Latest Updates
-
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ!
ಗಣೇಶ ಚತುರ್ಥಿ 2023 : ಶುಭ ಮುಹೂರ್ತ, ಪೂಜಾವಿಧಿ ಹೇಗಿರಬೇಕು?
ವಿನಾಯಕ ಚತುರ್ಥಿ ಅಥವಾ ಗಣೇಶ ಹಬ್ಬವನ್ನು ದೇಶದಾದ್ಯಂತ ಹಬಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಈ ಹಬ್ಬವನ್ನು 10 ದಿನಗಳ ಕಾಲ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಗಣೇಶನ ವಿಗ್ರಹವನ್ನು ವಿವಿಧ ಸ್ಥಳಗಳಲ್ಲಿ ಸ್ಥಾಪಿಸಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ.

10 ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ವಿನಾಯಕನನ್ನು ಪೂಜಿಸಿ 11ನೇ ದಿನ ಗಣೇಶನ ಮೂರ್ತಿಯನ್ನು ವಿಸರ್ಜನೆ ಮಾಡಲಾಗುತ್ತದೆ. ಅಷ್ಟಕ್ಕೂ ಗಣೇಶ ಚತಿರ್ಥಿ ಯಾವಾಗ? ಶುಭ ಮುಹೂರ್ತ ಹಾಗೂ ಪೂಜಾ ವಿಧಿಗಳ ಬಗ್ಗೆ ತಿಳಿಯೋಣ.
ಗಣೇಶ ಚತುರ್ಥಿ 2023 ದಿನಾಂಕ :
ಧಾರ್ಮಿಕ ನಂಬಿಕೆಗಳ ಪ್ರಕಾರ ಭಗವಾನ್ ಗಣೇಶನು ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಜನಿಸಿದನು. ಈ ವರ್ಷ ಗಣೇಶನ ಉತ್ಸವವು ಮಂಗಳವಾರ 18 ಸೆಪ್ಟೆಂಬರ್ 2023 ರಿಂದ ಪ್ರಾರಂಭವಾಗುತ್ತದೆ. ಈ ಹಬ್ಬವನ್ನು ದೇಶಾದ್ಯಂತ 10 ದಿನಗಳ ಕಾಲ ಸಂಭ್ರಮದಿಂದ ಆಚರಿಸಲಾಗುವುದು. ನಂತರ 28 ಸೆಪ್ಟೆಂಬರ್ 2023 ರಂದು ಗುರುವಾರದಂದು ಗಣೇಶನನ್ನು ವಿಸರ್ಜನೆ ಮಾಡಲಾಗುವುದು.
ಗಣೇಶ ಚತುರ್ಥಿ 2023 ರ ಶುಭ ಮುಹೂರ್ತ :
ಹಿಂದೂ ಕ್ಯಾಲೆಂಡರ್ ಪ್ರಕಾರ ಈ ವರ್ಷದ ಗಣೇಶ ಚತುರ್ಥಿ 18 ಸೆಪ್ಟೆಂಬರ್ ಸೋಮವಾರ 2023 ರಂದು ಮಧ್ಯಾಹ್ನ 12:39 ರಿಂದ ಪ್ರಾರಂಭವಾಗುತ್ತದೆ. ಚತುರ್ಥಿ ತಿಥಿಯು ಮರುದಿನ ಅಂದರೆ ಮಂಗಳವಾರ ಸೆಪ್ಟೆಂಬರ್ 19 ರಂದು ರಾತ್ರಿ 08:43 ಕ್ಕೆ ಕೊನೆಗೊಳ್ಳುತ್ತದೆ. ಗಣಪತಿಯನ್ನು ಪೂಜಿಸಲು ಶುಭ ಸಮಯವು ಬೆಳಿಗ್ಗೆ 11:01 ರಿಂದ ಮಧ್ಯಾಹ್ನ 01:28 ರವರೆಗೆ ಇರುತ್ತದೆ. ವಿನಾಯಕನನ್ನು ಆರಾಧಿಸಲು ನಿಮಗೆ 2 ಗಂಟೆ 27 ನಿಮಿಷಗಳ ಸಮಯ ಸಿಗುತ್ತದೆ. ಗಣೇಶ ಚತುರ್ಥಿಯಂದು ಬೆಳಿಗ್ಗೆ 09:45 ರಿಂದ ರಾತ್ರಿ 08:44 ರವರೆಗೆ ಚಂದ್ರನನ್ನು ನೋಡದಂತೆ ಜ್ಯೋತಿಷಿಗಳು ಸಲಹೆ ನೀಡುತ್ತಾರೆ.
ಗಣೇಶ ಚತುರ್ಥಿ ಪೂಜಾ ವಿಧಾನ ಹೇಗಿರಬೇಕು?
* ಗಣೇಶ ಚತುರ್ಥಿಯ ದಿನ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ
* ಇದರ ಬಳಿಕ ಪೂಜಾ ಕೊಠಡಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ನಂತರವೇ ಗಣೇಶನನ್ನು ಪೂಜಿಸಬೇಕು
* ಮಂಗಳಕರ ಸಮಯದಲ್ಲಿ ಈಶಾನ್ಯ ಮೂಲೆಯಲ್ಲಿ ಮರದ ಕಂಬವನ್ನು ಸ್ಥಾಪಿಸಿ
* ಒಂದು ಸ್ಟೂಲ್ ಮೇಲೆ ಕೆಂಪು ಅಥವಾ ಹಳದಿ ಬಣ್ಣದ ಬಟ್ಟೆಯನ್ನು ಹರಡಿ
* ಅದರ ಮೇಲೆ ಗಣಪನ ವಿಗ್ರಹವನ್ನು ಪ್ರತಿಷ್ಠಾಪಿಸಿ
* ಪ್ರತಿ ದಿನ ನಿಯಮಿತವಾಗಿ ಗಣಪತಿಯನ್ನು ಪೂಜಿಸಿ.
* 11 ನೇ ದಿನದಂದು ಗಣಪತಿಯನ್ನು ಭಕ್ತಿಯಿಂದ ಬೀಳ್ಕೊಡಿ.
ಗಣೇಶನನ್ನು ಈ ರೀತಿ ಭಕ್ತಿಯಿಂದ ಪೂಜಿಸಿದ್ರೆ ನಿಮ್ಮ ಸಕಲ ಸಂಕಷ್ಟಗಳೆಲ್ಲಾ ನಿವಾರಣೆ ಆಗುತ್ತದೆ ಎನ್ನುವ ನಂಬಿಕೆಯಿದೆ.



Click it and Unblock the Notifications
