Latest Updates
-
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್!
ವೃತ್ತಿ , ವ್ಯಾಪಾರದಲ್ಲಿ ಸೋಲುಗಳಾಗ್ತಿದ್ಯಾ? ಬುಧವಾರ ಈ ರೀತಿ ಪರಿಹಾರ ಮಾಡಿ!
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧವಾರದ ದಿನವನ್ನು ಗಣೇಶ ಮತ್ತು ಮಾತೆ ದುರ್ಗೆಗೆ ಮತ್ತು ಬುಧ ದೇವನಿಗೆ ಸಮರ್ಪಣೆ ಮಾಡಲಾಗಿದೆ. ನಿಮ್ಮ ಜಾತಕದಲ್ಲಿ ಬುಧ ಗ್ರಹವು ದುರ್ಬಲವಾಗಿದ್ದರೆ ಬುಧವಾರದಂದು ಜ್ಯೋತಿಷ್ಯದ ಪ್ರಕಾರ ಕೆಲವೊಂದು ಕ್ರಮಗಳನ್ನು ಮಾಡಬೇಕು. ನಿಮ್ಮ ಜಾತಕದಲ್ಲಿ ಬುಧನ ಸ್ಥಾನವು ಸರಿಯಾಗಿಲ್ಲದಿದ್ದರೆ ವ್ಯಕ್ತಿಯು ಮಾನಸಿಕ, ದೈಹಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಹೀಗಾಗಿ ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿಗಾಗಿ ಬುಧವಾರದ ದಿನ ಈ ಪರಿಹಾರಗಳನ್ನು ತಪ್ಪದೇ ಮಾಡಬೇಕಾಗುತ್ತದೆ. ಅಷ್ಟಕ್ಕು ಬುಧನ ಸ್ಥಾನ ಸರಿಪಡಿಸಲು ಹಾಗೂ ಆರ್ಥಿಕ ಲಾಭಕ್ಕಾಗಿ ಬುಧವಾರದ ದಿನ ಏನೆಲ್ಲಾ ಪರಿಹಾರಗಳನ್ನು ಕೈಗೊಳ್ಳಬೇಕು ಅನ್ನೋದನ್ನು ತಿಳಿಯೋಣ.

ಗಣೇಶನ ಸ್ತೋತ್ರ ಪಠಿಸಿ!
ಹಣಕಾಸಿನ ಸಮಸ್ಯೆ ಹೆಚ್ಚಾಗಿದ್ದು, ನೀವು ಸಾಲದ ಸುಳಿಯಲ್ಲಿ ಸಿಲುಕಿದ್ದರೆ ಪ್ರತಿ ಬುಧವಾರ ನೀವು ಗಣೇಶ ಸ್ತೋತ್ರವನ್ನು ಪಠಿಸಬೇಕು. ಹೀಗೆ ಮಾಡುವುದರಿಂದ ಗಣಪತಿಯ ಆಶೀರ್ವಾದ ನಿಮ್ಮ ಮೇಲಿರುತ್ತದೆ. ಮತ್ತು ನಿಮ್ಮ ಜೀವನದ ಪ್ರಗತಿಗೆ ದಾರಿಯಾಗುತ್ತದೆ. ಗಣೇಶನ ಸ್ತೋತ್ರವನ್ನು ಪಠಿಸುತ್ತಿದ್ದರೆ ಜೀವನದಲ್ಲಿ ಅಡೆ-ತಡೆಗಳೆಲ್ಲಾ ದೂರವಾಗಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಗಣೇಶನ ಸ್ತೋತ್ರವನ್ನು ಪಠಿಸಿದ ನಂತರ ಗಣೇಶನ ಆರತಿಯನ್ನು ಮಾಡೋದನ್ನು ಮರೀಬೇಡಿ.
ಬುಧವಾರ ಗಣೇಶನಿಗೆ ಈ ವಸ್ತುವನ್ನು ಅರ್ಪಿಸಿ!
ಪ್ರತಿ ಬುಧವಾರದಂದು ಶಮಿ ಎಲೆ ಮತ್ತು ಗರಿಕೆಯನ್ನು ಗಣೇಶನಿಗೆ ಅರ್ಪಿಸಬೇಕು. ಶಮಿ ಎಲೆಗಳು ಲಭ್ಯವಿಲ್ಲದಿದ್ದರೆ ಗರಿಕೆಯನ್ನು ಅರ್ಪಿಸಬಹುದು. ಗರಿಕೆಯನ್ನು ಗಣೇಶನಿಗೆ ಅರ್ಪಿಸುವ ಮೊದಲು 21 ಗರಿಕೆಯ ಗಂಟುಗಳನ್ನು ತಯಾರಿಸಲಾಗುತ್ತದೆ. ಮತ್ತು ಆ 21 ಗರಿಕೆಯ ಗಂಟುಗಳನ್ನು ಗಣೇಶನ ತಲೆಯ ಮೇಲೆ ಅರ್ಪಿಸಬೇಕು. ಗಣೇಶನಿಗೆ ಪೂಜ್ಯವಾದ ಗರಿಕೆಯನ್ನು ಅರ್ಪಿಸೋದ್ರಿಂದ ಗಣಪತಿಯು ಶೀಘ್ರವಾಗಿ ಪ್ರಸನ್ನನಾಗುತ್ತಾನೆ. ಮತ್ತು ನಿಮ್ಮ ಲೌಕಿಕ ಇಷ್ಟಾರ್ಥಗಳನ್ನು ಪೂರೈಸುತ್ತಾನೆ.
ದುರ್ಗಾ ಮಾತೆಯ ಆಶೀರ್ವಾದ ಪಡೆಯಲು ಏನು ಮಾಡಬೇಕು?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧವಾರದಂದು ಮಾತೆ ದುರ್ಗೆಯನ್ನು ಧ್ಯಾನಿಸುವಾಗ ದುರ್ಗಾ ಸಪ್ತಶತಿಯನ್ನು ಪಠಿಸಬೇಕು. ಈ ರೀತಿ ಮಾಡುವುದರಿಂದ ಜೀವನದಲ್ಲಿದ್ದ ಅಡೆತಡೆಗಳೆಲ್ಲಾ ದೂರವಾಗಿ ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷ ನೆಲೆಸುತ್ತದೆ. ಬುಧವಾರದಂದು ದುರ್ಗಾ ಸಪ್ತಶತಿಯನ್ನು ಪಾರಾಯಣ ಮಾಡುವುದರಿಂದ ಆ ಪಾರಾಯಣದ ಪುಣ್ಯವು ಒಂದು ಲಕ್ಷ ಪಾರಾಯಣಕ್ಕೆ ಸಮಾನವಾಗಿದೆ ಎಂದು ಹೇಳಲಾಗುತ್ತದೆ.
ಬುಧವಾರದಂದು ಈ ವಸ್ತುಗಳನ್ನು ದಾನ ಮಾಡಿ!
ಬುಧವಾರದ ದಿನ ಹೆಸರು ಕಾಳನ್ನು ಮಾಡಬೇಕು. ಇದಿಷ್ಟೇ ಅಲ್ಲದೇ, ಈ ದಿನ ಕುಟುಂಬದೊಂದಿಗೆ ಹೆಸರು ಕಾಳನ್ನು ಸೇವಿಸುವುದರಿಂದ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ಜಾತಕದಲ್ಲಿ ಬುಧನ ಸ್ಥಾನವು ಬಲವಾಗಿ ಗಣೇಶ ಮತ್ತು ಲಕ್ಷ್ಮಿಯ ಕೃಪೆಯೂ ಇರುತ್ತದೆ.
ಹಸುವಿಗೆ ಈ ವಸ್ತುವನ್ನು ತಿನ್ನಿಸಿ!
ಹಸುವಿಗೆ ಬುಧವಾರ ಹಸಿರು ಹುಲ್ಲು ಅಥವಾ ಪಾಲಕ್ ಸೊಪ್ಪನ್ನು ತಿನ್ನಿಸಬೇಕು. ಹೀಗೆ ಮಾಡುವುದರಿಂದ ಮುಕ್ಕೋಟಿ ದೇವತೆಗಳ ಆಶೀರ್ವಾದ ನಿಮ್ಮ ಮೇಲಿರುತ್ತಂತೆ. ಹಾಗೂ ಗ್ರಹದೋಷಗಳ ದೋಷವೂ ದೂರವಾಗುತ್ತಂತೆ. ಆದರೆ ನೀವು ಕನಿಷ್ಟ ಮೂರು ತಿಂಗಳ ಕಾಲ ಹಸುವಿಗೆ ಹುಲ್ಲು ಮತ್ತು ಹಸಿರು ಪಾಲಕವನ್ನು ತಿನ್ನಬೇಕು. ಇದಾದ ಬಳಿಕ ನೀವು ಫಲವನ್ನು ಪಡೆಯುತ್ತೀರಿ ಅಂತ ಹೇಳಲಾಗುತ್ತದೆ. ಹಸುವಿಗೆ ಆಹಾರವನ್ನು ತಿನ್ನಿಸುವುದರಿಂದ ಜೀವನದ ಎಲ್ಲಾ ತೊಂದರೆಗಳು ಕ್ರಮೇಣ ದೂರವಾಗುತ್ತಂತೆ.
ಬುಧ ಮಂತ್ರಗಳನ್ನು ಪಠಿಸಿ!
ಬುಧ ಗ್ರಹಕ್ಕೆ ಸಂಬಂಧಿಸಿದ ಮಂತ್ರಗಳನ್ನು ಬುಧವಾರ ಪಠಿಸಬೇಕು. ಬುಧ ಗ್ರಹದ ಈ ಮಂತ್ರಗಳನ್ನು ಪಠಿಸುವುದರಿಂದ ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ. ಮತ್ತು ಮಾನಸಿಕ ಒತ್ತಡದಿಂದ ಮುಕ್ತಿ ಸಿಗುತ್ತದೆ. ಬುಧನ ಮಂತ್ರವನ್ನು ಪಠಿಸೋದ್ರಿಂದ ಜಾತಕದಲ್ಲಿ ಬುಧನ ಸ್ಥಾನವು ಬಲಗೊಳ್ಳುತ್ತದೆ. ಮತ್ತು ವ್ಯಾಪಾರ ಮತ್ತು ವೃತ್ತಿಜೀವನದಲ್ಲಿ ಪ್ರಗತಿಯ ಸಾಧ್ಯತೆಗಳು ಹೆಚ್ಚುತ್ತಂತೆ. ಬುಧ ಮಂತ್ರವನ್ನು 14 ಬಾರಿ ಪಠಿಸಬೇಕು ಅನ್ನೋದನ್ನು ನೆನಪಿನಲ್ಲಿಡಿ.
ಬೀಜ ಮಂತ್ರ : ಓಂ ಬ್ರಾಂ ಬ್ರಿಂ ಬ್ರೌನ್ ಸಃ ಬುಧಾಯ ನಮಃ!
ಓಂ ಬುಂ ಬುಧಾಯ ನಮಃ ಅಥವಾ ಓಂ ಐಂ ಶ್ರೀಂ ಶ್ರೀಂ ಬುಧಾಯ ನಮಃ!
ಓಂ ಬ್ರಾಂ ಬ್ರಿಂ ಬ್ರೌಂ ಸ: ಓಂ ಬುಧಾಯ ನಮಃ!
ಬುಧವಾರದ ಪರಿಹಾರಗಳು
- ದುರ್ಗಾ ಸಪ್ತಶತಿ ಪಠಿಸಿ
- ಹೆಸರುಕಾಳನ್ನು ದಾನ ಮಾಡಿ
- ಋಣಹರ್ತ ಗಣೇಶ ಸ್ತೋತ್ರ ಪಠಿಸಿ
- ಗಣೇಶನಿಗೆ ಗರಿಕೆಯನ್ನು ಅರ್ಪಿಸಿ
- ಹಸುವಿಗೆ ಹಸಿರು ಹುಲ್ಲನ್ನು ತಿನ್ನಿಸಿ
- ಬುಧ ಮಂತ್ರಗಳನ್ನು ಪಠಿಸಿ



Click it and Unblock the Notifications


