Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
Origin of Dosa: ಕರ್ನಾಟಕ vs ತಮಿಳುನಾಡು? ಮೊದಲಿಗೆ ಮಸಾಲೆ ದೋಸೆ ತಯಾರಾಗಿದ್ದು ಎಲ್ಲಿ?
ದೋಸೆ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ದಕ್ಷಿಣ ಭಾರತೀಯರೂ ನಿತ್ಯ ಸವಿಯುವ ಖಾದ್ಯಗಳಲ್ಲಿ ಇದು ಕೂಡ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ ನಮಗೆ ನೂರಾರು ವೆರೈಟಿ ದೋಸೆಗಳು ಸಿಕ್ರೂ ಕೂಡ ಎಲ್ಲರ ಹಾಟ್ ಫೆವರೇಟ್ ದೋಸೆ ಅಂದ್ರೆ ಅದು ಮಸಾಲೆ ದೋಸೆ. ಮಸಾಲಾ ಸೋಸೆಯ ಹೆಸರು ಕೇಳಿದ್ರೆ ಸಾಕು ನಮ್ಮ ಬಾಯಲ್ಲಿ ನೀರೂರುತ್ತದೆ.
ಮಸಾಲೆ ದೋಸೆ ಬರೀ ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಕೂಡ ಮಸಾಲೆ ದೋಸೆ ಅಷ್ಟೇ ಫೇಮಸ್. ವಿದೇಶಿಯರು ಭಾರತಕ್ಕೆ ಬಂದಾಗ ಹುಡುಕೊಂಡು ಹೋಗಿ ಮಸಾಲೆ ದೋಸೆ ಸವಿಯುತ್ತಾರೆ ಅಷ್ಟರ ಮಟ್ಟಿಗೆ ಮಸಾಲ ದೋಸೆ ಫೇಮಸ್ ಆಗಿದೆ. ಆದ್ರೆ ಇಂದಿಗೂ ಕೂಡ ಅನೇಕ ಜನರಿಗೆ ಮಸಾಲೆ ದೋಸೆ ಎಲ್ಲಿ ತಯಾರಾಗಿದ್ದು? ಅದನ್ನು ಯಾರು ತಯಾರು ಮಾಡಿದ್ದು ಅನ್ನೋ ಸತ್ಯ ಅನೇಕರಿಗೆ ಗೊತ್ತಿಲ್ಲ.ಅಷ್ಟಕ್ಕು ಮಸಾಲೆ ದೋಸೆ ತಯಾರಾಗಿದ್ದು ಎಲ್ಲಿ ಅನ್ನೋದನ್ನು ತಿಳಿಯೋಣ?

ಮಸಾಲೆ ದೋಸೆ ತಯಾರಾಗಿದ್ದು ಎಲ್ಲಿ?
ಯಾವುದಾದ್ರೂ ವಸ್ತು ಫೇಮಸ್ ಆದ್ರೆ ಅದು ನಮ್ಮಲ್ಲೇ ಮೊದಲಿಗೆ ತಯಾರಾಗಿದ್ದು ಅಂತ ಜನ ಹೇಳಿಕೊಳ್ಳೋದಕ್ಕೆ ಶುರು ಮಾಡ್ತಾರೆ. ಅದೇ ರೀತಿ ಮಸಾಲೆ ದೋಸೆ ಬಗ್ಗೆ ಕೂಡ ಸಾಕಷ್ಟು ವಿವಾದಗಳಿದೆ. ಇತಿಹಾಸಕಾರ ತಂಕಪ್ಪನ್ ನಾಯರ್ ಪ್ರಕಾರ ಮಸಾಲಾ ದೋಸೆಯು ಉಡುಪಿ ಹೋಟೆಲ್ ನಲ್ಲಿ ಮೊದಲಿಗೆ ತಯಾರು ಮಾಡಲಾಗಿತ್ತು ಅಂತ ಹೇಳಲಾಗುತ್ತದೆ.
ಆದರೆ ಆಹಾರ ತಜ್ಞ ಹಾಗೂ ಇತಿಹಾಸಕಾರರಾದ ಕೆ.ಟಿ ಆಚಾರ್ಯ ಅವರ ಪ್ರಕಾರ ತಮಿಳುನಾಡಿನಲ್ಲಿ ಕ್ರಿ.ಶ 1000 ನೇ ಇಸವಿಯಲ್ಲಿ ಮೊದಲಿಗೆ ದೋಸೆ ತಯಾರಾಗಿತ್ತು ಅಂತ ಹೇಳಲಾಗುತ್ತದೆ. ಸಂಗಮ ಸಾಹಿತ್ಯದಲ್ಲೇ ಈ ಬಗ್ಗೆ ವಿವರಣೆ ನೀಡಲಾಗಿತ್ತಂತೆ. ಆದ್ರೆ ತಮಿಳು ನಾಡಿನಲ್ಲಿ ಆಗ ತಯಾರಾಗಿದ್ದ ದೋಸೆ ದಪ್ಪ ಹಾಗೂ ತುಂಬಾನೇ ಸಾಫ್ಟ್ ಆಗಿತ್ತಂತೆ. ಆದ್ರೆ ಕರ್ನಾಟಕದಲ್ಲಿ ತಯಾರಾಗಿದ್ದ ಈ ಮಸಾಲಾ ದೋಸೆ ತೆಳುವಾಗಿ, ಕ್ರಿಸ್ಪಿಯಾಗಿದೆ.
ದೋಸೆ ಮಾಡುವ ವಿಧಾನ " ಮನಸೋಲ್ಲಾಸದಲ್ಲಿ ಉಲ್ಲೇಖವಾಗಿದೆ!
ಕರ್ನಾಟಕವನ್ನು ಆಳುತ್ತಿದ್ದ ಮೂರನೇ ಸೋಮೇಶ್ವರನು ಬರೆದ ಮನಸೋಲ್ಲಾಸದಲ್ಲಿ ದೋಸೆಯನ್ನು ತಯಾರಿಸೋದು ಹೇಗೆ ಅನ್ನೋದು ಉಲ್ಲೇಖವಾಗಿದೆ. ಈ ಸಂಸ್ಕೃತ ಕೃತಿಯು ಹನ್ನೆರಡನೇ ಶತಮಾನಕ್ಕೆ ಸೇರಿದ್ದಾಗಿದೆ.
ಕರ್ನಾಟಕದವರಿಂದಾನೇ ತಯಾರಾಗಿತ್ತು ಮಸಾಲೆ ದೋಸೆ!
ಪ್ರಪಂಚದ ಯಾವ ಮೂಲೆಗೆ ಹೋದ್ರು ಕೂಡ ಖಂಡಿತ ನಿಮಗೆ ಉಡುಪಿ ರೆಸ್ಟೋರೆಂಟ್ ಸಿಗದೇ ಇರೋ ಜಾಗ ಇಲ್ಲ ಅನ್ಸುತ್ತೆ. ಈ ಉಡುಪಿ ರೆಸ್ಟೋರೆಂಟ್ ನಲ್ಲಿ ನಮ್ಮ ಕರ್ನಾಟ ಹಾಗೂ ಕರಾವಳಿ ಶೈಲಿ ಸಸ್ಯಾಹಾರಿ ಖಾದ್ಯಗಳು ಲಭ್ಯವಾಗುತ್ತೆ. ಅದ್ರಲ್ಲೂ ಅಲ್ಲಿ ಸ್ಪೆಷಲ್ ಅಂದ್ರೆ ಅದು ಮಸಾಲೆ ದೋಸೆ. ಈ ಮಸಾಲೆ ದೋಸೆ ಶುರುವಾಗಿದ್ದೇ ಈ ಉಡುಪಿ ರೆಸ್ಟೋರೆಂಟ್ ನಿಂದ ಅಂದ್ರೆ ತಪ್ಪಾಗೋದಿಲ್ಲ.
ಕೃಷ್ಣರಾವ್ ಅವರಿಂದ ತಯಾರಾಗಿತ್ತು ಮಸಾಲೆ ದೋಸೆ!
ಕೃಷ್ಣ ರಾವ್ ಅವರು ಮೂಲತಃ ಉಡುಪಿಯವರು. ಈ ವ್ಯಕ್ತಿ ತಮ್ಮ ಹದಿನೈದನೇ ವಯಸ್ಸಿಗೆ ಕೆಲಸ ಅರಸಿ ಚೆನ್ನೈ ಗೆ ಹೋಗ್ತಾರೆ. ಆಗೆಲ್ಲಾ ಚೆನ್ನೈ ಅಂದ್ರೆ ಮಹಾನಗರಿ. ಚೆನ್ನೈ ಗೆ ಹೋಗಿ ನಾಲ್ಕು ಕಾಸು ಸಂಪಾದನೆ ಮಾಡ್ಬೇಕು ಅಂತ ಇಲ್ಲಿಗೆ ಬಂದಿದ್ದ ಕೃಷ್ಣರಾವ್ ಒಂದು ಹೋಟೆಲ್ ನಲ್ಲಿ ಪಾತ್ರೆ ತೊಳೆಯೋದಕ್ಕೆ ಸೇರಿಕೊಳ್ತಾರೆ.
ಹಗಲು ರಾತ್ರಿ ಎನ್ನದೇ ಆ ಹೋಟೆಲ್ ನಲ್ಲಿ ಕಷ್ಟ ಪಟ್ಟು ದುಡಿಯುತ್ತಾರೆ. ಇವರ ಕೆಲಸವನ್ನು ನೋಡಿ ಆ ಹೋಟೆಲ್ ನ ಮಾಲೀಕ ಹೋಟೆಲ್ ಅನ್ನು ಇವರಿಗೆ ವಹಿಸಿ ಕೊಡ್ತಾರೆ. ಅಲ್ಲಿಂದ ನಂತರ ಆಗಿದ್ದು ಇತಿಹಾಸ. ಕೃಷ್ಣ ರಾವ್ ಕೆಲಸ ಮಾಡುತ್ತಿದ್ದ ವುಡ್ ಲ್ಯಾಂಡ್ ಹೋಟೆಲ್ ಅನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಾರೆ.
ದೋಸೆಗೆ ಅಲೂಗಡ್ಡೆ ಹಾಕೋ ಹೊಸ ಪದ್ಧತಿ ಶುರು ಮಾಡಿದ್ರು!
ಒಂದ್ಸಾರಿ ಕೃಷ್ಣರಾವ್ ಅವರು ಉತ್ತರ ಭಾರತಕ್ಕೆ ಹೋದಾಗ ಅಲ್ಲಿನ ಪೂರಿ ಬಾಜಿಯನ್ನು ತುಂಬಾನೇ ಇಷ್ಟ ಪಟ್ಟಿದ್ರು. ಹೀಗಾಗಿ ನಮ್ಮ ದೋಸೆಗೂ ಯಾಕೆ ಅಲೂಗಡ್ಡೆ ಹಾಕಿ ಹೊಸ ವಿಧಾನದಲ್ಲಿ ಸರ್ವ್ ಮಾಡಬಾರದು ಅನ್ನೋ ಆಲೋಚನೆ ಅವರಲ್ಲಿ ಹುಟ್ಟಿಕೊಳ್ಳುತ್ತೆ.
ಅಲ್ಲಿಂದ ಚೆನ್ನೈ ಗೆ ಬಂದವರೇ ವುಡ್ ಲ್ಯಾಂಡ್ ಹೋಟೆಲ್ ನಲ್ಲಿ ಈ ವಿಶೇಷ ದೋಸೆಯನ್ನು ತಯಾರು ಮಾಡ್ತಾರೆ. ನಂತರ ಈ ವಿಶೇಷ ದೋಸೆಯು ಮಸಾಲೆ ದೋಸೆ ಎನ್ನುವ ಹೆಸರನ್ನು ಪಡೆದುಕೊಳ್ಳುತ್ತೆ. ಜನರಿಗೆ ತುಂಬಾನೇ ಇಷ್ಟವಾದ ಮಸಾಲೆ ದೋಸೆ ಇಂದು ವಿಶ್ವದಾದ್ಯಂತ ಪ್ರಖ್ಯಾತಿಯನ್ನು ಪಡ್ಕೊಂಡಿದೆ.



Click it and Unblock the Notifications

