ಟೊಮೆಟೋವನ್ನು ಫ್ರಿಡ್ಜ್ ನಲ್ಲಿಟ್ಟು ತಿನ್ನೋ ಅಭ್ಯಾಸ ಇದ್ಯಾ? ಹಾಗಾದ್ರೆ ಇಂದೇ ಆ ಅಭ್ಯಾಸ ಬಿಟ್ಟು ಬಿಡಿ!

ಟೊಮೆಟೋ ಬೆಲೆ ಗಗನಕ್ಕೇರಿದೆ. ದಿನದಿಂದ ದಿನಕ್ಕೆ ಟೊಮೆಟೋ ಬೆಲೆ ಜಾಸ್ತಿಯಾಗ್ತಿರೋದ್ರಿಂದ ಟೊಮೆಟೋ ಖರೀದಿಸೋದಕ್ಕೆ ಜನ ಹಿಂದೆ ಮುಂದೆ ನೋಡ್ತಿದ್ದಾರೆ. ಈಗಂತೂ ಟೊಮೆಟೋ ತಿನ್ನಲೇ ಬೇಕು ಎನ್ನುವವರು ಬೆಲೆ ಏರಿಕೆಗೆ ಹೆದರಿ ಕೆ.ಜಿಗಟ್ಟಲೇ ಟೊಮೆಟೋವನ್ನು ಖರೀದಿಸಿ ಅದನ್ನು ಫ್ರಿಡ್ಜ್ ನಲ್ಲಿಟ್ಟು ದಿನ ನಿತ್ಯ ಬಳಸಿಕೊಳ್ಳುತ್ತಾರೆ.

ಹೆಚ್ಚಿನವರು ತರಕಾರಿಯನ್ನು ಫ್ರಿಡ್ಜ್ ನಲ್ಲಿಟ್ಟು ಉಪಯೋಗ ಮಾಡಿದ್ರೆ ಅದು ಫ್ರೆಶ್ ಆಗಿರುತ್ತೆ ಅನ್ನೋ ತಪ್ಪು ಕಲ್ಪನೆಯಲ್ಲಿರುತ್ತಾರೆ. ಆದರೆ ನಿಮಗೊತ್ತಾ ಫ್ರಿಡ್ಜ್ ನಲ್ಲಿಟ್ಟ ಆಹಾರವನ್ನು ಸೇವನೆ ಮಾಡುವುದು ತುಂಬಾನೇ ಅಪಾಯಕಾರಿ. ಅದ್ರಲ್ಲೂ ಟೊಮೆಟೋ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವನೆ ಮಾಡೋದು ತುಂಬಾನೇ ಅಪಾಯಕಾರಿ. ಅಷ್ಟಕ್ಕು ಫ್ರಿಡ್ಜ್ ನಲ್ಲಿಟ್ಟ ಟೊಮೆಟೋ ತಿನ್ನೋದ್ರಿಂದ ಏನಾಗುತ್ತೆ ಗೊತ್ತಾ? ಇದರಿಂದಾಗುವ ಅಪಾಯ ಏನು ಅನ್ನೋದನ್ನು ತಿಳಿದುಕೊಳ್ಳೋಣ.

Reasons Why You Should Not Store Tomatoes in the Fridge in Kannada

ತಾಜಾ ಟೊಮೆಟೋವನ್ನು ಮಾತ್ರ ಸೇವಿಸಿ!

ಟೊಮೆಟೋವನ್ನು ಯಾವಾಗಲೂ ತಾಜಾ ಇರುವಾಗಲೇ ಸೇವನೆ ಮಾಡಬೇಕು. ಅದನ್ನು ಫ್ರಿಡ್ಜ್ ನಲ್ಲಿಟ್ಟು ತಿಂದರೆ ಅದರ ರುಚಿ, ವಿನ್ಯಾಸ, ಬಣ್ಣ ಎಲ್ಲವೂ ಬದಲಾಗುತ್ತದೆ. ಒಂದು ಸಂಶೋಧನೆಯ ಪ್ರಕಾರ ಟೊಮೆಟೊಗಳನ್ನು ಯಾವಾಗಲೂ ಕೋಣೆಯ ಉಷ್ಣಾಂಶದಲ್ಲಿ ಸುಮಾರು 20 ಡಿಗ್ರಿ ಸೆಲ್ಸಿಯಸ್‌ನಲ್ಲಿ ಇಡಬೇಕು. ಅದನ್ನು ಘನೀಕರಿಸುವ ಉಷ್ಣಾಂಶದಲ್ಲಿ ಇಡಲೇಬಾರದು.

ಡಬ್ಬಿಯಲ್ಲಿಟ್ಟ ಟೊಮೆಟೋಗಳನ್ನು ತಿನ್ನಬೇಡಿ!

ಅನೇಕ ಜನರು ಟೊಮೆಟೊಗಳನ್ನು ಪೆಟ್ಟಿಗೆಗಳಲ್ಲಿ ಇಡುವುದನ್ನು ನೀವು ನೋಡಿರಬೇಕು. ಅಷ್ಟೇ ಅಲ್ಲ, ಅನೇಕ ಜನರು ಟೊಮೆಟೋಗಳು ಕೆಡದಿರಲು ಡಬ್ಬಿಯಲ್ಲಿ ಇಟ್ಟು ನಂತರ ಅದನ್ನು ಉಪಯೋಗಿಸುತ್ತಾರೆ. ಆದರೆ ಇದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದನ್ನು ಸೇವಿಸುವುದರಿಂದ ಅನೇಕ ಅಪಾಯಕಾರಿ ಕಾಯಿಲೆಗಳು ಬರಬಹುದು.

ಇತ್ತೀಚಿನ ದಿನಗಳಲ್ಲಿ ಜನ ಅಂಗಡಿಯಿಂದ ಒಂದು ವಾರಕ್ಕಾಗುವಷ್ಟು ತರಕಾರಿಯನ್ನು ತಂದು ಅದನ್ನು ಫ್ರಿಡ್ಜ್ ನಲ್ಲಿಟ್ಟು ಆನಂತರ ವಾರವಿಡೀ ಉಪಯೋಗಿಸುತ್ತಾರೆ. ಟೊಮೆಟೋ ಹಣ್ಣಗಳನ್ನು ಕೂಡ ಇದೇ ರೀತಿ ಬಳಕೆ ಮಾಡಲಾಗುತ್ತದೆ. ತಜ್ಞರ ಪ್ರಕಾರ ಈ ವಿಧಾನ ಸರಿಯಲ್ಲ. ಈ ರೀತಿ ಮಾಡುವುದು ತಪ್ಪು. ಇದರಿಂದ ಅನೇಕ ರೀತಿಯ ಕಾಯಿಲೆಗಳಿಗೆ ಮನುಷ್ಯ ತುತ್ತಾಗುತ್ತಾನಂತೆ.

ರೆಫ್ರಿಜರೇಟರ್ ನಲ್ಲಿ ಇಡೋದ್ರಿಂದ ಅಪಾಯನಾ?

ಟೊಮೆಟೊವನ್ನು ಫ್ರಿಡ್ಜ್ ನಲ್ಲಿ ಇಡುವುದರಿಂದ ಅವುಗಳ ರುಚಿ, ವಿನ್ಯಾಸ ಮತ್ತು ಬಣ್ಣವೂ ಬದಲಾಗುತ್ತದೆ. ನೀವು ಇದನ್ನು ಗಮನಿಸಿರಬಹುದು. ಇದು ನೈಸರ್ಗಿಕವಾಗಿ ಬದಲಾಗಿದ್ದಲ್ಲ. ಫ್ರಿಡ್ಜ್ ನ ಒಳಗಡೆ ತಂಪಾದ ವಾತಾವರಣದಲ್ಲಿರುವ ಕಾರಣ ಟೊಮೆಟೊಗಳ ವಿನ್ಯಾಸ ಮತ್ತು ರುಚಿಯ ಮೇಲೆ ಉಂಟಾಗುವ ಪ್ರತಿಕ್ರಿಯೆಯಾಗಿದೆ. ಒಂದು ಸಂಶೋಧನೆಯ ಪ್ರಕಾರ ಟೊಮೆಟೊಗಳನ್ನು ಯಾವಾಗಲೂ ಕೋಣೆಯ ಉಷ್ಣಾಂಶದಲ್ಲಿ ಅಂದರೆ ಸುಮಾರು 20 ಡಿಗ್ರಿ ಸೆಲ್ಸಿಯಸ್‌ನಲ್ಲಿ ಇಡಬೇಕು.

ಮಾಗಿದ ಟೊಮೆಟೋ ಹೆಚ್ಚು ಆರೋಗ್ಯಕರ!

ಸಂಶೋಧನೆಯ ಪ್ರಕಾರ ಟೊಮೆಟೊವನ್ನು ಅಡುಗೆ ಮಾಡೋದಕ್ಕೆ ಬಳಸೋದ್ರಿಂದ ಅದರಲ್ಲಿರುವ ಲೈಕೋಪೀನ್ ಅಂಶದ ಪ್ರಮಾಣವನ್ನು ಹೆಚ್ಚಿಸುತ್ತದೆ. ಮತ್ತು ಅದನ್ನು ನಮ್ಮ ದೇಹವು ಅದನ್ನು ಸುಲಭವಾಗಿ ಹೀರಿಕೊಳ್ಳುತ್ತದೆ. ಅಲ್ಲದೆ ಮಾಗಿದ ಟೊಮೆಟೊದಲ್ಲಿ ಆಂಟಿಆಕ್ಸಿಡೆಂಟ್‌ಗಳ ಪ್ರಮಾಣವೂ ಹೆಚ್ಚಾಗುತ್ತದೆ.

ಮಾರುಕಟ್ಟೆಯಲ್ಲಿ ದೊರೆಯುವ ಸಿದ್ಧ ಟೊಮೆಟೋ ಪ್ಯೂರಿ ಅಪಾಯಕಾರಿ!

ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿದ್ಧ ಟೊಮೆಟೋ ಪ್ಯೂರಿ ಲಭ್ಯವಾಗುತ್ತದೆ. ಹೆಚ್ಚಿನ ಜನ ಅದನ್ನೇ ಬಳಕೆ ಮಾಡುತ್ತಾರೆ. ನಿಮಗೊತ್ತಾ? ಇದು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಅಪಾಯಕಾರಿ.

ಈ ಟೊಮೆಟೋವನ್ನು ಬಹಳ ದಿನಗಳವರೆಗೆ ಸಂರಕ್ಷಿಸಲು ಆ ಡಬ್ಬದ ಒಳಗಡೆ ಬಿಸ್ಫೆನಾಲ್-ಎ (BPA) ಎನ್ನುವ ಪದರವಿರುತ್ತದೆ. ಇದರಿಂದ ಹೃದ್ರೋಗ, ಸಂತಾನೋತ್ಪತ್ತಿ ಸಮಸ್ಯೆಗಳು ಮತ್ತು ಕ್ಯಾನ್ಸರ್ ಕೂಡ ಉಂಟಾಗಬಹುದು. ಅಂತಹ ಅಪಾಯಕಾರಿ ರಾಸಾಯನಿಕ ಬಳಸಿರುತ್ತಾರೆ.

ಅಡುಗೆ ಮನೆಯೊಳಗಡೆ ಸಂಗ್ರಹಿಸಬಹುದು!

ಟೊಮೆಟೋ ಹಣ್ಣನ್ನು ಫ್ರಿಡ್ಜ್ ಅಥವಾ ಡಬ್ಬದೊಳಗಡೆ ಸಂಗ್ರಹಿಸುವ ಬದಲು ಅದನ್ನು ಅಡುಗೆ ಮನೆಯಲ್ಲಿ ತೆರೆದ ವಾತಾವರಣದಲ್ಲಿ ಇಡಬಹುದು. ಇದರಿಂದ ಹಣ್ಣು ತಾಜಾತನದಿಂದ ಕೂಡಿರುತ್ತದೆ. ಹಾಗೂ ಅಡುಗೆಗೆ ಸ್ವಾಭಾವಿಕ ರುಚಿಯನ್ನು ನೀಡುತ್ತದೆ.

ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ. ಆದಷ್ಟು ಆರೋಗ್ಯಯುತವಾದ ಆಹಾರಗಳನ್ನೇ ಸೇವಿಸಿ. ಇಲ್ಲದಿದ್ದರೆ ಪ್ರಾಣಕ್ಕೆ ಕುತ್ತು ಎದುರಾಗಬಹುದು.

English summary

Reasons Why You Should Not Store Tomatoes in the Fridge in Kannada

These are the Why You Should Not Store Tomatoes in the Fridge. Read more.
Story first published: Thursday, July 13, 2023, 18:30 [IST]
X
Desktop Bottom Promotion