Latest Updates
-
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು?
ಕರಾವಳಿಯ ಫೇಮಸ್ ಕೋರಿ ರೊಟ್ಟಿಯನ್ನು ಮೊದಲಿಗೆ ತಯಾರು ಮಾಡಿದ್ಯಾರು?
ಕೋರಿರೊಟ್ಟಿ ಕರಾವಳಿಯ ಅತ್ಯಂತ ಪ್ರಾಖ್ಯಾತ ಖಾದ್ಯಗಳಲ್ಲಿ ಒಂದಾಗಿದೆ. ಮನೆಯಲ್ಲಿ ಕೋಳಿ ಸಾರು ಮಾಡಿದ್ರಂತೂ ಕೋರಿ ರೊಟ್ಟಿ ಇರಲೇಬೇಕು. ಕೋರಿರೊಟ್ಟಿಯ ಜೊತೆಗೆ ಕರಾವಳಿ ಜನರಿಗೆ ಒಂದು ಭಾವನಾತ್ಮಕ ಸಂಬಂಧವಿದೆ. ಕರಾವಳಿಯಲ್ಲಿ ಕೋರಿರೊಟ್ಟಿ ಕೇವಲ ಒಂದು ಆಹಾರವಾಗಿ ಉಳಿದಿಲ್ಲ ಅದು ಕರಾವಳಿ ಜನರ ಭಾವನೆಯಾಗಿದೆ. ಕೋರಿರೊಟ್ಟಿಯ ಜೊತೆಗೆ ಕರಾವಳಿ ಜನತೆಗೆ ಒಂದು ಎಮೋಷನಲ್ ಕನೆಕ್ಷನ್ ಇದೆ ಅಂದ್ರೂ ತಪ್ಪಾಗೋದಿಲ್ಲ.
ತೆಳುವಾದ ರೊಟ್ಟಿಯ ಮೇಲೆ ಚಿಕ್ಕನ್ ಸಾರು ಹಾಕಿ ತಿನ್ನುತ್ತಿದ್ದರೆ ಅದರ ಮಜಾನೇ ಬೇರೆ. ಬೆಳಗ್ಗಿನ ಬ್ರೇಕ್ ಫಾಸ್ಟ್, ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೂ ಕರಾವಳಿ ಜನ ಕೋರಿ ರೊಟ್ಟಿ ತಿನ್ನುತ್ತಾರೆ. ಕರಾವಳಿಯಲ್ಲಿ ಇಷ್ಟೊಂದು ಫೇಮಸ್ ಆಗಿರೋ ಈ ಕೋರಿರೊಟ್ಟಿಯನ್ನು ಮೊದಲಿಗೆ ತಯಾರು ಮಾಡಿದ್ಯಾರು ಗೊತ್ತಾ? ಕೋರಿರೊಟ್ಟಿ ಹಿಂದಿರುವ ಇತಿಹಾಸ ಎಂತಹದ್ದು ಅನ್ನೋದನ್ನು ತಿಳಿಯೋಣ.

ಕೋರಿರೊಟ್ಟಿಯನ್ನು ತಯಾರು ಮಾಡೋದು ಹೇಗೆ?
ಕರಾವಳಿಯಲ್ಲಿ ಕೋರಿರೊಟ್ಟಿ ಎಲ್ಲರೂ ತಿನ್ನುವ ಸಾಮಾನ್ಯ ಖಾದ್ಯ ಆದರೂ ಕೂಡ ಅದನ್ನು ಮನೆಗಳಲ್ಲಿ ತಯಾರು ಮಾಡೋದಿಲ್ಲ. ಅಂಗಡಿಯಿಂದಲೇ ತಂದು ತಿನ್ನುತ್ತಾರೆ. ಯಾಕಂದ್ರೆ ಇದನ್ನು ಮಾಡುವ ವಿಧಾನ ವಿಭಿನ್ನ. ಕೋರೊರೊಟ್ಟಿಯು ಸಣ್ಣ ಕೈಗಾರಿಕೆಗೆ ಸೇರ್ಪಡೆಯಾಗಿದ್ದು, ಅವರೇ ತಯಾರು ಮಾಡಿ ಅಂಗಡಿಗಳಿಗೆ ಮಾರಾಟ ಮಾಡುತ್ತಾರೆ.
ಇದನ್ನು ತಯಾರು ಮಾಡುವ ವಿಧಾನ ಹೇಗಂತ ನೋಡೋದಾದ್ರೆ ಮೊದಲಿಗೆ ಅಕ್ಕಿಯನ್ನು ಕಡೆದು ಹಿಟ್ಟನ್ನು ತಯಾರಿಸಿಕೊಳ್ಳಿ. ಆ ನಂತರ ಕೋರಿರೊಟ್ಟಿ ತಯಾರಿಸುವ ವಿಶೇಷ ಹೆಂಚಿಗೆ ತುಂಬಾ ತೆಳುವಾಗಿ ಈ ಹಿಟ್ಟನ್ನು ಹುಯ್ಯಬೇಕು. ಕಾದ ರೊಟ್ಟಿಗೆ ಉದ್ದನೇ ಗೆರೆ ಎಳೆದು ಅದನ್ನು ಮಡಚಿ ಒಂದು ಕವರ್ ನಲ್ಲಿ ಹಾಕಬೇಕು. ಈ ರೊಟ್ಟಿಯನ್ನು ಪ್ಯಾಕ್ ಮಾಡಿ ಎಲ್ಲಾ ಕಡೆ ಮಾರಾಟ ಮಾಡಲಾಗುತ್ತದೆ.
ಈ ರೊಟ್ಟಿ ಕರಾವಳಿ ಮಾತ್ರವಲ್ಲ ದೇಶ-ವಿದೇಶಗಳಲ್ಲಿಯೂ ಲಭ್ಯವಿದೆ. ನೀವು ಮಂಗಳೂರು ಸ್ಟೋರ್ ಗೆ ಹೋದ್ರೆ ಈ ರೊಟ್ಟಿ ಲಭ್ಯವಿರುತ್ತದೆ. ಇನ್ನೂ ಈ ರೊಟ್ಟಿಯ ಜೊತೆಗೆ ತೆಳ್ಳಗೆ ಕೋಳಿ ಸಾರು ಸೇರಿಸಿ ತಿನ್ನಬೇಕು.
ಕೋರಿರೊಟ್ಟಿಯನ್ನು ಮೊದಲಿಗೆ ತಯಾರು ಮಾಡಿದ್ಯಾರು?
ಕರಾವಳಿಯ ಪ್ರಖ್ಯಾತ ಖಾದ್ಯವಾದ ಕೋರಿರೊಟ್ಟಿಯನ್ನು ಜನ ಚಪ್ಪರಿಸಿ ತಿನ್ನುತ್ತಾರೆ. ಆದರೆ ಈ ಕೋರಿರೊಟ್ಟಿಯನ್ನು ಮೊದಲಿಗೆ ತಯಾರು ಮಾಡಿದ್ಯಾರು ಅನ್ನೋದು ನಿಮಗೆ ಗೊತ್ತಿದ್ಯಾ? ಒಂದು ಇತಿಹಾಸದ ಪ್ರಕಾರ ಈ ಕೋರಿ ರೊಟ್ಟಿಯನ್ನು ಉಡುಪಿ ಪಾಕವಿಧಾನದಲ್ಲಿ ಮೊದಲು ತಯಾರು ಮಾಡಲಾಗಿತ್ತು ಅಂತ ಹೇಳಲಾಗುತ್ತದೆ.
ಇನ್ನೂ ಕೆಲವು ಇತಿಹಾಸಕಾರರ ಪ್ರಕಾರ ಇದನ್ನು ಕರ್ನಾಟಕದ ಕುಂದಾಪುರದ ಕರಾವಳಿ ಪಟ್ಟಣದಿಂದ ಪಡೆಯಲಾಗಿದೆ ಅಂತ ಹೇಳಲಾಗುತ್ತದೆ. ಈ ಬಗ್ಗೆ ಇಂದಿಗೂ ಚರ್ಚೆ ನಡೆಯುತ್ತಿದೆ. ಒಂದು ಆಹಾರ ಫೇಮಸ್ ಆದ್ರೆ ಈ ರೀತಿ ಚರ್ಚೆಗಳು ಹುಟ್ಟಿಕೊಳ್ಳೋದು ಸಹಜ ಅಲ್ವಾ? ಅದೇನೇ ಇದ್ದರೂ ಕೂಡ ಕೋರಿ ರೊಟ್ಟಿಗೆ ಸರಿಸಾಟಿಯಾದ ಆಹಾರ ಮತ್ತೊಂದಿಲ್ಲ ಅಂತಾನೇ ಹೇಳಬಹುದು.
ಅನೇಕರಿಗೆ ಬದುಕು ಕಟ್ಟಿಕೊಟ್ಟ ಉದ್ಯಮ
ಕೋರಿರೊಟ್ಟಿ ಕರಾವಳಿಯ ಬಹು ಬೇಡಿಕೆಯ ಖಾದ್ಯ ಆಗಿರೋದ್ರಿಂದ ಜೊತೆಗೆ ದೇಶ-ವಿದೇಶಗಳಲ್ಲಿಯೂ ಇದಕ್ಕೆ ಬೇಡಿಕೆ ಹೆಚ್ಚಾಗಿರೋದ್ರಿಂದ ಕರಾವಳಿಯಲ್ಲಿ ಈ ಉದ್ಯಮ ಇಂದು ದೊಡ್ಡ ಮಟ್ಟಿಗೆ ಬೆಳೆದಿದೆ ಅಂದು ತಪ್ಪಾಗೋದಿಲ್ಲ. ಸಣ್ಣ ಕೈಗಾರಿಕೆಯಲ್ಲಿ ಅಡಿಯಲ್ಲಿ ಈ ಕೋರಿರೊಟ್ಟಿಯನ್ನು ತಯಾರು ಮಾಡಲಾಗುತ್ತದೆ. ಹೀಗಾಗಿ ಅನೇಕ ಜನರ ಬದುಕಿದೆ ಒಂದು ದಾರಿಯಾಗಿದೆ ಅಂದ್ರೂ ಕೂಡ ತಪ್ಪಾಗೋದಿಲ್ಲ.
ಮನೆಯಲ್ಲಿ ರೊಟ್ಟಿ ತಯಾರಿಸಿಕೊಳ್ಳಬಹುದಾ?
ಕರಾವಳಿಯ ಹೊರಗೆ ಬಂದ್ರೆ ನಮಗೆ ಕೋರಿರೊಟ್ಟಿಯೂ ಎಲ್ಲಾ ಭಾಗಗಳಲ್ಲಿ ಲಭ್ಯ ಆಗೋದಿಲ್ಲ. ಇಂತಹ ಸಂದರ್ಭದಲ್ಲಿ ನೀವು ಮನೆಯಲ್ಲಿಯೇ ರೊಟ್ಟಿ ತಯಾರಿಸಿಕೊಳ್ಳಬಹುದು. ರೊಟ್ಟಿ ಮಾಡೋದಕ್ಕೆ ವಿಶೇಷವಾದ ಕಾವಲಿ ಲಭ್ಯವಾಗುತ್ತದೆ ಇದನ್ನು ಖರೀದಿಸಿ. ಮನೆಯಲ್ಲಿಯೇ ಅಕ್ಕಿಯನ್ನು ರುಬ್ಬಿ ತೆಳುವಾಗಿ ಹಿಟ್ಟನ್ನು ತಯಾರಿಸಿ ಹೆಚ್ಚಿನ ಮೇಲೆ ಹಾಕಿ ಚೆನ್ನಾಗಿ ಕಾಯಲು ಬಿಡಿ. ನಂತರ ಬಿಸಿ ಬಿಸಿಯಾದ ರೊಟ್ಟಿ ಸಿದ್ಧವಾಗುತ್ತದೆ. ಇದನ್ನು ಕೋಳಿ ಸಾರಿನ ಜೊತೆಗೆ ತಿನ್ನಿರಿ. ಇದು ಕೋರಿ ರೊಟ್ಟಿಯ ಹಾಗೆ ಕ್ರಿಸ್ಪಿಯಾಗಿ ಇಲ್ಲದಿದ್ದರೂ ಕೂಡ ಅದೇ ರುಚಿಯನ್ನು ಕೊಡುತ್ತದೆ.
ಕರಾವಳಿಯ ಫೇಮಸ್ ಕೋರಿರೊಟ್ಟಿಯನ್ನು ಮೊದಲು ತಯಾರು ಮಡಿದ್ಯಾರು ಅನ್ನೋ ಚರ್ಚೆ ಇಂದಿಗೂ ಇದೆ. ಆದರೆ ಇದರ ರುಚಿಗೆ ಸರಿಸಾಟಿ ಬೇರ್ಯಾವ ಖಾದ್ಯವೂ ಇಲ್ಲ. ನಿಮಗೂ ಕರಾವಳಿ ಶೈಲಿಯ ಕೋರಿ ರೊಟ್ಟಿ ಸವಿಯುವ ಆಸೆ ಇದ್ರೆ ಮಂಗಳೂರು, ಉಡುಪಿ ಹಾಗೂ ಕುಂದಾಪುರಕ್ಕೆ ಭೇಟಿ ಕೊಟ್ಟಾಗ ಕೋರಿರೊಟ್ಟಿಯನ್ನು ತಪ್ಪದೇ ಟೇಸ್ಟ್ ಮಾಡಿ.



Click it and Unblock the Notifications

