Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಶಿವನನ್ನು ಆರಾಧನೆ ಮಾಡೋದ್ರಿಂದ ಈ 10 ಸಂಕಷ್ಟಗಳಿಂದ ಪಾರಾಗಬಹುದು!
ಮಹಾದೇವನನ್ನು ಹಲವಾರು ರೂಪಗಳಲ್ಲಿ ಪೂಜಿಸಲಾಗುತ್ತದೆ. ಶಿವ ಎಂದರೆ "ಶುಭಕರ" ಎಂದರ್ಥ. ಶಂಭು, ಮಹೇಶ, ಶಂಕರ, ಮಹಾದೇವ ಹೀಗೆ ಶಿವನನ್ನು ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ಶಿವ ಎಂದರೆ ಒಂದು ಪವಿತ್ರವಾದ ದೈವೀಕ ಶಕ್ತಿ. ಶಿವರಾತ್ರಿಯ ದಿನ ಶಿವನನ್ನು ಪೂಜಿಸಿದರೆ ಆತನನ್ನು ಒಲಿಸಿಕೊಳ್ಳಬಹುದು ಎಂಬ ನಂಬಿಕೆ ಭಕ್ತರಲ್ಲಿ ಇದೆ.
ಆದರೆ ಶಿವನನ್ನು ಪೂಜಿಸಲು ಇಂತಹದ್ದೇ ದಿನ ಅಂತೇನಿಲ್ಲ. ಎಲ್ಲಾ ದಿನಾನೂ ಪೂಜೆ ಮಾಡಬಹುದು. ಅದ್ರಲ್ಲೂ ಸೋಮವಾರ ಶಿವ ಪೂಜೆಗೆ ತುಂಬಾನೇ ಪ್ರಾಶಸ್ತ್ಯವಾದ ದಿನ. ಅಷ್ಟಕ್ಕು ಶಿವನನ್ನು ಪೂಜೆ ಮಾಡೋದ್ರಿಂದ ಏನೆಲ್ಲಾ ಲಾಭಗಳಿದೆ ಅನ್ನೋದನ್ನು ತಿಳಿಯೋಣ.

1. ಮಾನಸಿಕ ಹಾಗೂ ಆಧ್ಯಾತ್ಮಿಕ ಯೋಗಕ್ಷೇಮ ಉತ್ತಮವಾಗುತ್ತದೆ
ನಮಲ್ಲಿ ಎಷ್ಟೇ ಹಣ, ಆಸ್ತಿ ಇದ್ದರೂ ಕೂಡ ಹೆಚ್ಚಿನ ಸಂದರ್ಭದಲ್ಲಿ ಮನಶಾಂತಿ ಅನ್ನೋದು ಇರೋದೇ ಇಲ್ಲ. ಶಿವನನ್ನು ಪೂಜೆ ಮಾಡೋದ್ರಿಂದ ನಮ್ಮ ಮಾನಸಿಕ ಹಾಗೂ ಆಧ್ಯಾತ್ಮಿಕ ಯೋಗಕ್ಷೇಮ ಉತ್ತಮಗೊಳ್ಳುತ್ತಂತೆ. ಹೀಗಾಗಿ ಶಿವನನ್ನು ಪೂಜೆ ಮಾಡುವಾಗ ಪರಿಶುದ್ಧ ಮನಸ್ಸಿನಿಂದ ಪೂಜೆ ಮಾಡಬೇಕು. ಯಾರ ನಿಷ್ಕಲ್ಮಶ ಮನಸ್ಸಿನಿಂದ ಮಹಾದೇವನ ಆರಾಧನೆ ಮಾಡುತ್ತಾರೋ ಅವರಿಗೆ ಯಾವ ರೀತಿ ತೊಂದರೆ ಎದುರಾಗೋದಿಲ್ಲ.
2. ಜ್ಞಾನ ಹಾಗೂ ಬುದ್ಧಿ ವೃದ್ಧಿಯಾಗುತ್ತದೆ
ಶಿವನನ್ನು ಬುದ್ಧಿಯನ್ನು ಕರುಣಿಸೋ ದೇವರು ಅಂತ ಕರೆಯಲಾಗುತ್ತದೆ. ಇಡೀ ವಿಶ್ವವನ್ನು ಆಳುವ ಮೂರು ದೇವರುಗಳಲ್ಲಿ ಮಹಾದೇವನು ಒಬ್ಬನು. ಶಿವನ ಶಕ್ತಿ ಅಂತಿಂತಾ ಶಕ್ತಿಯಲ್ಲ, ಆತನಲ್ಲಿ ಅಪಾರ ಶಕ್ತಿ ಹಾಗೂ ಜ್ಞಾನವಿದೆ. ಯಾರು ಶಿವನನ್ನು ಪೂಜೆ ಮಾಡುತ್ತಾರೋ ಅವರಿಗೆ ಜ್ಞಾನ ವೃದ್ಧಿಯಾಗುತ್ತಂತೆ. ಇದರಿಂದ ನೀವು ನಿಮ್ಮ ಜೀವನದ ದೃಷ್ಟಿಕೋನವನ್ನು ಬದಲಾಯಿಸಲು ಸಾಧ್ಯವಾಗಲಿದೆ.
3. ಅಕಾಲಿಕ ಮರಣಕ್ಕೆ ಭಯ ಪಡಬೇಕಾಗಿಲ್ಲ
ಹುಟ್ಟು ಹಾಗೂ ಸಾವು ನಮ್ಮ ಕೈಯಲ್ಲಿಲ್ಲ. ನಾವು ಯಾವ ಸಂದರ್ಭದಲ್ಲಿ ಸಾಯಬೇಕು ಅನ್ನೋದನ್ನು ವಿಧಿ ನಿರ್ಧರಿಸಿರುತ್ತೆ. ಆದರೆ ಶಿವ ವಿನಾಶದ ದೇವರು. ಯಾರು ನಿತ್ಯ ಶಿವನನ್ನು ಪೂಜೆ ಮಾಡುತ್ತಾರೆಯೋ ಅವರು ಅಕಾಲಿಕ ಮರಣಕ್ಕೆ ತುತ್ತಾಗೋದಿಲ್ಲ ಅನ್ನೋ ನಂಬಿಕೆ ಹಿಂದಿನಿಂದಾನೂ ಇದೆ. ಶಿವ ಭಕ್ತರನ್ನು ರಕ್ಷಣೆ ಮಾಡುವ ಜವಾಬ್ದಾರಿಯನ್ನು ಆತ ಹೊತ್ತಿರುತ್ತಾನೆ.
4. ಶಿವನ ಮೆಚ್ಚುಗೆಗೆ ಪಾತ್ರರಾಗಬಹುದು
ಶಿವ ಉಗ್ರರೂಪಿ. ಒಂದು ವೇಳೆ ಶಿವನ ಕೋಪಕ್ಕೆ ಗುರಿಯಾದರೆ ಇಡೀ ಭೂಮಂಡಲವೇ ನಾಶವಾಗಲಿದೆ. ಇಂತಹ ಉಗ್ರರೂಪಿ ಶಿವನನ್ನು ಒಲಿಸಿಕೊಳ್ಳುವುದು ತುಂಬಾನೇ ಸುಲಭ. ಶಿವನನ್ನು ಮೆಚ್ಚಿಸಲು ನೀವು ಏನನ್ನೂ ಅರ್ಪಿಸಬೇಕಾಗಿಲ್ಲ. ನಿಮ್ಮಲ್ಲಿ ನಿಷ್ಕಲ್ಮಶ ಭಕ್ತಿ ಇದ್ದರೆ ಸಾಕು. ನೀವು "ಓಂ ನಮಃ ಶಿವಾಯ" ಎಂದು ಪ್ರಾರ್ಥಿಸಿದರೆ ಸಾಕು. ನಿಮ್ಮ ಪ್ರಾರ್ಥನೆ ಆತನಿಗೆ ಖಂಡಿತ ಕೇಳಿಸುತ್ತದೆ.
5. ನೂರ್ಕಾಲ ನಿಮ್ಮ ದಾಂಪತ್ಯ ಜೀವನ ಚೆನ್ನಾಗಿರುತ್ತದೆ
ಶಿವನು ಕೂಡ ಕುಟುಂಬಸ್ಥ. ಶಿವನು ಉತ್ತಮ ಪತಿಗೆ ಆದರ್ಶ ವ್ಯಕ್ತಿಯಾಗಿದ್ದಾನೆ. ಎಲ್ಲಾ ಮಹಿಳೆಯರು ಶಿವನಂತಹ ಪತಿಯನ್ನೇ ಪಡೆಯಬೇಕು ಎಂದು ಇಚ್ಛಿಸುತ್ತಾರೆ. ದಾಂಪತ್ಯ ಜೀವನ ಸುಖವಾಗಿರಬೇಕೆಂದರೆ ಭಕ್ತಿಯಿಂದ ಶಿವಪೂಜೆಯನ್ನು ಮಾಡಬೇಕು. ಆಗ ಶಿವನ ಆಶೀರ್ವಾದ ನಿಮ್ಮ ಕುಟುಂಬದ ಮೇಲೆ ಸದಾ ಇದ್ದೇ ಇರುತ್ತದೆ.
6. ತಾಳ್ಮೆ ಹೆಚ್ಚಾಗುತ್ತದೆ
ಶಿವ ಕೋಪ ಎಂತಹದ್ದು ಅಂತ ಇಡೀ ಜಗತ್ತಿಗೆ ಗೊತ್ತು. ದೇವತೆಗಳು ಕೂಡ ಮಹಾದೇವ ಕೋಪಗೊಂಡಿದ್ದಾನೆ ಎಂದಾಗ ಒಂದು ಕ್ಷಣ ಭಯಭೀತರಾಗುತ್ತಾರೆ. ಶಿವನಿಗೆ ತಾಳ್ಮೆ ಹೆಚ್ಚು. ಆದರೆ ಆತ ಏನಾದ್ರು ತಾಳ್ಮೆ ಕಳೆದುಕೊಡರೆ ನಂತರ ಏನಾಗುತ್ತೆ ಅನ್ನೋದನ್ನು ಊಹಿಸೋದಕ್ಕೆ ಸಾಧ್ಯವಿಲ್ಲ. ಹೀಗಾಗಿ ಶಿವನನ್ನು ಪೂಜಿಸಿದರೆ ಆತ ನಿಮಗೆ ಕೋಪವನ್ನು ತಡೆದುಕೊಳ್ಳೋ ಶಕ್ತಿ ನೀಡುತ್ತಾನಂತೆ.
7. ಋಣಾತ್ಮಕತೆ ಕಡಿಮೆಯಾಗುತ್ತದೆ
ಹೆಚ್ಚಿನ ಜನ ತಮ್ಮ ಜೀವನದಲ್ಲಿ ಯಶಸ್ವಿಯಾಗೋದಕ್ಕೆ ಸಾಧ್ಯವಾಗೋದಿಲ್ಲ. ಕಾರಣ ಅವರ ಮನಸ್ಸಿನ ತುಂಬೆಲ್ಲಾ ಋಣಾತ್ಮಕತೆ ತುಂಬಿಕೊಂಡಿರುತ್ತದೆ. ಯಾರು ಶಿವನನ್ನು ಪೂಜೆ ಮಾಡುತ್ತಾರೆಯೋ ಅವರ ಮನಸ್ಸಿನಲ್ಲಿದ್ದ ಋಣಾತ್ಮಕ ಅಂಶಗಳೆಲ್ಲಾ ಕಡಿಮೆಯಾಗಿ ಧನಾತ್ಮಕತೆ ಹೆಚ್ಚಾಗುತ್ತಂತೆ. ದೈಹಿಕವಾಗಿ ಅಥವಾ ಮಾನಸಿಕವಾಗಿ ಧನಾತ್ಮಕ ಅಂಶ ಹೆಚ್ಚಾಗಲು ಮಹಾದೇವ ಶಕ್ತಿ ನೀಡುತ್ತಾನಂತೆ.
8. ಆತಂರಿಕ ಶಕ್ತಿ ಹಾಗೂ ಆತ್ಮವಿಶ್ವಾಸ ಹೆಚ್ಚಾಗುತ್ತದೆ
ಕೆಲವು ಸಲ ನಮಗೆ ನಮ್ಮ ಆತ್ಮವಿಶ್ವಾಸ ಹಾಗೂ ಆಂತರಿಕ ಶಕ್ತಿ ಕಡಿಮೆಯಾದಂತೆ ಅನುಭವವಾಗುತ್ತದೆ. ಈ ಸಂದರ್ಭದಲ್ಲಿ ಶಿವನನ್ನು ಭಕ್ತಿಯಿಂದ ಆರಾಧಿಸಿದರೆ ನಿಮ್ಮ ಆತ್ಮವಿಶ್ವಾಸವನ್ನು ಮರಳಿ ಪಡೆಯಲು ಸಾಧ್ಯವಾಗುತ್ತದೆ. ಹಾಗೂ ನೀವು ಒಳಗಿನಿಂದ ಶಕ್ತಿಶಾಲಿಯಾಗಲು ನೆರವಾಗುತ್ತದೆ. ಶಿವ ನಿಮ್ಮನ್ನು ಬಲಶಾಲಿಯಾಗಲು ನೆರವಾಗುತ್ತಾನಂತೆ. ಹಾಗೂ ನಿಮಗೆ ಮಾರ್ಗದರ್ಶನ ನೀಡುತ್ತಿರುತ್ತಾನಂತೆ.
9. ಚಿಕ್ಕ-ಪುಟ್ಟ ಘಟನೆಗಳು ನಿಮಗೆ ನೋವು ಕೊಡೋದಿಲ್ಲ
ಶಿವನು ಸರ್ವಶಕ್ತ. ಆತ ಸಣ್ಣ-ಪುಟ್ಟ ವಿಚಾರಗಳಿಂದ ಪ್ರಭಾವಿತನಾಗೋದಿಲ್ಲ. ಶಿವನನ್ನು ಯಾರು ಆರಾಧನೆ ಮಾಡುತ್ತಾರೆಯೋ ಅವರಿಗೂ ಕೂಡ ಇಂತಹದ್ದೇ ವಿಶೇಷ ಶಕ್ತಿ ಇರುತ್ತಂತೆ. ಹೀಗಾಗಿ ನಿಮ್ಮ ಜೀವನದಲ್ಲಿ ನೀವು ಚಿಕ್ಕ-ಪುಟ್ಟ ಘಟನೆಗಳು ನಡೆದಾಗ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳೋದಕ್ಕೆ ಹೋಗೋದಿಲ್ಲ. ಶಿವನ ಪೂಜೆ ಮಾಡೋದ್ರಿಂದ ನಿಮ್ಮ ಒತ್ತಡ ಕಡಿಮೆಯಾಗುತ್ತಂತೆ. ನೀವು ಯಾವುದೇ ರೀತಿ ತೊಂದರೆಗೆ ಒಳಗಾಗೋದಿಲ್ಲ.
10. ನಿಮ್ಮ ಸಾಕು ಪ್ರಾಣಿ ದೀರ್ಘಾವಧಿ ಜೀವಿತಾವದಿ ಹೊಂದಿರುತ್ತದೆ
ಭಗವಾನ್ ಶಿವನನ್ನು ಪಶುಪತಿ ಎಂದು ಕರೆಯಲಾಗುತ್ತದೆ. ಆತನು ತನ್ನ ಕೆಳಗೆ ಬರೋ ಪ್ರತಿಯೊಂದು ಜೀವ ಸಂಕುಲವನ್ನು ರಕ್ಷಣೆ ಮಾಡುತ್ತಾನೆ. ಶಿವನನ್ನು ಪ್ರಾರ್ಥನೆ ಮಾಡೋದ್ರಿಂದ ನಿಮ್ಮ ಸಾಕು ಪ್ರಾಣಿಗಳಿಗೂ ಯಾವುದೇ ರೀತಿ ತೊಂದರೆಯಾಗೋದಿಲ್ವಂತೆ. ಅವರಿಗೂ ಕೂಡ ಆರೋಗ್ಯಕರ ಜೀವನ ಮತ್ತು ದೀರ್ಘಾಯುಷ್ಯವನ್ನು ಕರುಣೆ ಮಾಡುತ್ತಾನಂತೆ.
ಶಿವನನ್ನು ಭಕ್ತಿಯಿಂದ ಆರಾಧನೆ ಮಾಡೋದ್ರಿಂದ ನಿಮ್ಮ ಸಕಲ ಸಂಕಷ್ಟಗಳೆಲ್ಲಾ ಪರಿಹಾರವಾಗುತ್ತದೆ. ಜೊತೆಗೆ ನಿಮ್ಮ ರಕ್ಷಣೆಯನ್ನು ಆ ಮಹಾದೇವ ಸದಾ ಮಾಡುತ್ತಾನೆ.



Click it and Unblock the Notifications

