Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಇತರ ಬಳೆಗಳಿಗಿಂತ ಹಸಿರು, ಕೆಂಪು ಗಾಜಿನ ಬಳೆಯೇ ಶ್ರೇಷ್ಠ ಏಕೆ?
ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಮಕ್ಕಳು ಕೈಗಳಿಗೆ ಬಳೆ ಧರಿಸುತ್ತಾರೆ. ಅದರಲ್ಲೂ ಗಾಜಿನ ಬಳೆಗಳನ್ನು ಧರಿಸುತ್ತಾರೆ. ಮದುವೆ- ಸೀಮಂತ ಶಾಸ್ತ್ರಗಳಲ್ಲಿ ಬಳೆಗಳಿಗೆ ತುಂಬಾನೇ ಪ್ರಾಮುಖ್ಯತೆ ನೀಡಲಾಗುವುದು. ಮನೆಗೆ ಬಂದ ಮುತ್ತೈದೆಯರಿಗೆ ತಾಂಬೂಲ ತಟ್ಟೆ ನೀಡುವಾಗಲೂ ಅದರಲ್ಲಿ ಬಳೆಗಳನ್ನು ಇಟ್ಟು ನೀಡುತ್ತೇವೆ.
ಬಳೆಗಳು ಬರೀ ಅಲಂಕಾರಿಕ ವಸ್ತುಗಳಲ್ಲ, ವೈದಿಕ ಸಾಸ್ತ್ರದಲ್ಲಿ ಬಳೆಗಳಿಗೆ ತುಂಬಾನೇ ಮಹತ್ವವಿದೆ. ಕೈಗಳಿಗೆ ಮಳೆಗಳನ್ನು ಧರಿಸುವುದರ ಬಗ್ಗೆ ನಮ್ಮ ಶಾಸ್ತ್ರದಲ್ಲಿ ಏನು ಹೇಳಲಾಗಿದೆ, ಇದರಿಂದ ದೊರೆಯುವ ಪ್ರಯೋಜನಗಳೇನು ಎಂದು ನೋಡೋಣ ಬನ್ನಿ:

ಗಾಜಿನ ಬಳೆಗಳ ಮಹತ್ವ
ಮದುವೆಯಾದ ಹೆಣ್ಮಕ್ಕಳು ಕೈಗೆ ಗಾಜಿನ ಬಳೆ ಧರಿಸಿದರೆ ಶುಭ ಎಂದು ಹೇಳಲಾಗುವುದು. ಕೈಗಳಿಗೆ ಬಳೆ ಧರಿಸದಿದ್ದರೆ ಋಣಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ, ಇದರಿಂದ ಗಂಡ-ಮಕ್ಕಳಿಗೆ ತೊಂದರೆಯಾಗುವುದು ಎಂಬ ನಂಬಿಕೆ ಇದೆ. ಈ ಬಗೆಯ ನಂಬಿಕೆಗಳನ್ನು ಕೆಲವರು ಮೂಢ ನಂಬಿಕೆಯೆಂದು ಹೇಳುತ್ತಾರೆ, ಅದು ಅವರವರ ನಂಬಿಕೆಗೆ ಬಿಟ್ಟ ವಿಷಯ.
ವೈಜ್ಞಾನಿಕ ದೃಷ್ಟಿಯಿಂದ ನೋಡುವುದಾದರೆ ಕೈ ಬಳೆಗಳು ಮಹಿಳೆಯ ಆರೋಗ್ಯಕ್ಕೆ ಒಳ್ಳೆಯದಂತೆ. ಆಕ್ಯೂಪಂಚರ್‌ನಲ್ಲಿ ನೀವು ನೋಡಿರಬಹುದು ದೇಹದ ಯಾವ ಭಾಗದ ಮೇಲೆ ಒತ್ತಡ ಹಾಕಿದರೆ ಏನು ಪ್ರಯೋಜನ ಸಿಗಲಿದೆ ಎಂದು ಹೇಳಲಾಗುವುದು. ಕೈ ಬಳೆಗಳು ಮಣಿಗಂಟಿನ ಮೇಲೆ ಒತ್ತಡ ಹಾಕುವುದು, ಇದರಿಂದ ಮಹಿಳೆಯರ ಗರ್ಭದ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುವುದು. ಅಲ್ಲದೆ ಕೈ ಬಳೆಗಳ ಶಬ್ದ ಕೇಳಲು ಹಿತವಾಗಿರುತ್ತದೆ. ಈ ಮಳೆಗಳ ಶಬ್ದ ಕೂಡ ಕೇಳಲು ಹಿತವಾಗಿರುತ್ತದೆ, ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು.
ರಕ್ತ ಸಂಚಾರಕ್ಕೆ ತುಂಬಾ ಒಳ್ಳೆಯದು
ಕೈಗಳಿಗೆ ಬಳೆಗಳನ್ನು ಧರಿಸುವುದರಿಂದ ರಕ್ತ ಸಂಚಾರಕ್ಕೆ ತುಂಬಾ ಒಳ್ಳೆಯದು, ಅಲ್ಲದೆ ಅಧಿಕ ರಕ್ತದೊತ್ತಡ ತಡೆಗಟ್ಟಲು ಕೂಡ ಸಹಕಾರಿ.
ಗರ್ಭಿಣೀಯರಿಗೆ ಒಳ್ಳೆಯದು
ಸೀಮಂತ ಶಾಸ್ತ್ರದಲ್ಲಿ ಕೈಗಳಿಗೆ ಬಳೆಗಳನ್ನು ತೊಡಿಸುತ್ತಾರೆ, ಅದರ ಹಿಂದಿರುವ ವೈಜ್ಞಾನಿಕ ಕಾರಣವೇನು ಎಂದು ನೋಡುವುದಾದರೆ... ಸೀಮಂತ ಶಾಸ್ತ್ರವನ್ನು 7ನೇ ತಿಂಗಳಿಗೆ ಮಾಡಲಾಗುವುದು. ಆವಾಗ ಮಗುವಿನ ಮೆದುಳಿನ ಬೆಳವಣಿಗೆ ಆಗ್ತಾ ಇರುತ್ತದೆ. ಈ ಸಮಯದಲ್ಲಿ ತಾಯಿ ಧರಿಸಿದ ಕೈ ಬಳೆಯ ಶಬ್ದ ಮಗುವಿನ ಮೆದುಳಿನ ಬೆಳವಣಿಗೆಗೆ ಸಹಕಾರಿಯಾಗಿದೆ. ಅಲ್ಲದೆ ಗರ್ಭಿಣಿಯರಲ್ಲಿ ಮಾನಸಿಕ ಒತ್ತಡ ಕಡಿಮೆಯಾಗಲು ಸಹಕಾರಿ. ಈ ಕಾರಣಕ್ಕೆ ಸೀಮಂತ ಶಾಸ್ತ್ರ ಬಳೆ ಹಾಕುವ ಸಂಪ್ರದಾಯವಿದೆ.
ಗಂಡು-ಹೆಣ್ಣಿನ ನಡುವಿನ ಬಾಂಧವ್ಯ ಗಟ್ಟಿಯಾಗಿಸುತ್ತದೆ
ಹೌದು ಕೈ ಬಳೆಗಳ ಶಬ್ದ ಗಂಡಿನ ಮನಸ್ಸಿನಲ್ಲಿ ರೊಮ್ಯಾಂಟಿಕ್ ಭಾವನೆ ಮೂಡಿಸುತ್ತದೆ, ಪತ್ನಿಯ ಕೈ ಬಳೆ ಶಬ್ದ ಅವನಲ್ಲಿ ಅವಳೆಡೆಗೆ ಆಸಕ್ತಿ ಹೆಚ್ಚುವಂತೆ ಮಾಡುತ್ತದೆ. ಇಬ್ಬರ ನಡುವೆ ಉತ್ತಮ ಬಾಂಧವ್ಯ ಮೂಡಿಸುತ್ತದೆ.
ಇತರ ಬಳೆಗಳಿಗಿಂತ ಗಾಜಿನ ಬಳೆಯೇ ಶ್ರೇಷ್ಠ ಏಕೆ?
ಯಾವುದೇ ಬಳೆಯಿರಲಿ ಅದು ಗಾಜಿನ ಬಳೆಗೆ ಸಮವಲ್ಲ ಎಂದು ಹೇಳಲಾಗುವುದು. ಏಕೆಂದರೆ ಗಾಜಿನ ಬಳೆ ಋಣಾತ್ಮಕ ಶಕ್ತಿ ದೂರವಿಡುವುದು, ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಅದರಲ್ಲೂ ಹೆಣ್ಮಕ್ಕಳು ಹಸಿರು ಹಾಗೂ ಕೆಂಪು ಬಳೆಯನ್ನು ಧರಸಿದಿರೆ ಶುಭ ಎಂದು ಹೇಳಲಾಗುವುದು. ಅಲ್ಲದೆ ಈ ಬಣ್ಣದ ಬಳೆಯನ್ನು ಮುತ್ತೈದೆಯರಷ್ಟೇ ಧರಿಸಬೇಕು ಎಂದು ಹೇಳಲಾಗುವುದು.
ಬಳೆ ಹೆಣ್ಣಿನ ಅಂದ ಹೆಚ್ಚಿಸುತ್ತೆ ಎನ್ನುವುದರಲ್ಲಿ ನೋ ಡೌಟ್
ಹೆಣ್ಣಿಗೆ ಆಭರಣವೇ ಭೂಷಣ ಎಂದು ಹೇಳಲಾಗುವುದು. ಆಭರಣಗಳು ಅವಳ ಸೌಂದರ್ಯಕ್ಕೆ ಮೆರಗು ನೀಡುವುದು. ಕೈಯಲ್ಲಿನ ಬಳೆಗಳು ಕೂಡ ಅವಳ ಅಂದವನ್ನು ಹೆಚ್ಚಿಸುತ್ತೆ. ಬಳೆಯನ್ನು ಲಕ್ಷ್ಮಿಗೆ ಅರ್ಪಿಸಲಾಗುವುದು, ಹೆಣ್ಣು ಕೈಗೆ ಬಳೆ ಹಾಕಿದರೆ ಲಕ್ಷ್ಮಿ ಸ್ವರೂಪಿಯಾಗಿ ಕಾಣಲಾಗುವುದು ಎಂದು ಹೇಳುತ್ತಾರೆ.
ಸೂಚನೆ: ಬಳೆ ಧರಿಸುವುದು ನಮ್ಮ ಸಂಪ್ರದಾಯ, ಆದರೆ ಫ್ಯಾಷನ್ ಹೆಸರಿನಲ್ಲಿ ಕೆಲವರು ಬಳೆ ಧರಿಸಲ್ಲ, ಹಾಗಂತ ಯಾರೂ ಬಳೆ ಧರಿಸಲೇಬೇಕೆಂಬ ಒತ್ತಾಯವನ್ನು ನಾವೂ ಹಾಕುತ್ತಿಲ್ಲ. ಬಳೆಗಳನ್ನು ಧರಿಸಬೇಕೆ, ಬೇಡ್ವೆ ಎನ್ನುವುದು ಅವಳ ಆಯ್ಕೆಯಾಗಿರುತ್ತದೆ, ಅಲ್ಲದೆ ಅವಳ ಆಯ್ಕೆ ಗೌರವಿಸುವುದು ಹೆಣ್ಣಿಗೆ ನೀಡುವ ಗೌರವವಾಗಿದೆ.



Click it and Unblock the Notifications
