Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ಕನ್ನಡದಲ್ಲಿ ಶುಭ ಕೋರಲು ಶುಭಾಶಯಗಳು
ಪ್ರಧಾನಿ ನರೇಂದ್ರ ಮೋದಿಯವರಿಗೆ ಹುಟ್ಟು ಹಬ್ಬದ ಸಂಭ್ರಮ. ಸೆಪ್ಟೆಂಬರ್ 17ಕ್ಕೆ 72 ತುಂಬಿ 73 ಪ್ರಾರಂಭವಾಗಲಿದೆ. ಮೋದಿಯವರನ್ನು ನೋಡಿದರೆ 73 ಎಂದು ನಂಬಲು ಕಷ್ಟ, ಏಕೆಂದರೆ ನೋಡಿದರೆ 50 ಆಸುಪಾಸಿನವರಂತೆ ಕಾಡುತ್ತಾರೆ, ಆದರೆ ಅವರ ಚುರುಚುರುಕು, ಕೆಲಸದ ವೈಖರಿ ನೋಡಿದರೆ ಯುವಕರು ನಾಚುವಂತಿದೆ. ಈ ವಿಷಯದಲ್ಲಿ ಮೋದಿಜೀ ಎಲ್ಲಾ ಯುವಕರಿಗೆ ಸ್ಪೂರ್ತಿ ಎಂದರೆ ತಪ್ಪಾಗಲಾರದು. ನೀವು ಪಕ್ಷದ ಯಾವುದೇ ಪಕ್ಷದ ಸಿದ್ದಾಂತಗಳನ್ನು ಬೆಂಬಲಿಸುವವರು ಆಗಿರಿ ಆದರೆ ಈ ಪ್ರಾಯದಲ್ಲೂ ಅವರು ಆರೋಗ್ಯ ಸೀಕ್ರೆಟ್ ತಿಳಿಯಬಯಸುತ್ತೀರಿ.
ಪ್ರಧಾನಿಯಾಗಿ ಇಷ್ಟು ವರ್ಷದಲ್ಲಿ ಅನಾರೋಗ್ಯ ಎಂದು ಒಂದು ದಿನವೂ ರಜೆ ಹಾಕಿಲ್ಲ. ಅಲ್ಲದೆ ದಿನದಲ್ಲಿ 18 ಗಂಟೆ ಕೆಲಸ ಮಾಡುತ್ತಾರೆ. ಎಷ್ಟೇ ಸಭೆ-ಸಮಾರಂಭಗಳಲ್ಲಿ ಭಾಗಿಯಾದರೂ, ಗಂಟೆ ಗಟ್ಟಲೆ ರ‍್ಯಾಲಿ, ಸಭೆ ಮಾಡಿದರೂ ಅವರ ಮುಖದಲ್ಲಿ ಆಯಾಸ ಎಂಬುವುದು ಕಾಣುವುದೇ ಇಲ್ಲ, ಇದೆಲ್ಲಾ ಹೇಗೆ ಸಾಧ್ಯ ಎಂಬ ಅಚ್ಚರಿ ಖಂಡಿತ ಉಂಟಾಗುವುದು. ಅವರ ಆರೋಗ್ಯದ ಪ್ರಮುಖ ಗುಟ್ಟು ಯೋಗ, ಪ್ರತಿದಿನ ಅವರು ಯೋಗಾಭ್ಯಾಸ ಮಾಡುತ್ತಾರೆ.
ಇಂದು ಯೋಗ ಅಂತರಾಷ್ಟ್ರೀಯ ಮಟ್ಟದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ , ಯೋಗದ ಪ್ರಯೋಜನಗಳ ಬಗ್ಗೆ ತಿಳಿಯಲು ವಿದೇಶಿಗರು ಆಸಕ್ತಿ ತೋರಿಸುತ್ತಿದ್ದಾರೆ, ಇದಕ್ಕೆ ಮುಖ್ಯ ಕಾರಣ ಪ್ರಧಾನಿ ಮೋದಿ, ಅವರು ಪ್ರಧಾನಿಯಾದ ಬಳಿಕ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ಇಂದು ಗುರುತಿಸಿಕೊಳ್ಳುತ್ತದೆ ಅದರಲ್ಲಿ ಮೋದಿ ಕೊಡುಗೆ ಅಪಾರವಾದದ್ದದು. ಭಾರತವನ್ನು ನಿರ್ಲಕ್ಷ್ಯ ಮಾಡುತ್ತಿದ್ದ ರಾಷ್ಟ್ರಗಳು ಕೂಡ ಈಗ ಭಾರತಕ್ಕೆ ಪ್ರಾಮುಖ್ಯತೆ ನೀಡುತ್ತಿವೆ. ಭಾರತ ಕಂಡ ಅತ್ಯಂತ ಸಮರ್ಥ ನಾಯಕರಲ್ಲಿ ನರೇಂದ್ರ ಮೋದಿ ಕೂಡ ಒಬ್ಬರು. ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಮೋದಿಜೀಯವರಿಗೆ ಇಡೀ ಜಗತ್ತೇ ಶುಭಾಶಯಗಳನ್ನು ಕೋರುತ್ತಿದೆ.
ಪ್ರಧಾನಿ ಮೋದಿಗೆ ನಿಮ್ಮ ಸಾಮಾಜಿಕ ತಾಣದಲ್ಲಿ ಶುಭ ಕೋರಲು ಇಲ್ಲಿದೆ ಶುಭಾಶಯಗಳು
ಪ್ರಧಾನಿ ನರೇಂದ್ರ ಮೋದಿಯವರಿಗೆ ಹುಟ್ಟು ಹಬ್ಬದ ಶುಭಾಶಯಗಳು

ಪ್ರೀತಿಯ ಪ್ರಧಾನಿಗಳೇ ... ನೀವು ಸದಾ ನಮ್ಮ ಸ್ಪೂರ್ತಿ
ಹ್ಯಾಪಿ ಬರ್ತ್‌ಡೇ ಮೋದಿಜೀ
ಪ್ರಧಾನಿಯಾದ ಮೇಲೆ ಒಂದು ದಿನವೂ ರಜೆ ಹಾಕದೆ ದಿನದಲ್ಲಿ 18 ಗಂಟೆ ದೇಶಕ್ಕಾಗಿ ದುಡಿಯುವ,
ನರೇಂದ್ರ ಮೋದಿಜೀಗೆ ಹುಟ್ಟು ಹಬ್ಬದ ಶುಭಾಶಗಳು
ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಹೆಮ್ಮೆಯ ನಾಯಕನಿಗೆ ಹುಟ್ಟು ಹಬ್ಬದ ಶುಭಾಶಯಗಳು
ನಾವು ಜೊತೆಯಲ್ಲಿ ನಡೆಯುತ್ತೇವೆ, ಜೊತೆಯಲ್ಲಿ ಹೋಗುತ್ತೇವೆ, ಜೊತೆಯಾಗಿ ಯೋಚಿಸುತ್ತೇವೆ, ಜೊತೆಯಗಿ ಬಗೆಹರಿಸುತ್ತೇವೆ, ಜೊತೆಯಾಗಿ ದೇಶವನ್ನು ಮುನ್ನೆಡೆಸುತ್ತೇವೆ ಎಂದು ಹೆಳಿರುವ ನರೇಂದ್ರ ಮೋದಿಜೀಗೆ ಹುಟ್ಟು ಹಬ್ಬದ ಶುಭಾಶಯಗಳು
ನಿಮ್ಮ ಕನಸುಗಳು ನಿಮ್ಮನ್ನು ಭಯಪಡಿಸದಿದ್ದರೆ ಅದು ಕನಸುಗಳೇ ಅಲ್ಲ: ನರೇಂದ್ರ ಮೋದಿ
ಶ್ರಮವಹಿಸಿ ಕೆಲಸ ಮಾಡಿದರೆ ಯಾವತ್ತಿಗೂ ತಲೆಸುತ್ತು ಬರಲ್ಲ, ಬದಲಿಗೆ ತೃಪ್ತಿ ಸಿಗುತ್ತದೆ : ನರೇಂದ್ರ ಮೋದಿ
ದಿನದಲ್ಲಿ 18 ಗಂಟೆ ದೇಶಕ್ಕಾಗಿ ದುಡಿಯುವ ಪ್ರಧಾನಿಗೆ ಹುಟ್ಟು ಹಬ್ಬದ ಶುಭಾಶಯಗಳು



Click it and Unblock the Notifications




