Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಹಲ್ಲಿಗಳು ಶುಭವೇ ಇಲ್ಲ ಅಶುಭವೇ..? ಬಂಗಾರದ ಹಲ್ಲಿ ದೇವಾಲಯ ಎಲ್ಲಿದೆ ಗೊತ್ತಾ?
ಮನೆಯಲ್ಲಿ ಜಿರಳೆ, ಹಲ್ಲಿ ಕಂಡರೆ ಮಾರುದ್ದ ಓಡಿ ಹೋಗುತ್ತಾರೆ. ಮತ್ತೆ ಕೆಲವರು ಅದನ್ನು ಹೊಡೆದು ಹಾಕುತ್ತಾರೆ. ಜಿರಳೆಗಳು ಅನಾರೋಗ್ಯ ಹರಡುತ್ತವೆ ಎಂದು ನಾನಾ ವಿಧದ ಔಷಧಿ ಸಿಂಪಡಿಸಿ ಕೊಲ್ಲುತ್ತಾರೆ. ಇನ್ನು ಹಲ್ಲಿಗಳಿಗೂ ಹಾಗೆಯೇ ಕೆಲವರು ಹಲ್ಲಿಗಳಲ್ಲಿ ವಿಷವಿರುವ ಕಾರಣ ಅದನ್ನು ಕೊಲ್ಲುತ್ತಾರೆ ಇಲ್ಲವೆ ಮನೆಯಿಂದ ಆಚೆ ಹಾಕುತ್ತಾರೆ.
ಆದರೆ ಹಲ್ಲಿಗಳು ಎಲ್ಲಾ ಸಮಯದಲ್ಲೂ ಕೆಡುಕು ಉಂಟು ಮಾಡುವುದಿಲ್ಲವಂತೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಹಲ್ಲಿಗಳು ಎಲ್ಲಾ ಸಮಯದಲ್ಲಿ ಕಡುಕು ತರುವುದಿಲ್ಲ. ಹಲ್ಲಿಗಳು ಒಂದು ಮನೆಯ ಸಂಪತ್ತು ವೃದ್ಧಿಯ ಸಂಕೇತವಂತೆ. ಹೌದು ಕೆಲವೊಂದು ಕಡೆಗಳಲ್ಲಿ ಹೊಸ ಮನೆ ಪ್ರವೇಶದಂದು ಬೆಳ್ಳಿಯಲ್ಲಿ ತಯಾರಿಸಲಾದ ಹಲ್ಲಿಗಳನ್ನು ಉಡುಗೊರೆಯನ್ನು ನೀಡುತ್ತಾರೆ. ಏಕೆಂದರೆ ಹಲ್ಲಿಗೂ ಸಂಪತ್ತಿನ ದೇವತೆ ಲಕ್ಷ್ಮಿಗೂ ಅವಿನಾಭಾವ ಸಂಬಂಧವಿದೆ ಎಂದು ನಂಬಲಾಗಿದೆ.

ಹೌದು ಹೊಸ ಮನೆ ಪ್ರವೇದಲ್ಲಿ ಹಲ್ಲಿ ಉಡುಗೊರೆ ನೀಡುವುದು ಜಾರಿಯಲ್ಲಿದೆ. ಅಲ್ಲದೆ ತಮಿಳುನಾಡಿನ ಕಾಂಚಿಪುರಂನಲ್ಲಿ ಹಲ್ಲಿಗಾಗಿ ದೊಡ್ಡ ದೇವಾಲಯವೇ ಇದೆ. ಹಾಗಾದರೆ ನಮ್ಮ ಜ್ಯೋತಿಷ್ಯಶಾಸ್ತ್ರದಲ್ಲಿ ಹಲ್ಲಿಗಳ ಇರುವಿಕೆ ಕುರಿತು ಏನು ಹೇಳಲಾಗಿದೆ. ಹಲ್ಲಿ ಯಾವಾಗ ಶುಭ ಶಕುನವಾಗುತ್ತದೆ. ಯಾವಾಗ ಅಶುಭ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಮನೆಯ ಪೂಜಾ ಕೊಠಡಿಯಲ್ಲಿ ಹಲ್ಲಿಗಳು ಕಾಣಿಸಿಕೊಂಡರೆ ಅದು ತುಂಬಾ ಮಂಗಳಕರವಾಗಿದೆ. ಮುಂದಿನ ದಿನಗಳಲ್ಲಿ ನೀವು ಹೆಚ್ಚು ಹಣವನ್ನು ಪಡೆಯಲಿದ್ದೀರಿ ಎಂಬುದನ್ನು ಇದು ಸೂಚಿಸುತ್ತದೆ. ದೀಪಾವಳಿಯಂದು ನಿಮ್ಮ ಮನೆಯಲ್ಲಿ ಹಲ್ಲಿ ಇದ್ದರೆ ವರ್ಷವಿಡೀ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ. ಅಷ್ಟೇ ಅಲ್ಲ, ಇದು ನಿಮಗೆ ಅಪಾರ ಸಂತೋಷ ಮತ್ತು ಸಂಪತ್ತನ್ನು ತರುತ್ತದೆ ಎಂದು ಹೇಳಲಾಗಿದೆ.
ಮನೆಯಲ್ಲಿ ಒಂದೇ ಸ್ಥಳದಲ್ಲಿ 3 ಹಲ್ಲಿಗಳನ್ನು ನೋಡುವುದು ತುಂಬಾ ಅದೃಷ್ಟವಂತೆ. ಹೀಗಾಗಿ, ನಿಮಗೆ ಒಳ್ಳೆಯ ಸುದ್ದಿ ಸಿಗುತ್ತದೆ. ನೀವು ಹೊಸ ಮನೆಗೆ ಪ್ರವೇಶಿಸುವ ಸಮಯದಲ್ಲಿ ಹಲ್ಲಿಯನ್ನು ನೋಡಿದರೆ, ಅದು ತುಂಬಾ ಮಂಗಳಕರವೆಂದು ನಂಬಲಾಗಿದೆ. ಅಷ್ಟೇ ಅಲ್ಲ, ಹಲ್ಲಿಯನ್ನು ನೋಡುವುದು ಪೂರ್ವಜರ ಆಶೀರ್ವಾದ ಪಡೆದಂತೆ ಎಂದು ನಂಬಲಾಗಿದೆ. ಅಂದರೆ ಪೂರ್ವಜರ ಆಶೀರ್ವಾದ ಮತ್ತು ಅನುಗ್ರಹ ನಮಗೆ ಸಿಗುತ್ತದೆ. ಅದರೊಂದಿಗೆ ಲಕ್ಷ್ಮಿ ದೇವಿಯೂ ನಿಮ್ಮನ್ನು ಆಶೀರ್ವದಿಸಲಿದ್ದಾಳೆ ಎಂಬುದು ವಾಸ್ತುಶಾಸ್ತ್ರದ ಉಲ್ಲೇಖವಾಗಿದೆ.
ಹಲ್ಲಿಗಳು ಅಶುಭವಾಗುವುದು ಯಾವಾಗ?
ಹಲ್ಲಿಗಳು ಬೆಳಗಿನ ಜಾವದಲ್ಲಿ ಸದ್ದು ಮಾಡುತ್ತಿದ್ದರೆ ಇಲ್ಲವೆ ಕಚ್ಚಿಕೊಳ್ಳುವ ಮೂಲಕ ಘರ್ಷಣೆಯಲ್ಲಿದ್ದರೆ ಅಶುಭದ ಸಂಕೇತವಂತೆ. ಇದರಿಂದ ಮನೆಯಲ್ಲಿ ಶಾಂತಿ ಹಾಳಾಗುತ್ತದೆ ಎನ್ನಲಾಗಿದೆ. ಜೊತೆಗೆ ದೇವರ ಕೋಣೆಯಲ್ಲಿ ಹಲ್ಲಿ ಹತ್ತು ಬಿದ್ದರೆ ಅದು ಅಶುಭವಂತೆ ಈ ರೀತಿಯಾದರೆ ಹತ್ತಿರದ ಶನಿ ದೇವಾಲಯದಲ್ಲಿ ತುಪ್ಪದ ದೀಪ ಹಚ್ಚಬೇಕು ಎಂದು ಶಾಸ್ತ್ರ ಹೇಳುತ್ತದೆ.
ಇದರ ಜೊತೆಗೆ ನೀವು ಅಚಾನಕ್ ಆಗಿ ಹಲ್ಲಿಯನ್ನು ತುಳಿಯುವುದು ಮತ್ತು ನೀವು ತುಳಿದಾಗ ಅದರ ಬಾಲ ತುಂಡಾಗುವುದು ಕೆಟ್ಟ ಶಕುನವಂತೆ. ಇದು ಧನನಷ್ಟ ಮತ್ತು ಸಂಪತ್ತಿನ ಹಾನಿಯನ್ನು ಸೂಚಿಸುತ್ತದೆ ಎನ್ನಲಾಗಿದೆ. ಇದರ ಜೊತೆ ಹಲ್ಲಿ ನಿಮ್ಮ ಮನೆಯ ದ್ವಾರ ಬಾಗಿಲ ಬಳಿ ಸುತ್ತು ಬಿದ್ದರೆ ಇದು ಅಶುಭದ ಸಂಕೇತವಂತೆ.
ಹಲ್ಲಿಗಾಗಿಯೇ ಇದೆ ದೇವಾಲಯ
ಕಾಂಚಿಪುರಂನಲ್ಲಿ ಬಂಗಾರದ ಹಲ್ಲಿಯ ದೇವಾಲಯವಿದೆ. ಗೌತಮ ಮಹರ್ಷಿಯ ಇಬ್ಬರು ಶಿಷ್ಯರಿದ್ದರು, ಅವರು ನಿಯಮಿತವಾಗಿ ಪಥ್ಯವನ್ನು ಪೂಜಿಸಲು ಪಾತ್ರೆಯಲ್ಲಿ ನೀರನ್ನು ತುಂಬುತ್ತಿದ್ದರಂತೆ. ಒಂದು ದಿನ ನೀರು ತುಂಬಿದ ಪಾತ್ರೆಯಲ್ಲಿ ಹಲ್ಲಿ ಬಿದ್ದಿತು, ಅದನ್ನು ಗಮನಿಸದೆ ಶಿಷ್ಯರು ಅದನ್ನು ಮಹರ್ಷಿಗೆ ಕೊಟ್ಟರು, ಈ ವೇಳೆ ಮಹರ್ಷಿ ಕೋಪಗೊಂಡರು. ಅವರು ಹಲ್ಲಿಯಾಗುವಂತೆ ಶಾಪ ನೀಡಿದರು. ನಂತರ ಮಹರ್ಷಿಗಳು ಕಂಚಿಗೆ ಹೋಗಿ ಅಲ್ಲಿ ಹಲ್ಲಿಗಳಂತೆ ಇರಲು ಸೂಚಿಸಿದರು ಎಂಬ ಕಥೆ ಇದೆ.
ಭಕ್ತರು ಹಲ್ಲಿಯನ್ನು ಏಕೆ ಮುಟ್ಟಬೇಕು?
ವರದರಾಜ ಪೆರುಮಾಳ್ ದೇವಾಲಯ ಅಥವಾ ಹಲ್ಲಿ ದೇವಾಲಯವು ಒಂದು ಚಿನ್ನದ ಸೂರ್ಯನ ಮುಖವನ್ನು ಹೊಂದಿದೆ ಮತ್ತು ಒಂದು ದೊಡ್ಡ ಚಿನ್ನದ ಹಲ್ಲಿಯ ಕೆತ್ತನೆ ಹೊಂದಿದೆ. ಗರ್ಭಗುಡಿಯಿಂದ ಹೊರಗೆ ಹೋಗುವಾಗ ವರದರಾಜ ಸ್ವಾಮಿಯ ದರ್ಶನ ಪಡೆದ ನಂತರ ಛಾವಣಿಯ ಮೇಲೆ ಸೂರ್ಯ ಮತ್ತು ಚಂದ್ರರ ಜೊತೆಗೆ ಈ ಹಲ್ಲಿಯ ಕೆತ್ತನೆ ಇದೆ. ಇದನ್ನು ಸ್ಪರ್ಶಿಸಿದರೆ ಎಲ್ಲಾ ದೋಷ ನಿವಾರಣೆಯಾಗಲಿದೆ ಎಂದು ನಂಬಲಾಗಿದೆ.



Click it and Unblock the Notifications

