Latest Updates
-
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಕೋಲ್ಕತ್ತಾ ದುರ್ಗಾ ಪೂಜೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಪಂಡಾಲ್ ಹಾಪಿಂಗ್ಗೆ ಇಲ್ಲಿದೆ ಸ್ಮಾರ್ಟ್ ಪ್ಲಾನ್!
ಅಡುಗೆ ಮನೆಯಿಂದ ಹಲ್ಲಿಗಳ ಓಡಿಸಲು ಈ 6 ಟ್ರಿಕ್ಸ್ ಬಳಸಿ..!
ಅಡುಗೆ ಮನೆ ಮನೆಯ ಒಮದು ಹೃದಯಭಾಗ. ಹೀಗಾಗಿ ಅಡುಗೆ ಮನೆ ಸುಂದರವಾಗಿ ಸ್ವಚ್ಛವಾಗಿಡುವುದೇ ಗೃಹಿಣಿಯರ ಕೆಲವಾಗಿರುತ್ತೆ. ಅದರಲ್ಲೂ ಅಡುಗೆ ಮನೆಗೆ ಹುಳುಗಳು, ಕೀಟಗಳು ಬಾರದಂತೆ ನೋಡಿಕೊಳ್ಳುವುದು ಹಲ್ಲಿ, ಜಿರಳೆ, ಇರುವೆ ಹೀಗೆ ಈ ಎಲ್ಲಾ ಅಪಾಯಕಾರಿ ಹುಳುಗಳನ್ನು ದೂರ ಇಡುವುದೇ ಒಂದು ಸವಾಲಿನ ಕೆಲಸವಾಗಿರುತ್ತದೆ.
ಏಕೆಂದರೆ ಯಾವಾಗಲಾದರು ಅಪ್ಪಿ ತಪ್ಪಿ ಇವು ಅಡುಗೆ ಮಾಡಿದ ಖಾದ್ಯದಲ್ಲಿ ಬಿದ್ದು ಬಿಟ್ಟರೆ ಇಡೀ ದಿನದ ಶ್ರಮ ಹಾಳಾಗುವ ಜೊತೆಗೆ ಮನೆ ಸದಸ್ಯರ ಜೀವಕ್ಕೆ ಕುತ್ತುಬರುತ್ತದೆ. ಅದರಲ್ಲು ಅಡುಗೆ ಮನೆಯಲ್ಲಿ ಹಲ್ಲಿಗಳಿದ್ದರೆ ದೊಡ್ಡ ಅಪಾಯ ಕಟ್ಟಿಟ್ಟ ಬುತ್ತಿ. ಏಕೆಂದರೆ ಮಾಡಿರುವ ಖಾದ್ಯದಲ್ಲಿ ಅಪ್ಪಿ ತಪ್ಪಿ ಬಿದ್ದರೆ ದೇವರೆ ಗತಿ.

ಹೀಗಾಗಿ ಅಡುಗೆ ಮನೆಯಲ್ಲಿರುವ ಹಲ್ಲಿಗಳನ್ನು ಓಡಿಸಲು ಹಲವು ರೀತಿಯ ಪ್ರಯತ್ನವಂತೂ ಮಾಡಿಯೇ ಮಾಡುತ್ತೇವೆ. ಆದರೆ ಅಷ್ಟು ಸುಲಭವಾಗಿ ಅವು ಅಡುಗೆ ಮನೆ ಬಿಟ್ಟು ಆಚೆ ತೆರಳುವುದಿಲ್ಲ. ಹಾಗಾದ್ರೆ ಅಡುಗೆ ಮನೆಯಲ್ಲಿರುವ ಈ ಹಲ್ಲಿಗಳನ್ನು ದೂರವಿಡಲು ಮನೆಯಲ್ಲಿ ಈ 6 ಟ್ರಿಕ್ಸ್ ಒಮ್ಮೆ ಒಳಸಿ ನೋಡಿ.
ನಿಂಬೆ ಹಣ್ಣು
ನಿಂಬೆ ಹಣ್ಣಿನ ಸಿಟ್ರಸ್ ಆಸಿಡ್ ಹಲ್ಲಿಗಳಿಗೂ ಭಯ ಹುಟ್ಟಿಸುತ್ತೆ. ತಾಜಾ ನಿಂಬೆ ಕತ್ತರಿಸಿ ಅದನ್ನು ಅಡುಗೆ ಮನೆಯಲ್ಲಿ ಇಡುವುದರಿಂದ ಹಲ್ಲಿಗಳನ್ನು ಅಡುಗೆ ಮನೆಯಿಂದ ಹೊರಹಾಕಬಹುದು. ನಿಂಬೆ ಹಣ್ಣಿನಲ್ಲಿ ಕೀಟನಾಶಕ ಅಂಶ ಇರುವುದರಿಂದ ಎಲ್ಲಾ ರೀತಿಯ ಕೀಟಗಳಿಗೂ ಇದು ಉತ್ತಮ ಮನೆ ಮದ್ದಾಗಲಿದೆ.
ಮೊಟ್ಟೆಯ ಓಡು
ನೀವು ಮನೆಯಲ್ಲಿ ಮೊಟ್ಟೆಯಿಂದ ಕರಿ, ಆಮ್ಲೆಟ್ ಮಾಡಿದ ಬಳಿಕ ಅದರ ಓಡನ್ನು ಎಸೆಯುತ್ತೀರಿ ಆದರೆ ಇನ್ನು ಮುಂದೆ ಹೀಗೆ ಮಾಡಬೇಡಿ. ಇ ಮೊಟ್ಟೆ ಓಡುಗಳನ್ನು ಹಲ್ಲಿಗಳಿರುವ ಜಾಗದಲ್ಲಿ ಅಥವಾ ಕಿಟಕಿ ಸಂದಿ, ಗೋಡೆಗೆ ತಾಕಿಸಿ ಇಟ್ಟು ನೋಡಿ. ಹಲ್ಲಿಗಳಿಗೆ ಮೊಟ್ಟೆಯ ವಾಸನೆ ಸಹಿಸಲು ಆಗುವುದಿಲ್ಲ. ಇದರಿಂದ ಅವು ಮನೆಯ ಒಳಗೆ ಬರದೆ ಹೊರಗೆ ಉಳಿಯಲಿವೆ. ಆದರೆ ಈ ಮೊಟ್ಟೆ ಚಿಪ್ಪುಗಳನ್ನು ಎರಡು ದಿನಗಳಿಗಿಂತ ಹೆಚ್ಚು ದಿನ ಇಡಬೇಡಿ. ಕೆಟ್ಟ ವಾಸನೆ ಬರುವ ಸಾಧ್ಯತೆ ಇರುತ್ತದೆ.
ಸೌತೆಕಾಯಿ
ನಾವು ಸಲಾಡ್‌ಗಾಗಿ, ಚಟ್ನಿಗಾಗಿಯೂ ತಂದಿರುವ ಈ ಸೌತೆಕಾಯಿ ಹಲ್ಲಿಗಳ ಓಡಿಸಲು ಅತ್ಯಂತ ಸರಳ ನೈಸರ್ಗಿಕ ಉಪಾಯಗಳಲ್ಲಿ ಒಂದಾಗಿದೆ. ಆದರೆ ಹಲ್ಲಿಗಳು ಈ ಸೌತೆಕಾಯಿಯ ವಾಸನೆಯನ್ನು ಎಂದಿಗೂ ಸಹಿಸುವುದಿಲ್ಲ. ಹಲ್ಲಿಗಳ ಓಡಾಡುವ ಜಾಗ, ಕಿಟಕಿ, ಬಾಗಿಲು ಹೀಗೆ ಎಲ್ಲಿ ಬೇಕಾದರೂ ತುಂಡು ಮಾಡಿದ ಸೌತೆಕಾಯಿ ಇಟ್ಟು ನೋಡಿ. ಹಲ್ಲಿಗಳು ದೂರಾಗುವ ಜೊತೆಗೆ ಇಡಿ ಅಡುಗೆ ಮನೆ ಒಂದು ರೀತಿ ಸುವಾಸನೆಯಿಂದ ಕೂಡಿರುತ್ತದೆ.
ಬೆಳ್ಳುಳ್ಳಿ ಮತ್ತು ಲವಂಗ
ಹಲ್ಲಿಗಳಿಗೆ ಯಾವುದೇ ಬಲವಾಸ ಮಸಾಲೆಯ ವಾಸನೆ ಎಂದರೆ ದೂರವೇ ಉಳಿಯುತ್ತವೆ. ಇನ್ನು ಬೆಳ್ಳುಳ್ಳಿ- ಲವಂಗದ ವಾಸನೆಯೂ ಸಹ ಹಲ್ಲಿಗಳು ಸಹಿಸುವುದಿಲ್ಲ. ಹೀಗಾಗಿ ಅಡುಗೆ ಮನೆಯ ಮೂಲೆಗಳಲ್ಲಿ ಲವಂಗ ಬೆಳ್ಳುಳ್ಳಿಯನ್ನು ಜಜ್ಜಿ ಇಡುವುದರಿಂದ ಹಲ್ಲಿಗಳನ್ನು ದೂರ ಇಡಬಹುದು.
ಕಾಫಿ ಪೌಡರ್
ನೀವು ಕಾಫಿ ಕುಡಿಯುವುದರಿಂದಲೇ ನಿಮ್ಮ ದಿನವನ್ನು ಆರಂಭಿಸುತ್ತಿರಬಹುದು. ಆದರೆ ಕಾಫಿ ಕಾಯಿಸಿದ ಬಳಿಕ ಉಳಿಯುವ ಪುಡಿಯಿಂದ ಹಲ್ಲಿಗಳನ್ನು ದೂರ ಇಡಬಹುದು. ಇದಕ್ಕೆ ಸ್ವಲ್ಪ ತಂಬಾಕು ಬೆರೆಸಿ ಅದನ್ನು ಗೋಡೆಗಳ ಪಕ್ಕದಲ್ಲಿ, ಅಡುಗೆ ಮನೆಯಲ್ಲಿ ಈ ಪುಡಿಯನ್ನು ಹಾಕಿ ಇಡುವುದರಿಂದ ಹಲ್ಲಿಗಳು ದೂರ ಸರಿಯುತ್ತವೆ.
ಅಡುಗೆ ಮನೆ ಸ್ವಚ್ಛವಾಗಿಡಿ
ಅಡುಗೆ ಮನೆಯಲ್ಲಿ ಅಳಿದು ಉಳಿದ ಆಹಾರ ಪದಾರ್ಥಗಳು, ತೆರೆದು ಇಟ್ಟ ಪಾತ್ರೆಗಳಿಂದ ಕೀಟಗಳು ಹುಟ್ಟಿಕೊಳ್ಳುತ್ತವೆ. ಅಡುಗೆ ಮನೆಯಲ್ಲಿ ಕೀಟಗಳು ಹೆಚ್ಚಾದರೆ ಅವುಗಳನ್ನು ತಿನ್ನಲೆಂದೇ ಹಲ್ಲಿಗಳು ಬರುತ್ತವೆ. ಹೀಗಾಗಿ ಅಡುಗೆ ಮನೆ ಎಷ್ಉ ಸ್ವಚ್ಛವಾಗಿರುತ್ತದೆಯೋ ಅಷ್ಟು ಕೀಟಗಳನ್ನು ದೂರವಿಡುತ್ತದೆ.



Click it and Unblock the Notifications
