂಭಿಸಲು ನಿರ್ಧರಿಸಿದರು. ಜನವರಿ 1989 ರಲ್ಲಿ ಪ್ರಯಾಗದಲ್ಲಿ ನಡೆದ ಕುಂಭಮೇಳದ ಸಮಯದಲ್ಲಿ, ದೇವಾಲಯದ ನಿರ್ಮಾಣಕ್ಕಾಗಿ ಪ್ರತಿ ಹಳ್ಳಿಯಲ್ಲಿ ಶಿಲಾಪೂಜೆಯನ್ನು ನಡೆಸಲು ನಿರ್ಧರಿಸಲಾಯಿತು. ಅಲ್ಲದೆ, 9 ನವೆಂಬರ್ 1989 ರಂದು, ಶ್ರೀ ರಾಮ ಜನ್ಮಭೂಮಿ ಸ್ಥಳದಲ್ಲಿ ದೇವಾಲಯದ ಅಡಿಪಾಯವನ್ನು ಘೋಷಿಸಲಾಯಿತು. ಸಾಕಷ್ಟು ವಿವಾದ ಮತ್ತು ಜಗಳದ ನಂತರ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಶಂಕುಸ್ಥಾಪನೆಗೆ ಅನುಮತಿ ನೀಡಿದರು.

ಅಡ್ವಾಣಿಯವರ ರಥಯಾತ್ರೆ
ಚಳವಳಿ ಮತ್ತಷ್ಟು ತೀವ್ರವಾಯಿತು. ಲಾಲ್ ಕೃಷ್ಣ ಅಡ್ವಾಣಿ ರಥಯಾತ್ರೆ ಮಾಡುದರು. ಈ ಯಾತ್ರೆ ರಾಮ ಜನ್ಮಭೂಮಿ ಆಂದೋಲನಕ್ಕೆ ಮತ್ತಷ್ಟು ಉತ್ತೇಜನ ನೀಡಿತು.ಈ ಯಾತ್ರೆಯಿಂದಾಗಿ ಅಡ್ವಾಣಿ ಅವರನ್ನು ಬಂಧಿಸಲಾಯಿತು. ಬಂಧನದ ಜೊತೆಗೆ ಕೇಂದ್ರದಲ್ಲಿ ಅಧಿಕಾರ ಬದಲಾವಣೆಯೂ ಆಯಿತು. ಬಿಜೆಪಿ ಬೆಂಬಲದೊಂದಿಗೆ ರಚನೆಯಾದ ಜನತಾದಳ ಸರ್ಕಾರ ಪತನವಾಯಿತು. ಕಾಂಗ್ರೆಸ್ ಬೆಂಬಲದಿಂದ ಚಂದ್ರಶೇಖರ್ ಪ್ರಧಾನಿಯಾದರು. ಈ ಸರ್ಕಾರವೂ ಹೆಚ್ಚು ದಿನ ಉಳಿಯಲಿಲ್ಲ. ಹೊಸ ಚುನಾವಣೆಗಳು ನಡೆದು ಕೇಂದ್ರದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬಂದಿತು. ಇದೆಲ್ಲದರ ನಡುವೆ, ಒಂದು ಐತಿಹಾಸಿಕ ದಿನಾಂಕವನ್ನು ಉಲ್ಲೇಖಿಸದೆ ಈ ಕಥೆಯನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ.

ಇತಿಹಾಸ ಎಂದೂ ಮರೆಯಲು ಸಾಧ್ಯವಾಗದ ಆ ದಿನ
ದಿನಾಂಕ 6 ಡಿಸೆಂಬರ್ 1992, ಈ ದಿನ ಅಯೋಧ್ಯೆಯನ್ನು ತಲುಪಿದ ಸಾವಿರಾರು ಕರ ಸೇವಕರು ವಿವಾದಿತ ಕಟ್ಟಡವನ್ನು ಕೆಡವಿದರು. ಬದಲಾಗಿ ಅದೇ ದಿನ ಸಂಜೆ ತಾತ್ಕಾಲಿಕ ದೇವಸ್ಥಾನ ನಿರ್ಮಿಸಿ ಪೂಜೆ ಆರಂಭಿಸಲಾಯಿತು. ಕೇಂದ್ರದಲ್ಲಿದ್ದ ಅಂದಿನ ಪಿ.ವಿ.ನರಸಿಂಹರಾವ್ ಸರಕಾರವೂ ರಾಜ್ಯದ ಕಲ್ಯಾಣ್ ಸಿಂಗ್ ಸರಕಾರ ಸೇರಿದಂತೆ ಇತರೆ ರಾಜ್ಯಗಳ ಬಿಜೆಪಿ ಸರಕಾರಗಳನ್ನು ವಜಾಗೊಳಿಸಿತ್ತು. ಉತ್ತರ ಪ್ರದೇಶ ಸೇರಿದಂತೆ ದೇಶದ ಹಲವೆಡೆ ಕೋಮುಗಲಭೆ ನಡೆದಿದ್ದು, ಹಲವು ಮಂದಿ ಸಾವನ್ನಪ್ಪಿದರು. ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ ಕಟ್ಟಡ ಧ್ವಂಸ ಪ್ರಕರಣದಲ್ಲಿ ಹಲವು ಬಿಜೆಪಿ ನಾಯಕರು ಸೇರಿದಂತೆ ಸಾವಿರಾರು ಜನರ ವಿರುದ್ಧ ಪ್ರಕರಣ ದಾಖಲಾಯಿತು.

ಬಾಬರಿ ಧ್ವಂಸದ ಎರಡು ದಿನಗಳ ನಂತರ 8 ಡಿಸೆಂಬರ್ 1992 ರಂದು ಅಯೋಧ್ಯೆಯಲ್ಲಿ ಕರ್ಫ್ಯೂ ವಿಧಿಸಲಾಯಿತು. ದೇವರು ಹಸಿದಿದ್ದಾನೆ ಎಂದು ವಕೀಲ ಹರಿಶಂಕರ್ ಜೈನ್ ಹೈಕೋರ್ಟ್‌ನ ಲಖನೌ ಪೀಠದಲ್ಲಿ ಮನವಿ ಮಾಡಿದರು. ರಾಮ್‌ ಭೋಗ್‌ಗೆ ಅವಕಾಶ ನೀಡಬೇಕು ಎಂದು ಮನವಿ ಸಲ್ಲಿಸಿದರು.

1 ಫೆಬ್ರವರಿ 1986 ರಂದು ಸ್ಥಳೀಯ ವಕೀಲ ಉಮೇಶ್ ಪಾಂಡೆ ಅವರ ಅರ್ಜಿಯ ಮೇರೆಗೆ ಫೈಜಾಬಾದ್ ಜಿಲ್ಲಾ ನ್ಯಾಯಾಧೀಶ ಕೆ.ಎಂ.ಪಾಂಡೆ ಅವರು ಜಾಗದ ಬೀಗವನ್ನು ತೆರೆಯಲು ಆದೇಶಿಸಿದರು. ಸುಮಾರು 25 ದಿನಗಳ ನಂತರ, ಜನವರಿ 1, 1993 ರಂದು, ನ್ಯಾಯಾಧೀಶ ಹರಿನಾಥ್ ತಿಲಹರಿ ಅವರು ದರ್ಶನ ಮತ್ತು ಪೂಜೆಗೆ ಅನುಮತಿ ನೀಡಿದರು. ಜನವರಿ 7, 1993 ರಂದು, ಕೇಂದ್ರ ಸರ್ಕಾರವು ಇಲ್ಲಿ ಒಟ್ಟು 67 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತು ಈ ಸ್ಥಳವನ್ನು ಕಲ್ಯಾಣ್ ಸಿಂಗ್ ಸರ್ಕಾರವು ಟ್ರಸ್ಟ್‌ಗೆ ನೀಡಿತು.

ಮಾಲೀಕತ್ವದ ಹಕ್ಕುಗಳ ವಿಚಾರಣೆಯು ಹೈಕೋರ್ಟ್‌ನಲ್ಲಿ ಪ್ರಾರಂಭವಾಯಿತು
ಏಪ್ರಿಲ್ 2002 ರಲ್ಲಿ, ಹೈಕೋರ್ಟ್‌ನ ಲಕ್ನೋ ಪೀಠವು ವಿವಾದಿತ ಸೈಟ್‌ನ ಮಾಲೀಕತ್ವವನ್ನು ನಿರ್ಧರಿಸಲು ವಿಚಾರಣೆಯನ್ನು ಪ್ರಾರಂಭಿಸಿತು. 5 ಮಾರ್ಚ್ 2003 ರಂದು, ಹೈಕೋರ್ಟು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಈ ಸ್ಥಳದಲ್ಲಿ ಉತ್ಖನನವನ್ನು ನಡೆಸುವಂತೆ ನಿರ್ದೇಶಿಸಿತು. ಇದರ ಪ್ರಕಾರ 22 ಆಗಸ್ಟ್ 2003 ರಂದು, ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಿತು. ಇಲ್ಲಿ ಹಿಂದೂ ದೇವಾಲಯಕ್ಕೆ ಸಂಬಂಧಿಸಿದ ಪುರಾವೆಗಳು ಸಿಕ್ಕಿತ್ತು.

ಅಲಹಾಬಾದ್ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ
ಸೆಪ್ಟೆಂಬರ್ 30, 2010 ರಂದು, ಅಲಹಾಬಾದ್ ಹೈಕೋರ್ಟ್ ಸೈಟ್ ಮೂರು ಪಕ್ಷಗಳಿಗೆ ಶ್ರೀ ರಾಮ್ ಲಾಲಾ ವಿರಾಜಮಾನ್, ನಿರ್ಮೋಹಿ ಅಖಾರಾ ಮತ್ತು ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿಗೆ ಸಮಾನವಾಗಿ ಹಂಚಲು ಆದೇಶಿಸಿತು.

ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಪ್ರಕರಣ
ಇದಾದ ಬಳಿಕ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಮಾರ್ಚ್ 21, 2017 ರಂದು, ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆಯ ಮೂಲಕ ಸಮಸ್ಯೆಯನ್ನು ಪರಿಹರಿಸಲು ಅವಕಾಶ ನೀಡಿತು. 6 ಆಗಸ್ಟ್ 2019 ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಪೂರ್ಣಗೊಂಡಿತು ಮತ್ತು ನ್ಯಾಯಾಲಯವು ತೀರ್ಪನ್ನು ಕಾಯ್ದಿರಿಸಿತ್ತು. ಇದಕ್ಕೂ ಮುನ್ನ ಸುಪ್ರೀಂ ಕೋರ್ಟ್‌ನಲ್ಲಿ 40 ದಿನಗಳ ಕಾಲ ನಿರಂತರವಾಗಿ ವಿಚಾರಣೆ ನಡೆದಿತ್ತು.ನವೆಂಬರ್ 9, 2019 ರಂದು, 134 ವರ್ಷಗಳಿಂದ ನಡೆಯುತ್ತಿರುವ ಹೋರಾಟ ನಿಲ್ಲಿಸುವ ಸಮಯ ಬಂತು, ನವೆಂಬರ್ 9, 2019 ರಂದು, ಸುಪ್ರೀಂ ಕೋರ್ಟ್ ಆ ಜಾಗವನ್ನು ಶ್ರೀ ರಾಮ ಜನ್ಮಭೂಮಿ ಎಂದು ಪರಿಗಣಿಸಿತು ಮತ್ತು 2.77 ಎಕರೆ ಭೂಮಿಯನ್ನು ರಾಮಲಾಲಾ ಮಾಲೀಕತ್ವಕ್ಕೆ ಸೇರಿದ್ದು ಎಂದು ಪರಿಗಣಿಸಿತು. ಅದೇ ಸಮಯದಲ್ಲಿ, ನಿರ್ಮೋಹಿ ಅಖಾಡ ಮತ್ತು ಸುನ್ನಿ ವಕ್ಫ್ ಮಂಡಳಿಯ ಹಕ್ಕುಗಳನ್ನು ತಿರಸ್ಕರಿಸಲಾಯಿತು.

ಇದರೊಂದಿಗೆ ಮಂದಿರ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ಮೂರು ತಿಂಗಳೊಳಗೆ ಟ್ರಸ್ಟ್ ರಚಿಸಬೇಕು ಮತ್ತು ಟ್ರಸ್ಟ್‌ನಲ್ಲಿ ನಿರ್ಮೋಹಿ ಅಖಾಡದ ಪ್ರತಿನಿಧಿಯನ್ನು ಸೇರಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿತು. ಇದಲ್ಲದೆ, ಉತ್ತರ ಪ್ರದೇಶ ಸರ್ಕಾರವು ಮಸೀದಿಯನ್ನು ನಿರ್ಮಿಸಲು ಸೂಕ್ತವಾದ ಸ್ಥಳದಲ್ಲಿ ಮುಸ್ಲಿಮರಿಗೆ ಪರ್ಯಾಯವಾಗಿ 5 ಎಕರೆ ಭೂಮಿಯನ್ನು ನೀಡಬೇಕು ಎಂದು ಆದೇಶಿಸಲಾಯಿತು.

2020 ರಲ್ಲಿ ಅಯೋಧ್ಯೆ ರಾಮಮಂದಿರಕ್ಕೆ ಅಡಿಪಾಯ
ದಶಕಗಳ ಕಾನೂನು ಹೋರಾಟ ಅಂತ್ಯವಾಯಿತು. 2020ಫೆಬ್ರವರಿ 5 ರಂದು ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕಾಗಿ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು. ಸರಿಯಾಗಿ ಆರು ತಿಂಗಳ ನಂತರ, 5 ಆಗಸ್ಟ್ 2020 ರಂದು, ಅಯೋಧ್ಯೆಯಲ್ಲಿ ರಾಮಮಂದಿರದ ಅಡಿಪಾಯವನ್ನು ಹಾಕಲಾಯಿತು, ಇದರಲ್ಲಿ ಪ್ರಧಾನಿ ಮೋದಿ ಭಾಗವಹಿಸಿದರು. ಈಗ 22 ಜನವರಿ 2024 ರಂದು, ಭಗವಾನ್ ರಾಮನ ದೇವಾಲಯ ಲೋಕಾರ್ಪಣೆಯಾಗಲಿದೆ.... ಜೈ ಶ್ರೀರಾಮ್

English summary

History of Shri Ram Mandir Ayodhya: Mythology and Legends In Kannada

Here are history of Shri Ram Mandir Ayodya: One must know these mythology and legends, read on..
X
Desktop Bottom Promotion