Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ನೀವು ಬಾಯಿ ಚಪ್ಪರಿಸಿ ತಿನ್ನುವ ಬಿರಿಯಾನಿಯನ್ನು ಮೊದಲಿಗೆ ತಯಾರು ಮಾಡಿದ್ಯಾರು?
ಬಿರಿಯಾನಿ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮಾಂಸಾಹಾರಿಗಳಲ್ಲಿ ನಿಮಗಿಷ್ಟವಾದ ಆಹಾರ ಯಾವುದು ಅಂತ ಕೇಳಿದ್ರೆ ಅವರ ಬಾಯಿಂದ ಬರುವ ಮೊದಲ ಉತ್ತರವೇ ಬಿರಿಯಾನಿ ಆಗಿರುತ್ತೆ. ನಿಮಗೊತ್ತಾ ಭಾರತೀಯರು ಅತಿಯಾಗಿ ಇಷ್ಟ ಪಡುವ ಆಹಾರ ಯಾವುದು ಅಂದ್ರೆ ಅದು ಬಿರಿಯಾನಿ.
ಭಾರತದಲ್ಲಿ ನಿಮಗೆ ಹಲವಾರು ವೆರೈಟಿಗಳಲ್ಲಿ ಬಿರಿಯಾನಿ ಸಿಗುತ್ತೆ. ಆಯಾ ಊರಿನೊಂದಿಗೆ ಬಿರಿಯಾನಿಯ ಹೆಸರು ಬೆಸೆದುಕೊಂಡಿದೆ ಅಂದ್ರೆ ತಪ್ಪಾಗೋದಿಲ್ಲ. ಇದ್ರ ಜೊತೆಗೆ ಬಿರಿಯಾನಿ ಟೇಸ್ಟ್ ಕೂಡ ಒಂದು ಊರಿನಿಂದ ಮತ್ತೊಂದು ಊರಿಗೆ ಹೋದ್ರೆ ಡಿಫ್ರೆಂಟ್ ಆಗಿರುತ್ತೆ.

ಇತ್ತೀಚಿಗೆ ಆನ್ ಲೈನ್ ಆಪ್ ಗಳು ಬಂದ್ಮೇಲಂತೂ ಜನ ಸಿಕ್ಕಾಪಟ್ಟೆ ಬಿರಿಯಾನಿ ಆರ್ಡರ್ ಮಾಡಿ ತಿನ್ನೋದಕ್ಕೆ ಶುರು ಮಾಡ್ಕೊಂಡಿದ್ದಾರೆ. ಒಂದು ನಿಮಿಷಕ್ಕೆ ಬರೋಬ್ಬರಿ 115 ಬಿರಿಯಾನಿಯನ್ನು ಆರ್ಡರ್ ಮಾಡಲಾಗುತ್ತಂತೆ. ಅಂದ್ರೆ ಒಂದು ಸೆಕೆಂಡ್ ಗೆ ಇಬ್ಬರು ಬಿರಿಯಾನಿ ಆರ್ಡರ್ ಮಾಡಿದ ಹಾಗಾಯ್ತು. ಅಷ್ಟಕ್ಕು ಜನರೆಲ್ಲಾ ಬಾಯಿ ಚಪ್ಪರಿಸಿ ತಿನ್ನುವ ಬಿರಿಯಾನಿಯನ್ನು ಮೊದಲಿಗೆ ತಯಾರು ಮಾಡಿದ್ಯಾರು ಗೊತ್ತಾ? ಬಿರಿಯಾನಿ ಹುಟ್ಟಿಕೊಂಡಿರೋ ಇತಿಹಾಸದ ಬಗ್ಗೆ ತಿಳಿಯೋಣ.
ಮೊದಲಿಗೆ ಬಿರಿಯಾನಿ ತಯಾರಿಸಿದ್ಯಾರು?
ಬಿರಿಯಾನಿಗೆ ಭಾರತದ ಉಪಖಂಡದಲ್ಲಿ ಸಾವಿರಾರು ವರ್ಷಗಳ ಇತಿಹಾಸವೇ ಇದೆ. ಚಿಕನ್ ಬಿರಿಯಾನಿ ಮೊದಲಿಗೆ ಎಲ್ಲಿ ತಯಾರಾಗಿದ್ದು, ಹೇಗೆ ತಯಾರಾಗಿದ್ದು ಅನ್ನೋ ಕ್ಯೂರಿಯಾಸಿಟಿ ಹೆಚ್ಚಿನವರಿಗೆ ಇರಬಹುದು. ಚಿಕನ್ ಬಿರಿಯಾನಿ ತಯಾರಾದ ಬಗ್ಗೆ ಒಂದೊಂದು ಇತಿಹಾಸಕಾರರು ಒಂದೊಂದು ಕಥೆಯನ್ನು ಹೇಳುತ್ತಾರೆ.
ಕೆಲವು ಆಹಾರ ಇತಿಹಾಸಕಾರರು ಬಿರಿಯಾನಿಯು "ಪಿಲಾಫ್" ಎಂದು ಕರೆಯಲ್ಪಡುವ ಪರ್ಷಿಯನ್ ಖಾದ್ಯದಿಂದ ಪ್ರಭಾವಿತವಾಗಿರಬಹುದು ಎಂದು ಹೇಳುತ್ತಾರೆ. ಇದನ್ನು ಮಧ್ಯಕಾಲೀನ ಅವಧಿಯಲ್ಲಿ ಮೊಘಲರು ಪರಿಚಯಿಸಿದರಂತೆ. ಬೇಯಿಸಿದ ಅನ್ನವನ್ನು ಚಿಕನ್ ನ ವಿವಿಧ ಮಸಾಲೆಗಳ ಲೇಯರ್ ಮಾಡುವ ಮೂಲಕ ಬಿರಿಯಾನಿ ತಯಾರಿಸಲಾಗುತ್ತದೆ. ಇದನ್ನು ಮೊಘಲೈ ಪಾಕವಿಧಾನದಲ್ಲಿ ರೈತಾದೊಂದಿಗೆ ಬಡಿಸಲಾಗುತ್ತದೆ.
ಇನ್ನೊಂದು ಕಥೆಯು 16 ನೇ ಶತಮಾನದ ಆರಂಭದಿಂದ 19 ನೇ ಶತಮಾನದ ಮಧ್ಯಭಾಗದವರೆಗೆ ಭಾರತವನ್ನು ಆಳಿದ ಮೊಘಲ್ ಸಾಮ್ರಾಜ್ಯದಲ್ಲಿ ಹುಟ್ಟಿಕೊಂಡಿದೆ ಎಂದು ಹೇಳಲಾಗುತ್ತದೆ. "ಬಿರಿಯಾನಿ" ಎಂಬ ಪದವು ಪರ್ಷಿಯನ್ ಪದ "ಬಿರಿಂಜ್" ನಿಂದ ಬಂದಿದೆ. ಇದರರ್ಥ "ಅಕ್ಕಿ".
ನೂರ್ ಜಹಾನ್ ನಿಂದ ತಯಾರಿಸಲಾಗಿತ್ತಾ ಮೊದಲ ಬಿರಿಯಾನಿ!
ಕೆಲವು ಇತಿಹಾಸಕಾರರ ಪ್ರಕಾರ ಮೊಘಲ್ ಆಸ್ಥಾನಕ್ಕೆ ಬಿರಿಯಾನಿ ಎಂದು ಕರೆಯಲ್ಪಡುವ ಭಕ್ಷ್ಯವನ್ನು ಪರಿಚಯಿಸಿದ ಕೀರ್ತಿ ರಾಣಿ ನೂರ್ ಜಹಾನ್ ಅವರಿಗೆ ಸಲ್ಲುತ್ತದೆ. ಚಕ್ರವರ್ತಿ ಜಹಾಂಗೀರ್‌ನನ್ನು ಮದುವೆಯಾದಾಗ ಅವಳು ತನ್ನೊಂದಿಗೆ ಬಿರಿಯಾನಿಯ ಪಾಕ ವಿಧಾನವನ್ನು ತಂದಳು ಅಂತ ಹೇಳಲಾಗುತ್ತದೆ.
ಇದಾದ ಬಳಿಕ ಈ ಬಿರಿಯಾನಿಯೂ ಶೀಘ್ರವಾಗಿ ಜನಪ್ರಿಯವಾಯಿತಂತೆ. ಆದ್ರೆ ಬಿರಿಯಾನಿ ಎಲ್ಲಿಂದ ಬಂತು ಅನ್ನೋದಕ್ಕೆ ಸ್ಪಷ್ಟವಾದ ಪುರಾವೆಗಳು ಸಿಕ್ಕಿಲ್ಲ. ಈ ಬಗ್ಗೆ ವಾದ-ವಿವಾದಗಳು ಆಗಾಗ್ಗೆ ನಡೆಯುತ್ತಿರುತ್ತದೆ. ಬಿರಿಯನಿಯು ಭಾರತ ಮಾತ್ರವಲ್ಲದೇ ಭಾರತದ ಅಕ್ಕಪಕ್ಕದ ದೇಶಗಳಾದ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಂತಹ ದೇಶಗಳಲ್ಲೂ ಕೂಡ ಜನಪ್ರಿಯವಾಗಿದೆ.
ಭಾರತದಲ್ಲಿ ಪ್ರಖ್ಯಾತಿ ಪಡೆದಿರುವ ಬಿರಿಯಾನಿ ವಿಧಗಳ್ಯಾವುದು?
- ತಲಸ್ಸೆರಿ ಬಿರಿಯಾನಿ
- ಹೈದ್ರಾಬಾದಿ ಬಿರಿಯಾನಿ
- ಲಕ್ನೋ ಬಿರಿಯಾನಿ
- ಮೊಘಲ್ ಬಿರಿಯಾನಿ
- ಕಲ್ಕತ್ತಾ ಬಿರಿಯಾನಿ
- ದಮ್ ಬಿರಿಯಾನಿ
- ದೊನ್ನೆ ಬಿರಿಯಾನಿ
- ಸುಲ್ತಾನಿ ಬಿರಿಯಾನಿ
ಬಿರಿಯಾನಿಗೆ ಯಾವ ಅಕ್ಕಿ ಬಳಸಿದರೆ ಉತ್ತಮ?
ಬಿರಿಯಾನಿಗೆ ಯಾವ ಅಕ್ಕಿ ಬೆಸ್ಟ್ ಅಂತ ಕೇಳಿದ್ರೆ ಅದು ಬಾಸ್ಮತಿ. ಈ ಬಾಸ್ಮತಿ ಅಕ್ಕಿಯೂ ಉದ್ದವಾಗಿದ್ದು, ಅಂಟಿಕೊಳ್ಳೋದಿಲ್ಲ, ಸುವಾಸನೆ ಹಾಗೂ ಮೃದುವಾದ ವಿನ್ಯಾವನ್ನು ಹೊಂದಿದೆ. ಇದಕ್ಕಾಗಿ ಹೆಚ್ಚಿನ ಜನ ಬಾಸ್ಮತಿ ಅಕ್ಕಿಯಿಂದಲೇ ಬರಿಯಾನಿ ತಯಾರಿಸುತ್ತಾರೆ. ಬಾಸ್ಮತಿ ಕೊಂಚ ದುಬಾರಿಯಾಗೋದ್ರಿಂದ ನೀವು ನಿಮ್ಮಲ್ಲಿ ದೊರೆಯುವ ಯಾವುದಾದರೂ ಉತ್ತಮ ಅಕ್ಕಿಯನ್ನು ಬಳಸಿ ಬಿರಿಯಾನಿ ಮಾಡಬಹುದು.
ಬಿರಿಯಾನಿ ಭಾರತಕ್ಕೆ ಸೇರಿದ್ದಾ ಅಥವಾ ಪಾಕಿಸ್ತಾನಕ್ಕೆ ಸೇರಿದ್ದಾ?
ಬಿರಿಯಾನಿಯೂ ಭಾರತ ಹಾಗೂ ಪಾಕಿಸ್ತಾನಕ್ಕೆ ಸೇರಿದ ನ್ಯಾಷನಲ್ ಫೇವರೇಟ್ ಫುಡ್ ಆಗಿದೆ. ಇದನ್ನು ಮೊಘಲರ ಆಳ್ವಿಕೆ ಸಮಯದಲ್ಲಿ ಪರಿಚಯಿಸಲಾಗಿದ್ದು, ಆಗ ಭಾರತ ಹಾಗೂ ಪಾಕಿಸ್ತಾನ ಒಂದಾಗಿದ್ದು, ಸ್ವತಂತ್ರದ ನಂತರ ಎರಡು ದೇಶಗಳು ಇಬ್ಬಾಗವಾಯ್ತು. ಹೀಗಾಗಿ ಬಿರಿಯಾನಿ ಎಲ್ಲಿ ತಯಾರಾಗಿದ್ದು ಅನ್ನೋ ಚರ್ಚೆ ಇಂದಿಗೂ ಇದೆ.
ಬಿರಿಯಾನಿ ಎಲ್ಲಿ ತಯಾರಾದರೇನು? ಯಾರು ತಯಾರಿಸಿದರೇನು? ಅದರ ಟೇಸ್ಟ್ ಗೆ ಸರಿಸಾಟಿ ಮತ್ತೊಂದು ಆಹಾರವಿಲ್ಲ.



Click it and Unblock the Notifications

