Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಗಾಯತ್ರಿ ಮಂತ್ರ ಎಲ್ಲಾ ಮಂತ್ರಗಳಿಗಿಂತ ತುಂಬಾ ಪವರ್‌ಫುಲ್ ಏಕೆ?
ಮೇ 31ಕ್ಕೆ ಗಾಯತ್ರಿ ಜಯಂತಿ ಆಚರಿಸಲಾಗುವುದು. ಜ್ಯೇಷ್ಠ ಮಾಸದ ಶುಕ್ಲ ಪಕ್ಷದ ಏಕಾದಶಿಯಂದಿ ಗಾಯತ್ರಿ ಜಯಂತಿಯನ್ನು ಆಚರಿಸಲಾಗುವುದು. ಗಾಯತ್ರಿ ಮಂತ್ರವನ್ನು ಎಲ್ಲಾ ನಾಲ್ಕು ವೇದಗಳ ಮುಖ್ಯ ಸಾರವೆಂದು ಪರಿಗಣಿಸಲಾಗಿದೆ. ಆದ್ದರಿಂದಲೇ ಗಾಯತ್ರಿ ಮಾತೆಯನ್ನು ವೇದ ಮಾತೆ ಎಂದು ಕರೆಯಲಾಗುವುದು.
ಗಾಯತ್ರಿ ಮಾತೆಯನ್ನು ಪೂಜಿಸುವುದರಿಂದ ಹಾಗೂ ಗಾಯತ್ರಿ ಮಂತ್ರಗಳನ್ನು ಪಠಿಸುವುದರಿಂದ ತುಂಬಾನೇ ಪ್ರಯೋಜನ ಪಡೆಯಬಹುದು. ಗಾಯತ್ರಿ ಮಂತ್ರದ ಮಹತ್ವವೇನು? ಈ ಮಂತ್ರಗಳನ್ನು ಪಠಿಸುವುದರಿಂದ ದೊರೆಯುವ ಪ್ರಯೋಜನವೇನು ಎಂದು ನೋಡೋಣ ಬನ್ನಿ:

ಗಾಯತ್ರಿ ಮಂತ್ರ
'' ಓಂ ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್''
'ದೇವರು ನನ್ನನ್ನು ವ್ಯಾಪಿಸಲಿ ಹಾಗೂ ದೇವರು ನನ್ನ ಎಲ್ಲಾ ಪಾಪಗಳನ್ನು ನಾಶಮಾಡಲಿ'
'ಎಲ್ಲಾ ಪಾಪಗಳನ್ನು ಸುಟ್ಟು ಹಾಕುವ ಆ ದಿವ್ಯ ಜ್ಯೋತಿ ನೀನು, ನಾನು ಆ ದಿವ್ಯ ಬೆಳಕನ್ನು ಪೂಜಿಸುತ್ತೇನೆ ಹಾಗೂ ಅದರಲ್ಲಿ ವಿಲೀನಗೊಳ್ಳುತ್ತೇನೆ' 'ಓ ದೇವರೇ, ನನ್ನ ಬುದ್ಧಿಯನ್ನು ಪ್ರೇರೇಪಿಸು.'
ಧಿ' - ಎಂದರೆ ಬುದ್ಧಿವಂತಿಕೆ ನೀನು ಮಾತ್ರ ನನ್ನ ಬುದ್ಧಿಶಕ್ತಿಯನ್ನು ಬೆಳಗಲು ಸಾಧ್ಯ, ನನ್ನ ಬುದ್ಧಿಯು ಪ್ರತಿ ಕ್ಷಣವೂ ನಿನ್ನ ದೈವತ್ವದಿಂದ ಪ್ರೇರಿತವಾಗಲಿ' - ಇದು ನನ್ನ ಪ್ರಾರ್ಥನೆ ಎಂಬುವುದಾಗಿದೆ.
ಗಾಯತ್ರಿ ಮಂತ್ರವು ಮಾನವಕುಲದ ಶ್ರೇಷ್ಠ ಪ್ರಾರ್ಥನೆಗಳಲ್ಲಿ ಒಂದಾಗಿದೆ
ಜೀವನದ ಎಲ್ಲಾ ದುಃಖಗಳನ್ನು ಜಯಿಸಲು ಗಾಯತ್ರಿ ಮಂತ್ರ ನೆರವಾಗುತ್ತದೆ. ಯಾರು ಗಾಯತ್ರಿ ಮಂತ್ರವನ್ನು ಜಪಿಸುತ್ತಾರೋ ಅವರು ಖಂಡಿತವಾಗಿ ದುಃಖದಿಂದ ಹೊರಬರುತ್ತಾರೆ, ಅವರ ಜೀವನದಲ್ಲಿ ಪರಮಾನಂದ ಅನುಭವಿಸುತ್ತಾರೆ. ಯಾರು ಪ್ರತಿನಿತ್ಯ ಗಾಯತ್ರಿ ಮಂತ್ರ ಪಠಿಸುತ್ತಾರೋ ಅವರ ಮನಸ್ಸು ತುಂಬಾನೇ ಶಾಂತವಾಗಿರುತ್ತದೆ, ಅವರಿಗೆ ಉದ್ವೇಗ ನಿಯಂತ್ರಿಸಲು ಸಾಧ್ಯವಾಗುವುದು. ಬದುಕಿನಲ್ಲಿ ತುಂಬಾ ಒಳಿತಾಗುವುದು.
ಮನಸ್ಸಿನ ಗೊಂದಲಗಳನ್ನು ನಿವಾರಣೆ ಮಾಡುತ್ತದೆ
ಮನಸ್ಸು ಸರಿಯಿಲ್ಲದಿದ್ದರೆ ಗೊಂದಲದ ಗೂಡಾಗುತ್ತದೆ, ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ, ಯಾರು ಗಾಯತ್ರಿ ಮಂತ್ರ ಪಠಿಸುತ್ತಾರೋ ಅವರ ಮನಸ್ಸು ತುಂಬಾನೇ ಶಾಂತವಾಗಿರುತ್ತದೆ. ಇದರಿಂದ ನೀವು ನಿರ್ಧಾರಗಳನ್ನು ಸರಿಯಾಗಿ ತೆಗೆದುಕೊಳ್ಳಲು ಸಾಧ್ಯವಾಗುವುದು. ಇದರಿಂದಾಗಿ ನಮ್ಮ ಕಾರ್ಯಗಳಲ್ಲಿ ಯಶಸ್ಸು ಪಡೆಯಬಹುದು.
"ಓ ದೇವರೇ ನನ್ನ ಮನಸ್ಸು, ನನ್ನ ಬುದ್ಧಿ ಮತ್ತು ನನ್ನ ಇಡೀ ಜೀವನವು ಪರಮಾತ್ಮನಿಂದ ವ್ಯಾಪಿಸಲ್ಪಡಲಿ ಎಂಬುವುದು ಗಾಯತ್ರಿ ಮಂತ್ರದ ಪ್ರಮುಖ ಸಾರಾಂಶವಾಗಿದೆ.
ನಾವು ಗಾಯತ್ರಿ ಮಂತ್ರವನ್ನು ಎಷ್ಟು ಬಾರಿ ಜಪಿಸಿದರೆ ಒಳ್ಳೆಯದು
ಗಾಯತ್ರಿ ಮಂತ್ರವನ್ನು108 ಬಾರಿ ಜಪಿಸಿದರೆ ಒಳ್ಳೆಯದು.
ಏಕೆಂದರೆ 9 ಗ್ರಹಗಳು ಮತ್ತು 12 ನಕ್ಷತ್ರಪುಂಜಗಳಿವೆ. 9 ಗ್ರಹಗಳು ಈ 12 ನಕ್ಷತ್ರಗಳ ಸುತ್ತ ಸುತ್ತಿದಾಗ, ಅವು 108 ರೀತಿಯ ಪರಿಣಾಮಗಳನ್ನು ಉಂಟುಮಾಡುತ್ತವೆ. ಈ ಪರಿಣಾಮಗಳಲ್ಲಿ ಋಣಾತ್ಮಕ ಏನಾದರೂ ಸಂಭವಿಸಿದರೆ, ಈ ಮಂತ್ರಗಳ ಧನಾತ್ಮಕ ಶಕ್ತಿಯಿಂದ ಅದನ್ನು ಸರಿಪಡಿಸಬಹುದು ಎಂದು ಬಲವಾಗಿ ನಂಬಲಾಗಿದೆ.
ಮಹಿಳೆಯರು ಗಾಯತ್ರಿ ಮಂತ್ರವನ್ನು ಪಠಿಸಬಹುದೇ?
ಹೌದು, ಮಹಿಳೆಯರು ಕೂಡ ಗಾಯತ್ರಿ ಮಂತ್ರವನ್ನು ಜಪಿಸಬಹುದು.
ಗಾಯತ್ರಿ ಮಂತ್ರ ಪಠಣೆ
* ಗಾಯತ್ರಿ ಮಂತ್ರವನ್ನು ಶುದ್ಧ ಮನಸ್ಸಿನಿಂದ ಪಠಿಸಬೇಕು
* ಉಚ್ಛಾರಣೆ ತಪ್ಪಾಗಬಾರದು



Click it and Unblock the Notifications