Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಪ್ರಾಣಪ್ರತಿಷ್ಠಾಪನೆ: ಅಲಂಕೃತಗೊಂಡ ಅಯೋಧ್ಯೆ ರಾಮ ಮಂದಿರದ ಸುಂದರ ಫೋಟೋಗಳು
ಇಡೀ ದೇಶವೇ ಸಂಭ್ರಮಿಸುತ್ತಿದೆ, ದೇಶದ ಹಳ್ಳಿಗಳ ಮೂಲೆ-ಮೂಲೆಯಲ್ಲೂ ಈ ಸಂಭ್ರಮ ಮನೆ ಮಾಡಿದೆ. ಎಲ್ಲಾ ದೇವಾಲಯಗಳು ಹೂಗಳಿಂದ ಅಲಂಕೃತಗೊಂಡಿದೆ, ಈ ದಿನ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ ವೇಳೆ ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡಲಾಗುವುದು.ಕರ್ನಾಟಕದಲ್ಲಿರುವ ಅಷ್ಟೂ ದೇವಾಲಯಗಳಲ್ಲಿ ಈ ದಿನ ವಿಶೇಷ ಪೂಜೆ ಏರ್ಪಡಿಸಲಿದ್ದು ಮಧ್ಯಾಹ್ನ 12:29ರಿಂದ 1:32ರವರೆಗೆ ವಿಶೇಷ ಪೂಜೆ ನಡೆಯಲಿದೆ.
ಈ ದಿನ ಅಯೋಧ್ಯೆ ಎಷ್ಟು ಸುಂದರವಾಗಿದೆ ಕಾಣುತ್ತಿದೆ ಎಂದರೆ ಅದರ ಅಂದ ನೋಡಲು ಎರಡು ಕಣ್ಣು ಸಾಲದು, ಅಷ್ಟೊಂದು ಆಕರ್ಷಕವಾಗಿ ಅಲಂಕೃತಗೊಂಡಿದೆ. ಹೂಗಳಿಂದ ಅಲಂಕೃತಗೊಂಡಿರುವ ಅಯೋಧ್ಯೆ ರಾಮ ಮಂದಿರದ ಸೊಬಗು ನೋಡಿ ಹೀಗಿದೆ:

ಪ್ರಾಣ ಪ್ರತಿಷ್ಠಾಪನೆಗೆ ಇರುವ ಶುಭ ಮುಹೂರ್ತ ಜನವರಿ 22 ಮಧ್ಯಾಹ್ನ 12:29:08 ಸೆಕೆಂಡ್‌ನಿಂದ 12:30:32 ಸೆಕೆಂಡ್ ಒಳಗಡೆ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುವುದು.
ಅಭಿಜಿತ್ ಮುಹೂರ್ತ ಕೂಡ ಇದೆ ಅಭಿಜಿತ್ ಮುಹೂರ್ತವನ್ನು ಅತ್ಯಂತ ಶುಭ ಸಮಯ ಎಂದು ಪರಿಗಣಿಸಲಾಗಿದೆ. ಪ್ರಾಣಪ್ರತಿಷ್ಠಾಪನೆ ಸಮಯದಲ್ಲಿಯೇ ಅಭಿಜಿತ್ ಮುಹೂರ್ತ ಕೂಡ ಬಂದಿರುವುದರಿಂದ ತುಂಬಾನೇ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಈ ಮುಹೂರ್ತದಲ್ಲಿ ಪ್ರಾಣಪ್ರತಿಷ್ಠಾಪನೆ ಮಾಡುವುದರಿಂದ ಪ್ರಗತಿ ಉಂಟಾಗುವುದು.
ಅಯೋಧ್ಯೆ ರಾಮ ಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆ ನೀವು ಲೈವ್‌ನಲ್ಲಿ ನೋಡಬಹುದು
ಮಂದಿರದೊಳಗೆ ಹೋಗಿ ಪ್ರಾಣಪ್ರತಿಷ್ಠಾಪನೆ ನೋಡಲು ಸಾಧ್ಯವಾಗದೇ ಇರಬಹುದು, ಆದರೆ ಬೇಸರ ಪಡುವಂತಿಲ್ಲ ನೀವು ಲೈವ್‌ನಲ್ಲಿ ನೋಡಿ ಕಣ್ತುಂಬಿಕೊಳ್ಳಬಹುದು. ಸಮಯ ಜನವರಿ 22 ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ನೀವು ಲೈವ್ ವೀಕ್ಷಿಸಬಹುದು.
ಲೈವ್ ಟೆಲಿಕಾಸ್ಟ್ (ನೇರ ಪ್ರಸಾರ)ಕ್ಕೆ ಎಲ್ಲವೂ ವ್ಯವಸ್ಥೆ ಮಾಡಲಾಗುವುದು. ಪ್ರಾಣ ಪ್ರತಿಷ್ಠಾಪನೆ ಪೂಜೆಯನ್ನು ನೀವು DD ನ್ಯಾಷನಲ್ ಚಾನಲ್‌ನಲ್ಲಿ ವೀಕ್ಷಿಸಬಹುದು. ಅಲ್ಲದೆ ಇತರ ನ್ಯೂಸ್ ಏಜೆನ್ಸಿಗಳಿಗೂ ಫೀಡ್ ನೀಡಲಿದೆ, ಅಲ್ಲದೆ ದೂರದರ್ಶನ ಯೂಟ್ಯೂಬ್ ಲಿಂಕ್‌ನಲ್ಲಿಯೂ ವೀಕ್ಷಿಸಬಹುದು. ಅಯೋಧ್ಯೆಯ ಬೇರೆ-ಬೇರೆ ಭಾಗಗಳಲ್ಲಿ 40 ಕ್ಯಾಮರಾ ಅಳವಡಿಸಲಾಗಿದೆ.
ರಾಮ ಮಂದಿರದ ಆವರಣದಿಂದ ಹಿಡಿದು ಗರ್ಭಗುಡಿಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಎಲ್ಲವೂ ಲೈವ್‌ನಲ್ಲಿದೆ. ಈ ಬ್ರಾಡ್‌ಕಾಸ್ಟ್‌ಗೆ 4K ತಂತ್ರಜ್ಞಾನ ಬಳಸಲಾಗುವುದು ಎಂಬುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸರಾಯು ಸಮೀಪದಲ್ಲಿರುವ ರಾಮ್ ಕಿ ಪೈಡಿ, ಜಟಾಯು ವಿಗ್ರಹ ಹೀಗೆ ವಿವಿಧ ಭಾಗಗಳಿಂದ ಲೈವ್ ಕವರೇಜ್ ನೀಡಲಾಗುವುದು.
ಅಯೋಧ್ಯೆ ರಾಮ ಮಂದಿರಲ್ಲಿ ನೀಡಲಾಗುವ ಪ್ರಸಾದ
ತಿರುಪತಿಯಿಂದ 1 ಲಕ್ಷ ಲಡ್ಡುಗಳನ್ನು ಕಳುಹಿಸಲಾಗಿದೆ, ಅದನ್ನು ಇಂದು ಅಯೋಧ್ಯೆಯಲ್ಲ ನೆರೆದಿರುವ ಭಕ್ತರಿಗೆ ಲಡ್ಡುಪ್ರಸಾದ ನೀಡಲಾಗುವುದು. ಅಯೋಧ್ಯೆಗೆ ಪ್ರಸಾದವಾಗಿ ಶ್ರೀರಾಮನಿಗೆ ಪ್ರಿಯವಾದ ಸಕ್ಕರೆಯನ್ನು ಪ್ರಸಾದವನ್ನಾಗಿ ನೀಡಲಾಗುವುದು. ಇಲ್ಲಿ ನಿಮಗೆ ಕಲ್ಲು ಸಕ್ಕರೆ ಹೊರತು ಪಡಿಸಿ ಬೇರೆ ಯಾವುದೇ ಪ್ರಸಾದ ಸಿಗುವುದಿಲ್ಲ , ಕಲ್ಲುಸಕ್ಕರೆ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು, ಇದೇ ಕಲ್ಲು ಸಕ್ಕರೆ ಪ್ರಸಾದವಾಗಿ ನೀಡಲಾಗುವುದು.



Click it and Unblock the Notifications






