Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಶ್ರಾವಣ ಮಾಸದಲ್ಲಿ ಈ 5 ದೈವಿಕ ವಸ್ತುಗಳನ್ನು ಮನೆಗೆ ತಂದರೆ ಎಲ್ಲಾ ಕಷ್ಟಗಳು ದೂರಾಗುವುದು
ಶ್ರಾವಣ ಮಾಸ ಹಿಂದೂಗಳಿಗೆ ಪವಿತ್ರವಾದ ಮಾಸವಾಗಿದೆ. ಈ ಮಾಸದಲ್ಲಿ ಶಿವಭಕ್ತರು ಈ ತಿಂಗಳ ವ್ರತ ನಿಯಮಗಳನ್ನು ಪಾಲಿಸುತ್ತಾ ಶಿವನನ್ನು ಆರಾಧನೆ ಮಾಡಲಾಗುವುದು. ಈ ತಿಂಗಳಿನಲ್ಲಿ ಕೆಲವೊಂದು ವಸ್ತುಗಳನ್ನು ಮನೆಗೆ ತಂದರೆ ಒಳ್ಳೆಯದು ಎಂದು ಹೇಳಲಾಗುವುದು.
ಈ ವಸ್ತುಗಳನ್ನು ಶ್ರಾವಣದಲ್ಲಿ ಮನೆಗೆ ತಂದರೆ ಮನೆಗೆ ಅದೃಷ್ಟ ಬರಲಿದೆ ಎಂದು ನಂಬಲಾಗಿದೆ. ಈ ಶ್ರಾವಣದಲ್ಲಿ ಯಾವೆಲ್ಲಾ ವಸ್ತುಗಳನ್ನು ಮನೆಗೆ ತಂದರೆ ಒಳ್ಳೆಯದು ಎಂದು ನೋಡೋಣ ಬನ್ನಿ:

ನಾಗ- ನಾಗಿಣಿಯ ಮೂರ್ತಿ
ನಾಗ-ನಾಗಣಿಯ ಮೂರ್ತಿಯನ್ನು ಮನೆಗೆ ತಂದರೆ ಒಳ್ಳೆಯದು ಎಂದು ಹೇಳಲಾಗುವುದು. ಸರ್ಪ ಶಿವನ ಆಭರಣ. ಈ ಮೂರ್ತಿಗಳನ್ನು ಮನೆಗೆ ತಂದು ಹಾಲು, ಹೂ, ಹಣ್ಣುಗಳನ್ನು ಅರ್ಪಿಸಿ ದೀಪ ಹಚ್ಚಿದರೆ ಶುಭ ಉಂಟಾಗುವುದು. ಈ ಮೂರ್ತಿಯನ್ನು ನಾಗ ಪಂಚಮಿಯಂದು ಆರಾಧಿಸಿ.
ತ್ರಿಶೂಲ
ಶ್ರಾವಣ ತಿಂಗಳಿನಲ್ಲಿ ಮನೆಗೆ ಬೆಳ್ಳಿಯ ತ್ರಿಶೂಲ ತಂದರೆ ಒಳ್ಳೆಯದು, ಅದರಲ್ಲೂ ಬೆಳ್ಳಿಯ ತ್ರಿಶೂಲವನ್ನು ಸೋಮವಾರ ತರುವುದರಿಂದ ಜೀವನದಲ್ಲಿರುವ ಸಮಸ್ಯೆಗಳು ದೂರಾಗುವುದು.
ಗಂಗಾಜಲ
ಹಿಂದೂಧರ್ಮದಲ್ಲಿ ಯಾವುದೇ ಶುಭ ಕಾರ್ಯಕ್ರಮಗಳಿರಲಿ ಗಂಗಾಜಲ ಬಳಸುತ್ತೇವೆ. ಗಂಗಾಜಲ ಮನೆಯಲ್ಲಿ ಚಿಮುಕಿಸಿದರೆ ನೆಗೆಟಿವ್ ಎನರ್ಜಿ ದೂರಾಗುವುದು ಎಂದು ನಂಬಲಾಗಿದೆ. ಶ್ರಾವಣ ತಿಂಗಳಿನಲ್ಲಿ ಶಿವನಿಗೆ ಗಂಗಾಜಲದಿಂದ ಅಭಿಷೇಕ ಮಾಡಿದರೆ ನಿಮ್ಮ ಇಷ್ಟಾರ್ಥ ನೆರವೇರುವುದು.
ರುದ್ರಾಕ್ಷಿ
ರುದ್ರಾಕ್ಷಿ ತುಂಬಾ ಶಕ್ತಿಶಾಲಿಯಾದ ವಸ್ತುವಾಗಿದೆ. ಇದನ್ನು ಬಳಸುವುದಕ್ಕೂ ಒಂದು ಕ್ರಮವಿದೆ. ಶ್ರಾವಣ ಮಾಸದಲ್ಲಿ ರುದ್ರಾಕ್ಷಿ ಮನೆಗೆ ತಂದರೆ ಶುಭ ಎಂದು ಹೇಳಲಾಗುವುದು. ಶಿವನಿಗೆ ಪೂಜೆ ಮಾಡಿ ನಂತರ ರುದ್ರಾಕ್ಷಿ ಧರಿಸಬೇಕು.
ಭಸ್ಮ
ಶಿವನ ಪೂಜೆಗೆ ಕುಂಕುಮ ಬದಲಿಗೆ ಭಸ್ಮವನ್ನು ಬಳಸಲಾಗುವುದು. ನಂಬಿಕೆ ಪ್ರಕಾರ ಶಿವನು ಮೈ ತುಂಬಾ ಭಸ್ಮ ಲೇಪಿಸಿಕೊಂಡಿರುತ್ತಾನೆ ಎಂದು ಹೇಳಲಾಗುವುದು. ಭಸ್ಮವನ್ನು ತಂದು ಆ ಭಸ್ಮದಿಂದ ನಾಮ ಹಾಕಿದರೆ ಒಳ್ಳೆಯದು.



Click it and Unblock the Notifications
