Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಬಲರಾಮ ಜಯಂತಿ 2023 : ದಿನಾಂಕ, ಶುಭ ಮುಹೂರ್ತ, ಪೂಜಾವಿಧಿಯೇನು?
ಸನಾತನ ಪಂಚಾಂಗದ ಪ್ರಕಾರ ಪ್ರತಿ ವರ್ಷ ಭಾದ್ರಪದ ಮಾಸದ ಕೃಷ್ಣ ಪಕ್ಷದ ಷಷ್ಠಿಯಂದು ಬಲರಾಮ ಜಯಂತಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಸೆಪ್ಟೆಂಬರ್ 5 ರ ಮಂಗಳವಾರ ಬಲರಾಮ್ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ. ಬಲರಾಮನು ಭಾದ್ರಪದ ಮಾಸದ ಕೃಷ್ಣ ಪಕ್ಷದ ಆರನೆಯ ದಿನದಂದು ಜನಿಸಿದನೆಂದು ಸನಾತನ ಗ್ರಂಥಗಳಲ್ಲಿ ಸೂಚಿಸಲಾಗಿದೆ. ಆದ್ದರಿಂದ ಈ ದಿನ ಬಲರಾಮ ಜಯಂತಿಯನ್ನು ಆಚರಿಸಲಾಗುತ್ತದೆ.

ವಿಶ್ವ ರಕ್ಷಕನಾದ ಶ್ರೀಕೃಷ್ಣನ ಅಣ್ಣನಾದ ಬಲರಾಮನ ಪೂಜೆಗೂ ವಿಶೇಷ ಮಹತ್ವವಿದೆ. ಈ ದಿನ ಕೃಷ್ಣನ ಜೊತೆಗೆ ಬಲರಾಮನನ್ನು ಪೂಜಿಸುವುದರಿಂದ ಸಾಧಕನು ಬಯಸಿದ ಫಲವನ್ನು ಪಡೆಯುತ್ತಾನೆ ಎಂಬ ನಂಬಿಕೆಯಿದೆ. ಅಷ್ಟೇ ಅಲ್ಲದೇ, ನಿಮ್ಮ ಕಷ್ಟಗಳೆಲ್ಲಾ ದೂರವಾಗುತ್ತೆ ಎನ್ನುವ ನಂಬಿಕೆ ಕೂಡಯಿದೆ. ಅಷ್ಟಕ್ಕೂ ಬಲರಾಮ ಜಯಂತಿಯ ಶುಭ ಸಮಯ ಯಾವುದು? ಪೂಜಾ ವಿಧಿ ಬಗ್ಗೆ ತಿಳಿದುಕೊಳ್ಳೋಣ.
ಶುಭ ಮುಹೂರ್ತ ಯಾವುದು?
ಜ್ಯೋತಿಷಿಗಳ ಪ್ರಕಾರ ಭಾದ್ರಪದ ಮಾಸದ ಕೃಷ್ಣ ಪಕ್ಷದ ಷಷ್ಠಿಯಂದು ಸೆಪ್ಟೆಂಬರ್ 04ರ ಸೋಮವಾರದಂದು ಸಂಜೆ 04.41 ಕ್ಕೆ ಪ್ರಾರಂಭವಾಗಿ ಮರುದಿನ ಸೆಪ್ಟೆಂಬರ್ 05 ರಂದು ಮಧ್ಯಾಹ್ನ 03.46 ಕ್ಕೆ ಕೊನೆಗೊಳ್ಳುತ್ತದೆ. ಸನಾತನ ಧರ್ಮದಲ್ಲಿ ಉದಯ ತಿಥಿಯನ್ನು ಪರಿಗಣಿಸಲಾಗಿದೆ. ಹೀಗಾಗಿ ಸೆ.5ರಂದು ಬಲರಾಮ್ ಜಯಂತಿ ಆಚರಿಸಲಾಗುವುದು. ಈ ದಿನ ಭಕ್ತಿಯಿಂದ ಪೂಜೆಯನ್ನು ನೆರವೇರಿಸಿದರೆ ನಿಮ್ಮೆಲ್ಲಾ ಇಷ್ಟಾರ್ಥಗಳು ಸಿದ್ಧಿಸುತ್ತೆ ಎನ್ನುವ ನಂಬಿಕೆಯಿದೆ.
ಪೂಜಾ ವಿಧಾನ ಹೇಗಿರಬೇಕು?
ಬಲರಾಮ ಜಯಂತಿಯ ದಿನದಂದು ಬೆಳಗ್ಗೆ ಎದ್ದು ಲೋಕರಕ್ಷಕನಾದ ವಿಷ್ಣುವಿನ ಸಮೇತ ಶೇಷನಾಗನ ದರ್ಶನ ಮಾಡಿ. ದ್ವಾಪರ ಯುಗದಲ್ಲಿ ಶೇಷನಾಗನು ಬಲರಾಮನಾಗಿ ಅವತರಿಸಿದನೆಂದು ಗ್ರಂಥಗಳಲ್ಲಿ ಸೂಚಿಸಲಾಗಿದೆ. ದೈನಂದಿನ ಚಟುವಟಿಕೆಗಳನ್ನು ಮಾಡಿದ ನಂತರ ಗಂಗಾಜಲವಿರುವ ನೀರಿನಿಂದ ಸ್ನಾನ ಮಾಡಿ. ಮತ್ತು ನಂತರ ಬಂದು ಧ್ಯಾನ ಮಾಡಿ. ಅದರ ನಂತರ ಹೊಸ ಬಟ್ಟೆಗಳನ್ನು ಧರಿಸಿ. ಮತ್ತು ಸೂರ್ಯ ದೇವರಿಗೆ ನೀರನ್ನು ಅರ್ಪಿಸಿ.
ಇದಾದ ಬಳಿಕ ಶ್ರೀಕೃಷ್ಣನೊಂದಿಗೆ ಬಲರಾಮನ ಪೂಜೆಯನ್ನು ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ಅದನ್ನು ಮಾಡಿ. ಪೂಜೆಯ ಕೊನೆಯಲ್ಲಿ ಆರತಿಯನ್ನು ಅರ್ಪಿಸಿ ಮತ್ತು ಸಂತೋಷ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿ. ವಿಶೇಷ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸಲು ಪೂಜೆ ಮಾಡಿದರೆ ತುಂಬಾನೇ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆಯಿದೆ. ಸಂಜೆ ಆರತಿ ಮಾಡಿ ಹಣ್ಣು ತಿನ್ನಿರಿ. ಮರುದಿನ ಪೂಜೆಯನ್ನು ಮಾಡುವ ಮೂಲಕ ಉಪವಾಸವನ್ನು ಮುರಿಯಿರಿ.
ಈ ರೀತಿ ಬಲರಾಮ ಜಯಂತಿಯ ದಿನ ಪೂಜಾ ವಿಧಿಯನ್ನು ನೆರವೇರಿಸಿದ್ರೆ ನಿಮ್ಮೆಲ್ಲಾ ಕಷ್ಟಗಳು ನೆರವೇರಿ ಇಷ್ಟಾರ್ಥಗಳೆಲ್ಲಾ ಸಿದ್ಧಿಯಾಗಲಿದೆ.



Click it and Unblock the Notifications
