Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಆದಿತ್ಯ L1 ಮಿಷನ್: ಸೂರ್ಯನ ಬಳಿಗೆ ಹೋಗಲು ಇಸ್ರೋ ಕ್ಷಣಗಣನೆ
ಇದೀಗ ವಿಶ್ವದ ದೃಷ್ಟಿ ನಮ್ಮ ಭಾರತದ ಕಡೆಗೆ ಮತ್ತೊಮ್ಮೆ ತಿರುಗಿದೆ, ಇದಕ್ಕೆ ಕಾರಣ ನಮ್ಮ ಇಸ್ರೋ ವಿಜ್ಞಾನಿಗಳು ಸೂರ್ಯನಲ್ಲಿ ಅಧ್ಯಯನ ಮಾಡಲು ಹೊರಟಿದ್ದಾರೆ. ಈ ಮೂಲಕ ಯಾರೂ ಮಾಡಿರದ ಪ್ರಮುಖ ಕಾರ್ಯವನ್ನು ಭಾರತ ಮಾಡಲು ಹೊರಟಿದೆ.
ಬಾಹ್ಯಾಕಾಶ ಜ್ಞಾನದಲ್ಲಿ ಹೊಸ ಕ್ರಾಂತಿ ಮಾಡಲು ಹೊರಟಿರುವ ಭಾರತ
ಭೂಮಿಯಿಂದ ಆಕಾಶ ನೋಡುವಾಗ ಆ ಲೋಕದ ಸಾಕಷ್ಟು ಕುತೂಹಲ ಕಾಡುವುದು. ಚಂದ್ರ ಲೋಕ ಎಂಬುವುದು ಹೇಗಿರುತ್ತದೆ, ಕೆಂಪಗೆ ಉರಿಯುವ ಸೂರ್ಯನ ಬಳಿ ಹೋಗಲು ಸಾಧ್ಯವೇ, ಶುಕ್ರ, ಮಂಗಳದ ವಾತಾವರಣ ಹೇಗಿರಬಹುದು, ಭೂಮಿಯಲ್ಲಿ ಇರುವಂತೆ ಬಾಹ್ಯಾಕಾಶದಲ್ಲೂ ಏನಾದರೂ ಜೀವಿಗಳು ಇರಲು ಸಾಧ್ಯವೇ ಹೀಗೆ ಅನೇಕ ಕೌತುಕಗಳು ಕಾಡುವುದು.

ಈ ರೀತಿಯ ಕೌತುಕಗಳನ್ನು ಬೆನ್ನೆಟ್ಟುವ ಕೆಲಸವನ್ನು ವಿಜ್ಞಾನಿಗಳು ಮಾಡುತ್ತಿದ್ದಾರೆ. ಇದುವರೆಗೆ ಬಾಹ್ಯಾಕಾಶದ ಏನಾದರೂ ತಿಳಿಯಲು ನಾವು ನಾಸಾದತ್ತ ನೋಡುತ್ತಿದ್ದೇವೆ. ಆದರೆ ಈಗ ನಮ್ಮ ಹೆಮ್ಮೆಯ ಇಸ್ರೋ ಬಾಹ್ಯಾಕಾಶದ ಕುರಿತು ಮತ್ತಷ್ಟು ತಿಳಿಸಲು ಹೊರಟಿರುವುದು ಭಾರತೀಯರ ಪಾಲಿಗೆ ಹೆಮ್ಮೆಯ ವಿಷಯ.
ಜಗತ್ತಿನಲ್ಲಿ ಯಾರೂ ಮಾಡಿರದ ಕಾರ್ಯವನ್ನು ನಮ್ಮ ಇಸ್ರೋ ಮಾಡುತ್ತಿದೆ. ಚಂದ್ರಲೋಕಕ್ಕೆ ಈ ಹಿಂದೆ ಅಮೆರಿಕ, ರಷ್ಯಾದಂಥ ದೊಡ್ಡ ರಾಷ್ಟ್ರಗಳು ಹೋಗಿದ್ದರು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶ ಎಂಬ ಹೆಗ್ಗಳಿಕೆ ಭಾರತದ್ದು. ಚಂದ್ರಯಾನ ತ್ರಿವಿಕ್ರಮ ಯಶಸ್ವಿನ ನಂತರ ಈಗ ಸೌರಯಾನಕ್ಕೆ ಮುಂದಾಗಿದೆ ಇಸ್ರೋ... ಸೌರಾಯಾನವನ್ನು ಸೆಪ್ಟೆಂಬರ್ 2ರಂದು ಮಾಡುತ್ತಿದ್ದು, ಆದಿತ್ಯ L1 ಮಿಷನ್ ಪ್ರಾರಂಭಕ್ಕೆ ಕ್ಷಣಕಣನೆ ಶುರುವಾಗಿದೆ.
ಸೂರ್ಯಯಾನಕ್ಕೂ ಮುನ್ನ ದೇವರ ಆಶೀರ್ವಾದ ಪಡೆದ ಇಸ್ರೋ
ನಾವು ಯಾವುದೇ ಕಾರ್ಯಕ್ಕೆ ಹೋಗುವ ಮುನ್ನ ದೇವರ ಪ್ರಾರ್ಥನೆ ಮಾಡುವುದು ಭಾರತೀಯರ ನಂಬಿಕೆ, ಆ ನಂಬಿಕೆ ವಿಜ್ಞಾನಿಗಳಲ್ಲಿಯೂ ಇದೆ. ಚಂದ್ರಯಾನಕ್ಕೆ ಮುನ್ನ ತಿರುಪತಿ ತಿಮ್ಮಪ್ಪನ ಆಶೀರ್ವಾದ ಪಡೆದಿದ್ದರು ವಿಜ್ಞಾನಿಗಳು, ಇದೀಗ ಸೂರ್ಯಯಾನಕ್ಕೂ ಮುನ್ನ ಕೂಡ ಎಸ್ ಸೋಮನಾಥನ್ ಚೆಂಗಲಮ್ಮ ಪರಮೇಶ್ವರಿ ದೇವಾಲಯಕ್ಕೆ ಭೇಟಿ ಮಾಡಿ ದೇವರ ಆಶೀರ್ವಾದ ಪಡೆದಿದ್ದಾರೆ. ಆದಿತ್ಯ L1 ಮಿಷನ್ ಯಶಸ್ವಿಯಾಗಲಿ ಎಂದು ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸಲಾಗುತ್ತಿದೆ.
ಆದಿತ್ಯ L1 ಮಿಷನ್‌ನ ಉದ್ದೇಶ
ಬೆಂಕಿ ಚೆಂಡಿನ ಸೂರ್ಯನ ಬಳಿ ಯಾರಿಗೂ ಹೋಗಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿತ್ತು. ಹೈಡ್ರೋಜನ್ ಹಾಗೂ ಹೀಲಿಯಂನ ಬೆಂಕಿ ಚೆಂಡು ಸೂರ್ಯನ ಸಮೀಪ ಹೋಗುವುದು ಎಂದರೆ ಅದು ಸುಲಭದ ವಿಷಯವಲ್ಲ, ಯಾವುದೇ ವಸ್ತುಗಳು ಅದರ ಸಮೀಪ ಹೋದರೆ ಉಷ್ಣಾಂಶಕಕ್ಕೆ ಕರಗಿ ಹೋಗಿ ಬಿಡುತ್ತದೆ, ಆದರೆ ಈ ಸೂರ್ಯನ ಹೊರವಲಯವನ್ನು ಅಧ್ಯಯನ ಮಾಡಲು ನಮ್ಮಿಂದ ಸಾಧ್ಯ ಎಂಬ ಆತ್ಮವಿಶ್ವಾಸ ಹೊಂದಿದೆ ನಮ್ಮ ಇಸ್ರೋ. ಸೂರ್ಯನ ಹೊರವಲಯದ ವಾತಾವರಣದ ಕುರಿತು ಅಧ್ಯಯನ ಮಾಡುವುದು ಆದಿತ್ಯ L1 ಮಿಷನ್‌ನ ಉದ್ದೇಶವಾಗಿದೆ.
ಇಂದು ಉಡಾವಣೆ ಆಗುವ ರಾಕೆಟ್ ಸೂರ್ಯನ ಸಮೀಪ ತಲುಪುವುದು ಯಾವಾಗ?
ಆದಿತ್ಯ ಎಲ್ 1 ಯಶಸ್ವಿಯಾದರೆ ಜನವರಿ ತಿಂಗಳಿನಲ್ಲಿ ಇದು ಸೂರ್ಯನ ಸಮೀಪ ತಲುಪಲಿದೆ, ಫೆಬ್ರವರಿಯಿಂದ ಸೂರ್ಯನ ಕುರಿತು ಮಾಹಿತಿ ನೀಡಲಿದೆ. ಈ ಯೋಜನೆ ಯಶಸ್ವಿಯಾದರೆ ಸೌರಮಂಡಲದ ಕುರಿತು ಮತ್ತಷ್ಟು ತಿಳಿಯಲು ಸಾಧ್ಯವಾಗುವುದು. ಈ ಯೋಜನೆ ಯಶಸ್ವಿಯಾಗಲಿ, ನಮ್ಮ ಇಸ್ರೋ ಸಾಧನೆ ನಾಸಾಗಿಂತಲೂ ಅಧಿಕವಾಗಲಿ ಎಂಬುವುದೇ ಭಾರತೀಯರ ಆರೈಕೆ.



Click it and Unblock the Notifications
