Latest Updates
-
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು!
ಗಣೇಶ ಚತುರ್ಥಿ 2023: ನಿಮ್ಮ ರಾಶಿ ಪ್ರಕಾರ ಗಣೇಶನಿಗೆ ಈ ನೈವೇದ್ಯ ಅರ್ಪಿಸಿ
ಈ ವರ್ಷ ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 18, 19ರಂದು ಆಚರಿಸಲಾಗುವುದು. ಗಣೇಶನನ್ನು ಸೆಪ್ಟೆಂಬರ್ 19ರಂದು ಪ್ರತಿಷ್ಠಾಪನೆ ಮಾಡಲಾಗುವುದು. ನೀವು ಗಣೇಶನನ್ನು ನಿಮ್ಮ ರಾಶಿಗೆ ಪ್ರಕಾರ ಹೇಗೆ ಪ್ರತಿಷ್ಠಾಪನೆ ಮಾಡಬೇಕು ಎಂಬುವುದನ್ನು ಈ ಹಿಂದಿನ ಲೇಖನದಲ್ಲಿ ಹೇಳಿದ್ದೆವು. ಈ ಲೇಖನದಲ್ಲಿ ನಿಮ್ಮ ರಾಶಿ ಪ್ರಕಾರ ಗಣೇಶನಿಗೆ ಯಾವ ನೈವೇದ್ಯ ಅರ್ಪಿಸಿದರೆ ಒಳ್ಳೆಯದು ಎಂದು ಹೇಳಲಾಗಿದೆ ನೋಡಿ:

ವೃಷಭ ರಾಶಿ: ವೃಷಭ ರಾಶಿಯವರು ಅಕ್ಕಿ ಪಾಯಸ ಅಥವಾ ಲಡ್ಡುವನ್ನು ಪ್ರಸಾದವನ್ನಾಗಿ ಅರ್ಪಿಸಿ
ಮಿಥುನ ರಾಶಿ: ನೀವು ಗಣೇಶನಿಗೆ ಫ್ರೂಟ್ ಸಲಾಡ್, ಸೌತೆ ರಾಯತ, ಮೊಳಕೆ ಬರಿಸಿದ ಕಾಳುಗಳನ್ನು ಅರ್ಪಿಸಿ
ಕರ್ಕ ರಾಶಿ: ಕರ್ಕ ರಾಶಿಯವರು ಗಣೇಶನಿಗೆ ಕಿಚಡಿ, ಕಡ್ಲೆ ಕಾಳು ಇವುಗಳನ್ನು ಪ್ರಸಾದವನ್ನಾಗಿ ಅರ್ಪಿಸಿ
ಸಿಂಹ ರಾಶಿ: ಸಿಂಹ ರಾಶಿಯವರು ಗಣೇಶನಿಗೆ ಪಾಯಸ, ಬೂಂದಿ, ಲಡ್ಡುಗಳನ್ನು ಅರ್ಪಿಸಿ
ಕನ್ಯಾ ರಾಶಿ: ನೀವು ಬೂಂದಿಯನ್ನು ಗಣೇಶನಿಗೆ ಅರ್ಪಿಸಿ.
ತುಲಾ ರಾಶಿ: ನೀವು ಗಣೇಶನಿಗೆ ತೆಂಗಿನಕಾಯಿಂದ ಮಾಡಿದ ಸಿಹಿತಿಂಡಿಯನ್ನು ಅರ್ಪಿಸಿ. ಕರ್ಜಿಕಾಯಿಯನ್ನು ಮಾಡಿ ಅರ್ಪಿಸಿ.
ವೃಶ್ಚಿಕ ರಾಶಿ: ನೀವು ಗಣೇಶನಿಗೆ ಬಗೆ ಬಗೆಯ ಮೋದಕಗಳನ್ನು ಅರ್ಪಿಸಿ
ಧನು ರಾಶಿ: ನೀವು ಹಣ್ಣುಗಳನ್ನು, ಸಿಹಿ ತಿಂಡಿಗಳನ್ನು ಅರ್ಪಿಸಿ'
ಮಕರ ರಾಶಿ: ನೀವು ಗಣೇಶನಿಗೆ ಜಿಲೇಬಿ, ಸಿಹಿ ಕಡಬು ಅರ್ಪಿಸಿ
ಕುಂಭ ರಾಶಿ: ಕುಂಭ ರಾಶಿಯವರು ಗಣೇಶನಿಗೆ ಹತ್ತಿ ಹಣ್ಣು, ಲಡ್ಡು ಇವುಗಳನ್ನು ಅರ್ಪಿಸಿದರೆ ಒಳ್ಳೆಯದು
ಮೀನ ರಾಶಿ: ಮೀನ ರಾಶಿಯವರು ಗಣೇಶನಿಗೆ ಬೂಂದಿ, ಮೋದಕ, ಲಡ್ಡುಗಳನ್ನು ಅರ್ಪಿಸಿ.
ಗಣೇಶನಿಗೆ ಪ್ರಸಾದವನ್ನು ಅರ್ಪಿಸುವಾಗಈ ಮಂತ್ರ ಪಠಿಸಿ
ಓಂ ಗಂ ಗಣಪತೆಯೇ ನಮಃ: ಈ ಮಂತ್ರವನ್ನು ಪಠಿಸುವುದರಿಂದ ವಿಘ್ನ ನಿವಾರಕ ನಿಮ್ಮೆಲ್ಲಾ ಕಷ್ಟಗಳನ್ನು ದೂರ ಮಾಡುತ್ತಾನೆ.
ವಕ್ರತುಂಡ ಮಹಾಕಾಯ : ಈ ಮಂತ್ರವನ್ನು ಪಠಣೆ ಮಾಡುವುದರಿಂದ ಸಂಪತ್ತು ವೃದ್ಧಿಸಲಿದೆ, ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ.
ಗಣೇಶ ಗಾಯತ್ರಿ ಮಂತ್ರ
"ಓಂ ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ಬುದ್ಧಿಧ್ ಪ್ರಚೋದಯಾತ್"
ಈ ಗಾಯತ್ರಿ ಮಂತ್ರ ಪಠಣೆ ಮಾಡುವುದರಿಂದ ಶ್ರೀಗಣೇಶನ ರಕ್ಷೆ ಸದಾ ನಿಮ್ಮ ಮೇಲಿರುತ್ತದೆ.
ಓಂ ಶ್ರೀ ಗಣೇಶಾಯ ನಮಃ: ಈ ಮಂತ್ರವನ್ನು ನೀವು ಯಾವಾಗ ಬೇಕಾದರೂ ಪಠಿಸಬಹುದು. ಈ ರೀತಿ ಮಂತ್ರ ಪಠಣೆ ಮಾಡುವುದರಿಂದ ಮನಸ್ಸಿಗೆ ಆತ್ಮವಿಶ್ವಾಸ ಹೆಚ್ಚಾಗಲಿದೆ.
ಗಣೇಶ ಮೂಲ ಮಂತ್ರ:
ಓಂ ಶ್ರೀಂ ಹ್ರೀಂ ಕ್ಲೀಂ ಗ್ಲೌಂ ಗಂ ಗಣಪತಯೇ ವರ ವರದ ಸರ್ವಜನಂ ಮೇ ವಶಮಾನಯ ಸ್ವಾಹಾ॥
ಏಕದನ್ತಾಯ ವಿದ್ಮಹೇ ।
ವಕ್ರತುಂಡಾಯ ಧೀಮಹಿ ।
ತನ್ನೋ ದನ್ತಿ ಪ್ರಚೋದಯಾತ್ ॥
ॐ ಶಾಂತಿಃ ಶಾಂತಿಃ ಶಾಂತಿಃ ॥
ಈ ಜಗತ್ತಿಗೆ, ಜನರಿಗೆ ಒಳಿತಾಗಲು, ಎಲ್ಲರೂ ಒಳ್ಳೆಯ ಜೀವನ ನಡೆಸುವಂತೆ ಅನುಗ್ರಹಿಸು ದೇವರೇ ಎಂದು ಈ ಮಂತ್ರದ ಮೂಲಕ ಪಠಣೆ ಮಾಡಲಾಗುವುದು.



Click it and Unblock the Notifications
