Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಶುಭ ಕಾರ್ಯಕ್ಕೆ ಹೊರಡುವ ಮುನ್ನ ಅಪ್ಪಿ-ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ!
ಹಿಂದೂ ಧರ್ಮದಲ್ಲಿ ಶುಭ ಕಾರ್ಯಕ್ಕೆ ಹೋಗುವ ಸಂದರ್ಭದಲ್ಲಿ ಯಾವುದೇ ಅಶುಭ ಕೆಲಸಗಳನ್ನು ಮಾಡುವಂತಿಲ್ಲ ಎನ್ನುವ ನಂಬಿಕೆಯಿದೆ. ಒಂದು ವೇಳೆ ಅಶುಭ ಕೆಲಸಗಳನ್ನು ಮಾಡಿದರೆ ನಾವು ಅಂದುಕೊಂಡ ಕೆಲಸಗಳು ನೆರವೇರೋದಿಲ್ಲ ಎನ್ನುವ ನಂಬಿಕೆಯಿದೆ.

ಹೀಗಾಗಿ ಮನೆಯಿಂದ ಹೊರಗಡೆ ಹೋಗುವ ಸಂದರ್ಭದಲ್ಲಿ ಜ್ಯೋತಿಷ್ಯದ ಪ್ರಕಾರ ಕೆಲವು ಅಶುಭ ಕೆಲಸಗಳನ್ನು ಮಾಡಲೇಬಾರದು. ಅಷ್ಟಕ್ಕೂ ಮನೆಯಿಂದ ಹೊರಗಡೆ ಹೋಗುವ ಮುನ್ನ ನಾವು ಮಾಡಲೇಬಾರದ ಕೆಲಸಗಳು ಯಾವುದು ಅನ್ನೋದನ್ನು ತಿಳಿಯೋಣ.
1. ಉಗುರು ಅಥವಾ ಕೂದಲನ್ನು ಕತ್ತರಿಸೋದು!
ಜ್ಯೋತಿಷ್ಯದ ಪ್ರಕಾರ ಶುಭ ಕಾರ್ಯಕ್ಕೆ ಹೋಗುವ ಮುನ್ನ ನಿಮ್ಮ ಉಗುರುಗಳು ಅಥವಾ ಕೂದಲನ್ನು ಕತ್ತರಿಸಬಾರದು ಅಂತ ಹೇಳಲಾಗುತ್ತದೆ. ಏಕೆಂದರೆ ಇದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಎಂದು ನಂಬಲಾಗಿದೆ. ಚಂದ್ರನ ಚಕ್ರವು ಉಬ್ಬರವಿಳಿತದ ಮೇಲೆ ಪ್ರಭಾವ ಬೀರುತ್ತದೆ. ಮತ್ತು ನಮ್ಮ ಭಾವನಾತ್ಮಕ ಸ್ಥಿತಿಯ ಮೇಲೂ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.
2. ಖಾಲಿ ಕನ್ನಡಿಯನ್ನು ನೋಡುವುದು!
ಮಂದ ಬೆಳಕು ಇರೋ ಕೋಣೆಯೊಳಗಡೆ ಖಾಲಿ ಕನ್ನಡಿಯನ್ನು ನೋಡಲೇಬಾರದು ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಅದ್ರಲ್ಲೂ ಹೊರಗಡೆ ಹೂಗುವ ಸಂದರ್ಭದಲ್ಲಿ ಈ ರೀತಿ ಮಾಡಲೇಬಾರದು ಎಂದು ಹೇಳಲಾಗುತ್ತದೆ. ಖಾಲಿ ಕನ್ನಡಿಯನ್ನು ನೋಡುವುದು ಅನಗತ್ಯ ಶಕ್ತಿಗಳು ಅಥವಾ ನಕಾರಾತ್ಮಕ ಶಕ್ತಿಗಳನ್ನು ಆಹ್ವಾನಿಸಬಹುದು. ಇದು ನಿಮ್ಮ ಶುಭ ದಿನದ ಮೇಲೆ ಪರಿಣಾಮ ಬೀರಬಹುದು.
3. ಶನಿಯ ದಿನದಂದು ಶುಭ ಕಾರ್ಯಗಳನ್ನು ಮಾಡಬಾರದು!
ಶನಿಯ ದಿನದಂದು ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಅಶುಭವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರವು ಈ ದಿನವು ಹೊಸದನ್ನು ಪ್ರಾರಂಭಿಸುವುದಕ್ಕಿಂತ ಹೆಚ್ಚಾಗಿ ಯೋಜನೆ ಮತ್ತು ಕಾರ್ಯತಂತ್ರಕ್ಕೆ ಸೂಕ್ತವಾಗಿರುತ್ತದೆ ಎಂದು ಸೂಚಿಸುತ್ತದೆ. ಶನಿಯ ಶಕ್ತಿಯು ಹೊಸ ಪ್ರಯತ್ನಗಳ ಸುಗಮ ಪ್ರಗತಿಗೆ ಅಡ್ಡಿಯಾಗಬಹುದು ಎಂದು ನಂಬಲಾಗಿದೆ.
4. ಮನೆ ಅಶುದ್ಧವಾಗಿದ್ದಾಗ ಹೊರ ಹೋಗಬಾರದು!
ಯಾವುದೇ ಕಾರಣಕ್ಕೂ ಮನೆ ಅಶುದ್ಧವಾಗಿರೋ ಸಂದರ್ಭದಲ್ಲಿ ಮನೆಯಿಂದ ಶುಭ ಕೆಲಸಕ್ಕೆ ಹೊಡಬಾರದು. ಮನೆಯಿಂದ ಶುಭ ಕಾರ್ಯಕ್ಕೆ ಹೊರಡುವುದಾದರೆ ಮೊದಲಿಗೆ ಮನೆ ಸ್ವಚ್ಛವಾಗಿದ್ಯಾ ಅನ್ನೋದನ್ನು ಖಚಿತಪಡಿಸಿಕೊಳ್ಳಿ. ಅಸ್ತವ್ಯಸ್ತವಾಗಿರುವ ಮನೆಯಿಂದ ಹೊರಟರೆ ದಿನವಿಡೀ ಚದುರಿದ ಆಲೋಚನೆಗಳು ಮತ್ತು ಗಮನದ ಕೊರತೆಗೆ ಕಾರಣವಾಗಬಹುದು ಎಂದು ಜ್ಯೋತಿಷ್ಯವು ಸೂಚಿಸುತ್ತದೆ. ಮತ್ತೊಂದೆಡೆ ಅಚ್ಚುಕಟ್ಟಾದ ಪರಿಸರವು ಸ್ಪಷ್ಟತೆ ಮತ್ತು ಸಕಾರಾತ್ಮಕ ಶಕ್ತಿಯನ್ನು ಉತ್ತೇಜಿಸುತ್ತದೆ.
5. ಬೆಳಗ್ಗಿನ ಉಪಹಾರವನ್ನು ತಿನ್ನದೇ ಮನೆಯಿಂದ ಹೊರಡುವುದು!
ಜ್ಯೋತಿಷ್ಯದ ಪ್ರಕಾರ ಒಂದು ಪ್ರಮುಖ ಕಾರ್ಯವನ್ನು ಮಾಡುವ ಮೊದಲು ಬೆಳಗ್ಗಿನ ಉಪಹಾರವನ್ನು ಮಾಡದೇ ಹೊರಡುವುದು ಸರಿಯಲ್ಲ. ದೇಹ ಮತ್ತು ಮನಸ್ಸಿಗೆ ಪೋಷಣೆ ಮತ್ತು ಶಕ್ತಿಯನ್ನು ಒದಗಿಸಲು ಬೆಳಗಿನ ಉಪಾಹಾರವನ್ನು ಪ್ರಮುಖವೆಂದು ಪರಿಗಣಿಸಲಾಗುತ್ತದೆ. ಬೆಳಗ್ಗಿನ ಉಪಹಾರವನ್ನು ನಿರ್ಲಕ್ಷಿಸುವುದರಿಂದ ನಿಮಗೆ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಮತ್ತು ನಿಮ್ಮ ಗುರಿಗಳ ಮೇಲೆ ಗಮನ ಹರಿಸೋದಕ್ಕೆ ಸಾಧ್ಯವಾಗೋದಿಲ್ಲ.
ಹೀಗಾಗಿ ಯಾವುದೇ ಶುಭ ಕಾರ್ಯಕ್ಕೆಂದು ಹೋಗುವ ಮೊದಲು ಈ ವಿಚಾರಗಳ ಬಗ್ಗೆ ಗಮನ ಹರಿಸೋದನ್ನು ಮರೆಯಬೇಡಿ.



Click it and Unblock the Notifications
