Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
Chandrayaan 3: ರಾಕೆಟ್ ಉಡಾವಣೆ ಮಧ್ಯಾಹ್ನ 2:35ಕ್ಕೆ ಮಾಡಿದ್ದರ ಹಿಂದಿದೆ ಈ ಧಾರ್ಮಿಕ ನಂಬಿಕೆ!
ಭಾರತದ ಮಹತ್ವಾಕಾಂಕ್ಷೆ ಯೋಜನೆಯಾಗಿರುವ ಚಂದ್ರಯಾನ 3 ವಿಕ್ರಮ್ ಹೊತ್ತುಕೊಂಡ GSLV Mk III ಅಥವಾ LVM3 ಹೆಸರಿನ ರಾಕೆಟ್ ಶ್ರೀಹರಿಕೂಟ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜುಲೈ 14 ಮಧ್ಯಾಹ್ನ 2:35ಕ್ಕೆ ಚಂದ್ರನ ಕಕ್ಷೆಯತ್ತ ಧಾವಿಸಿದೆ.
ಚಂದ್ರಯಾನ 2 ವೈಫಲ್ಯದ ಬಳಿಕ ಮತ್ತಷ್ಟು ಶ್ರಮ ಹಾಕಿ ಈ ಹಿಂದೆ ನಡೆದ ತಪ್ಪುಗಳು ಈ ಬಾರಿ ಸಂಭವಿಸಬಾರದು ಎಂದು ತುಂಬಾನೇ ಜಾಗ್ರತೆವಹಿಸಿ, ಪ್ರತಿಯೊಂದು ತಾಂತ್ರಿಕ ವಿಷಯಗಳನ್ನು ಪರಿಶೀಲಿಸಿ ಚಂದ್ರಯಾನ 3 ವಿಕ್ರಮ್ ಅನ್ನು ಚಂದ್ರನ ಕಕ್ಷೆಗೆ ಕಳುಹಿಸಲಾಗಿದೆ. ಚಂದ್ರಯಾನ 3 ವಿಕ್ರಮ್ ಯೋಜನೆಯಲ್ಲಿ ನಮ್ಮ ವಿಜ್ಞಾನಿಗಳು ಬರೀ ತಮ್ಮ ಜ್ಞಾನ, ಪರಿಶ್ರಮದ ಮೇಲಷ್ಟೇ ಅಲ್ಲ ದೇವರು ಎಂಬ ಶಕ್ತಿಯ ಮೇಲೆ ಬಲವಾದ ನಂಬಿಕೆ ಇಟ್ಟಿದ್ದಾರೆ ಎಂಬುವುದಕ್ಕೆ ಚಂದ್ರಯಾನ 3 ವಿಕ್ರಮ್ ತೆಗೆದುಕೊಂಡ ರಾಕೆಟ್ ಉಡಾವಣೆಯಾಗಲು ಅವರು ನಿರ್ಧರಿಸಿದ ಸಮಯ ಒಂದು ಪ್ರಮುಖ ಸಾಕ್ಷಿಯಾಗಿದೆ.

ವಿಜ್ಞಾನವೂ ಧಾರ್ಮಿಕ ನಂಬಿಕೆಗಳನ್ನು ಬೆಂಬಲಿಸಿದೆ
ದೈವ ಎಂಬ ಒಂದು ಶಕ್ತಿ ಇದೆ ಎಂಬುವುದನ್ನು ಎಲ್ಲಾ ಧರ್ಮಗಳು, ಎಲ್ಲಾ ದೇಶದವರು ನಂಬಿಯೇ ನಂಬುತ್ತಾರೆ. ಎಂಥ ಆಸ್ತಿಕನಾದರೂ ಅವನಲ್ಲಿ ಕೆಲವು ತತ್ತ್ವಗಳಿರುತ್ತದೆ, ಆ ತತ್ತ್ವಗಳೇ ಅವನ ನಂಬಿಕೆಯಾಗಿರುತ್ತದೆ, ಅದುವೇ ಅವನ ಶಕ್ತಿಯೂ ಆಗಿರುತ್ತದೆ. ವಿಜ್ಞಾನಿಗಳಾದ ಮಾತ್ರಕ್ಕೆ ದೈವ ಎಂಬ ಪರಿಕಲ್ಪನೆಯೇ ಇಲ್ಲ ಎಂಬಂತೆ ಅವರು ವರ್ತಿಸುವುದಿಲ್ಲ, ನಮ್ಮ ಭಾರತೀಯ ವಿಜ್ಞಾನಿಗಳು ಹಲವು ಸಂದರ್ಭಗಳಲ್ಲಿ ಅದರಂತೆ ನಡೆದುಕೊಂಡಿದ್ದಾರೆ. ಮೊನ್ನೆಯೇ ನೋಡಿ ಚಂದ್ರಯಾನ 3 ವಿಕ್ರಮ್ ಉಡಾವಣೆಗೆ ಮುನ್ನ ವಿಜ್ಞಾನಿಗಳು ಆಂಧ್ರದ ತಿರುಪತಿಗೆ ಬಂದು ನಮ್ಮ ಕಾರ್ಯಕ್ಕೆ ಯಾವ ವಿಘ್ನವೂ ಉಂಟಾಗದಂತೆ ಆಶೀರ್ವದಿಸು ತಿಮ್ಮಪ್ಪ ಎಂದು ಬೇಡಿಕೊಂಡಿದ್ದರು.
ವಿಜ್ಞಾನಿಗಳು ರಾಕೆಟ್ ಉಡಾವಣೆಗೆ ನಿರ್ಧರಿಸಿದ ಸಮಯಕ್ಕೂ ಧಾರ್ಮಿಕ ನಂಬಿಕೆಗೂ ಸಂಬಂಧವಿದೆ
ನಮಗೆಲ್ಲಾ ಗೊತ್ತು ವಿಜ್ಞಾನಿಗಳು ಜುಲೈ 14ರಂದು 2:35ಕ್ಕೆ ರಾಕೆಟ್ ಉಡಾವಣೆ ಮಾಡಿದ್ದಾರೆ. ಆದರೆ ಅವರು ಇಟ್ಟಿರುವ ಸಮಯದ ಹಿಂದಿದೆ ದಾರ್ಮಿಕ ನಂಬಿಕೆ. ನಾವು ಯಾವುದೇ ಕಾರ್ಯ ಮಾಡುವಾಗ ಶುಭ ಸಮಯ ನೋಡುತ್ತೇವೆ. ಶುಭ ಸಮಯದಲ್ಲಿ ಮಾಡಿದಾಗ ಆ ಕಾರ್ಯಗಳು ಶುಭ ಫಲ ನೀಡುತ್ತದೆ ಎಂಬ ನಂಬಿಕೆ. ಅದರಂತೆ ಜುಲೈ 14ರಂದು ಶುಭ ಮುಹೂರ್ತದಲ್ಲಿ ರಾಕೆಟ್ ಉಡಾವಣೆಯಾಗಿದೆ.
ವಿಜಯ ಮುಹೂರ್ತ
ಶುಭಕಾರ್ಯಗಳಿಗೆ ವಿಜಯ ಮುಹೂರ್ತ ಶುಭವಾಗಿದೆ. ಜುಲೈ 14ರಂದು ಮಧ್ಯಾಹ್ನ 02:38ರಿಂದ 03:31ರವರೆಗೆ ವಿಜಯ ಮುಹೂರ್ತ. ಉಡಾವಣೆ ವಿಜಯವನ್ನು ಸಾಧಿಸಲಿ ಎಂದು ಈ ಸಮಯ ನಿಗದಿ ಪಡಿಸಿರಬಹುದು. ಚಂದ್ರಯಾನ 3 ವಿಕ್ರಮ್ ಯೋಜನೆ ಜಯಶೀಲವಾಗಲಿ ಎಂಬುವುದೇ ಪ್ರತಿಯೊಬ್ಬ ಭಾರತೀಯರ ಆಶಯ.....



Click it and Unblock the Notifications
