Latest Updates
-
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ
ಅಯೋಧ್ಯೆ ಶ್ರೀರಾಮನಿಗೆ ಬರುತ್ತಿರುವ ಕಾಣಿಕೆಗಳಲ್ಲಿ ಗಮನ ಸೆಳೆಯುತ್ತಿರುವ ವಸ್ತುಗಳಿವು
ಜನವರಿ 22ರ ಸಂಭ್ರಮಕ್ಕೆ ಇಡೀ ದೇಶವೇ ಸಜ್ಜಾಗಿದೆ. ಶ್ರೀರಾಮನಿಗೆ ಭಕ್ತರಿಂದ ಅನೇಕ ಕಾಣಿಕೆಗಳ ರಾಶಿಯೇ ಹರಿದು ಬರುತ್ತಿದೆ, ರಾಮ ಭಕ್ತರು ತಮ್ಮ ಶಕ್ತಿಗೆ ಅನುಸಾರ ರಾಮ ಪಾದಗಳಿಗೆ ಕಾಣಿಕೆಗಳನ್ನು ಅರ್ಪಿಸುತ್ತಿದ್ದಾರೆ. ಕೆಲವೊಂದು ಕಾಣಿಕೆಗಳು ಇಡೀ ದೇಶದ ಗಮನ ಸೆಳೆದಿದೆ.
ಶ್ರೀರಾಮ ಮಂದಿರಕ್ಕೆ 2100ಕೆಜಿ ತೂಕದ ಘಂಟೆಯನ್ನು ನೀಡಲಾಗಿದೆ, ಚಿನ್ನದ ಪಾದುಕೆಗಳು, 10 ಅಡಿ ಉದ್ದದ ಊದುಕಡ್ಡಿ, ವಜ್ರದ ಹಾರ ಸೇರಿ ಹಲವಾರು ದುಬಾರಿ ಕಾಣಿಕೆಗಳನ್ನು ಶ್ರೀರಾಮನಿಗೆ ಅರ್ಪಿಸಲಾಗಿದೆ. ಜನವರಿ 22 ಹಿಂದೂಗಳಿಗೆ ಸುವರ್ಣದಿನ ಏಕೆಂದರೆ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ಮಾಡಲಾಗುವುದು. ಶ್ರೀರಾಮನಿಗೆ ಎಲ್ಲಿಂದ ಯಾವೆಲ್ಲಾ ಕಾಣಿಕೆ ಬಂದಿದೆ ನೋಡುವುದಾದರೆ.....

ನೇಪಾಳದಿಂದ 3000 ಕೊಡುಗೆ ಬಂದಿದೆ
ಸೀತೆಯ ಜನ್ಮಸ್ಥಳವಾದ ನೇಪಾಳದ ಜನಕಾಪುರದಿಂದ 3000 ಕೊಡುಗೆ ಬಂದಿದೆ. ಬೆಳ್ಳಿಯ ಶೂ, ಆಭರಣಗಳು, ಬಟ್ಟೆ ಹೀಗೆ 3000ಕ್ಕೂ ಅಧಿಕ ಕಾಣಿಗೆಗಳು ಬಂದಿದೆ. ಸುಮಾರು 30 ಗಾಡಿಗಳಲ್ಲಿ ಈ ಕಾಣಿಕೆಗಳು ಬರುತ್ತಿದ್ದು ಈ ವಾರದಲ್ಲಿಯೇ ತಲುಪಲಿದೆ.
ಶ್ರೀಲಂಕಾದಿಂದಲೂ ಬಂದಿದೆ ಕಾಣಿಲೆ
ಶ್ರೀಲಂಕದಿಂದ ಶ್ರೀರಾಮನಿಗೆ ಅಶೋಕ ವಾಟಿಕಾ ಬರುತ್ತಿದೆ. ರಾವಣ ಸೀತೆಯನ್ನು ಅಪಹರಿಸಿ ಅಶೋಕವನದಲ್ಲಿ ಬಚ್ಚಿಟ್ಟಿದ್ದ ಎಂದು ರಾಮಾಯಣದಲ್ಲಿ ಉಲ್ಲೇಖಿಸಲಾಗಿದೆ.
ವಡೋದರಾದಿಂದ 108 ಅಡಿ ಉದ್ದದ ಊದುಬತ್ತಿ ಬರುತ್ತಿದೆ
ವಡೋದರಾದಿಂದ 108 ಅಡಿ ಉದ್ದದ ಊದುಬತ್ತಿ ಬರುತ್ತಿದೆ, ಇದರ ತೂಕ 3, 610ಕೆಜಿ ಇದೆ, 3.5 ಅಡಿ ಅಗಲವಿದೆ. ಇದನ್ನು ಗುಜರಾತ್‌ನ ವಡೋದರಾದಲ್ಲಿ ತಯಾರಿಸಲಾಗಿದೆ. ಈ ಊದುಬತ್ತಿಯ ಹೊಗೆಯಿಂದ ಪರಿಸರಕ್ಕೆ, ಮನುಷ್ಯರಿಗೆ ಯಾವುದೇ ಹಾನಿಯಾಗುವುದಿಲ್ಲ, ಇದನ್ನು ಹಚ್ಚಿದರೆ ಒಂದವರೆ ತಿಂಗಳು ಉರಿಯಲಿದೆ ಇಂದು ಹೇಳಲಾಗುವುದು.
ದನದ ಸೆಗಣಿ, ಗಿಡ ಮೂಲಿಕೆಗಳು, ತುಪ್ಪ ಇವುಗಳನ್ನು ಬಳಸಿ ತಯಾರಿಸಲಾಗಿದ್ದು ಕುತಾಬ್ ಮಿನಾರ್‌ನ ಅರ್ಧದಷ್ಟು ಉದ್ದವಿದೆ. ಈ ಊದುಬತ್ತಿ ಅಯೋಧ್ಯೆಗೆ ಜನವರಿ 18ಕ್ಕೆ ತಲುಪಲಿದೆ.
ಗುಜರಾತ್‌ನಿಂದ ದೇವಾಲಯಕ್ಕೆ ಡ್ರಮ್ ಕಳುಹಿಸಲಾಗಿದೆ, ಇದರ ಹೊರ ಕವಚಕ್ಕೆ ಚಿನ್ನದ ಲೇಪನವಿದೆ, ಇದನ್ನು ದೇವಾಲಯದ ಆವಾರಣದಲ್ಲಿ ಇಡಲಾಗುವುದು.
ವಿಶ್ವದ ಅತಿ ದೊಡ್ಡ ಬೀಗ
ಉತ್ತರ ಪ್ರದೇಶದ ಸತ್ಯ ಪ್ರಕಾಶ ಶರ್ಮಾ ಅವರು 400 ಕೆಜಿ ತೂಕ, 10 ಅಡಿ ಎತ್ತರದ, 4.6 ಅಡಿ ಅಗಲದ, 9.5 ದಪ್ಪದ ಬೀಗ ತಯಾರಿಸಲಾಗಿದೆ. ಇದು ವಿಶ್ವದ ಅತಿ ದೊಡ್ಡ ಬೀಗವಾಗಿದೆ.
ಅತಿ ದೊಡ್ಡ ಗಾತ್ರದ ಘಂಟೆ
ಈ ಘಂಟೆ 2, 100ಕೆಜಿ ತೂಕವಿದೆ, ಇದನ್ನು ಉತ್ತರಪ್ರದೇಶದಲ್ಲಿ ಮಾಡಿ ಕಳುಹಿಸಲಾಗಿದೆ,
ಲಕ್ನೋದ ತರಕಾರಿ ವ್ಯಾಪಾರಿಯಿಂದ ವಿಶೇಷ ಕೊಡುಗೆ
ಲಕ್ನೋದ ತರಕಾರಿ ವ್ಯಾಪಾರಿ 8 ರಾಷ್ಟ್ರಗಳ ಸಮಯ ತೋರಿಸುವ ಗಡಿಯಾರ ನೀಡಿದ್ದಾರೆ. ಈ ಗಡಿಯಾರವನ್ನು 2028ರಲ್ಲಿ ತಯಾರಿಸಲಾಗಿದೆ. ಈ ಗಡಿಯಾರ ಭಾರತ, ಟೋಕಿಯೋ, ಮೋಸ್ಕೋ, ದುಬೈ, ಬೀಜಿಂಗ್, ಸಿಂಗಾಪುರ್, ಮೆಕ್ಸಿಕೋ, ವಾಷಿಂಗ್‌ಟನ್, ನೂಯಾರ್ಕ್‌ನ ಸಮಯ ತೋರಿಸುತ್ತದೆ.
ಶ್ರೀಕೃಷ್ಣ ಜನ್ಮ ಸ್ಥಾನವಾದ ಮಥುರಾದಿಂದ ಯಜ್ಞದಲ್ಲಿ ಬಳಸಲು 200ಕೆಜಿ ಲಡ್ಡು ಕಳುಹಿಸಿಕೊಡಲಾಗಿದೆ.
ಗುಜರಾತಿನಿಂದ ವಿಶೇಷ ಸೀರೆ ಕೂಡ ಬಂದಿದೆ
ಈ ಸೀರೆಯನ್ನು ರಾಮನ ಮಡದಿ ಸೀತೆಗೆ ಕಳುಹಿಸಿಕೊಡಲಾಗುತ್ತದೆ. ಈ ಸೀರೆಯನ್ನು ಸೂರತ್‌ನಿಂದ ನೀಡಲಾಗಿದೆ.
ಸೂರತ್‌ನ ಮತ್ತೊಬ್ಬ ವಜ್ರ ವ್ಯಾಪಾರಿ ರಾಮ ಮಂದಿರ ಹೋಲುವ ವಜ್ರದ ಹಾರವನ್ನು ಮಾಡಿ ರಾಮ ಮಂದಿರಕ್ಕೆ ಅರ್ಪಿಸಿದ್ದಾರೆ. ಹೈದರಾಬಾದ್ ಉದ್ಯಮಿಯೊಬ್ಬರು ಶ್ರೀರಾಮನಿಗೆ ಚಿನ್ನದ ಪಾದುಕೆ ನೀಡಲು ಕಾಲ್ನಡಿಗೆಯಲ್ಲಿ ಅಯೋಧ್ಯೆಗೆ ಹೋಗುತ್ತಿದ್ದಾರೆ. ಹೀಗೆ ಅನೇಕ ಕಾಣಿಗೆಗಳು ತಮ್ಮ ಶ್ರೀರಾಮನಿ ಗಾಗಿ ಹರಿದು ಬರುತ್ತಲೇ ಇದೆ.



Click it and Unblock the Notifications
