Latest Updates
-
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು!
ದೀಪ ಹಚ್ಚುವಾಗ ಕೈ ಸುಟ್ಟು ಹೋದರೆ ಏನರ್ಥ! ಇದು ಅಪಶಕುನನಾ?
ಹಿಂದೂ ಧರ್ಮದಲ್ಲಿ ದೇವರನ್ನು ಭಕ್ತಿಯಿಂದ ಪೂಜಿಸಿ, ಪೂಜಾ ಕೈಂಕರ್ಯಗಳನ್ನು ಕೈಗೊಳ್ಳುವ ಕ್ರಮವಿದೆ. ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲಿ ಮನೆಯ ಯಾರಾದರೂ ಒಬ್ಬ ಸದಸ್ಯ ಬೆಳಗ್ಗೆ ಎದ್ದು ಸ್ನಾನ ಮಾಡಿ ಭಕ್ತಿಯಿಂದ ದೇವರಿಗೆ ದೀಪವಿಟ್ಟು ಪೂಜೆ ಸಲ್ಲಿಸುತ್ತಾರೆ. ನಾವು ಭಕ್ತಿಯಿಂದ ಪೂಜೆ ಸಲ್ಲಿಸಿದ್ರೆ ಆ ಪೂಜೆ ದೇವರಿಗೆ ಸಲ್ಲುತ್ತೆ ಎನ್ನುವ ನಂಬಿಕಯಿದೆ.

ಆದರೆ ಕೆಲವೊಂದು ಸಾರಿ ದೇವರ ಪೂಜೆ ಮಾಡುವಾಗ ನಮಗೆ ಗೊತ್ತಿಲ್ಲದ ಹಾಗೆ ಕೆಲವೊಂದು ಅಚಾತುರ್ಯಗಳು ನಡೆದು ಹೋಗುತ್ವೆ. ಈ ಸಂದರ್ಭದಲ್ಲಿ ಇದೇನಾದ್ರೂ ಅಪಶಕುನದ ಮುನ್ಸೂಚನೆಯ ಎನ್ನುವ ಭಯ ಶುರುವಾಗುತ್ತೆ. ಅಷ್ಟಕ್ಕೂ ಪೂಜಾ ಸಮಯದಲ್ಲಿ ಆಗುವ ತಪ್ಪುಗಳು ಏನನ್ನು ಸೂಚಿಸುತ್ತೆ ಅನ್ನೋದನ್ನು ಒಂದೊಂದಾಗಿ ತಿಳಿಯೋಣ.
ಪೂಜೆಯ ಸಮಯದಲ್ಲಿ ಕಣ್ಣಲ್ಲಿ ನೀರು ಬಂದತಾಗುವುದು!
ಪೂಜೆಯ ಸಮಯದಲ್ಲಿ ವ್ಯಕ್ತಿಯ ಕಣ್ಣಿನಿಂದ ನೀರು ಬಂದರೆ ನಿಮ್ಮ ಮನಸ್ಸಿನಲ್ಲಿರುವ ದುಃಖವು ಶೀಘ್ರದಲ್ಲೇ ಕೊನೆಗೊಳ್ಳಲಿದೆ ಎಂದರ್ಥ. ಅಷ್ಟೇ ಅಲ್ಲದೇ ನಿಮ್ಮೆಲ್ಲಾ ಕಷ್ಟಗಳು ಬೇಗನೆ ಕೊನೆಯಾಗುತ್ತೆ ಅನ್ನೋದನ್ನು ಇದು ಸೂಚಿಸುತ್ತದೆ. ಇನ್ನೂ ನಿಮ್ಮ ಶತ್ರುಗಳ ವಿರುದ್ಧ ನೀವು ಜಯ ಸಾಧಿಸುತ್ತೀರಿ ಎನ್ನುವ ಸೂಚನೆ ಇದಾಗಿದೆ.
ಪೂಜೆಯ ಸಮಯದಲ್ಲಿ ಕೈ ಸುಟ್ಟು ಹೋಗುವುದು!
ಪೂಜಾ ಸಂದರ್ಭದಲ್ಲಿ ನಮ್ಮಲ್ಲಿ ದೇವರಿಗೆ ದೀಪ ಹಚ್ಚುವ ಸಂಪ್ರದಾಯವಿದೆ. ಕೆಲವೊಂದು ಸಲ ದೀಪ ಹಚ್ಚುವಾಗ ಕೈ ಸುಟ್ಟಂತಹ ಅನುಭವವಾಗುತ್ತದೆ. ಒಂದು ರೀತಿ ಆದರೆ ನೀವೇನಾದರೂ ತಪ್ಪು ಮಾಡಿದ್ದೀರಿ ಎಂದರ್ಥ. ಒಂದು ದೀಪ ಹಚ್ಚುವಾಗ ನಿಮ್ಮ ಕೈ ಏನಾದರೂ ಸುಟ್ಟು ಹೋದರೆ ಮತ್ತೊಮ್ಮೆ ದೇವರನ್ನು ಭಕ್ತಿಯಿಂದ ಬೇಡಿಕೊಂಡು ನೀವು ಮಾಡಿದ ತಪ್ಪಿಗಾಗಿ ಕ್ಷಮೆಯನ್ನು ಯಾಚಿಸಿ.
ಪೂಜೆಯ ಸಮಯದಲ್ಲಿ ಆಕಳಿಕೆ ಬರುವುದು!
ಪೂಜೆಯ ಸಮಯದಲ್ಲಿ ನೀವು ಪದೇ ಪದೇ ಆಕಳಿಸಿದರೆ ಧರ್ಮಗ್ರಂಥಗಳ ಪ್ರಕಾರ ನಿಮ್ಮೊಳಗೆ ನಕಾರಾತ್ಮಕತೆ ಹೆಚ್ಚಾಗಿದೆ ಎಂಬುದರ ಸಂಕೇತವಾಗಿದೆ. ಅಲ್ಲದೆ ಕೆಲವೊಮ್ಮೆ ಕೆಟ್ಟ ಆಲೋಚನೆಗಳಿಂದಾಗಿ ನಿಮಗೆ ಪೂಜೆಯ ಸಮಯದಲ್ಲಿ ಆಕಳಿಕೆ ಬಂದತಾಗುತ್ತದೆ. ಈ ರೀತಿ ಆದರೆ ಆದಷ್ಟು ಬೇಗ ನಿಮ್ಮ ಮನದೊಳಗಿನ ಕೆಟ್ಟ ಅಥವಾ ನಕಾರಾತ್ಮಕ ಆಲೋಚನೆಗಳನ್ನು ತೆಗೆದು ಹಾಕೋದಕ್ಕೆ ನಿರ್ಧರಿಸಿ.
ಪೂಜೆ ಯಶಸ್ವಿಯಾಗಿದೆ ಎಂದು ಸೂಚಿಸುತ್ತದೆ!
ಪೂಜೆಯ ಸಮಯದಲ್ಲಿ ಬೆಳಗಿದ ದೀಪದ ಜ್ವಾಲೆಯು ಮೇಲಕ್ಕೆ ಏರಲು ಪ್ರಾರಂಭಿಸಿದರೆ ನಿಮ್ಮ ಪೂಜೆಯಿಂದ ದೇವರು ಸಂತುಷ್ಟನಾಗಿದ್ದಾನೆ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಮತ್ತೊಂದೆಡೆ, ಪೂಜೆಯ ಸಮಯದಲ್ಲಿ ನಿಮ್ಮ ಮನೆಗೆ ಅತಿಥಿಗಳು ಬಂದರೆ ದೇವರು ನಿಮ್ಮ ಬಗ್ಗೆ ತುಂಬಾ ಸಂತೋಷಪಟ್ಟಿದ್ದಾನೆ ಎಂದರ್ಥ.



Click it and Unblock the Notifications
