Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
2022ರ UPSC IAS ಟಾಪರ್ ಲಿಸ್ಟ್‌ನಲ್ಲಿ ಹೆಣ್ಮಕ್ಕಳೇ ಸ್ಟ್ರಾಂಗ್ ಗುರು: ಮೊದಲ ನಾಲ್ಕು ಸ್ಥಾನದಲ್ಲಿ ಸಾಧಕಿಯರು
ಮಂಗಳವಾರ 2022 ಯುಪಿಎಸ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಟಾಪ್ 10ರಲ್ಲಿ ಮೊದಲ ನಾಲ್ಕು ಸ್ಥಾನದಲ್ಲಿ ಮಹಿಳೆಯರು ಗೆಲುವಿನ ನಗೆ ಬೀರಿದ್ದಾರೆ. ಇವರ ಸಾಧನೆಗೆ ದೇಶವೇ ಭೇಷ್! ಎನ್ನುತ್ತಿದೆ. ಮೊದಲ ಸ್ಥಾನ ಇಶಿತಾ ಕಿಶೋರ್ ಪಡೆದುಕೊಂಡರೆ, ಗರಿಮಾ ಲೋಹಿಯಾ, ಉಮಾ ಹರ್ತಿಣಿ ಎನ್, ಸ್ಮೃತಿ ಮಿಶ್ರಾ ಎರಡು, ಮೂರು, ನಾಲ್ಕನೇ ಸ್ಥಾನ ಪಡೆಯುವ ಮೂಲಕ ಹೆಣ್ಮಕ್ಕಳೇ ಸ್ಟ್ರಾಂಗ್ ಗುರು ಎಂದು ಸಾಬೀತು ಮಾಡಿದ್ದಾರೆ. ಟಾಪ್ 10 ಲೆಕ್ಕ ತೆಗೆದುಕೊಂಡರೆ 6 ಜನ ಹೆಣ್ಮಕ್ಕಳು ಟಾಪ್ 10 ಲಿಸ್ಟ್‌ನಲ್ಲಿದ್ದಾರೆ.

ಈ ಬಾರಿಯ ನಾಗರಿಕ ಸೇವಾ ಪರೀಕ್ಷೆಯಲ್ಲಿ 933 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.
ಮೊದಲ ಸ್ಥಾನ ಪಡೆದು ಸಾಧನೆ ಮಾಡಿರುವ ಇಶಿತಾ ಕಿಶೋರ್ ಕಿರುಪರಿಚಯ ನೋಡುವುದಾದರೆ
ಇವರು ನವದೆಹಲಿಯ ಶ್ರೀರಾಮ್ ಕಾಲೇಜ್ ಆಫ್ ಕಾನರ್ಸ್‌ನಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಪದವಿ ಪಡೆದಿದ್ದಾರೆ, 2022ರ ಯುಪಿಎಸ್‌ಸಿನಲ್ಲಿ ಮೊದಲ ಸ್ಥಾನ ಪಡೆದಿದ್ದು ಜನರು ಈ ಸಾಧಕಿ ಕುರಿತು ಮಾಹಿತಿ ಹುಡುಕಾಡಲು ಪ್ರಾರಂಭಿಸಿದ್ದಾರೆ. ಇಶಿತಾ ಕಪೂರ್ ತಮ್ಮ ಸಾಮಾಜಿಕ ತಾಣದಲ್ಲಿ ನಾನು ಕಂಡಿದ್ದು ಒಂದೇ ಕನಸು ಅದು ನಿಜವಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ.
ಸೋಲೇ ಗೆಲುವಿಗೆ ಸೋಪಾನ
ಸೋಲೇ ಗೆಲುವಿನ ಮೆಟ್ಟಿಲು ಎಂಬ ಮಾತು ಇವರ ಪಾಲಿಗೂ ನಿಜವಾಗಿದೆ. ಇಶಿತಾ ಕಿಶೋರ್ ತನ್ನ ಮೊದಲ ಎರಡು ಪ್ರಯತ್ನದಲ್ಲಿ ಪ್ರಿಲಿಮ್ಸ್ ಹಂತ ಕೂಡ ಪಾಸ್ ಮಾಡಿರಲಿಲ್ಲ. ಛಲಬಿಡದ ತ್ರಿವಿಕ್ರಮನಂತೆ ಓದಿ ಇದೀಗ 2022 ಯುಪಿಎಸ್‌ಸಿ ಟಾಪರ್‌ಗಳಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.
UPSC IAS ಟಾಪರ್ ಲಿಸ್ಟ್ 2022
1. ಇಶಿತಾ ಕಿಶೋರ್
2. ಗರಿಮಾ ಲೋಹಿಯಾ
3. ಉಮಾ ಹರ್ತಿಣಿ ಎನ್
4. ಸ್ಮೃತಿ ಮಿಶ್ರಾ
5. ಮಯೂರ್ ಹಜಾರಿಕಾ
6. ಗಹನಾ ನವ್ಯಾ ಹೇಮ್ಸ್
7. ವಾಸೀಮ್ ಅಹ್ಮದ್ ಭಟ್
8. ಅನಿರುದ್ಧ್ ಯಾದವ್
9. ಕನಿಕಾ ಗೋಯಾಲ್
10. ರಾಹುಲ್ ಶ್ರೀವತ್ಸವ



Click it and Unblock the Notifications
