Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಸಾವನ್ನು ಗೆಲ್ಲಲು ಸಾಧ್ಯವೇ ಇಲ್ಲ ಎಂಬುವುದಕ್ಕೆ ಮೈಕಲ್ ಜಾಕ್ಸನ್ ದೊಡ್ಡ ಸಾಕ್ಷಿ!
ಸಾವನ್ನು ಗೆಲ್ಲುವ ಶಕ್ತಿ ಯಾರಿಗೂ ಇಲ್ಲ ಎಂದು ಹೇಳುವುದು ಸುಳ್ಳಲ್ಲ ಎಂಬುವುದು ಹಲವಾರು ಘಟನೆಗಳನ್ನು ನೋಡುವಾಗ ಪದೇ ಪದೇ ನೆನಪಾಗುತ್ತಲೇ ಇರುತ್ತದೆ. ನಮ್ಮ ಬಳಿ ಏನೇ ಇರಲಿ ಸಾವು ಬಂದಾಗ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂಬುವುದಕ್ಕೆ ಮೈಕಲ್ ಜಾಕ್ಸನ್ ಜೀವನವೇ ಬಹುದೊಡ್ಡ ಉದಾಹರಣೆ. ಮೈಕಲ್ ಜಾಕ್ಸನ್ 150 ವರ್ಷ ಬದುಕಬೇಕೆಂದು ಬಯಸಿದ್ದರು, ಅದಕ್ಕೆ ಬೇಕಾದ ಸಕಲ ಸಿದ್ಧತೆ ಮಾಡಿಕೊಂಡಿದ್ದರು, ಅವರು ತಾನು 150 ವರ್ಷ ಬದುಕಬೇಕೆಂದು ಏನೆಲ್ಲಾ ಸಿದ್ಧತೆ ಮಾಡಿಕೊಂಡಿದ್ದರು ಗೊತ್ತಾ?

ಮೈಕಲ್ ಜಾಕ್ಸನ್‌ನ ಪ್ರತಿನಿತ್ಯ ಚೆಕಪ್‌ಗೆ 12 ದಿನ ಡಾಕ್ಟರ್ ಇದ್ದರು. ಪ್ರತಿ ಅವರು ಮೈಕಲ್ ಜಾಕ್ಸನ್ ತಪಾಸಣೆ ಮಾಡುತ್ತಿದ್ದರು. ಶರೀರದ ಒಂದೊಂದು ಭಾಗದ ಆರೋಗ್ಯ ತಪಾಸಣೆಗೆ ಅಂತಾಲೇ ಒಂದೊಂದು ಎಕ್ಸ್‌ಪರ್ಟ್ ಡಾಕ್ಟರ್‌ನ್ನು ನೇಮಿಸಿಕೊಂಡಿದ್ದರು. ಇನ್ನು ಮೈಕಲ್ ಜಾಕ್ಸನ್ ನಮ್ಮ ರೀತಿ ಆಹಾರ ಸೇವಿಸುತ್ತಿರಲಿಲ್ಲ, ಅವರ ಆಹಾರ ಸೇವನೆಗೆ ಮುನ್ನ ಲ್ಯಾಬೋರೇಟರಿಯಲ್ಲಿ ಇಟ್ಟು ಸಂಪೂರ್ಣ ಪರೀಕ್ಷೆ ಮಾಡಿ ತಿನ್ನುತ್ತಿದ್ದರು. ಯಾವ ಆಹಾರ ಎಷ್ಟು ಪ್ರಮಾಣದಲ್ಲಿ ತಿನ್ನಬೇಕು, ಅದರಲ್ಲಿ ಪೋಷಕಾಂಶಗಳು ಎಷ್ಟಿರಬೇಕು ಎಲ್ಲವೂ ನಿರ್ಧಿಷ್ಟ ಪ್ರಮಾಣದಲ್ಲಿಯೇ ಅದರಲ್ಲಿರಬೇಕಾಗಿತ್ತು.
ಇಷ್ಟು ಮಾತ್ರವಲ್ಲಿ ಮತ್ತೆ 15 ಜನರು ಮೈಕಲ್ ಜಾಕ್ಸನ್ ವ್ಯಾಯಾಮ ಹಾಗೂ ವರ್ಕೌಟ್ ಬಗ್ಗೆ ಗಮನಹರಿಸಲು ನೇಮಿಸಿಕೊಂಡಿದ್ದರು, ಮೈಕಲ್ ಜಾಕ್ಸನ್‌ರ ಆಕ್ಸಿಜನ್ ಲೆವಲ್ ಎಷ್ಟಿತ್ತು ಎಂಬುವುದನ್ನು ಪ್ರತಿನಿತ್ಯ ಪರೀಕ್ಷೆ ಮಾಡುತ್ತಿದ್ದರು.
ಅಷ್ಟು ಮಾತ್ರವಲ್ಲ, ಎಲ್ಲಾದರೂ ದೇಹಾದ ಯಾವುದಾದರು ಅಂಗಕ್ಕೆ ಹಾನಿಯಾದರೆ ಅದನ್ನು ಬದಲಾಯಿಸಿ ಇಡಲು ಅಂಗಾಂಗ ದಾನಿಗಳನ್ನೂ ನೇಮಿಸಿಕೊಂಡಿದ್ದರು. ಇವರ ರಕ್ತಕ್ಕೆ ಗುಂಪಿಗೆ ಸೇರುವ ಸೂಕ್ತದಾನಿಗಳನ್ನೇ ಮೊದಲೇ ಬುಕ್ ಮಾಡಲಾಗಿತ್ತು. ಆ ದಾನಿಗಳ ಆರೋಗ್ಯಕ್ಕಾಗಿ ಸಕಲ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಇಷ್ಟೆಲ್ಲಾ ಮಾಡಿದ್ದು 150 ವರ್ಷ ಬದುಕಬೇಕೆಂಬ ಮಹಾದಾಸೆಯಿಂದ.
ಎಲ್ಲವೂ ನನ್ನ ಬಳಿಯಿದೆ, ಏನಾದರೂ ಸ್ವಲ್ಪ ಹೆಚ್ಚು ಕಡಿಮೆಯಾದರೆ ಚಿಕಿತ್ಸೆ ನೀಡಲು ತಜ್ಞೆ ತಂಡವೇ ನನ್ನ ಬಳಿಯಿದೆ, ದೇಹದ ಯಾವುದೇ ಅಂಗಾಂಗ ದಾನ ಪಡೆಯಲು ಸಕಲ ವ್ಯವಸ್ಥೆಯಿದೆ, ದಿನಾ ಆರೋಗ್ಯ ತಪಾಸಣೆ ಎಲ್ಲವೂ ಇರುವುದರಿಂದ ನನಗೇನೂ ಸಂಭವಿಸಲ್ಲ ಎಂಬ ಹುಂಬ ಆಸೆಯನ್ನು ಹೊತ್ತಿದ್ದರು ಮೈಕಲ್ ಜಾಕ್ಸನ್, ಇಷ್ಟೆಲ್ಲಾ ಮಾಡಿದರು ಮೈಕಲ್ ಜಾಕ್ಸನ್ ಐವತ್ತೇ ವರ್ಷಕ್ಕೆ ಸಾವನ್ನಪ್ಪಿದರು.
ಜೂನ್ 25, 2009ಕ್ಕೆ ಮೈಕಲ್ ಜಾಕ್ಸನ್ ಹೃದಯ ತನ್ನ ಕೆಲಸವನ್ನು ನಿಲ್ಲಿಸಿ ಬಿಟ್ಟಿತ್ತು, 12 ಟಾಪ್ ಡಾಕ್ಟರ್ಸ್, ಹೃದಯವನ್ನೇ ಬದಲಾಯಿಸಲು ದಾನಿ ಎಲ್ಲವೂ ಇದ್ದರೂ ಏನೂ ಮಾಡಲು ಸಾಧ್ಯವಾಗಿಲ್ಲ, ಮೈಕಲ್ ಜಾಕ್ಸನ್ ಬಾರದ ಲೋಕಕ್ಕೆ ಪ್ರಯಾಣ ಮಾಡಲೇಬೇಕಾಯಿತು. ಸಾವಿಗೇ ಸವಾಲು ಹಾಕಲು ಬಯಸಿದ್ದ ಮೈಕಲ್ ಜಾಕ್ಸನ್ ಸಾವಿನ ಮುಂದೆ ಮರು ಮಾತಿಯಿಲ್ಲದೆ ಶರಣಾಗಲೇಬೇಕಾಯಿತು.
ಆದ್ದರಿಂದಲೇ ಹೇಳುವುದು ಸಾವು ಬಂದರೆ ಪೆಟ್ಟಿಗೆಯಲ್ಲಿ ಇರಿಸಿ ಭದ್ರಪಡಿಸಿದರೂ ಸಾವು ಬಂದೇ ಬರುತ್ತದೆ, ಆದರೆ ಆಯುಸ್ಸು ಎಂಬುವುದು ಇದ್ದರೆ ಪರ್ವತದಿಂದ ಬಿದ್ದರೂ ಬದುಕಿಳಿಯುತ್ತಾರೆ. ನಾವು ಇರುವ ದಿನವನ್ನು ಉತ್ತಮವಾಗಿ ಬದುಕಲು ಪ್ರಯತ್ನಿಸಬೇಕು. ನಮ್ಮವರಿಗಾಗಿ ಸಮಯ ನೀಡಬೇಕು, ಒಳಿತನ್ನು ಮಾಡಬೇಕು, ಇಷ್ಟೇ ಜೀವನ...



Click it and Unblock the Notifications
