Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ಅಯೋಧ್ಯೆ: ಪ್ರಾಣಪ್ರತಿಷ್ಠಾಪನೆ ಇರುವ ಸಮಯ 84 ಸೆಕೆಂಡ್, ಈ ಮುಹೂರ್ತ ಈ ಕಾರಣಕ್ಕೆ ತುಂಬಾನೇ ವಿಶೇಷ
ಹೊಸ ವರ್ಷದಲ್ಲಿ ಶ್ರೀರಾಮನ ಭಕ್ತರ ದೊಡ್ಡದೊಂದು ಕನಸು ನನಸಾಗುತ್ತಿದೆ, ರಾಮನ ಜನ್ಮಭೂಮಿಯಾದ ಅಯೋಧ್ಯೆಯಲ್ಲಿ ಕಟ್ಟಲಾಗುತ್ತಿರುವ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ನಂತರ ಲೋಕಾರ್ಪಣೆ ಮಾಡಲಾಗುವುದು.
ಪ್ರಾಣ ಪ್ರತಿಷ್ಠಾಪನೆ
ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣಪ್ರತಿಷ್ಠಾಪನೆ ಜನವರಿ 22ರಂದು ನೆರವೇರಲಿದೆ. ಪ್ರಾಣಪ್ರತಿಷ್ಠಾಪನೆಗೆ ಎಲ್ಲಾ ಸಿದ್ಧತೆಗಳು ನಡೆಯುತ್ತಿದೆ. ಈ ಪ್ರಾಣಪ್ರತಿಷ್ಠಾಪನೆ 84 ಸೆಕೆಂಡ್‌ಗಳಲ್ಲಿ ನಡೆಯಲಿದ್ದು, ಈ 84 ಸೆಕೆಂಡ್‌ಗಳು ತುಂಬಾನೇ ವಿಶೇಷವಾಗಿದೆ.

ಈ 84 ಸೆಕೆಂಡ್ ತುಂಬಾನೇ ವಿಶೇಷವಾದದ್ದು ಏಕೆ?
ಪ್ರಾಣ ಪ್ರತಿಷ್ಠಾಪನೆಗೆ ಇರುವ ಸಮಯ 84 ಸೆಕೆಂಡ್ ಅಷ್ಟೇ, ಅಂದರೆ ಒಂದು ನಿಮಿಷ 24 ಸೆಕೆಂಡ್ ಅಷ್ಟೇ, ಈ 84 ಸೆಕೆಂಡ್ ಅತ್ಯಂತ ಶುಭದಿನ ಎಂದು ಹೇಳಲಾಗುವುದು, ಈ ಮುಹೂರ್ತದಲ್ಲಿ ಪ್ರಾಣಪ್ರತಿಷ್ಠಾಪನೆ ಮಾಡುವುದರಿಂದ ಭಾರತಕ್ಕೆ ಒಳಿತಾಗಲಿದೆ, ಅಗ್ನಿ, ಅಕಾಲಿಕ ಸಾವು, ಕಳ್ಳತನ, ಕಾಯಿಲೆ, ಸಾವಿನ ಸಂಕೋಲೆ ಈ ಬಗೆಯ ಆಪತ್ತುಗಳಿಂದ ರಕ್ಷಣೆ ನೀಡುತ್ತದೆ ಎಂಬುವುದು ಧಾರ್ಮಿಕ ಪಂಡಿತರ ಅಭಿಪ್ರಾಯವಾಗಿದೆ.
ಪ್ರಾಣ ಪ್ರತಿಷ್ಠಾಪನೆಗೆ ಇರುವ ಶುಭ ಮುಹೂರ್ತ
ಜನವರಿ 22 ಮಧ್ಯಾಹ್ನ 12:29:08 ಸೆಕೆಂಡ್‌ನಿಂದ 12:30:32 ಸೆಕೆಂಡ್ ಒಳಗಡೆ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುವುದು.
ಅಭಿಜಿತ್ ಮುಹೂರ್ತ ಕೂಡ ಇದೆ
ಅಭಿಜಿತ್ ಮುಹೂರ್ತವನ್ನು ಅತ್ಯಂತ ಶುಭ ಸಮಯ ಎಂದು ಪರಿಗಣಿಸಲಾಗಿದೆ. ಪ್ರಾಣಪ್ರತಿಷ್ಠಾಪನೆ ಸಮಯದಲ್ಲಿಯೇ ಅಭಿಜಿತ್ ಮುಹೂರ್ತ ಕೂಡ ಬಂದಿರುವುದರಿಂದ ತುಂಬಾನೇ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಈ ಮುಹೂರ್ತದಲ್ಲಿ ಪ್ರಾಣಪ್ರತಿಷ್ಠಾಪನೆ ಮಾಡುವುದರಿಂದ ಪ್ರಗತಿ ಉಂಟಾಗುವುದು.
ಜನವರಿ 23ರಿಂದ ದರ್ಶನ ಭಾಗ್ಯ
* ಜನವರಿ 23ರಿಂದ ಭಕ್ತರು ಶ್ರೀರಾಮ ಕ್ಷೇತ್ರಕ್ಕೆ ಹೋಗಿ ಶ್ರೀರಾಮನನ್ನು ಕಣ್ತುಂಬಿಕೊಳ್ಳಬಹುದು.
* ಪ್ರತಿದಿನ ಸುಮಾರು 3 ಲಕ್ಷ ಭಕ್ತರು ಬರಬಹುದು ಎಂದು ಅಂದಾಜು ಮಾಡಲಾಗಿದೆ, ಪ್ರಾಣಪ್ರತಿಷ್ಠಾನೆಯಾದ ಕೆಲವು ದಿನಗಳವರೆಗೆ ಭಕ್ತರ ಸಂಖ್ಯೆ ಇದಕ್ಕೂ ಅಧಿಕವಿರಲಿದೆ, ಇಲ್ಲಿಗೆ ಬಂದ ಭಕ್ತರಿಗೆ ಪ್ರಸಾದ ಕೂಡ ಹಂಚಲಾಗುವುದು.
ಸುದೀರ್ಘ ಕಾನೂನು ಹೋರಾಟದಲ್ಲಿ ಜಯಗಳಿಸಿದ ಬಳಿಕ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯವನ್ನು 2019ರಲ್ಲಿ ಪ್ರಾರಂಭಿಸಲಾಯಿತು. ರಾಮಾಯಣದಲ್ಲಿ ಶ್ರೀರಾಮ ಲಂಕೆಗೆ ಹೋಗಲು ಸಮುದ್ರ ದಾಟಲು ಅಳಿಲುಗಳು ಕೂಡ ತಮ್ಮ ಸೇವೆ ಮಾಡಿದ್ದೆವು ಎಂದು ಹೇಳಲಾಗುವುದು, ಕಲಿಯುಗದ ರಾಮಮಂದಿರ ನಿರ್ಮಾಣವಾಗಲು ಪ್ರತಿಯೊಬ್ಬರು ತಮ್ಮ ಕೈಯಲ್ಲಾದ ಅಳಿಲು ಸೇವೆ ಮಾಡಿದ್ದರು, ಸಾಮಾನ್ಯ ವ್ಯಕ್ತಿಯಿಂದ ಹಿಡಿದು ದೊಡ್ಡ-ದೊಡ್ಡ ಉದ್ಯಮಿಗಳವರೆಗೆ ಈ ದೇವಾಲಯಕ್ಕೆ ಕಾಣಿಕೆಗಳು ಬಂದಿವೆ. ಕೊನೆಗೂ ಎಲ್ಲಾ ಭಕ್ತರ ಕನಸು ನನಸಾಗುವ ಸಮಯ ಬಂದಿದೆ.
ಭಾರತದ ಪವಿತ್ರ ತೀರ್ಥ ಕ್ಷೇತ್ರ-ಅಯೋಧ್ಯೆ ರಾಮ ಮಂದಿರ
ಭಾರತದಲ್ಲಿ ಅನೇಕ ತೀರ್ಥ ಕ್ಷೇತ್ರಗಳಿವೆ, ಈಗ ಶ್ರೀರಾಮ ಮಂದಿರ ಕೂಡ ಭಾರತದ ಅತ್ಯಂತ ಪ್ರಮುಖ ತೀರ್ಥ ಕ್ಷೇತ್ರಗಳಲ್ಲಿ ಒಂದಾಗಿದೆ.
ಅಯೋಧ್ಯೆ ರಾಮ ಮಂದಿರದ ವಿಸೇಷತೆಗಳು
* ದೇವಾಲಯ 2.7 ಎಕರೆ ಜಾಗದಲ್ಲಿ ನಿರ್ಮಾಣವಾಗಿದೆ. ರಾಮ ಮಂದಿರದ ಕಾಂಪ್ಲೆಕ್ಸ್ ಎಲ್ಲಾ ಸೇರಿ 70 ಎಕರೆ ಭೂಮಿಯಿದೆ, ಲಕ್ಷಾಂತರ ಭಕ್ತರು ಇಲ್ಲಿ ಸೇರಬಹುದು.
* ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಸುಮಾರು 1,400 ಕೋಟಿಯಿಂದ 1,800 ಕೋಟಿ ಖರ್ಚಾಗಿರಬಹುದು ಎಂದು ಹೇಳಲಾಗುವುದು.
ರಾಮಮಂದಿರವನ್ನು ಬನ್ಸಿ ಪಹರ್‌ಪುರ್ ಕಲ್ಲು ಬಳಸಿ ನಿರ್ಮಾಣ ಮಾಡಲಾಗಿದೆ. ಈ ದೇವಾಲಯವನ್ನು ಪಿಂಕ್ ಮಾರ್ಬಲ್ ಕಲ್ಲುಗಳನ್ನು ಬಳಸಿ ನಿರ್ಮಿಸಿರುವುದರಿಂದ ನೋಡಲು ಆಕರ್ಷಕ ಮಾತ್ರವಲ್ಲ ದೀರ್ಘ ಕಾಲ ಬಾಳಿಕೆ ಬರುವಂತಿದೆ. ಈ ದೇವಾಲಯಕ್ಕೆ ಹೋಗಿ ರಾಮನ ದರ್ಶನಕ್ಕಾಗಿ ಭಕ್ತರು ಜನವರಿ 22ರ ದಿನಾಂಕ ಬೇಗನೆ ಬರಲಿ ಎಂದು ಬಯಸುತ್ತಿದ್ದಾರೆ, ಜೈ ಶ್ರೀರಾಮ್....



Click it and Unblock the Notifications
