Latest Updates
-
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ? -
ಸೆಪ್ಟೆಂಬರ್ ಇಕ್ವಿನಾಕ್ಸ್: ನಿಮ್ಮ ಕ್ಯಾಮೆರಾದಲ್ಲಿ ಸೂರ್ಯೋದಯ-ಸೂರ್ಯಾಸ್ತದ ಅದ್ಭುತ ದೃಶ್ಯ ಸೆರೆಹಿಡಿಯಿರಿ!
ರಾಹು ದೋಷದಿಂದ ಪರಿಹಾರ ಪಡೆಯಲು ಇಲ್ಲಿವೆ ಸರಳ ಉಪಾಯಗಳು!
ವೈದಿಕ ಶಾಸ್ತ್ರದಲ್ಲಿ ರಾಹುವನ್ನು ಬಹಳ ಮುಖ್ಯ ಗ್ರಹವೆಂದು ಪರಿಗಣಿಸಲಾಗಿದೆ. ಇದನ್ನು ನೆರಳಿನ ಗ್ರಹ, ಅಪಾಯ, ಕೆಡುಕು ತರುವ ಗ್ರಹವೆಂದು ಕರೆಯಲಾಗುತ್ತದೆ. ರಾಹು ಯಾವ ರಾಶಿಯಲ್ಲಿ ಚಲಿಸುತ್ತಾನೆಯೋ ಅವರಿಗೆ ಸಮಸ್ಯೆಗಳು ಕಾಡುವುದು ಕಟ್ಟಿಟ್ಟ ಬುತ್ತಿ. ಅಶುಭ ತರುವಂತಹ ಗ್ರಹವು ಹಲವು ರಾಶಿಗಳ ಮೇಲೆ ನಿರ್ದಿಷ್ಟ ಸಮಯದಲ್ಲಿ ಸಮಸ್ಯೆ ಉಂಟು ಮಾಡುವುದು ನೋಡಬಹುದು.
ವ್ಯಕ್ತಿಯೊಬ್ಬರ ಜೀವನದಲ್ಲಿ ಅಥವಾ ಜಾತಕದಲ್ಲಿ ರಾಹುವಿನ ಸ್ಥಾನವು ಸರಿಯಾಗಿಲ್ಲದಿದ್ದರೆ, ವ್ಯಕ್ತಿಯು ಮಾನಸಿಕ ಒತ್ತಡ, ಕೋಪ, ಭಯ, ಆರ್ಥಿಕ ಬಿಕ್ಕಟ್ಟು ಮತ್ತು ಜೀವನದಲ್ಲಿ ಅಸ್ಥಿರತೆಯನ್ನು ಎದುರಿಸಬೇಕಾಗಬಹುದು. ಇದು ಆತನಲ್ಲಿ ಹಲವು ರೀತಿಯ ಸಮಸ್ಯೆಗಳ ತರಲು ಕಾರಣವಾಗುತ್ತದೆ. ತನ್ನ ಪ್ರಭಾವದಿಂದಾಗಿ ಹಲವರಲ್ಲಿ ರಾಹು ಅಶುಭವಾಗಿ ಕಾಡುತ್ತಿರುತ್ತದೆ.

ಆದ್ರೆ ರಾಹುವಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಕೂಡ ವೈದಿಕ ಶಾಸ್ತ್ರದಲ್ಲಿ ಹಲವು ರೀತಿಯ ಪರಿಹಾರ ಮಾರ್ಗಗಳಿವೆ. ಅದ್ರಲ್ಲೂ ನಾವಿಂದು ರಾಹುವಿನಿಂದ ಯಾವ ರೀತಿ ಸಮಸ್ಯೆಗಳಿಂದ ಪಾರಾಗಬಹುದು? ರಾಹುವಿನ ಪರಿಣಾಮವನ್ನು ಕಡಿಮೆ ಮಾಡುವುದು ಹೇಗೆ ಅನ್ನೋದನ್ನು ನಾವಿಲ್ಲಿ ತಿಳಿಯೋಣ.
ಜ್ಯೋತಿಷ್ಯದಲ್ಲಿ ರಾಹುವಿನ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಅನೇಕ ಪರಿಹಾರಗಳ ಮಾಡಬಹುದು. ರಾಹು ದೋಷವನ್ನು ಕಡಿಮೆ ಮಾಡಲು, ಒಬ್ಬರು ವೈವಾಹಿಕ ಜೀವನ ಮತ್ತು ಅತ್ತೆ-ಮಾವಂದಿರೊಂದಿಗೆ ಉತ್ತಮ ಬಾಂದವ್ಯ ಹೊಂದಿರಬೇಕು. ರಾಹು ಶಾಂತವಾಗಿರಬೇಕು ಅಂದರೆ ಯಾವಾಗಲು ಹಣೆಗೆ ತಿಲಕ ಇಡಬೇಕಂತೆ.
ಗುರುವಾರದಂದು ಹಳದಿ ಬಟ್ಟೆ, ಕಡಲೆ ಬೇಳೆ, ಅರಿಶಿನ ಅಥವಾ ಯಾವುದಾದರು ಆಹಾರವನ್ನು ನಿರ್ಗತಿಕರಿಗೆ ದಾನ ಮಾಡುವುದು ಪ್ರಯೋಜನಕಾರಿ. ನಕಾರಾತ್ಮಕ ಆಲೋಚನೆಗಳು ರಾಹುವಿನ ಪರಿಣಾಮ ಹೆಚ್ಚಿಸಲಿದೆ. ಹಾಗೆ ದುರ್ಜನರ ಸಂಘದಿಂದಲೂ ರಾಹುವಿನ ದುಷ್ಪರಿಣಾಮ ನೋಡಬಹುದು. ಹಾಗೆ ಹಸು, ಶನಿ ದೇವರ ಪೂಜೆಯಿಂದ ರಾಹುವಿನ ಪರಿಣಾಮ ಕಡಿಮೆ ಮಾಡಬಹುದು.
ರಾಹುವಿನ ದುಷ್ಪರಿಣಾಮಗಳಿಂದ ಪರಿಹಾರ ಪಡೆಯಲು ಪ್ರತಿದಿನ 108 ಬಾರಿ 'ಓಂ ಭ್ರಮ್ ಭ್ರಮ್ ಭ್ರಮ್ ಸಹ್ ರಾಹುವೇ ನಮಃ' ಎಂಬ ಮಂತ್ರವನ್ನು ಪಠಿಸುವುದು ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಶನಿವಾರ ಅಥವಾ ರಾಹುಕಾಲದ ಸಮಯದಲ್ಲಿ ರಾಹುವಿನ ಶಾಂತಿಗಾಗಿ ಪೂಜೆ ಮಾಡುವುದು ಕೂಡ ಶುಭ ಫಲಿತಾಂಶಗಳ ತರಲಿದೆ. ಹಾಗೆ ಕಾಲಭೈರವ, ಶಿವ ಮತ್ತು ದುರ್ಗಾದೇವಿಯನ್ನು ಪೂಜಿಸುವುದರಿಂದ ರಾಹು ದೋಷ ನಿವಾರಣೆಯಾಗುತ್ತದೆ.
ಯಾರು ಈ ರಾಹು?
ರಾಹು ಗ್ರಹದ ಕುರಿತು ಒಂದು ವಿಶೇಷ ಕಥೆ ಇದೆ. ಈತನಿಗೆ ದೇಹವಿಲ್ಲದಿದ್ದರೂ ಆತನ ಪ್ರಭಾವ ಏಕೆ ಕೆಟ್ಟದಾಗಿರಲಿದೆ ಎಂಬುದಕ್ಕೂ ಕಾರಣವಿದೆ. ಸಮುದ್ರ ಮಂಥನ ಕಾಲದಲ್ಲಿ ವಿಷ ಹಾಗೂ ಅಮೃತ ಸೇವಿಸುವಾಗ ದೇವತೆಗಳ ಸಾಲಿನಲ್ಲಿ ರಾಕ್ಷಸನೊಬ್ಬ ಕುರಿತಿದ್ದನಂತೆ. ಎಲ್ಲರು ಸೇವಿಸಿದಾಗ ಆತ ಕೂಡ ಅಮೃತ ಸೇವಿಸಿದನಂತೆ, ಆದರೆ ವಿಷ್ಣುವಿಗೆ ಆತ ದೇವನಲ್ಲ ರಾಕ್ಷಸ ಎಂದು ತಿಳಿದಾಗ ತನ್ನ ಸುದರ್ಶನ ಚಕ್ರದಿಂದ ಆತನ ಕತ್ತರಿಸಿದನಂತೆ. ಈ ಸಮಯದಲ್ಲಿ ತಲೆಯ ಭಾಗವು ರಾಹುವಾಗಿ, ದೇಹವು ಕೇತುವಾಗಿ ಸೃಷ್ಟಿಯಲ್ಲಿ ಸೇರಿತು ಎನ್ನಲಾಗಿದೆ. ಅಮೃತ ಸೇವಿಸಿದ್ದ ಕಾರಣ ರಾಕ್ಷಸ ಸಾವನಪ್ಪದೆ ಬದುಕುಳಿದು ನೆರಳಿನ ಗ್ರಹಗಳಾಗಿ ಬದಲಾದ ಎಂದು ಹೇಳಲಾಗಿದೆ.
ಈಗ ಪ್ರತಿಯೊಂದು ಗ್ರಹಗಳ ಚಲನೆಯೊಂದಿಗೆ ಹಾಗೆ ಕೆಲವು ರಾಶಿಗಳಲ್ಲಿ ರಾಹು ಕೇತು ಸಂಚಾರ ನೋಡಬಹುದು. ಯಾರ ರಾಶಿಯಲ್ಲಿ, ಜಾತಕದಲ್ಲಿ ರಾಹು ಹಾಗೂ ಕೇತುವಿನ ಸಂಚಾರವಿರಲಿದ್ಯೋ ಅವರಲ್ಲಿ ಹಲವು ರೀತಿಯ ಸಮಸ್ಯೆಗಳು ಎದುರಾಗುವುದು ನೋಡಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಊಹೆಗಳು ಮತ್ತು ಇಂಟರ್ನೆಟ್‌ನಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications
