Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
2023ರಲ್ಲಿ ಮಂಗಳ ಗೌರಿ ವ್ರತ 9 ವಾರಗಳಿವೆ, ಯಾವಾಗ ಶುರುವಾಗಿ ಯಾವಾಗ ಮುಕ್ತಾಯ?
ಶ್ರಾವಣ ಮಾಸದಲ್ಲಿ ಮುತ್ತೈದೆಯರು ಮಂಗಳ ಗೌರಿ ವ್ರತ ಆರಂಭಿಸುತ್ತಾರೆ. ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ, ತಮಿಳುನಾಡು ಈ ಭಾಗಗಳಲ್ಲಿ ಮಂಗಳ ಗೌರಿ ವ್ರತ ಆಚರಿಸಲಾಗುವುದು. ಶ್ರಾವಣ ಮಾಸದ ಪ್ರತಿ ಮಂಗಳವಾರದಂದು ಮಂಗಳ ಗೌರಿ ವ್ರತ ಆಚರಿಸಲಾಗುವುದು. ಪತಿಯ ಆಯುಸ್ಸು, ಆರೋಗ್ಯ ವೃದ್ಧಿಗಾಗಿ ಮನೆಯಲ್ಲಿ ಸಂಪತ್ತು, ಸಂತೋಷ ಹೆಚ್ಚಲಿ ಎಂಬ ಉದ್ದೇಶದಿಂದ ಈ ವ್ರತವನ್ನು ಮಾಡುತ್ತಾರೆ.
ಕರ್ನಾಟಕದಲ್ಲಿ ಮಂಗಳ ಗೌರಿ ವ್ರತವನ್ನು ಯಾವಾಗ ಆಚರಿಸಲಾಗುವುದು? ಈ ವ್ರತದ ಮಹತ್ವವೇನು? ಇದನ್ನು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:
ಈ ವರ್ಷ ನಿಮಗೆ ಮಂಗಳ ಗೌರಿ ವ್ರತ ಆಚರಣೆಗೆ 9 ಮಂಗಳವಾರ ಸಿಗಲಿದೆ
ಜುಲೈ 18ರಂದು ಮಂಗಳ ಗೌರಿ ವ್ರತ ಪ್ರಾರಂಭ
ಆಗಸ್ಟ್ 8
ಆಗಸ್ಟ್ 15
ಆಗಸ್ಟ್ 22
ಆಗಸ್ಟ್ 29
ಸೆಪ್ಟೆಂಬರ್ 5
ಸೆಪ್ಟೆಂಬರ್ 12ಕ್ಕೆ ಮಂಗಳ ಗೌರಿ ವ್ರತ ಮುಕ್ತಾಯ.
ಈ ವರ್ಷ ಶ್ರಾವಣ ಅಧಿಕ ಮಾಸ ಇರುವುದರಿಂದ 9 ವಾರ ಮಂಗಳ ಗೌರಿ ವ್ರತ ಮಾಡಬಹುದು.

ಪಾರ್ವತಿ ದೇವಿಯ ಕೃಪೆಗಾಗಿ ಮಂಗಳ ಗೌರಿ ವ್ರತ
ಮಂಗಳ ಗೌರಿ ವ್ರತದಲ್ಲಿ ದೇವಿ ಪಾರ್ವತಿಯ ಆರಾಧನೆ ಮಾಡಲಾಗುವುದು. ಇದನ್ನು ಪ್ರತಿ ಮಂಗಳವಾರ ಆಚರಣೆ ಮಾಡಲಾಗುವುದು. ಮುತ್ತೈದೆಯರು ವೈವಾಹಿಕ ಜೀವನ ಚೆನ್ನಾಗಿರಲಿ, ನನ್ನನ್ನು ಮುತ್ತೈದೆಯನ್ನಾಗಿ ಇಡು ತಾಯಿಯೇ ಎಂದು ಪ್ರಾರ್ಥಿಸುತ್ತಾ ಈ ವ್ರತವನ್ನು ಮಾಡಲಾಗುವುದು. ಈ ವ್ರತವನ್ನು ಹೊಸದಾಗಿ ಮದುವೆಯಾದವರು, ಮದುವೆಯಾಗಿ ಇನ್ನೂ ಐದು ವರ್ಷ ಪೂರ್ಣವಾಗಿರದವರು ಮಾಡಲಾಗುವುದು, ಮದುವೆಯಾಗದ ಹೆಣ್ಣು ಮಕ್ಕಳು ಕಂಕಣ ಭಾಗ್ಯ ಕೂಡಿ ಬರಲು ಈ ವ್ರತವನ್ನು ಆಚರಿಸುತ್ತಾರೆ.
ಮಂಗಳ ಗೌರಿ ವ್ರತದ ಪೂಜಾ ವಿಧಿಗಳೇನು?
- ಸೂರ್ಯೋದಯಕ್ಕೆ ಮೊದಲೇ ಎದ್ದೇಳಬೇಕು, ನಂತರ ಸ್ನಾನ ಮಾಡಿ ಒಳ್ಳೆಯ ಸಾಂಪ್ರದಾಯಕ ಬಟ್ಟೆ ಧರಿಸಿ ಲಕ್ಷಣವಾಗಿ ಅಲಂಕಾರ ಮಾಡಿಕೊಳ್ಳುತ್ತಾರೆ.
- ಈಗ ಮರದ ಮಣೆಯನ್ನು ಸ್ವಚ್ಛಗೊಳಿಸಿ ಅದರ ಮೇಲೆ ಕೆಂಪು ಬಟ್ಟೆ ಹರಡಿ, ಅರಿಶಿನದಿಂದ ಮಾಡಿದ ಗೌರಿಯ ಮೂರ್ತಿಯನ್ನು ಇಡುತ್ತಾರೆ.
- ಒಂದು ತಟ್ಟೆಗೆ ಅಕ್ಕಿ ಹಾಕಿ ಅದರಲ್ಲಿ ಮಾವಿನ ಎಲೆ, ವೀಳ್ಯೆದೆಲೆಯಿಂದ ಅಲಂಕರಿಸಿದ ಕಳಸ ಇಡಬೇಕು.
- ನಂತರ ಹಿಟ್ಟಿನಿಂದ ಮಾಡಿದ ದೀಪವನ್ನು ಹಚ್ಚಬೇಕು.
- ನಂತರ ದೇವಿಯ ಮುಂದೆ ಸಂಕಲ್ಪ ಮಾಡಿ ಪೂಜೆ ಮಾಡಬೇಕು. ಪೂಜೆಗೆ ಹಣ್ಣುಗಳು, ಹೂಗಳು, ನೈವೇದ್ಯ ಬಳಸಿ. ಪೂಜೆ ಮುಗಿದ ಬಳಿಕ ಆರತಿ ಎತ್ತಿ
- ಶಿವ ಮತ್ತು ಪಾರ್ವತಿಯ ಅಷ್ಠೋತ್ತರ ಪಠಿಸಿ
- ಈ ದಿನ ಉಪವಾಸವಿದ್ದು ಪೂಜೆ ಮಾಡಿದರೆ ತುಂಬಾ ಒಳ್ಳೆಯದು
- ನಂತರ ಪೂಜೆಗೆ ಬಂದ ಮುತ್ತೈದೆಯರಿಗೆ ತಾಂಬೂಲ ನೀಡಿ.
ಮಂಗಳ ಗೌರಿ ವ್ರತದ ಮಹತ್ವ
- ಯಾರು ಈ ವ್ರತವನ್ನು ಮಾಡುತ್ತಾರೋ ವೈವಾಹಿಕ ಜೀವನದಲ್ಲಿ ಇರುವ ಸಮಸ್ಯೆ ಬಗೆಹರಿಯಲಿದೆ.
- ಶಿವ-ಪಾರ್ವತಿಯಂತೆ ದಾಂಪತ್ಯ ಜೀವನ ತುಂಬಾನೇ ಸುಂದರವಾಗಿ ಇರಲಿದೆ.
- ಸಂತಾನ ಭಾಗ್ಯ ದೊರೆಯಲಿದೆ
- ಗಂಡನಿಗೆ ಒಳಿತಾಗಲಿದೆ.
ಯಾರಿಗೆ ಮಂಗಳವಾರ ಮಾಡಲು ಸಾಧ್ಯವಾಗುವುದಿಲ್ಲವೋ ಅವರು ಶುಕ್ರವಾರ ಮಾಡುತ್ತಾರೆ.



Click it and Unblock the Notifications
