Latest Updates
-
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು
Kitchen Tips: ಅಡುಗೆಗೆ ಬಳಸುವ ವಿನೆಗರ್ ಎಷ್ಟು ಕೆಲಸ ಮಾಡುತ್ತೆ ಗೊತ್ತಾ? ಇಲ್ಲಿವೆ ಟ್ರಿಕ್ಸ್‌ಗಳು
ನಿಮ್ಮ ಅಡುಗೆ ಮನೆಯಲ್ಲಿ ಬಳಸುವ ಹಲವು ವಸ್ತುಗಳು ಕೇವಲ ಅಡುಗೆಗೆ ಮಾತ್ರ ಬಳಕೆಯಾಗೋದಿಲ್ಲ, ಕೆಲವೊಂದು ವಸ್ತುಗಳನ್ನು ನೀವು ಹಲವು ಕೆಲಸಗಳಿಗೆ ಬಳಕೆ ಮಾಡಬಹುದು. ಹಲವು ಟ್ರಿಕ್ಸ್‌ಗಳನ್ನು ನಾವು ಬಳಸಿಕೊಂಡು ಮನೆಯ ಹಲವು ಕೆಲಸಗಳ ಮಾಡಿಕೊಳ್ಳಬಹುದು. ಅದ್ರಲ್ಲೂ ನಾವಿಂದು ವಿನೆಗರ್‌ನಿಂದ ಹಲವು ರೀತಿಯ ಉಪಯೋಗಗಳ ಕುರಿತು ತಿಳಿದುಕೊಳ್ಳೋಣ.
ವಿನೆಗರ್ ಅನ್ನು ಹಲವು ರೀತಿಯ ಖಾದ್ಯ ತಯಾರಿಕೆಯ ವೇಳೆ ಬಳಸುವುದು ನೋಡಬಹುದು. ಯಾವುದೇ ಖಾದ್ಯ ತಯಾರಿಸಬೇಕಾದ್ರು ಬೇಕಾಗುವ ಪ್ರಮುಖ ವಸ್ತುಗಳಲ್ಲಿ ಈ ವಿನೆಗರ್ ಕೂಡ ಒಂದು. ವಿನೆಗರ್ ಅಡುಗೆಗೆ ಮಾತ್ರವಲ್ಲ ಹಲವು ಉಪಯೋಗಗಳಿವೆ. ಹಾಗಾದ್ರೆ ವಿನೆಗರ್‌ನಿಂದ ಯಾವೆಲ್ಲಾ ಉಪಯೋಗವಿದೆ. ಯಾವೆಲ್ಲಾ ಕೆಲಸಗಳಿಗೆ ಇದನ್ನು ಬಳಸಬಹುದು ಎಂಬುದನ್ನು ತಿಳಿದುಕೊಳ್ಳೋಣ.

ವಿನೆಗರ್ ಬಳಸಿ ಹಲವು ಗೃಹಕಾರ್ಯಗಳನ್ನು ಸುಲಭವಾಗಿ ಮಾಡಿ ಮುಗಿಸಬಹುದು. ಅದ್ರಲ್ಲೂ ಕೆಲವೊಂದು ಕೆಲಸಗಳಿಗೆ ವಿನೆಗರ್ ಇದ್ದರೆ ಆ ಕೆಲಸ ಸುಲಭವಾಗಿ ಮುಗಿಯಲಿದೆ. ಹಾಗಾದ್ರೆ ವಿನೆಗರ್ ಬಳಸಿ ಮಾಡುವಂತಹ ಇತರೆ ಕೆಲಸಗಳೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಹೂವಿನ ಗಿಡಗಳನ್ನು ರಕ್ಷಿಸಲಿದೆ ವಿನೆಗರ್
ನಿಮ್ಮ ಮನೆಯಲ್ಲಿ ಅಲಂಕಾರಕ್ಕಾಗಿ ಅಥವಾ ಟೆರೆಸ್‌ನಲ್ಲಿ, ಬಾಲ್ಕನಿಯಲ್ಲಿ, ಸಿಟೌಟ್‌ನಲ್ಲಿ ಹೂವಿನ ಗಿಡಗಳ ಬೆಳೆಸಿರಬಹುದು. ಈ ಗಿಡಗಳಿಗೆ ಕೀಟಗಳು ಕಾಡುವುದು ಸಹಜ. ನೀವು ಯಾವುದೇ ಔಷಧಿ ಬಳಸಿದರೂ ಈ ಕೀಟಗಳು ಹೋಗುತ್ತಿಲ್ಲ ಎಂದಾದರೆ ವಿನೆಗರ್ ಬಳಸಿ. ಅದ್ರಲ್ಲೂ ಹೂವಿನ ಗಿಡಗಳಲ್ಲಿ ಕಾಣುವ, ಬಳಿ ಅಥವಾ ಕಪ್ಪು ಚುಕ್ಕಿಯ ಉಂಟುಮಾಡುವ ಶಿಲೀಂದ್ರಗಳನ್ನು ತಡೆಯಲು ಈ ವಿನೆಗರ್ ಬಹಳ ಸಹಕಾರಿ. ಗಿಡಗಳ ಮೇಲೆ ವಿನೆಗರ್ ಸಿಂಪಡಿಸುವುದರಿಂದ ಕೀಟಗಳಿಂದ ಮುಕ್ತಿ ನೀಡಬಹುದು.
ಸಿಲ್ವರ್ ಪಾತ್ರೆಗಳಿಗೆ ಹೊಳಪು ನೀಡಲು
ಮನೆಯಲ್ಲಿನ ಸಿಲ್ವರ್ ಪಾತ್ರೆಗಳು ನಿತ್ಯ ಬಳಸಿ ಅವು ಕಾಂತಿ ಕಳೆದುಕೊಂಡಿರುತ್ತವೆ. ನೀವು ಎಷ್ಟೇ ಸ್ವಚ್ಛ ಮಾಡಿದ್ರು ಅವುಗಳ ಕಲೆ ಕಡಿಮೆಯಾಗುವುದಿಲ್ಲ ಆದ್ರೆ ನೀರಿನೊಂದಿಗೆ ಸ್ವಲ್ಪ ವಿನೆಗರ್ ಮಿಕ್ಸ್ ಮಾಡಿ ಪಾತ್ರೆ ತೊಳೆದು ನೋಡಿ. ನಿಮ್ಮ ಮನೆಯ ಸಿಲ್ವರ್ ಪಾತ್ರೆಗಳು ಹೊಸ ಪಾತ್ರೆಗಳಂತೆ ಮಿನುಗುತ್ತವೆ.
ಬಟ್ಟೆಗಳ ಮೃದುವಾಗಿಸಲು
ನಿಮ್ಮ ಮನೆಯಲ್ಲಿ ಗಡಸು ನೀರು ಬರುತ್ತಿದ್ದರೆ ಅದರಿಂದ ಬಟ್ಟೆಗಳ ತೊಳೆದಾಗ ಬಟ್ಟೆ ಕೂಡ ಗಡಸಾಗುತ್ತದೆ. ಹೀಗಾಗಿ ಬಟ್ಟೆ ತೊಳೆದ ಬಳಿಕ ಜಾಲಿಸುವಾಗ ಅದಕ್ಕೆ ಸ್ವಲ್ಪ ವಿನೆಗರ್ ಹಾಕಿ ನೀರಿನಲ್ಲಿ ಮಿಕ್ಸ್ ಮಾಡಿ ನಂತರ ಬಟ್ಟೆಗಳ ಅದ್ದಿ ಇಟ್ಟರೆ ಬಟ್ಟೆಗಳು ಮೃದುವಾಗುತ್ತವೆ. ಹಾಗೆ ಬಟ್ಟೆಯನ್ನು ನೆರಳಿನಲ್ಲಿ ಒಣಗಿಸಿದರೆ ಬಟ್ಟೆ ಕೋಮಲವಾಗಿರಲಿದೆ.
ಗಡಸು ನೀರನ್ನು ಮೃದು ಮಾಡಲಿದೆ
ವಿನೆಗರ್‌ನಲ್ಲಿನ ಅಂಶವು ಗಡಸು ನೀರನ್ನು ಮೃದುವಾಗಿಸಲಿದೆ. ನೀವು ವಾಷಿಂಗ್ ಮಷಿನ್‌ಗೆ ಬಟ್ಟೆಗಳು ಹಾಕಿ ವಿನೆಗರ್ ಹಾಕಿ ನೀರು ಹಾಕಿ ಬಟ್ಟೆಗಳ ತೊಳೆಯಬಹುದು. ಅಲ್ಲದೆ ಗಡಸು ನೀರಿನಿಂದ ವಾಷಿಂಗ್ ಮಷಿನ್‌ನ ಒಳಭಾಗದಲ್ಲಿ ಉಂಟಾಗುವ ಗಡಸು ವಸ್ತುವನ್ನು ವಿನೆಗರ್‌ನಿಂದ ಸ್ವಚ್ಛ ಮಾಡಬಹುದು.
ಕ್ಲೀನಿಂಗ್ ಕಿಟ್ ಆಗಿ
ವಿನೆಗರ್‌ನಲ್ಲಿನ ಅಂಶವು ಹಲವು ರೀತಿಯ ಕಲೆಗಳ ನಿವಾರಣೆ ಮಾಡಲಿದೆ ಅಡುಗೆ ಮನೆಯಲ್ಲಿನ ಹಳೆಯ ಕಲೆಗಳನ್ನು ಇದು ನಿವಾರಣೆ ಮಾಡಲಿದೆ. ಹಾಗೆ ಗ್ಲಾಸ್‌ನಿಂದ ಮಾಡಲಾದ ಹಲವು ವಸ್ತುಗಳನ್ನು ವಿನೆಗರ್ ಬಳಸಿ ಕ್ಲೀನ್ ಮಾಡಬಹುದು. ಹಾಗೆ ಇದರಿಂದ ಕಠಿಣ ಕಲೆಗಳು ಕೂಡ ನಿವಾರಣೆಯಾಗಲಿದೆ.
ಅಡುಗೆ ಮನೆ ಡ್ರೈನೇಜ್ ಕಟ್ಟಿದ್ದರೆ
ಹಲವು ಕಾರಣದಿಂದ ಅಡುಗೆ ಮನೆಯ ವಾಷ್ ಬೇಸಿನ್‌ನಲ್ಲಿ ನೀರು ನೀಧಾನವಾಗಿ ಹೋಗುವುದು, ಕಟ್ಟಿಕೊಳ್ಳುವುದು ನೋಡಬಹುದು. ಈ ಸಮಯದಲ್ಲಿ ವಿನೆಗರ್ ನಿಮ್ಮ ಸಹಾಯಕ್ಕೆ ಬರಲಿದೆ. ಮೊದಲು ಒಂದು ಪಾತ್ರೆಯಲ್ಲಿ ಕುದಿಯುವ ನೀರಿಗೆ ಅಡುಗೆ ಸೋಡಾ ಹಾಕಿಕೊಂಡು ಬಳಿಕ ಅಷ್ಟೇ ಪ್ರಮಾಣದ ವಿನೆಗರ್ ಅದಕ್ಕೆ ಹಾಕಿ ಮಿಕ್ಸ್ ಮಾಡಿ ಅದನ್ನು ಕಟ್ಟಿಕೊಂಡಿರುವ ಡ್ರೈನ್‌ಗೆ ಸುರಿಯಬೇಕು. ಇದರಿಂದ ಕಸಗಳಿದ್ದರೆ ಕರಗಿ ಹೊರಹೋಗುತ್ತದೆ.



Click it and Unblock the Notifications