Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಮನೆ ದ್ವಾರದ ಮೇಲೆ ಈ ಸಂಖ್ಯೆ ಬರೆದು ನೋಡಿ..! ಅದೃಷ್ಟ ಹುಡುಕಿ ಬರಲಿದೆ!!
ಎಲ್ಲರ ಮನೆಯೂ ವಾಸ್ತು ಪ್ರಕಾರವಾಗಿ ಕಟ್ಟಲು ಮುಂದಾಗುತ್ತಾರೆ. ಅದ್ರಲ್ಲೂ ಹಿಂದೂ ಸಂಪ್ರದಾಯದಲ್ಲಿ ವಾಸ್ತು ಪ್ರಕಾರವಾಗಿ ಮನೆಯನ್ನ ಕಟ್ಟುವುದು ಆಚರಣೆಯಾಗಿ ಬಂದಿದೆ. ಆದರೆ ಮನೆಯ ಪ್ರತಿಯೊಂದು ಮೂಲೆಯಲ್ಲೂ ವಾಸ್ತು ಹುಡುಕಿ ಅದರ ದೋಷವಿದ್ದರೆ ನಿವಾರಣೆ ಮಾಡುವುದು, ವಾಸ್ತು ಸಂಕಲ್ಪ, ಯಂತ್ರ, ಹೀಗೆ ಹಲವು ರೀತಿ ವಾಸ್ತು ಪರಿಹಾರ ಮಾಡುವುದನ್ನು ನಾವು ನೋಡಿರುತ್ತೇವೆ.
ಇನ್ನು ಮನೆಯ ಒಂದೊಂದು ಭಾಗಕ್ಕೂ ಒಂದೊಂದು ವಾಸ್ತುವಿದೆ. ಯಾವ ಮೂಲೆಯಲ್ಲಿ ಏನಿಡಬೇಕು, ಏನಿಡಬಾರದು ಎಂಬುದು ಸಹ ವಾಸ್ತು ಶಾಸ್ತ್ರದಲ್ಲಿ ಉಲ್ಲೇಖವಿದೆ. ಇದಕ್ಕಾಗಿ ಮನೆಯಲ್ಲಿ ಯಾವೆಲ್ಲಾ ಬದಲಾವಣೆ ಮಾಡಬೇಕು, ವಾಸ್ತು ದೋಷ ಕಂಡುಬಂದರೆ ಏನು ಮಾಡಬೇಕು ಎಂಬುದನ್ನು ಸಹ ಹೇಳಲಾಗಿದೆ.

ಈಗ ನಾವು ಮನೆಯ ದ್ವಾರ ಬಾಗಿಲಿನ ಕೆಲವು ವಾಸ್ತು ನಿಯಮಗಳು ಏನು ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ. ಅದರಲ್ಲೂ ಮನೆಯಲ್ಲಿ ಆರ್ಥಕ ನಷ್ಟ, ಸಂಬಂಧದಲ್ಲಿ ಬಿರುಕು, ಅದೃಷ್ಟ ಇಲ್ಲದಿರುವುದು, ಸಾಲ ಸೇರಿದಂತೆ ಅಶಾಂತಿ ಇದ್ದರೆ, ಮನೆಯಲ್ಲಿ ನೆಮ್ಮದಿ ಇಲ್ಲ, ಅಶಾಂತಿ, ಯಾವ ಕೆಲಸವು ಪ್ರಗತಿಯಾಗದೆ ಇದ್ದರೆ ಈ ರೀತಿ ಮಾಡಿ ನೋಡಿ. ಜೊತೆಗೆ ಮನೆಯ ದ್ವಾರ ಬಾಗಿಲ ವಾಸ್ತು ಕಡೆಗೆ ನಾವು ಗಮನ ಹರಿಸಬೇಕಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ದ್ವಾರ ಬಾಗಿಲು ಈ ರೀತಿ ಇರಬೇಕಂತೆ,
ತೋರಣ ಮತ್ತು ಮನೆ ದೇವರ ಫೋಟೋ
ಕೆಲವರ ಮನೆಯಲ್ಲಿ ತೋರಣ ಕಟ್ಟು ಅಭ್ಯಾಸ ಇರುವುದಿಲ್ಲ, ಮತ್ತೆ ಕೆಲವರು ಪ್ಲಾಸ್ಟಿಕ್ ತೋರಣ ಕಟ್ಟುತ್ತಾರೆ. ಆದ್ರೆ ಇದೆರಡು ಉತ್ತಮವಲ್ಲ, ಮನೆಯ ದ್ವಾರ ಬಾಗಿಲಿಗೆ ಮಾವಿನ ತೋರಣ ಕಟ್ಟಬೇಕು. ಅದು ಒಣಗಿದರು ತೊಂದರೆ ಇಲ್ಲ. 11 ಅಥವಾ 13 ಎಲಗಳ ಬಳಸಿ ತೋರಣ ಕಟ್ಟಿದರೆ ಬಹಳ ಉತ್ತಮ. ಮನೆಗೆ ಧನಾತ್ಮಕ ಶಕ್ತಿ ಬರಲು ಈ ತೋರಣ ಕಾರಣವಾಗುತ್ತೆ. ಇದರ ಜೊತೆಗೆ ನಿಮ್ಮ ಮನೆದೇವರ ಚಿಕ್ಕದಾದ ಒಂದು ಫೋಟೋವನ್ನು ದ್ವಾರ ಬಾಗಿಲ ಮಧ್ಯದಲ್ಲಿ ಇಡಬೇಕು. ಮೇಲ್ಭಾಗದಲ್ಲಿ ಮೊಳೆ ಹೊಡೆದು ಅದಕ್ಕೆ ನೇತುಹಾಕಬೇಕು.
ಮನೆ ಹಿರಿಯರೊಬ್ಬರ ಜನ್ಮ ದಿನಾಂಕ ಬರೆಯುವುದು
ಮನೆಯ ದ್ವಾರದ ಮೇಲ್ಭಾಗದಲ್ಲಿ ಆ ಮನೆಯ ಹಿರಿಯರ ಹುಟ್ಟಿದ ದಿನಾಂಕ , ಅದ್ರಲ್ಲೂ ದಿನಾಂಕ, ತಿಂಗಳು, ವರ್ಷವನ್ನು ಕೂಡಿದಾಗ ಬರುವಂತಹ ಸಂಖ್ಯೆಯನ್ನು ಅಲ್ಲಿ ಬರೆಯಬೇಕು, ನಂತರ ನೀವು ಓಡಾಡುವಾಗ ಆ ಸಂಖ್ಯೆ ನೋಡುವುದು, ಅಥವಾ ನಮಸ್ಕರಿಸುವ ಕಾರ್ಯ ಮಾಡಬೇಕು. ಇದನ್ನು ಭಾಗ್ಯಾಂಕ ಎಂದು ಕರೆಯಲಾಗುತ್ತದೆ.
ಮನೆ ಬಾಗಿಲ ಮುಂದೆ ಚಪ್ಪಲಿ ಬಿಡುವುದು
ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಮನೆ ಬಾಗಿಲ ಮುಂದೆಯೇ ಚಪ್ಪಲಿ ಬಿಡುವ ಕಾರ್ಯ ಮಾಡುತ್ತಾರೆ. ಆದರೆ ಈ ರೀತಿ ದ್ವಾರ ಬಾಗಿಲ ಬಳಿ ಅಥವಾ ನೇರವಾಗಿ ಚಪ್ಪಲಿಗಳ ಬಿಡಬಾರದಂತೆ. ಇದರಿಂದ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಶುಭ-ಲಾಭ ಪಟ
ಮನೆಯ ಪ್ರಧಾನ ಬಾಗಿಲಿನ ಮೇಲೆ ಶುಭ ಲಾಭ ಎಂದು ಬರೆಸಿ ಅಥವಾ ಹೀಗೆ ಬರೆದ ಪಟವನ್ನು ಬಾಗಿಲ ಮೇಲೆ ಅಳವಡಿಸಿ. ಇದರಿಂದ ಮನೆಯಲ್ಲಿ ಅನಾರೋಗ್ಯ ನುಸುಳಲು ಅಸಾಧ್ಯವಾಗುತ್ತದೆ. ನೀರಿನಿಂದ ತುಂಬಿದ ಗಾಜಿನ ಅಥವಾ ಮಣ್ಣಿನ ಮಡಿಕೆಯಲ್ಲಿ ಹೂವು ಅಥವಾ ಹೂವಿನ ದಳಗಳನ್ನು ಹಾಕಿ ಮನೆಯ ಪ್ರವೇಶ ದ್ವಾರದ ಬಳಿ ಇಟ್ಟರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಹಾಗೆ ಈ ನೀರಿನಲ್ಲಿ ಆಮೆಯನ್ನು ಸಹ ಹಾಕಿಡುತ್ತಾರೆ. ಕೂರ್ಮಾವತಾರವಾದ ವಿಷ್ಣುವನ್ನು ನಿತ್ಯ ಪೂಜಿಸಲು ಹೀಗೆ ಮಾಡುತ್ತಾರೆ. ಆಮೆ ಗಾಜಿನಿಂದ ಅಥವಾ ತಾಮ್ರದ್ದಾಗಿದ್ದರೆ ಒಳಿತು.



Click it and Unblock the Notifications
