Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಭಕ್ತರಿಗೆ ಯಾವ ಪ್ರಸಾದ ನೀಡಲಾಗುವುದು?
ದೇಶದ ಎಲ್ಲಾ ಕಡೆ ಸಂಭ್ರಮ ಹೆಚ್ಚಾಗಿದೆ, ಇಡೀ ದೇವಾಲಯಗಳು ಶ್ರೀರಾಮನ ಪ್ರತಿಷ್ಠಾಪನೆ ಸಮಯದಲ್ಲಿ ವಿಶೇಷ ಪೂಜೆಗಳನ್ನು ಮಾಡುವ ಮೂಲಕ ಶ್ರೀರಾಮ ಶಕ್ತಿ ದೇಶ ರಕ್ಷಣೆ ಮಾಡಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಆ ಭವ್ಯ ಮಂದಿರದಲ್ಲಿ ಶ್ರೀರಾಮನ ಮೂರ್ತಿಯನ್ನು ಕಣ್ತುಂಬಿಕೊಳ್ಳುವುದೇ ಕಣ್ಣಿಗೆ ಹಬ್ಬ. ಈಗಾಗಲೇ ಅನೇಕರು ಅಯೋಧ್ಯೆ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಸಾಧು ಸಂತರು ಕೂಡ ಅಯೋಧ್ಯೆಯ ಪೂಜೆ ಭಾಗವಹಿಸಲು ಸಾಗುತ್ತಿದ್ದಾರೆ.
ಅಯೋಧ್ಯೆಗೆ ಪ್ರತಿನಿತ್ಯ ಲಕ್ಷಾಂತರ ಭಕ್ತರು ಬರಬಹುದು ಎಂದು ಅಂದಾಜಿಸಲಾಗಿದೆ, ಅದರಲ್ಲೂ ಲೋಕಾರ್ಪಣೆಯಾದ ಕೆಲವು ದಿನಗಳವರೆಗೆ ಭಕ್ತರ ಸಂಖ್ಯೆ ತುಂಬಾನೇ ಅಧಿಕವಿರಲಿದೆ. ನಾವು ಯಾವುದೇ ದೇವಾಲಯಕ್ಕೆ ಹೋದರೆ ಅಲ್ಲಿ ಪ್ರಸಾದ ಸಿಕ್ಕರೆ ತುಂಬಾನೇ ತೃಪ್ತಿ. ಒಂದು ಚಮಚವಾದರೂ ಅಥವಾ ಒಂದು ಚಿಕ್ಕ ಕಲ್ಲು ಸಕ್ಕರೆಯಾದರೂ ಸರಿ, ದೇವರ ಪ್ರಸಾದ ರೂಪದಲ್ಲಿ ಏನಾದರೂ ಸಿಗಲೇಬೇಕು.

ಒಂದೊಂದು ದೇವಾಲಯಕ್ಕೆ ಹೋದಾಗ ಒಂದೊಂದು ಬಗೆಯ ಪ್ರಸಾದ ಸಿಗುತ್ತದೆ, ತಿರುಪತಿಗೆ ಹೋದಾಗ ಲಡ್ಡು, ಧರ್ಮಸ್ಥಳ ಹೋದಾಗ ಕಲ್ಲುಸಕ್ಕರೆ ಹಾಗೂ ಪ್ರಸಾದದ ಪುಡಿ ಹೀಗೆ ಒಂದೊಂದು ಕಡೆ ಒಂದೊಂದು ಬಗೆಯ ಪ್ರಸಾದ ಸಿಗುತ್ತದೆ. ಅಯೋಧ್ಯೆಯಲ್ಲಿ ಯಾವ ಪ್ರಸಾದ ಸಿಗಲಿದೆ?
ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ದೇವರ ಭಕ್ತರಿಗೆ ಪ್ರಸಾದ ಯಾವ ರೀತಿಯದ್ದು ದೊರಕಬಹುದು ಎಂಬ ಕುತೂಹಲವಿದೆ. ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ದಿನನಿತ್ಯ ಬರುವ ಭಕ್ತರಿಗೆ ಕಲ್ಲುಸಕ್ಕರೆಯ ಪ್ರಸಾದ ನೀಡಲು ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತೀರ್ಮಾನ ತೆಗೆದುಕೊಂಡಿದೆ.
ಕಲ್ಲುಸಕ್ಕರೆಯ ಪ್ರಸಾದ
ಶ್ರೀರಾಮನಿಗೆ ಪ್ರಿಯವಾದ ಸಕ್ಕರೆಯನ್ನು ಪ್ರಸಾದವನ್ನಾಗಿ ನೀಡಲಾಗುವುದು. ಇಲ್ಲಿ ನಿಮಗೆ ಕಲ್ಲು ಸಕ್ಕರೆ ಹೊರತು ಪಡಿಸಿ ಬೇರೆ ಯಾವುದೇ ಪ್ರಸಾದ ಸಿಗುವುದಿಲ್ಲ. ಕಲ್ಲುಸಕ್ಕರೆ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು, ಇದೇ ಕಲ್ಲು ಸಕ್ಕರೆ ಪ್ರಸಾದವಾಗಿ ನೀಡಲಾಗುವುದು. ತಿರುಪತಿಯಿಂದ ಲಡ್ಡ ತಂದು ಹಂಚುವಂತೆ ಕಲ್ಲುಸಕ್ಕರೆ ತಂದು ಹಂಚಿ ಸಂಭ್ರಮ ಪಡುವ ದಿನ ಆದಷ್ಟು ಬೇಗ ನಮಗೆ ಬರಲಿ ಎಂಬುವುದೇ ಎಲ್ಲಾ ರಾಮ ಭಕ್ತರ ಬಯಕೆಯಾಗಿದೆ.
ಶ್ರೀರಾಮ ಮಂದಿರದಲ್ಲಿ ವಿಶೇಷ ಸೇವೆ ಇದೆಯೇ?
ಕೆಲವೊಂದು ದೇವಾಲುಗಳಲ್ಲಿ ಕುಂಕುಮಾರ್ಚನೆ, ತುಲಾಭಾರ, ಮುಡಿಕೊಡುವುದು ಅಂಥ ಸೇವೆಗಳಿರುತ್ತದೆ, ಆದರೆ ಇಲ್ಲಿ ಅಂಥ ಯಾವುದೇ ಸೇವೆಗಳಿರಲ್ಲ. ಆದರೆ, ಶ್ರೀರಾಮನಿಗೆ ಕಲಾಶಾಭಿಷೇಕ ಸೇವೆಗೆ ವ್ಯವಸ್ಥೆ ಇರುತ್ತದೆ.
ರಾಮ ಮಂದಿರದ ಮೂಲಕ ನಿರ್ಮಾಣವಾಗಲಿದೆ ಬಡವರಿಗೆ ಸೂರು
ದೇವರಿಗೆ ಮಾಡುವ ಪ್ರತೀ ಕಲಶಾಭಿಷೇಶಕಕ್ಕೆ 1 ಲಕ್ಷ ರು. ಮೊತ್ತ ನೀಡಬೇಕು. ಹೀಗೆ ಕಲಾಷಾಭಿಷೇಕದ ಮೂಲಕ ಸಂದಾಯವಾಗುವ ಮೊತ್ತದಲ್ಲಿ ನಿರ್ಗತಿಕರಿಗೆ 10 ಲಕ್ಷ ರು. ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಿಕೊಡುವ ಉದ್ದೇಶವನ್ನು ಶ್ರೀರಾಮ ಟ್ರಸ್ಟ್ ಹೊಂದಿದೆ. ಅಂತೆಯೇ ಗೋಶಾಲೆ, ಬಡ ಮಕ್ಕಳ ಶಿಕ್ಷಣ, ವೈದ್ಯಕೀಯ ಸೇವಾಯೋಜನೆಗಳನ್ನು ಜಾರಿಗೊಳಿಸಲು ಶ್ರೀರಾಮಮಂದಿರಕ್ಕೆ ಭಕ್ತರು ನೀಡುವ ದೇಣಿಗೆಯನ್ನು ಬಳಸಿಕೊಳ್ಳಲಾಗುವುದು. ಇಲ್ಲಿಗೆ ಬರುವ ಹರಿಕೆಯ ಹಣ ಸಮಾಜ ಕಲ್ಯಾಣಕ್ಕೆ ಬಳಸಲಾಗುವುದು.
ಪ್ರತಿಷ್ಠಾಪನೆ ದಿನ ತಿರುಪತಿಯೊಂದ 1 ಲಕ್ಷ ಲಡ್ಡು
ತಿರುಪತಿಗೆ ಹೋದರೆ ಲಡ್ಡು ತಂದು ಹಂಚುತ್ತೇವೆ, ಭಾರತದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿ ದಕ್ಷಿಣ ಭಾರತದಲ್ಲಿ ಅತ್ಯಂತ ಪ್ರಸಿದ್ದಿ ಪಡೆದಿರುವ ತಿರುಪತಿ ದೇವಾಲಯದಲ್ಲಿ ಲಡ್ಡು ಪ್ರಸಾದವೇ ಪ್ರಮುಖವಾಗಿದೆ. ಈ ಲಡ್ಡು ಪ್ರಸಾದವನ್ನೇ ಶ್ರೀರಾಮನಿಗೆ ತಿರುಪತಿಯ ಕೊಡುಗೆಯಾಗಿ ನೀಡಲಾಗುತ್ತಿದೆ. ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮನ ಪ್ರತಿಷ್ಟಾಪನೆಗೆ ಹೋಗುವ ಭಕ್ತರಿಗೆ ನೀಡಲೆಂದೇ 1 ಲಕ್ಷ ಲಡ್ಡುಗಳನ್ನು ತಿರುಪತಿ ದೇವಾಲಯದಿಂದ ಕಳುಹಿಸಿಕೊಡಲಾಗುವುದು.
25 ಗ್ರಾಂ ತೂಕವಿರುವ ಲಡ್ಡುಗಳು ಪ್ರಾಣಪ್ರತಿಷ್ಠಾಪನೆಗೆ ಒಂದು ದಿನ ಮುಂಚೆ ತಲುಪಲಿದೆ. ಅಂದು 7 ಸಾವಿರ ಗಣ್ಯ ಅತಿಥಿಗಳು ಬರಲಿದ್ದು, ಅವರೊಂದಿಗೆ ನಿರೀಕ್ಷಿತ 1 ಲಕ್ಷ ಭಕ್ತಾಧಿಗಳಿಗೂ ಲಡ್ಡು ವಿತರಿಸಲಾಗುವುದು. ಈ ದಿನವಷ್ಟೇ ತಿರುಪತಿ ಲಡ್ಡು ಸಿಗಲಿದೆ, ನಂತರ ಹೋದವರಿಗೆ ಅಲ್ಲಿಯ ಪ್ರಸಾದ ಕಲ್ಲುಸಕ್ಕರೆ ದೊರೆಯಲಿದೆ.



Click it and Unblock the Notifications
