Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಡುಗೆಮನೆಯಲ್ಲಿ ಈ ಪಾತ್ರೆಗಳನ್ನು ತಲೆಕೆಳಗಾಗಿ ಇಡಬೇಡಿ! ಭಾರೀ ನಷ್ಟ ಖಚಿತ
ಅಡುಗೆಮನೆಯಲ್ಲಿ ಈ ಪಾತ್ರೆಗಳನ್ನು ತಲೆಕೆಳಗಾಗಿ ಇಡಬೇಡಿ. ಈ ಸಣ್ಣ ತಪ್ಪು ನಿಮ್ಮ ಸಂಪತ್ತನ್ನು ನಾಶ ಮಾಡಬಹುದು. ವಾಸ್ತು ಪ್ರಕಾರ ಭಾರೀ ನಷ್ಟ ಖಚಿತ. ಹೌದು, ಈ ವಾಸ್ತು ದೋಷಗಳಿಗೆ ಅಡುಗೆಮನೆಯಲ್ಲಿ ಮಾಡುವ (vastu tips for kitchen) ಕೆಲವು ನಿರ್ದಿಷ್ಟ ತಪ್ಪುಗಳು ಕಾರಣವಾಗುತ್ತವೆ. ಅವುಗಳನ್ನು ತಪ್ಪಿಸುವುದು ಅತ್ಯಗತ್ಯ. ನಿರ್ದಿಷ್ಟವಾಗಿ ಹೇಳುವುದಾದರೆ, ಅಡುಗೆಮನೆಯಲ್ಲಿ ಈ ಮೂರು ಪಾತ್ರೆಗಳನ್ನು ಎಂದಿಗೂ ತಲೆಕೆಳಗಾಗಿ ಇಡಬಾರದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಅವುಗಳು ಯಾವುವು ಎಂದು ತಿಳಿಯೋಣ ಬನ್ನಿ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅನೇಕರು ಹಣ ಗಳಿಸಿದ್ದರೂ ಅದು ಮನೆಯಲ್ಲಿ ನಿಲ್ಲುವುದಿಲ್ಲ ಎಂದು ದೂರುವುದು ಸಾಮಾನ್ಯ. ಇದಕ್ಕೆ ಮುಖ್ಯ ಕಾರಣವೆಂದರೆ, ಮನೆಯಲ್ಲಿರುವ ವಾಸ್ತು ದೋಷಗಳು. ಹೌದು, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಪ್ರಗತಿ ಮತ್ತು ಸಮೃದ್ಧಿಯನ್ನು ಬಯಸುತ್ತಾರೆ. ಮಹಾಲಕ್ಷ್ಮಿಯ ಕೃಪೆಗಾಗಿ ಮನೆಯಲ್ಲಿ ಹಲವಾರು ಕ್ರಮಗಳನ್ನು ಅನುಸರಿಸಲಾಗುತ್ತದೆ. ಅದರಲ್ಲಿ ಮನೆಯ ಶುಚಿತ್ವ, ಪೊರಕೆಗೆ ಸಂಬಂಧಿಸಿದ ನಿಯಮಗಳನ್ನು ಹಿರಿಯರೂ ಸಹ ಹೇಳಿದ್ದಾರೆ.

ಆದರೂ, ಕೆಲವೊಮ್ಮೆ ನಾವು ತಿಳಿದು ಅಥವಾ ತಿಳಿಯದೆಯೋ ತಪ್ಪುಗಳನ್ನು ಮಾಡುತ್ತೇವೆ. ಇದರಿಂದ ಮನೆಯಲ್ಲಿ ವಾಸ್ತು ದೋಷಗಳು ಉಂಟಾಗುತ್ತವೆ. ಜ್ಯೋತಿಷಿಗಳ ಪ್ರಕಾರ, ಅಡುಗೆಮನೆಯಲ್ಲಿ (kitchen) ಮಾಡುವ ಕೆಲವು ತಪ್ಪುಗಳಿಂದಾಗಿ ಮನೆಯಲ್ಲಿ ಹಣದ ಕೊರತೆ ಉಂಟಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿದಂತೆ, ಹಣ ಗಳಿಸಿದ್ದರೂ ಅದು ಮನೆಯಲ್ಲಿ ನಿಲ್ಲದೆ ಇರಲು ನಿಮ್ಮ ಮನೆಯ ವಾಸ್ತು ದೋಷಗಳೇ ಕಾರಣ.
1. ತವಾ: ಸರ್ಪ ದೋಷ ಬರುತ್ತೆ
ಅಡುಗೆಮನೆಯಲ್ಲಿ ತವಾ ಇರುವುದು ಸಾಮಾನ್ಯ. ಆದರೆ, ಅನೇಕ ಮಹಿಳೆಯರು ರೊಟ್ಟಿ ಮಾಡಿದ ನಂತರ ತೊಳೆದ ತವಾವನ್ನು ತಲೆಕೆಳಗಾಗಿ ಇಡುತ್ತಾರೆ. ಇದನ್ನು ಎಂದಿಗೂ ಮಾಡಬಾರದು. ಹೀಗೆ ಮಾಡುವುದರಿಂದ ಆರ್ಥಿಕ ನಷ್ಟದ ಸಾಧ್ಯತೆಗಳು ಹೆಚ್ಚಾಗುತ್ತವೆ. ಅಷ್ಟೇ ಅಲ್ಲದೆ, ಇದು ಜಾತಕದಲ್ಲಿ ಕಾಲ ಸರ್ಪ ದೋಷವನ್ನು ಸಹ ಸೃಷ್ಟಿಸುತ್ತದೆ.
2. ಕುಕ್ಕರ್: ನಕಾರಾತ್ಮಕ ಶಕ್ತಿ
ಕೆಲವೊಮ್ಮೆ ಮಹಿಳೆಯರು ಪಾತ್ರೆ ಅಥವಾ ಕುಕ್ಕರ್ ತೊಳೆದ ನಂತರ ಅದನ್ನು ಹಾಗೆಯೇ ರ್ಯಾಕ್‌ನಲ್ಲಿ ತಲೆಕೆಳಗಾಗಿ ಇಡುತ್ತಾರೆ. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಡುತ್ತದೆ.
3. ಕಡಾಯಿ: ಅನ್ನಪೂರ್ಣೇಶ್ವರಿ ಕೋಪ
ಕಡಾಯಿಯನ್ನು ಅನ್ನಪೂರ್ಣೇಶ್ವರಿ ದೇವಿಯ ಅತ್ಯಂತ ಪ್ರೀತಿಯ ಪಾತ್ರೆ ಎಂದು ಪರಿಗಣಿಸಲಾಗಿದೆ. ಹಾಗಾಗಿಯೇ ಪ್ರತಿ ಹಬ್ಬ ಅಥವಾ ಶುಭ ಸಂದರ್ಭಗಳಲ್ಲಿ ಮನೆಯ ಒಲೆಯ ಮೇಲೆ ಕಡಾಯಿಯನ್ನು ಇಡುವ ಸಂಪ್ರದಾಯ ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ. ಇದೇ ಕಾರಣಕ್ಕೆ ಕಡಾಯಿಯನ್ನು ಮನೆಯಲ್ಲಿ ಎಂದಿಗೂ ತಲೆಕೆಳಗಾಗಿ ಇಡಬಾರದು. ಇದರಿಂದ ಅನ್ನಪೂರ್ಣೇಶ್ವರಿ ದೇವಿ ನಿಮ್ಮ ಮೇಲೆ ಕೋಪಗೊಳ್ಳುತ್ತಾರೆ ಮತ್ತು ನಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ.
ವಾಸ್ತು ತಜ್ಞರ ಪ್ರಕಾರ, ಬಟ್ಟಲುಗಳು ಅಥವಾ ಇತರ ದುಂಡಗಿನ ಪಾತ್ರೆಗಳನ್ನು ತಲೆಕೆಳಗಾಗಿ ಇಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಈ ರೀತಿಯ ಸಂಗ್ರಹಣೆ ವಿಧಾನವು ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ನಂಬಲಾಗಿದೆ. ಆದ್ದರಿಂದ, ಇಂತಹ ಪಾತ್ರೆಗಳನ್ನು ನೇರವಾಗಿ ಅಥವಾ ಬಾಯಿ ಮೇಲ್ಮುಖವಾಗಿ ಇಡುವುದು ಉತ್ತಮ ಎಂದು ವಾಸ್ತು ಶಾಸ್ತ್ರವು ಸಲಹೆ ನೀಡುತ್ತದೆ.
ಪೂಜೆಗೆ ಬಳಸುವ ಪಾತ್ರೆಗಳು
ಪೂಜೆಗೆ ಬಳಸುವ ತಾಮ್ರ ಅಥವಾ ಹಿತ್ತಾಳೆ ಪಾತ್ರೆಗಳನ್ನು ತಲೆಕೆಳಗಾಗಿ ಇಡುವುದರಿಂದ ಮನೆಯಲ್ಲಿ ದಾರಿದ್ರ್ಯ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಈ ಪಾತ್ರೆಗಳನ್ನು ಪೂಜಾ ಸ್ಥಳದಲ್ಲಿ ಅಥವಾ ಅಡುಗೆಮನೆಯಲ್ಲಿ ಗೌರವಯುತವಾಗಿ ನೇರವಾಗಿ ಇಡುವುದು ವಾಸ್ತು ಪ್ರಕಾರ ಶುಭ. ಇದರಿಂದ ಧನಾತ್ಮಕ ಶಕ್ತಿ ಹರಿಯುತ್ತದೆ ಮತ್ತು ಸಮೃದ್ಧಿ ಹೆಚ್ಚುತ್ತದೆ ಎನ್ನಲಾಗುತ್ತದೆ.
ಒಟ್ಟಾರೆಯಾಗಿ, ಅಡುಗೆಮನೆಯಲ್ಲಿ ಬಳಸುವ ಪಾತ್ರೆಗಳನ್ನು ಸಂಗ್ರಹಿಸುವ ವಿಧಾನವು ಸಾಮಾನ್ಯವಾಗಿ ಚರ್ಚೆಗೆ ಒಳಗಾಗುತ್ತದೆ. ಸಾಮಾನ್ಯವಾಗಿ, ಜನರು ಪಾತ್ರೆಗಳನ್ನು ಒಣಗಲು ಅಥವಾ ಸಂಗ್ರಹಿಸಲು ತಲೆಕೆಳಗಾಗಿ ಇಡುತ್ತಾರೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ಪಾತ್ರೆಗಳನ್ನು ತಲೆಕೆಳಗಾಗಿ ಇಡುವುದು ಶುಭವಲ್ಲ ಎಂದು ಹೇಳಲಾಗುತ್ತದೆ.



Click it and Unblock the Notifications










