Latest Updates
-
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ? -
ಸೆಪ್ಟೆಂಬರ್ ಇಕ್ವಿನಾಕ್ಸ್: ನಿಮ್ಮ ಕ್ಯಾಮೆರಾದಲ್ಲಿ ಸೂರ್ಯೋದಯ-ಸೂರ್ಯಾಸ್ತದ ಅದ್ಭುತ ದೃಶ್ಯ ಸೆರೆಹಿಡಿಯಿರಿ! -
ವಿಶ್ವ ಕಾರ್-ಫ್ರೀ ಡೇ: ಟ್ರಾಫಿಕ್ ಬಿಟ್ಟು 20 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಸೈಫ್-ಕರೀನಾ ಪ್ರೇಮಪತ್ರದ ರಹಸ್ಯ: ನಿಮ್ಮ ಸಂಬಂಧವನ್ನೂ ಗಟ್ಟಿಗೊಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ!
ಸೆಪ್ಟೆಂಬರ್ 28ಕ್ಕೆ ಅನಂತ ಚತುರ್ದಶಿ: ಈ ದಿನ ಏನು ಮಾಡಿದರೆ ಶುಭಫಲ?
ಸೆಪ್ಟೆಂಬರ್ 28ಕ್ಕೆ ಅನಂತ ಚತುರ್ದಶಿ. ಈ ದಿನ ಶ್ರೀ ವಿಷ್ಣುವನ್ನು ಆರಾಧನೆ ಮಾಡಲಾಗುವುದು. ಅನಂತ ಚತುರ್ಥಿಯಂದೇ ಗಣಪತಿಯನ್ನು ವಿಸರ್ಜನೆ ಮಾಡಲಾಗುವುದು. ಈ ದಿನ ತುಂಬಾ ಶುಭವಾಗಿರುವುದರಿಂದ ಈ ದಿನ ಗಣೇಶ ವಿಸರ್ಜನೆ ಮಾಡಲು ಯಾವುದೇ ಸಮಯ ನೋಡಬೇಕಾಗಿಲ್ಲ, ಯಾವುದೇ ಸಮಯದಲ್ಲಿ ಬೇಕಾದರೂ ವಿಸರ್ಜನೆ ಮಾಡಬಹುದು.
ಆದ್ದರಿಂದ ಈ ದಿನದಂದೇ ಗಣೇಶ ವಿಸರ್ಜನೆ ಮಾಡಲಾಗುವುದು. ಅನಂತ ಚತುರ್ದಶಿಯನ್ನು ಆಚರಣೆ ಮಾಡುವವರು ಕೆಲವೊಂದು ಪೂಜಾ ನಿಯಮಗಳನ್ನು ಆಚರಿಸಬೇಕು. ಈ ದಿನ ಏನು ಮಾಡಬೇಕು, ಏನು ಮಾಡಬಾರದು ಎಂದು ನೋಡೋಣ ಬನ್ನಿ:

ಅನಂತ ಚತುರ್ದಶಿಯಂದು ಪೂಜಾ ವಿಧಾನ
ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ. ಶುಭ್ರವಾದ ಬಟ್ಟೆಗಳನ್ನು ಧರಿಸಿ. ಪೂಜಾ ಸ್ಥಳದಲ್ಲಿ ಕಲಶವನ್ನು ಪ್ರತಿಷ್ಠಾಪಿಸಿ. ಇದರ ನಂತರ ಕುಂಕುಮ ಮತ್ತು ಅರಿಶಿನದೊಂದಿಗೆ ದಾರವನ್ನು ಬೆರೆಸಿ ಅನಂತ ಸೂತ್ರವನ್ನು ತಯಾರಿಸಿ. ಅದರಲ್ಲಿ 14 ಗಂಟುಗಳನ್ನು ಕಟ್ಟಬೇಕು.ಅದನ್ನು ವಿಷ್ಣುವಿನ ಚಿತ್ರ ಅಥವಾ ಪ್ರತಿಮೆಯ ಮುಂದೆ ಇರಿಸಿ.
ಶೇಷನಾಗನ ವಿಶೇಷ ಪೂಜೆ
ಅನಂತ ಚತುರ್ದಶಿಯ ದಿನದಂದು ಶೇಷ ನಾಗನಿಗೆ ವಿಶೇಷ ಪೂಜೆ ಸಲ್ಲಿಸು ನಿಯಮವಿದೆ. ವಿಷ್ಣು ಶೇಷನಾಗನನ್ನೇ ಹಾಸಿಗೆಯಂತೆ ಬಳಸಿ ಅದರಲ್ಲಿ ಮಲಗಿರುತ್ತಾನೆ. ಆದ್ದರಿಂದ ಶೇಷ ನಾಗನ ಆರಾಧನೆ ಮಾಡಲಾಗುವುದು.
ಅನಂತ ಸೂತ್ರ ಹೇಗೆ ತಯಾರಿಸಬೇಕು?
ಈ ದಿನ ಅನಂತ ಕಟ್ಟುವ ಅನಂತ ಸೂತ್ರವನ್ನು ರೇಷ್ಮೆ ಅಥವಾ ಹತ್ತಿ ನೂಲಿನಿಂದ ಕಟ್ಟಲಾಗುವುದು. ಈ ದಾರವನ್ನು ವಿಷ್ಣುವಿನ ಫೋಟೋ ಮುಂದೆ ಇಟ್ಟು ಪೂಜೆ ಸಲ್ಲಿಸಿ ನಂತರ ಅನಂತ ಸೂತ್ರವನ್ನು ಕೈಗೆ ಕಟ್ಟಿಕೊಳ್ಳಬೇಕು.
ಅನಂತ ಸೂತ್ರದ 14 ಗಂಟೆಗಳು ಏನನ್ನು ಸೂಚಿಸುತ್ತದೆ?
ಸಾಕ್ಷಾತ್ ವಿಷ್ಣು ಭಗವಾನ್ ಅನಂತ ಸೂತ್ರದಲ್ಲಿ ನೆಲೆಸಿರುತ್ತಾನೆ ಎಂದು ನಂಬಲಾಗಿದೆ. ಅನಂತರ ಸೂತ್ರದಲ್ಲಿ 14 ಗಂಟುಗಳಿರುತ್ತದೆ. ಆ ದಾರದಲ್ಲಿರುವ 14 ಗಂಟುಗಳು ಭೂಲೋಕ, ಭುವರ್ಲೋಕ, ಸ್ವರ್ಲೋಕ, ಮಹಾಲೋರ್ಕ, ಜನಲೋಕ, ತಪೋಲೋಕ, ಬ್ರಹ್ಮಲೋಕ, ಅತಳ ಲೋಕ, ವಿತಳ ಲೋಕ. ಸತಳ ಲೋಕ, ರಸಾತಳ ಲೋಕ, ಮಹಾತಳ ಲೋಕ, ತಳಾತಳ ಲೋಕ, ಪಾತಾಳ ಲೋಕ ಹೀಗೆ 14 ಲೋಕವನ್ನು ಪ್ರತಿನಿಧಿಸುತ್ತದೆ.
ಅನಂತಸೂತ್ರವನ್ನು ಕಟ್ಟಬಯಸುವವನು ಒಂದು ವರ್ಷ ಅನಂತಸೂತ್ರವನ್ನು ಕಟ್ಟಬೇಕು.
ಅನಂತ ಚತುರ್ದಶಿಯ ದಿನದಂದು ನೀವು ಉಪವಾಸವಿದ್ದು ಶ್ರೀ ವಿಷ್ಣುವಿನ ಪೂಜೆ ಮಾಡಿ ಕೈಗೆ ಅನಂತ ಸೂತ್ರ ಕಟ್ಟಿಕೊಳ್ಳಬೇಕು. ಈ ಅನಂತ ಸೂತ್ರ ಕಟ್ಟಿಕೊಂಡರೆ ಇದರ ಫಲ ಒಂದು ವರ್ಷದವರೆಗೆ ಇರಲಿದೆ. ಈ ದಿನ ಮಾಡುವ ಅನ್ನದಾನಕ್ಕೆ ತುಂಬಾನೇ ಶ್ರೇಷ್ಠ, ಇದರಿಂದ ಪುಣ್ಯ ಹೆಚ್ಚಾಗುವುದು ಎಂದು ಹೇಳಲಾಗಿದೆ.
ಅನಂತ ಚತುರ್ದಶಿಯಂದು ಏನು ಮಾಡಬಾರದು?
* ಅನಂತ ಚತುರ್ದಶಿಯ ದಿನದಂದು ಇತರರಿಗೆ ತೊಂದರೆ ಕೊಡುವ ಕೆಲಸವನ್ನು ಮಾಡಬಾರದು
* ಅನಂತ ಚತುರ್ದಶಿಯ ದಿನದಂದು ಮಾಂಸ ಮತ್ತು ಮದ್ಯ ಸೇವಿಸಬಾರದು.
* ಈ ದಿನ ನೀವು ದಾರವನ್ನು ಕಟ್ಟಿದ್ದರೆ, ಅದನ್ನು ಬಿಚ್ಚಬಾರದು, ಹೀಗೆ ಮಾಡುವುದರಿಂದ ಅಶುಭಫಲ ಉಂಟಾಗುವುದು.
* ಈ ದಿನ ರೇಷ್ಮೆ ಮತ್ತು ಹತ್ತಿ ಎಳೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ದಾರದಲ್ಲಿ ಅನಂತ ಸೂತ್ರ ಕಟ್ಟಬಾರದು. ಇಲ್ಲದಿದ್ದರೆ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹಾಗೆ ಮಾಡಿದರೆ ಲಕ್ಷ್ಮಿ ಕೋಪಗೊಳ್ಳುತ್ತಾಳೆ.
* ಈ ದಿನ ಪ್ರಾಣಿ ಪಕ್ಷಿಗಳಿಗೆ ತೊಂದರೆ ಕೊಡಬೇಡಿ.
* ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಈ ದಿನ ಬಳಸಬಾರದು.



Click it and Unblock the Notifications
