Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಜಿರಳೆ ಇನ್ನೆಂದು ಮನೆ ಕಡೆ ಸುಳಿಯೋದಿಲ್ಲ..! ಇಲ್ಲಿದೆ ಪರಿಣಾಮಕಾರಿ ಮನೆಮದ್ದು!
ಜಿರಳೆಗಳು ಮಾನವರು ಇರುವ ಕಡೆಗೆ ನೆಲೆಸುವ ಕೀಟಗಳು. ಮನೆಯಲ್ಲಿ ಅದ್ರಲ್ಲೂ ಅಡುಗೆ ಮನೆಯಲ್ಲಿ ಅಳಿದುಳಿದ ಆಹಾರಗಳ ಸೇವಿಸಿ ಬದುಕುಳಿಯುವ ಈ ಜಿರಳೆಗಳು ನಿಮ್ಮ ಮನೆಯಲ್ಲಿ ಓಡಾಡುವುದು ನೋಡಬಹುದು. ಜಿರಳೆಗಳು ಆರೋಗ್ಯದ ಮೇಲೆ ಬಹಳ ಪರಿಣಾಮ ಬೀರಬಹುದು, ಮನೆಯಲ್ಲಿ ಮಕ್ಕಳಿದ್ದರೆ ಜಿರಳೆಗಳಿಂದ ಹಾನಿ ಕಟ್ಟಿಟ್ಟ ಬುತ್ತಿ.
ಜಿರಳೆಗಳೆಂದರೆ ಎಲ್ಲರಿಗೂ ಭಯ ಕಾಡುತ್ತದೆ. ರಾತ್ರಿ ಸಮಯದಲ್ಲಿ ಅವು ಎಲ್ಲಿಯಾದರು ಕಂಡರೆ ಕಿರುಚಿಕೊಂಡು ದೂರ ಓಡುವುದು ನೋಡಬಹುದು. ಜಿರಳೆಗಳು ಮನೆಯಲ್ಲಿ ಸೇರಿದರೆ ಮರಿಗಳ ಮಾಡುತ್ತವೆ. ಹಾಗೆ ಬಟ್ಟೆಗಳ ಹಾಳು ಮಾಡುವ ಭೀತಿ ಹೆಚ್ಚಾಗುತ್ತದೆ. ಅವು ಆಹಾರಗಳ ಒಳಗೆ ಬೀಳುವುದು ಕೂಡ ಅಪಾಯಕ್ಕೆ ದಾರಿಯಾಗುತ್ತದೆ.

ಅದರಲ್ಲೂ ಮಕ್ಕಳು ಜಿರಳೆ ಬಿದ್ದ ಆಹಾರ ಸೇವಿಸಿದರೆ ಅನರೋಗ್ಯಕ್ಕೆ ಬೀಳುತ್ತಾರೆ. ಹಾಗೆ ಜಿರಳೆಗಳು ತಿಂಡಿ, ತಿನಿಸುಗನ್ನು ತಿಂದು ಹಾಳು ಮಾಡುವುದು ಕೂಡ ನೋಡಬಹುದು. ಇನ್ನು ಜಿರಳೆಗಳ ಮನೆಯಿಂದ ಹೊರಹಾಕುವುದು ಕಷ್ಟದ ಕೆಲಸವಾಗಿರಲಿದೆ. ಜಿರಳೆಗಳ ಓಡಿಸಲು ಹಲವು ರೀತಿಯ ಔಷಧಿಗಳು, ಸ್ಪ್ರೇಗಳು ಸಿಗುತ್ತವೆ. ಆದ್ರೆ ಒಂದೆರಡು ದಿನದಲ್ಲಿ ಮತ್ತೆ ಜಿರಳೆಗಳು ಕಾಣಿಸಿಕೊಳ್ಳುತ್ತವೆ.
ಆದ್ರೆ ನಾವಿಂದು ಜಿರಳೆಗಳಿಗೆ ಮನೆಯಲ್ಲಿ ಯಾವ ರೀತಿ ಮದ್ದು ಮಾಡಿಕೊಳ್ಳಬಹುದು ಎಂಬುದನ್ನು ನೋಡೋಣ. ಅದ್ರಲ್ಲೂ ಈ ರೀತಿಯಾಗಿ ಜಿರಳೆಗೆ ಔಷಧಿ ರೆಡಿ ಮಾಡಿದರೆ ಜಿರಳೆಗಳು ಇನ್ನೆಂದು ಮನೆಯಲ್ಲಿ ಸುಳಿದಾಡುವುದಿಲ್ಲ. ಹಾಗಾದ್ರೆ ಏನಿದು ಹೊಸ ಪ್ರಯೋಗ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೊದಲು ಒಂದು ಬೌಲ್‌ಗೆ 5ರಿಂದ 6 ಕರ್ಪೂರಗಳು ಹಾಗೆ 5 ಊದುಬತ್ತಿಯನ್ನು ಬಿಡಿಸಿ ಪುಡಿ ಮಾಡಿಕೊಂಡು ಬೌಲ್‌ಗೆ ಹಾಕಿಕೊಳ್ಳಿ. ನಂತರ ಈ ಎರಡು ವಸ್ತುಗಳನ್ನು ಕುಟ್ಟಿ ಸಣ್ಣದಾಗಿ ಪುಡಿ ಮಾಡಿಕೊಳ್ಳಿ. ಈಗ ಸಲ್ಪ ನೀರು ಹಾಕಿಕೊಂಡು ಚೆನ್ನಾಗಿ ಕಲಸಿಕೊಳ್ಳಿ. ನಂತರ ಈ ಎರಡು ಅಂಶಗಳು ಚೆನ್ನಾಗಿ ಮಿಕ್ಸ್ ಆಗಲು ಒಂದು ತಟ್ಟೆಯನ್ನು ಮುಚ್ಚಿ 1 ಗಂಟೆ ಬಿಡಿ.
1 ಗಂಟೆಯ ಬಳಿಕ ಇದು ಕರಗಿ ನೀರಿನಲ್ಲಿ ಚೆನ್ನಾಗಿ ಮಿಶ್ರಣ ಆಗಿರಲಿದೆ. ಬಳಿಕ ಇದನ್ನು ಒಂದು ಜರಡಿಯಲ್ಲಿ ಸೋಸಿಕೊಂಡು ಬರೀ ನೀರನ್ನು ಬೇರೆ ಮಾಡಿಕೊಳ್ಳಿ. ಈ ನೀರನ್ನು ತೆಗೆದು ಒಂದು ಗ್ಲಾಸ್‌ಗೆ ಹಾಕಿಟ್ಟುಕೊಳ್ಳಿ. ಈಗ ಹತ್ತಿಯನ್ನು ತೆಗೆದುಕೊಂಡು ಸಣ್ಣ ಸಣ್ಣ ಉಂಡೆಗಳಾಗಿ ಮಾಡಿಕೊಳ್ಳಿ. ಅನಂತರ ಸಣ್ಣ ಉಂಡೆಗಳನ್ನು ಈ ನೀರಿನಲ್ಲಿ ಅದ್ದಿಕೊಂಡು ನಂತರ ಹತ್ತಿಯನ್ನು ಜಿರಳೆಗಳು ಬರುವಂತಹ ಜಾಗದಲ್ಲಿ ಇಡಬೇಕು.
ಅದ್ರಲ್ಲೂ ಹೆಚ್ಚಾಗಿ ಗ್ಯಾಸ್ ಸಿಲಿಂಡರ್ ಬಳಿ, ಸಿಂಕ್ ಬಳಿ, ಬಾತ್ ರೂಮ್‌ನ ಮೂಲೆಗಳಲ್ಲಿ, ಫ್ರಿಡ್ಜ್ ಅಡಿಯಲ್ಲಿ, ವಾಷಿಂಗ ಮಷಿನ್ ಒಳಗೆ, ಬಾಗಿಲುಗಳ ಸಂದಿಯಲ್ಲಿ ಈ ಹತ್ತಿ ಉಂಡೆಗಳ ಇಡಬೇಕು. ಹೀಗೆ ಇಡುವುದರಿಂದ ಜಿರಳೆಗಳು ಸುವಾಸನೆ ತಡೆಯಲಾಗದೆ ಜಾಗದಿಂದ ತೆರಳುತ್ತವೆ. ಹಾಗೆ ವಾರದಲ್ಲಿ ಎಲ್ಲಾ ದಿನವೂ ಮಾಡುತ್ತಿದ್ದರೆ ಕೆಲವೇ ದಿನಗಳಲ್ಲಿ ಜಿರಳೆ ಮುಕ್ತ ಮನೆ ನೋಡಬಹುದು.
ಸ್ಪ್ರೇ ಬಾಟಲಿ ನೀವೆ ತಯಾರಿಸಿ
ಈ ಕರ್ಪೂರದ ನೀರನ್ನು ಒಂದು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿಕೊಂಡು ಮನೆಯಲ್ಲಿ ಮೂಲೆ ಮೂಲೆಯಲ್ಲಿ ಸ್ಪ್ರೇ ಮಾಡುವುದರಿಂದ ಕೂಡ ಜಿರಳೆಗಳಿಂದ ಮುಕ್ತಿ ಪಡೆಯಬಹುದು. ಹಳೆಯ ಖಾಲಿ ಬಾಟಲಿಗಳನ್ನು ತೆಗೆದುಕೊಂಡು ಸ್ಪ್ರೇ ಬಾಟಲಿಯನ್ನಾಗಿ ಮಾಡಿ ಮೂಲೆ ಮೂಲೆಯಲ್ಲಿ ಆಗಾಗ ಸ್ಪ್ರೇ ಮಾಡಿದರೂ ಜಿರಳೆಗಳು ಇನ್ಮುಂದೆ ಮನೆ ಬಳಿ ಸುಳಿಯುವುದಿಲ್ಲ. ನೀವು ಕೂಡ ಒಮ್ಮೆ ಈ ರೀತಿಯಾಗಿ ಹೊಸ ಜಿರಳೆ ಔಷಧಿ ಮನೆಯಲ್ಲೇ ಮಾಡಿ ನೋಡಿ. ಜಿರಳೆಗಳಿಂದ ಸುಲಭವಾಗಿ ಪರಿಹಾರ ಪಡೆದು ನೋಡಿ.



Click it and Unblock the Notifications