Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಸಂತಾನೋತ್ಪತ್ತಿ ಭಾಗ್ಯ ಕರುಣಿಸುವ ದೇವತೆಗಳು
ಸಂತಾನೋತ್ಪತ್ತಿಗಾಗಿ ದೇವರನ್ನು ಪ್ರಾರ್ಥಿಸಿದರೆ ಮಕ್ಕಳಾಗುತ್ತದೆ ಎಂಬ ನಂಬಿಕೆ ನಮ್ಮಲ್ಲಿ ಅನೇಕರಲ್ಲಿದೆ. ವೈದ್ಯಕೀಯದಲ್ಲಿ ವಿಜ್ಞಾನ ಸಾಕಷ್ಟು ಮುಂದುವರೆದಿದೆ. ಮಕ್ಕಳಾಗಲು ತೊಂದರೆ ಇರುವವರೆಗೆ ಮಕ್ಕಳಾಗುವಂತೆ ಮಾಡಲು ಅನೇಕ ಆಧುನಿಕ ಸೌಲಭ್ಯಗಳಿವೆ. ಕೆಲವೊಮ್ಮೆ ಸಂತಾನೋತ್ಪತ್ತಿಗೆ ತೆಗೆದುಕೊಳ್ಳುವ ಚಿಕಿತ್ಸೆಯೂ ಫಲಕಾರಿಯಾಗುವುದಿಲ್ಲ. ಆಗ ದೇವರ ಮೊರೆ ಹೋಗುತ್ತೇವೆ.
ಪವಾಡವೆಂಬಂತೆ ಮಕ್ಕಳಾಗದ ಅನೇಕರಿಗೆ ಕೆಲವೊಂದು ದೇವಾಸ್ಥಾನಕ್ಕೆ ಹೋಗಿ ಹರಕೆ ಮಾಡಿ ಬಂದ ಮೇಲೆ ಮಕ್ಕಳಾದ ನಿದರ್ಶನಗಳಿವೆ. ಮಕ್ಕಳಾಗದವರು ಈ ಕೆಳಗಿನ ದೇವತೆಗಳನ್ನು ಪೂಜೆ ಮಾಡಿದರೆ ಸಂತಾನ ಭಾಗ್ಯ ದೊರೆಯುತ್ತದೆ ಎಂಬ ನಂಬಿಕೆ ಜನರಲ್ಲಿದೆ. ದೇವರನ್ನು ನಂಬಿದರೆ ಮಕ್ಕಳಾಗುತ್ತದೆ, ಆಗಲ್ಲ ಅನ್ನುವುದು ನಿಮ್ಮ ನಂಬಿಕೆಗೆ ಬಿಟ್ಟದ್ದು.

ಅಧಿತಿ
ಅಧಿತಿ ದೇವರನ್ನು ಇಡೀ ಬ್ರಹ್ಮಾಂಡದ ಸೃಷ್ಟಿಕರ್ತಳು ಎನ್ನುತ್ತಾರೆ. ಅಧಿತಿ ದೇವತೆಯನ್ನು ಪ್ರತಿನಿತ್ಯ ಪೂಜೆ ಮಾಡಿದರೆ ಮಕ್ಕಳಾಗುತ್ತದೆ ಎಂಬ ನಂಬಿಕೆ ಆಸ್ತಿಕರಲ್ಲಿದೆ.
ಚಂದ್ರಾ
ಸೋಮವಾರ ತಲೆ ಸ್ನಾನ ಮಾಡಿ ಚಂದ್ರಾ ಅಂದರೆ ಸೋಮ ದೇವರನ್ನು ಪೂಜಿಸಿದರೆ ಮಕ್ಕಳಾಗುವುದು ಎನ್ನಲಾಗುತ್ತದೆ.
ಮಾನಸ
ತಾಯಿ ಮಾನಸ ಸಂತಾನೋತ್ಪತ್ತಿ ಹಾಗೂ ಹಾವುಗಳ ಅದಿ ದೇವತೆ. ಹಾವು ಕಚ್ಚಿದರೆ ಗುಣಮುಖವಾಗಲು ಹಾಗೂ ಮಕ್ಕಳಾಗಲು ಈ ದೇವತೆಯನ್ನು ಪೂಜಿಸುತ್ತಾರೆ. ಅದರಲ್ಲೂ ಬೆಂಗಾಳಿಯರು ಮಾನಸ ಪೂಜೆ ಸಮಯದಲ್ಲಿ ಬಟ್ಟಲು ತುಂಬಾ ಹಾಲನ್ನು ಹಾವಿನ ಹುತ್ತಕ್ಕೆ ಎರೆಯುತ್ತಾರೆ.
ಪಾರ್ವತಿ
ಶಕ್ತಿ ದೇವತೆಯಾದ ಪಾರ್ವತಿಯನ್ನು ಪೂಜಿಸಿದರೆ ಮಕ್ಕಳ ಭಾಗ್ಯ ಕರುಣಿಸುತ್ತಾಳೆ ಎಂಬ ನಂಬಿಕೆಯಿದೆ.
ಸಂತೋಷಿ
ಸಂತೋಷಿ ಮಾತೆ ಸಂತೃಪ್ತಿಯ ದೇವತೆ. ಈ ದೇವತೆಯನ್ನು ಬೇಡಿದರೆ ಮಕ್ಕಳ ಭಾಗ್ಯ ಕರುಣಿಸಿ ಬಾಳಿಗೆ ಸಂತೃಪ್ತಿ ತುಂಬುತ್ತಾಳೆ ಎಂಬ ನಂಬಿಕೆ ಇದೆ. ಈ ದೇವತೆಯನ್ನು ಪೂಜಿಸುವವರು ಪ್ರತೀ ಶುಕ್ರವಾರ ಉಪವಾಸ ಮಾಡುತ್ತಾರೆ. ಆ ದಿನ ಯಾವುದೇ ಹುಳಿ ಪದಾರ್ಥವನ್ನು ಮುಟ್ಟಬಾರದು. ಭಕ್ತಿಯಿಂದ ಪೂಜಿಸಿದರೆ ಮಾತೆ ನಮ್ಮ ಕೋರಿಕೆ ಈಡೇರಿಸುತ್ತಾಳೆ ಎಂಬ ನಂಬಿಕೆ ಅವಳ ಭಕ್ತರಲ್ಲಿದೆ.



Click it and Unblock the Notifications
