Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ಗುರುವಿನ ಕೃಪೆಗಾಗಿ ಗುರುವಾರ ಬೃಹಸ್ಪತಿ ಪೂಜೆ ಮಾಡುವವರು ಏನು ಮಾಡಬೇಕು, ಏನು ಮಾಡಲೇಬಾರದು?
ಗುರುವಾರ ಬೃಹಸ್ಪತಿ ಗುರುವನ್ನು ಆರಾಧಿಸಲಾಗುವುದು. ನಮ್ಮ ಜಾತಕದಲ್ಲಿ ಗುರುವಿನ ಸ್ಥಾನ ಚೆನ್ನಾಗಿರದಿದ್ದರೆ ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಲಾಗುವುದು. ಈ ದಿನ ಉಪವಾಸವಿದ್ದು ಬೃಹಸ್ಪತಿ ಗುರುವನ್ನು ಆರಾಧಿಸುವುದರಿಂದ ನಮ್ಮ ಜಾತಕದಲ್ಲಿ ಗುರುವಿನ ಸ್ಥಾನ ಬಲವಾಗುವುದು. ಜೀವನದಲ್ಲಿ ಇರುವ ಸವಾಲುಗಳು ದೂರಾಗುವುದು.

ಗುರುವಾರ ಈ ಕಾರ್ಯಗಳನ್ನು ಮಾಡುವುದು ಒಳ್ಳೆಯದು
* ಗುರುವಾರ ಉಪವಾಸವಿದ್ದು ಗುರುವಿನ ಮಂತ್ರ ಪಠಿಸಬೇಕು.
* ಕೆಲವರಿಗೆ ಉಪವಾಸವಿರಲು ಸಾಧ್ಯವಾಗುವುದಿಲ್ಲ ಅಂಥವರು ಹಣ್ಣುಗಳು ಹಾಗೂ ಲಘು ಆಹಾರ ಸೇವಿಸುತ್ತಾರೆ. ಈ ದಿನ ಸಾತ್ವಿಕ ಆಹಾರವನ್ನು ಸೇವಿಸಬೇಕು.
* ನಿರ್ಗತಿಕರಿಗೆ ದಾನ ಮಾಡುವುದು ಒಳ್ಳೆಯದು.
* ಮುಟ್ಟಿನ ಸಮಯದಲ್ಲಿ ಮಹಿಳೆಯರು ಉಪವಾಸ ಮಾಡುವಂತಿಲ್ಲ, ಅವರು ಮುಂದಿನ ಗುರುವಾರ ವ್ರತ ನಿಯಮವನ್ನು ಪಾಲಿಸಬಹುದು.
ಗುರುವಾರ ಬೃಹಸ್ಪತಿ ಗುರುವಿನ ಕೃಪೆ ಪಡೆಯಲು ಏನು ಮಾಡಬೇಕು, ಏನು ಮಾಡಬಾರದು ಎಂಬ ಧಾರ್ಮಿಕ ನಂಬಿಕೆಗಳಿವೆ, ಅವುಗಳ ಬಗ್ಗೆ ನೋಡುವುದಾದರೆ
ಏನು ಮಾಡಬೇಕು?
* ಬೃಹಸ್ಪತಿ ಪೂಜೆಯನ್ನು ಮಾಡುವಾಗ ಹಳದಿ ಬಣ್ಣದ ವಸ್ತ್ರ ಧರಿಸಬೇಕು.
* ಈ ದಿನ ಬೃಹಸ್ಪತಿಗೆ ಸಂಬಂಧಿಸಿದ ಕತೆಯನ್ನು ಓದಬೇಕು
* ಪೂಜೆಗೆ ಬಾಳೆಗಿಡವನ್ನು ಬಳಸಬೇಕು.
* ಕಡ್ಲೆಬೇಳೆ , ಬೆಲ್ಲ ಬಳಸಿ ಮಾಡಿದ ಪಾಯಸವನ್ನು ಪ್ರಸಾದವನ್ನಾಗಿ ಬಳಸಿ.
* ಕೆಲವರು ಉಪವಾಸವಿರುವಾಗ ಬಾಳೆಹಣ್ಣು ಸೇವಿಸುತ್ತಾರೆ. ಆದರೆ ಬೃಹಸ್ಪತಿ ಪೂಜೆ ಮಾಡುವವರು ಗುರುವಾರ ಬಾಳೆಹಣ್ಣು ತಿನ್ನಬಾರದು.
* ಬೃಹಸ್ಪತಿಗೆ ಉಪವಾಸವಿರುವವರು ಗುರುವಾರ ಸಂಜೆ ಒಂದು ಹೊತ್ತು ಮಾತ್ರ ಆಹಾರ ಸೇವಿಸಿ.
* ವಿವಾಹಿತ ಮಹಿಳೆಯರು ಬೃಹಸ್ಪತಿ ಪೂಜೆ ಮಾಡುವವರು ತಲೆ ತೊಳೆಯಬಾರದು. ಅವಾಹಿತ ಮಹಿಳೆಯರು ತಲೆ ತೊಳೆಯಬಹುದು
* ಈ ದಿನ ಕಡ್ಲೆಹಿಟ್ಟಿನಿಂದ ಮಾಡಿದ ಸಿಹಿಯನ್ನು ಸವಿಯಬಹುದು
* ಈ ದಿನ ಉಪ್ಪು ಹಾಕಿದ ಪದಾರ್ಥ ಸೇವಿಸಬಾರದು.
ಬೃಹಸ್ಪತಿ ಪೂಜೆ ಮಾಡುವವರು ಏನು ಮಾಡಬಾರದು?
* ಗುರುವಾರ ಸೋಪ್ ಬಳಸಬಾರದು
* ಗುರುವಾರ ಬಟ್ಟೆ ತೊಳೆಯಬಾರದು
* ಈ ದಿನ ಪೂಜೆ ಮಾಡುವವರು ತಲೆಗೆ ಎಣ್ಣೆ ಹಚ್ಚಬಾರದು
* ಈ ಪೂಜೆ ಮಾಡುವವರು ಈ ದಿನ ಮನೆ ಒರೆಸುವುದಿಲ್ಲ, ಬುಧವಾರವೇ ಮನೆಯನ್ನು ಸಂಪೂರ್ಣ ಸ್ವಚ್ಛ ಮಾಡುತ್ತಾರೆ.
* ಈರುಳ್ಳಿ, ಬೆಳ್ಳುಳ್ಳಿ, ಮಾಂಸಾಹಾರ ಸೇವಿಸಬಾರದು
* ಈ ದಿನ ದಂಪತಿ ಲೈಂಗಿಕ ಕ್ರಿಯೆ ನಡೆಸಬಾರದು
* ಈ ದಿನ ಶೇವಿಂಗ್ ಮಾಡುವುದು, ಕೂದಲು ಕತ್ತರಿಸುವುದು ಮಾಡಬಾರದು.
* ಈ ದಿನ ಮನೆಯ ಕಸ ಹೊರಗಡೆ ಬಿಸಾಡಬಾರದು.
ತುಪ್ಪದ ದೀಪದ ಮಹತ್ವ
* ಗುರುವಾರದಂದು ಭಗವಾನ್ ವಿಷ್ಣುವಿನ ಪೂಜೆಯಲ್ಲಿ ಸಾಸಿವೆ ಎಣ್ಣೆ ಅಥವಾ ಎಳ್ಳಿನ ಎಣ್ಣೆಯನ್ನು ಬಳಸಬಾರದು. ಈ ದಿನ ದೇಸಿ ತುಪ್ಪದ ದೀಪವನ್ನು ಮಾತ್ರ ಬಳಸಿ ದೀಪ ಬೆಳಗಬೇಕು. ಹೀಗೆ ಮಾಡುವುದರಿಂದ ಬೃಹಸ್ಪತಿ ಗುರುವಿನ ಕೃಪೆ ದೊರೆಯುವುದು.
* ಈ ದಿನ ವಿಷ್ಣು ಸಹಸ್ರನಾಮ ಪಠಿಸಿ.



Click it and Unblock the Notifications
