Latest Updates
-
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು
ಈರುಳ್ಳಿ ಕಪ್ಪಾಗಿದ್ದರೆ ಸೇವಿಸಬಹುದೇ? ಕಪ್ಪಾಗದಂತೆ ಮನೆಯಲ್ಲಿ ಇಡುವುದು ಹೇಗೆ?
ನೀವು ಅಡುಗೆಗೆ ಈರುಳ್ಳಿ ಬಳಸುವವರಾಗಿದ್ದರೆ ಅದರ ಬೆಲೆ ಗುಣಮಟ್ಟಗಳ ಕುರಿತು ಚೆನ್ನಾಗಿಯೇ ತಿಳಿದಿರುತ್ತೀರಿ. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುವಂತಹ ಈರುಳ್ಳಿ ರೈತರ ಹೊಲದಿಂದ ನೇರವಾಗಿ ಬಂದು ನಿಮ್ಮ ಕೈ ಸೇರಿರುವುದಿಲ್ಲ. ಹಲವು ರೀತಿಯ ಸಂಸ್ಕರಣೆಯ ಬಳಿಕವಷ್ಟೇ ನಿಮ್ಮ ಬಳಿ ಬರಲಿವೆ. ಆದ್ರೆ ನೀವು ಮಾರುಕಟ್ಟೆಯಿಂದ ಖರೀದಿಸಿ ತಂದ ಈರುಳ್ಳಿ ಒಂದೆರಡು ದಿನದಲ್ಲಿ ಕಪ್ಪಾಗುವುದು ಗಮನಿಸಿದ್ದೀರಾ?
ಮನೆ ಬರುವ ಮೊದಲೇ ಈರುಳ್ಳಿಯ ಮೇಲೆ ಕಪ್ಪು ಕಪ್ಪು ಕಲೆಗಳು, ಕರಿ ಬಣ್ಣದ ಪುಡಿಯಂತಹ ಅಂಶಗಳು ಇರಬಹುದು, ಇಲ್ಲವೆ ಮನೆಗೆ ತಂದ ಬಳಿಕ ಒಂದೆರಡು ದಿನದಲ್ಲಿ ಈರುಳ್ಳಿ ಮೇಲೆ ಈ ಕಪ್ಪು ಕಲೆ ಮೂಡುವುದು ನೋಡಿರಬಹುದು. ಆದ್ರೆ ಈ ರೀತಿ ಈರುಳ್ಳಿ ನಿಮ್ಮ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಉಂಟು ಮಾಡಲಿದೆ ಎಂಬುದು ನಿಮಗೆ ಗೊತ್ತಾ?

ಈರುಳ್ಳಿ ಮೇಲೆ ಕಾಣಸಿಗುವ ಕಪ್ಪು ಕಲೆಗಳು ಶಿಲೀಂದ್ರವಾಗಿರಲಿದೆ. ಅದ್ರಲ್ಲೂ ಇದನ್ನು ಅಫ್ಲಾಟಾಕ್ಸಿನ್ ಎಂಬ ಅಂಶದಿಂದ ಕೂಡಿರುತ್ತದೆ. ಇದು ನಿಮ್ಮ ಯಕೃತ್ತಿನ ಮೇಲೆ ಹಾನಿ ಮಾಡುವಂತಹ ಮೈಕೋಟಾಕ್ಸಿನ್‌ಗಳ ಉತ್ಪಾದಿಸಲಿದೆ. ಈ ಈರುಳ್ಳಿ ಸೇವನೆ ಹೆಚ್ಚಾದರೆ ಯಕೃತ್ತಿನ ಆರೋಗ್ಯದಲ್ಲಿ ಏರುಪೇರು ಸಂಭವಿಸಲಿದೆ. ಅದ್ರಲ್ಲೂ ನೀವು ಆಲ್ಕೋಹಾಲ್ ಸೇವಿಸುವ ಮಂದಿಯಾಗಿದ್ದರೆ ಇದರಿಂದ ಲಿವರ್ ಸಮಸ್ಯೆ ಕಾಡಬಹುದಂತೆ.
ಈರುಳ್ಳಿಯ ಮೇಲೆ ಈ ಕಲೆಗಳು ಬರಲು ವಾತಾವರಣ ಕಾರಣವಾಗುತ್ತದೆ. ಬೆಜ್ಜಗಿನ ಸ್ಥಳದಲ್ಲಿ ಹಲವು ದಿನ ಶೇಖರಿಸಿಟ್ಟಾಗ ಈ ಶಿಲೀಂದ್ರ ಬೆಳವಣಿಗೆಯಾಗುತ್ತದೆ. ಈ ಸೋಂಕು ಈರುಳ್ಳಿ ಮೇಲೆ ಮಾತ್ರವೇ ನಿಮಗೆ ಕಾಣಿಸುತ್ತದೆ. ಆದ್ರೆ ಇದು ದಿನಕಳೆದಂತೆ ಈರುಳ್ಳಿಯ ಒಳಗೂ ತನ್ನ ಪ್ರಭಾವ ಉಂಟು ಮಾಡಿರಲಿದೆ. ಇದು ಈರುಳ್ಳಿ ಗುಣಮಟ್ಟವನ್ನು ನಿರ್ಧರಿಸುವ ಅಂಶವಾಗಿದೆ. ಅಂದರೆ ಕಪ್ಪು ಕಲೆಗಳಾದ ಈರುಳ್ಳಿ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುತ್ತವೆ.
ಈ ಶಿಲೀಂಧ್ರವು ಮೈಕೋಟಾಕ್ಸಿನ್‌ಗಳನ್ನು ಉತ್ಪಾದಿಸುತ್ತದೆ, ಇವು ದೇಹದಲ್ಲಿ ಸಂಗ್ರಹವಾಗುವ ವಿಷಕಾರಿ ಸಂಯುಕ್ತಗಳಾಗಿವೆ. ಇದು ಕಾಲಾಂತರದಲ್ಲಿ ಲಿವರ್ ಸಮಸ್ಯೆಗೆ ಕಾರಣವಾಗಬಹುದು. ಹೀಗಾಗಿ ಈ ಕಪ್ಪು ಕಲೆಗಳಿರುವ ಈರುಳ್ಳಿಯನ್ನು ಸೇವಿಸದೇ ಇರುವುದು ಬಹಳ ಉತ್ತಮ. ಅದ್ರಲ್ಲೂ ಈ ಶಿಲೀಂಧ್ರ ಹರಡಿರುವ ಈರುಳ್ಳಿಯನ್ನು ಮೊದಲು ಪತ್ತೆ ಮಾಡುವುದು ಮುಖ್ಯ.
ಹಾಳಾಗಿರುವ ಈರುಳ್ಳಿ ಪತ್ತೆ ಮಾಡುವುದು ಹೇಗೆ?
ಈರುಳ್ಳಿ ಹೊರ ಪದರದ ಮೇಲೆ ಕಪ್ಪು ಕಲೆಗಳಿರಲಿವೆ
ಈರುಳ್ಳಿಯ ಮೊದಲ ಹಂತದ ಸಿಪ್ಪೆಯ ಕೆಳಗೂ ಪರಿಶೀಲಿಸಿ ಖರೀದಿಸಬೇಕು
ಗಾಢ ಗೆರೆಗಳು ಬಿದ್ದಿದ್ದರೂ ಈರುಳ್ಳಿ ಸೇವನೆಗೆ ಯೋಗ್ಯವಲ್ಲ
ಮಸಿ ಹಿಡಿದಂತೆ ಅಥವಾ ಹುಳಿಯಾದ ವಾಸನೆ ಬಂದರೆ
ಬಿಳಿ ಅಥವಾ ಕಡು ನೀಲಿ ಬಣ್ಣಕ್ಕೆ ತಿರುಗಿದ ಈರುಳ್ಳಿ
ಮೃದುವಾಗಿರುವ ಅಥವಾ ತೂತಾಗಿರುವ ಈರುಳ್ಳಿ
ಮನೆಯಲ್ಲಿ ಇಟ್ಟ ಈರುಳ್ಳಿ ಕಪ್ಪಾಗದಂತೆ ತಡೆಯುವುದು ಹೇಗೆ?
ಮನೆಗೆ ಖರೀದಿಸಿ ತಂದ ಈರುಳ್ಳಿಯನ್ನ ಸರಿಯಾಗಿ ಶೇಖರಿಸಿಡಬೇಕು
ತಂಪಾದ, ಶುಷ್ಕ, ಗಾಳಿ ಇರುವ ಸ್ಥಳದಲ್ಲಿ ಈರುಳ್ಳಿಯನ್ನು ಸಂಗ್ರಹಿಸಬೇಕು.
ಪ್ಲಾಸ್ಟಿಕ್ ಕವರ್‌ಗಳಲ್ಲಿ ಈರುಳ್ಳಿಗಳನ್ನು ಇಡುವುದನ್ನು ತಪ್ಪಿಸಿ
ಆಲೂಗಡ್ಡೆಯಿಂದ ಈರುಳ್ಳಿಯನ್ನು ಬೇರ್ಪಡಿಸಿ ಇಡುವುದು ಉತ್ತಮ.
(ಹಕ್ಕು ನಿರಾಕರಣೆ: ಈ ಲೇಖನವು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಲ್ಲ. ಈ ಲೇಖನದಲ್ಲಿನ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿಯನ್ನು ಆಧರಿಸಿ ನೀಡಲಾಗಿದೆ. ಇದಕ್ಕೆ ಲೇಖಕರಾಗಲಿ, ಬೋಲ್ಡ್ ಸ್ಕೈ ಕನ್ನಡ ವೆಬ್‌ಸೈಟ್ ಆಗಲಿ ಖಾತರಿ ನೀಡುವುದಿಲ್ಲ. ಇದನ್ನು ಅನುಸರಿಸುವ ಮೊದಲು ತಜ್ಞರ ಸಲಹೆ ಪಡೆಯಲು ಶಿಫಾರಸು ಮಾಡಲಾಗಿದೆ)



Click it and Unblock the Notifications