Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಪ್ರಾಣಪ್ರತಿಷ್ಠಾಪನೆಯಂದು ಬ್ಯಾಂಕ್ ಹಾಗೂ ಕೇಂದ್ರ ಸರ್ಕಾರ ಉದ್ಯೋಗಿಗಳಿಗೆ ಅರ್ಧ ದಿನ ರಜೆ
ಅಯೋಧ್ಯೆ ಶ್ರೀರಾಮನನ್ನು ಬರಮಾಡಿಕೊಳ್ಳಲು ತಳಿರು ತೋರಣ, ಹೂವಿನ ಅಲಂಕಾರದಿಂದ ಸಿಂಗಾರಗೊಳ್ಳುತ್ತಿದೆ, ಕೋಟ್ಯಾಂತರ ಶ್ರೀರಾಮ ಭಕ್ತರ ಸಡಗರ ಸಂಭ್ರಮಕ್ಕೆ ಎಲ್ಲೆ ಇಲ್ಲ... ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣಪ್ರತಿಷ್ಠಾಪನೆಯ ಆ ದಿನದ ವೈಭೋಗ ಕಣ್ತುಂಬಿಕೊಳ್ಳಲು ಎಲ್ಲರೂ ಕಾತುರದಿಂದ ಕಾಯುತ್ತಿದ್ದರೆ. ಪ್ರದಾನಿ ಮೋದಿ, ಪ್ರಧಾನ ಅರ್ಚಕರು ಸೇರಿದಂತೆ ಐದು ಜನರ ಮಾತ್ರ ಪ್ರಾಣಪ್ರತಿಷ್ಠಾನೆ ಕಾರ್ಯದಲ್ಲಿ ಭಾಗಿಯಾಗುವುದಾದರೂ ಲೈವ್ ಪ್ರಸಾರದ ಮುಖಾಂತರ ಇಂಥ ಅತ್ಯಾದ್ಭುತ ಕ್ಷಣವನ್ನು ಕಣ್ತುಂಬಿಕೊಳ್ಳಬಹುದು.

ಜನವರಿ 22ರಿಂದ ಅರ್ಧ ದಿನ ಬ್ಯಾಂಕ್‌ಗಳಿಗೆ ರಜೆ
ಈ ದಿನದಂದು ಬ್ಯಾಂಕ್‌ಗಳು ಅರ್ಧ ದಿನ ಮಾತ್ರ ಕಾರ್ಯನಿರ್ವಹಿಸಲಿದೆ.
ಸರ್ಕಾರಿ ಉದ್ಯೋಗಿಗಳಿಗೂ ಅರ್ಧ ದಿನ ರಜೆ
ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಈ ದಿನ ಅರ್ಧ ದಿನ ರಜೆ ನೀಡಲಾಗಿದೆ. ರಜೆ ಬೇಕೆಂದು ಕೋರಿ ಸಾರ್ವಜನಿಕ ವಯಲದಲ್ಲಿ ತುಂಬಾನೇ ಬೇಡಿಕೆ ಬಂದಿತ್ತು, ಜನರ ಬೇಡಿಕೆಯನ್ನು ಪರಿಗಣಿಸಿ, ಈ ದಿನದ ಸಂಭ್ರಮ ಕಣ್ತುಂಬಿಕಳ್ಳಲು ಅರ್ಧ ದಿನ ರಜೆ ನೀಡಲಾಗಿದೆ.
ಕೋಟ್ಯಾಂತರ ಭಕ್ತರಿಂದ ಹರಿದು ಬಂದಿದೆ ಕೋಟ್ಯಾಂತರ ರುಪಾಯಿ ದೇಣಿಗೆ: ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ 2020ರಿಂದ ಶುರುವಾದಾಗಿನಿಂದ ಕೋಟ್ಯಾಂತರ ರುಪಾಯಿ ದೇಣಿಗೆ ಬಂದಿದೆ, ಇಲ್ಲಿಯವರೆಗೆ ಒಟ್ಟು ಸುಮಾರು 5300 ಕೋಟಿ ಆದಾಯ ಭಕ್ತರಿಂದ ದೇವಾಲಯಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ.
ಇದಲ್ಲದೆ ತುಂಬಾ ವಿಶೇಷ ಕಾಣಿಕೆಗಳು ದೇವಾಲಯಕ್ಕೆ ಬಂದಿದೆ:
*ಉತ್ತರದ ಪ್ರದೇಶದಿಂದ 2100 ಕೆಜಿ ತೂಕದ ಅಷ್ಟದಾತುಗಳ ಗಂಟೆ
* ತೆಲಂಗಾಣದಿಂದ ಉದ್ಯಮಿಯೊಬ್ಬರು ಚಿನ್ನದ ಪಾದುಕೆ ನೀಡಲಿದ್ದಾರೆ
* ಸೂರತ್ ಬಂಗಾರದ ವ್ಯಾಪಾರಿಯಿಂದ 5000 ಅಮೇರಿಕನ್ ವಜ್ರಗಳಿಂದ ತಯಾರಾದ ಹಾರ, ಈ ಹಾರ ಶ್ರೀಮಂದಿರದ ವಿನ್ಯಾಸ ಹೊಂದಿದೆ.
* ಸೀತೆಯ ಊರಾದ ನೇಪಾಳದಿಂದ 3000 ಬೆಳ್ಳಿ-ಚಿನ್ನದ ಉಡುಗೊರೆಗಳು
* ಉತ್ತರ ಪ್ರದೇಶದ ಬೀಗದ ವ್ಯಾಪಾರಿಯಿಂದ 400ಕೆಜಿ ತೂಕದ ಬೀಗ
* ಉತ್ತರ ಪ್ರದೇಶದ ತರಕಾರಿ ವ್ಯಾಪಾರಿಯಿಂದ 8 ದೇಶಗಳ ಸಮಯ ಒಂದೇ ಸಮಯದಲ್ಲಿ ತೋರಿಸುವ ಗಡಿಯಾರ
* ಅಹಮದಾಬಾದ್ ನಿಂದ 11.5 ಕೆಜಿ ಬೆಳ್ಳಿ ಬಂಗಾರ ಮಿಶ್ರಿತ ಬಿಲ್ಲು ಬಾಣ
* ಗುಜರಾತಿನಿಂದ 108 ಅಡಿಯ 3614 ಕೆಜಿ ತೂಕದ ಕಿಲೋ ಮೀಟರ್ ಗಳಷ್ಟು ಸುವಾಸನೆ ಬೀರುವ ಒಂದೇ ಅಗರಬತ್ತಿ
* ಗುಜರಾತಿನಿಂದ ಒಟ್ಟು 5500 ಕೆಜಿಯಲ್ಲಿ ಕಂಚಿನ 7 ಧ್ವಜ ಸ್ಥಂಭಗಳು ಸಿದ್ದವಾಗಿವೆ
ನಾಗಪುರದ ಬಾಣಸಿಗನಿಂದ 7000 ಕೆಜಿ ರಾಮ ಹಲ್ವಾ
* ಪ್ರಾಣಪ್ರತಿಷ್ಠಾಪನೆಯಂದು ತಿರುಪತಿಯಿಂದ 1 ಲಕ್ಷ ಲಡ್ಡು ಪ್ರಸಾದ ನೀಡಲಾಗಿದೆ.
* ಮಥುರಾದಿಂದ 200 ಕೆಜಿ ಲಡ್ಡು ಪ್ರಸಾದ
* ವಡೋದರಾದ ಕೃಷಿಕನಿಂದ 1100 ಕೆಜಿ ಪಂಚದಾತು ದೀಪ 851 ಕೆ ಜಿ ತುಪ್ಪ ಹಿಡಿಸುವ 8 ಅಡಿ ಅಗಲ 9 ಅಡಿ ಉದ್ದದ ಜ್ಯೋತಿ
* ಕರ್ನಾಟಕದಿಂದ ರಾಮಲಾಲ ವಿಗ್ರಹ ಹೀಗೆ ದೇಶದ ಮೂಲೆ-ಮೂಲೆಗಳಿಂದ ಕಾಣಿಕೆಗಳು ಹರಿದು ಬರುತ್ತಿವೆ.
ಜನವರಿ 22ರ ಮಹತ್ವದ ದಿನವನ್ನು, ಆ ದಿನ ಸಂಭ್ರಮವನ್ನು ಅನುಭವಿಸಲು ಎಲ್ಲಾ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ, ಬ್ಯಾಂಕ್‌ನವರಿಗೆ ಅರ್ಧ ರಜೆಯನ್ನು ಘೋಷಿಸಲಾಗಿದೆ.



Click it and Unblock the Notifications
