Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ತೂಕ ಇಳಿಸುವ ಮಿರಾಕಲ್ ಪುಡಿ ಇದು: ಮನೆಯಲ್ಲೇ ಮಾಡಿಕೊಳ್ಳಿ, ವಾರಗಳಲ್ಲಿ ಸ್ಲಿಮ್ ಆಗಿ!
ತೂಕ ಇಳಿಸುವುದು ಅಂದ್ರೆ ದೊಡ್ಡ ತಪಸ್ಸು ಮಾಡಿದಂತೆ. ಏಕೆಂದರೆ ತೂಕ ಇಳಿಸಲು ಹಲವು ರೀತಿಯ ಕಠಿಣ ನಿಯಮಗಳ ಹಾಕಿಕೊಳ್ಳಬೇಕಾಗುತ್ತೆ. ಶಿಸ್ತಿನಿಂದ ಈ ನಿಯಮಗಳನ್ನು ನಾವು ಪಾಲಿಸಬೇಕಾಗುತ್ತದೆ. ಅದ್ರಲ್ಲೂ ಹಲವು ಕಠಿಣ ನಿಯಮಗಳ ಪಾಲಿಸಿದರೂ ಕೂಡ ತೂಕ ಇಳಿಸಲು ಮತ್ತಷ್ಟು ಸಾಹಸ ಮಾಡಬೇಕಾಗುತ್ತದೆ. ಇತ್ತೀಚಿಗೆ ಯುವ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳಲ್ಲಿ ತೂಕ ಹೆಚ್ಚಳ ಪ್ರಮುಖವಾಗಿದೆ.
ನಮ್ಮ ಜಡ ಜೀವನ ಶೈಲಿ, ಆಹಾರ ಕ್ರಮಗಳು ಸೇರಿದಂತೆ ಹಲವು ವಿದ್ಯಮಾನಗಳು ತೂಕ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಆದ್ರೆ ತೂಕ ಇಳಿಸಲು ಡಯೆಟ್, ವ್ಯಾಯಾಮ, ಜಿಮ್, ಯೋಗ, ಊಟ ತಿಂಡಿ ಬಿಡುವುದು ಸೇರಿ ದುಬಾರಿ ಚಿಕಿತ್ಸೆಗಳಿಗೂ ಒಳಗಾಗುವುದು ನೋಡಬಹುದು. ಈ ಚಿಕಿತ್ಸೆಗಳಿಂದ ಹಾಗೆ ಜಿಮ್ ಸೇರಿ ಹಲವು ಔಷಧಿಗಳು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುವುದು ಸಹ ನೋಡುತ್ತಿದ್ದೇವೆ.

ಹಾಗೆ ಕೆಲವು ಆಯುರ್ವೇದ ಚಿಕಿತ್ಸೆಯ ಮೊರೆ ಹೋದರು ತೂಕ ಇಳಿಸುವುದು ಕಷ್ಟವಾಗಬಹುದು. ಆದ್ರೆ ನಾವಿಂದು ತೂಕ ಇಳಿಸುವ ಸುಲಭದ ವಿಧಾನಗಳಲ್ಲಿ ಮನೆಯಲ್ಲೇ ಪ್ರೋಟಿನ್ ಪುಡಿ ಮಾಡಿಕೊಳ್ಳುವ ವಿಧಾನ ಕುರಿತು ತಿಳಿದುಕೊಳ್ಳೋಣ. ತೂಕ ಇಳಿಸಲು ಹಲವು ರೀತಿಯ ಮದ್ದನ್ನು ಮನೆಯಲ್ಲಿ ಮಾಡಿಕೊಳ್ಳಬಹುದು. ಹೌದು ಮನೆಯಲ್ಲಿಯೇ ಈ ರೀತಿಯ ಪ್ರೋಟಿನ್ ಪುಡಿ ಮಾಡಿಕೊಳ್ಳುವುದು ತೂಕ ಇಳಿಸಲು ಸುಲಭ ಮಾರ್ಗವಾಗಿದೆ.
ಹಾಗಾದ್ರೆ ಮನೆಯಲ್ಲಿಯೇ ಪ್ರೋಟಿನ್ ಪುಡಿಯನ್ನು ಮಾಡುವುದು ಹೇಗೆ? ಈ ಪುಡಿಯನ್ನು ಮಾಡಿಕೊಳ್ಳಲು ಯಾವೆಲ್ಲಾ ವಸ್ತುಗಳು ಬೇಕು? ಎಂಬುದನ್ನು ತಿಳಿದುಕೊಳ್ಳಿ.
ಮನೆಯಲ್ಲಿ ಪ್ರೋಟಿನ್ ಪುಡಿ ಮಾಡುವ ಸುಲಭದ ವಿಧಾನವೇನು?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 100 ಗ್ರಾಮ್ ಜೀರಿಗೆ ಹಾಕಿ ಬಿಸಿ ಮಾಡಿ ತೆಗೆದಿಡಿ. ಹಾಗೆ ಚಕ್ಕೆ 100 ಗ್ರಾಮ್, ಕಾಳು ಮೆಣಸು 50 ಗ್ರಾಮ್ ಅನ್ನು ಬೇರೆ ಬೇರೆಯಾಗಿ ಬಾಣಲೆಯಲ್ಲಿ ಹುರಿದುಕೊಂಡು ಇಟ್ಟುಕೊಳ್ಳಿ.
ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಈ ಎಲ್ಲಾ ಹುರಿದ ಪಾದರ್ಥಗಳನ್ನು ಸೇರಿಸಿಕೊಳ್ಳಿ. ಈಗ 50 ಗ್ರಾಮ್ ಶುಂಠಿ ಪುಡಿಯನ್ನು ಸಹ ಮಿಕ್ಸಿ ಜಾರ್‌ಗೆ ಹಾಕಿಕೊಂಡು ನುಣ್ಣಗೆ ರುಬ್ಬಿ ಪುಡಿ ಮಾಡಿಕೊಳ್ಳಿ. ನಂತರ ಇದನ್ನು ಸ್ಟೀಲ್ ಡಬ್ಬಿಯಲ್ಲಿ ಹಾಕಿ ಇಟ್ಟುಕೊಳ್ಳಿ. ಇಷ್ಟಾದರೆ ತೂಕ ಇಳಿಸುವ ಪುಡಿ ಸಿದ್ದವಾಗುತ್ತೆ.
ತೂಕ ಇಳಿಸುವ ರೆಸಿಪಿ
ನಂತರ ಈ ಪುಡಿಯನ್ನು ಬಳಸಿ ಒಂದು ಜ್ಯೂಸ್ ಸಿದ್ದ ಮಾಡಿಕೊಳ್ಳಿ. ಒಂದು ಗ್ಲಾಸ್ ಹಾಲಿಗೆ ಸ್ವಲ್ಪ ಪುಡಿಯನ್ನು ಬೆರೆಸಿಕೊಂಡು ಮಿಕ್ಸ್ ಮಾಡಿ ಸೇವಿಸಬಹುದು. ಇದಲ್ಲದೆ ಒಂದು ಗ್ಲಾಸ್‌ಗೆ ಸ್ವಲ್ಪ ನೀರು ಹಾಕಿಕೊಂಡು ಅದಕ್ಕೆ ಅರ್ಧ ಭಾಗ ನಿಂಬೆ ರಸ ಹಿಂಡಿ ಕಾಲು ಸ್ಪೂನ್ ಈ ಪುಡಿಯನ್ನು ಸೇರಿಸಿ ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿಯುವುದರಿಂದ ಕೂಡ ಬಹಳ ವೇಗವಾಗಿ ನೀವು ತೂಕ ಇಳಿಸಿಕೊಳ್ಳಬಹುದು. ಈ ಪುಡಿಯಲ್ಲಿನ ಅಂಶವು ದೇಹದ ಅನಗತ್ಯ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ನೀವು ಕೂಡ ತೂಕ ಇಳಿಸುವ ಬಯಕೆ ಹೊಂದಿದ್ದರೆ ಈ ರೀತಿಯ ಪುಡಿಯನ್ನು ಮನೆಯಲ್ಲೇ ಮಾಡಿ ಬಳಸಿ ನೋಡಿ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಈ ಸಮಸ್ಯೆಗೆ ಪರಿಹಾರ ಮಾಡುವ ಮುನ್ನ ತಜ್ಞರ ಸಲಹೆ ಪಡೆಯಲು ಸಲಹೆ ನೀಡಲಾಗುತ್ತದೆ)



Click it and Unblock the Notifications
