Latest Updates
-
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ?
ಜನ್ಮಾಷ್ಟಮಿಯಂದು ಆರ್ಥಿಕ, ಕೌಟುಂಬಿಕ ಸಮಸ್ಯೆ ಪರಿಹಾರಕ್ಕಾಗಿ ಈ ರೀತಿ ಮಾಡಿ!
ಈ ಬಾರಿಯ ಕೃಷ್ಣ ಜನ್ಮಾಷ್ಟಮಿಯನ್ನು ವಿಶೇಷವಾಗಿ ಆಚರಣೆ ಮಾಡಲಾಗ್ತಿದೆ. ಈ ಬಾರಿ ಜಯಂತಿ ಯೋಗ ಸೃಷ್ಟಿಯಾಗ್ತಿರೀದ್ರಿಂದ ಈ ಬಾರಿಯ ಕೃಷ್ಣ ಜನ್ಮಾಷ್ಟಮಿ ಬಹಳ ವಿಶೇಷ ಅಂತಾನೇ ಹೇಳಲಾಗುತ್ತದೆ. ಹಾಗೂ ಭಕ್ತರು ಕೂಡ ಇದ್ರಿಂದ ವಿಶೇಷ ಪ್ರಯೋಜನವನ್ನು ಪಡೆದುಕೊಳ್ಳೋದಕ್ಕೆ ಸಾಧ್ಯವಾಗುತ್ತದೆ.

ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದಲ್ಲ ಒಂದು ಸಮಸ್ಯೆ ಇದ್ದೇ ಇರುತ್ತದೆ. ಇಂತಹ ಸಂದರ್ಭದಲ್ಲಿ ನಿಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳೋದಕ್ಕೋಸ್ಕರ ಕೆಲವೊಂದು ಪರಿಹಾರಗಳನ್ನು ಈ ಕೃಷ್ಣ ಜನ್ಮಾಷ್ಟಮಿಯ ಸಮಯದಲ್ಲಿ ಮಾಡಬಹುದು. ಅಷ್ಟಕ್ಕೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಮಯದಲ್ಲಿ ಯಾವೆಲ್ಲಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಅನ್ನೋದನ್ನು ತಿಳಿಯೋಣ.
ಜನ್ಮಾಷ್ಟಮಿಯಂದು ಸಾಲದಿಂದ ಮುಕ್ತಿ!
ಯಾವುದೇ ವ್ಯಕ್ತಿ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದರೆ ಅಥವಾ ಸಾಕಷ್ಟು ಸಾಲವನ್ನು ಹೊಂದಿದ್ದರೆ ಕೃಷ್ಣ ಜನ್ಮಾಷ್ಟಮಿಯಂದು ಪರಿಹಾರವನ್ನು ಕಂಡುಕೊಳ್ಳಬಹುದು. ಈ ಕೃಷ್ಣ ಜನ್ಮಾಷ್ಟಮಿಯಂದು ಶ್ರೀಕೃಷ್ಣನಿಗೆ ಕೇಸರಿ ಮಿಶ್ರಿತ ಹಾಲಿನಿಂದ ಅಭಿಷೇಕ ಮಾಡಿ. ಹೀಗೆ ಮಾಡುವುದರಿಂದ ನೀವು ಶ್ರೀಕೃಷ್ಣನ ಆಶೀರ್ವಾದವನ್ನು ಪಡೆಯುವುದು ಮಾತ್ರವಲ್ಲದೆ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ನೀವು ಪಡೆಯುತ್ತೀರಿ.
ಜನ್ಮಾಷ್ಟಮಿಯಂದು ಶತ್ರುಗಳನ್ನು ದೂರ ಮಾಡೋದಕ್ಕೆ ಈ ಮಂತ್ರ ಜಪಿಸಿ!
ನಿಮ್ಮ ಶತ್ರುಗಳು ನಿಮಗೆ ಯಾರಾದರೂ ತೊಂದರೆ ನೀಡುತ್ತಿದ್ದರೆ ಈ ಸಮಸ್ಯೆಯಿಂದ ಹೊರ ಬರೋದಕ್ಕೆ ಜನ್ಮಾಷ್ಟಮಿಯ ದಿನದಂದು ಕ್ಲೀಂ ಕೃಷ್ಣಾಯ ವಾಸುದೇವಾಯ ಹರಿ ಪರಮಾತ್ಮನೇ ಪ್ರಣತಃ ಕ್ಲೇಶಾಯ ಗೋವಿಂದಾಯ ನಮೋ ನಮಃ ಎಂದು ಜಪಿಸಿ. ಈ ಮಂತ್ರವನ್ನು ಕನಿಷ್ಠ 108 ಬಾರಿ ಪಠಿಸಿ. ಈ ಮಂತ್ರವನ್ನು ಜಪಿಸುವುದರಿಂದ ವ್ಯಕ್ತಿಗೆ ಶತ್ರುವಿನ ಭಯ ಇರುವುದಿಲ್ಲ.
ಜನ್ಮಾಷ್ಟಮಿಯಂದು ಶ್ರೀಕೃಷ್ಣನಿಗೆ ಹಳದಿ ಬಟ್ಟೆಗಳನ್ನು ಅರ್ಪಿಸಿ!
ಕೃಷ್ಣ ಜನ್ಮಾಷ್ಟಮಿಯ ದಿನದಂದು ಋಣಭಾರದಿಂದ ಮುಕ್ತಿ ಪಡೆಯಲು ಶ್ರೀಕೃಷ್ಣನಿಗೆ ವಸ್ತ್ರಗಳನ್ನು ಅರ್ಪಿಸಿ. ಅಷ್ಟೇ ಅಲ್ಲದೇ ಮಕ್ಕಳಿಗೆ ಅನ್ನವನ್ನೂ ದಾನವಾಗಿ ನೀಡಬಹುದು. ಹೀಗೆ ಮಾಡುವುದರಿಂದ ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ ಎಂದು ನಂಬಲಾಗಿದೆ.
ಜನ್ಮಾಷ್ಟಮಿಯಂದು ತುಳಸಿಯ ಮುಂದೆ ಈ ನಾಮಗಳನ್ನು ಜಪಿಸಿ!
ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನದಂದು ತುಳಸಿ ಮಾತೆಯ ಮುಂದೆ ಶ್ರೀಕೃಷ್ಣನ ನಾಲ್ಕು ನಾಮಗಳನ್ನು ಜಪಿಸಿ. ಗೋಪಾಲ, ಗೋವಿಂದ, ದೇವಕಿನಂದನ್ ಮತ್ತು ದಾಮೋದರ ಎಂದು ಏಕಕಾಲದಲ್ಲಿ ಓಂ ನಮೋ ಭಗವತೇ ವಾಸುದೇವಾಯ ನಮಃ ಎಂಬ ಮಂತ್ರವನ್ನು ಪಠಿಸಬೇಕು. ಹೀಗೆ ಮಾಡುವುದರಿಂದ ವ್ಯಕ್ತಿಯ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಅಷ್ಟೇ ಅಲ್ಲದೇ, ತಮ್ಮ ಉದ್ಯೋಗದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವವರು ಈ ದಿನ ಮಾತೆ ತುಳಸಿಯನ್ನು ಭಕ್ತಿಯಿಂದ ಪೂಜಿಸಬೇಕು.
ಆರ್ಥಿಕ ಲಾಭಕ್ಕಾಗಿ ಈ ಪರಿಹಾರಗಳನ್ನು ಮಾಡಿ!
ಜನ್ಮಾಷ್ಟಮಿಯ ದಿನದಂದು ಪಾಯಸ ಮಾಡಿ ಮತ್ತು ಅದಕ್ಕೆ ತುಳಸಿಯನ್ನು ಸೇರಿಸಿ ಶ್ರೀ ಕೃಷ್ಣನಿಗೆ ಅರ್ಪಿಸೋದನ್ನು ಮರೀಬೇಡಿ. ಶ್ರೀಕೃಷ್ಣನಿಗೆ ಪಾಯಸವನ್ನು ಅರ್ಪಿಸುವುದರಿಂದ ವ್ಯಕ್ತಿಯ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ ಎಂದು ನಂಬಲಾಗಿದೆ.
ಜನ್ಮಾಷ್ಟಮಿಯಂದು ಶ್ರೀಕೃಷ್ಣನಿಗೆ ಬೆಳ್ಳಿಯ ಕೊಳಲು ಅರ್ಪಿಸಿ!
ಯಾರದ್ದಾದರೂ ಕುಟುಂಬದಲ್ಲಿ ತೊಂದರೆಗಳಿದ್ದರೆ ಮತ್ತು ಯಶಸ್ಸಿಗೆ ಅಡಚಣೆಗಳಾಗುತ್ತಿದ್ದರೆ ಈ ಜನ್ಮಾಷ್ಟಮಿಯಂದು ಶ್ರೀಕೃಷ್ಣನಿಗೆ ಬೆಳ್ಳಿಯ ಕೊಳಲನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ವ್ಯಕ್ತಿಯು ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ನಂಬಲಾಗಿದೆ. ಇಷ್ಟೇ ಅಲ್ಲದೇ, ಕುಟುಂಬದಲ್ಲಿನ ವೈಷಮ್ಯದ ಪರಿಸ್ಥಿತಿಯೂ ಕೊನೆಗೊಳ್ಳುತ್ತದೆ.
ಜನ್ಮಾಷ್ಟಮಿಯಂದು ತುಳಸಿ ಪ್ರದಕ್ಷಿಣೆ ಹಾಕಿ!
ಜನ್ಮಾಷ್ಟಮಿಯ ದಿನದಂದು ತಾಯಿ ತುಳಸಿಯ ಮುಂದೆ ತುಪ್ಪದ ದೀಪವನ್ನು ಹಚ್ಚಿ ಮತ್ತು ತುಳಸಿ ಜೀರಿಗೆ 11 ಬಾರಿ ಪ್ರದಕ್ಷಿಣೆಯನ್ನು ಮಾಡಿ. ಹೀಗೆ ಮಾಡುವುದರಿಂದ ವ್ಯಕ್ತಿಯ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ ಎಂದು ನಂಬಲಾಗಿದೆ.
ಸಂತಾನ ಪ್ರಾಪ್ತಿಗೆ ಪರಿಹಾರಗಳು!
ಜನ್ಮಾಷ್ಟಮಿಯ ದಿನದಂದು ಹಾಲು ಹೀರುವ ಕರುವಿನ ಜೊತೆಗೆ ಹಸುವಿನ ವಿಗ್ರಹವನ್ನು ನಿಮ್ಮ ಮನೆಗೆ ತನ್ನಿ. ದಂಪತಿಗಳು ಒಟ್ಟಾಗಿ ನಿಯಮಾನುಸಾರ ಪೂಜಿಸಬೇಕು. ಪ್ರತಿನಿತ್ಯ ಅವುಗಳನ್ನು ಪೂಜಿಸುವುದರಿಂದ ಸಂತಾನ ಪ್ರಾಪ್ತಿಯಾಗುತ್ತೆ ಎನ್ನುವ ನಂಬಿಕೆಯಿದೆ.



Click it and Unblock the Notifications