Latest Updates
-
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್
ಚಿಕನ್ ಖರೀದಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ, ರುಚಿ ಮಾತ್ರವಲ್ಲ ಆರೋಗ್ಯವೂ ಉಳಿಯುತ್ತದೆ
ಹೆಚ್ಚಿನ ನಾನ್ ವೆಜ್ ಪ್ರಿಯರ ಫೇವರೆಟ್ ಅಂದ್ರೆ ಚಿಕನ್. ಕೆಲವರಂತೂ ಊಟ ಇಲ್ಲದೇ ಬೇಕಾದ್ರು ಇದ್ದುಬಿಡುತ್ತಾರೆ ಆದರೆ, ವಾರಕ್ಕೊಮ್ಮೆಯಾದರೂ ಚಿಕನ್ ತಿನ್ನದೇ ಇದ್ದರೆ, ಸಮಾಧಾನ ಆಗುವುದೇ ಇಲ್ಲ. ಅಷ್ಟು ಇಷ್ಟ ಚಿಕನ್ ಅಂದ್ರೆ. ಆದರೆ ಇಂತಹ ಚಿಕನ್ ಖರೀದಿಸುವಾಗ ಅದರ ಗುಣಮಟ್ಟ ಹಾಗೂ ತಾಜಾತನವನ್ನು ಗುರುತಿಸುವುದು ತುಂಬಾ ಮುಖ್ಯ. ಇದು ರುಚಿಯಷ್ಟೇ ಅಲ್ಲ, ಆರೋಗ್ಯವನ್ನೂ ಸರಿಯಾಗಿಡಲು ಸಹಾಯ ಮಾಡುತ್ತದೆ.
ಚಿಕನ್ ಬಿರಿಯಾನಿ ಅಥವಾ ಚಿಕನ್ ಕರಿ ಆಗಿರಲಿ, ತಾಜಾ ಚಿಕನ್ ನ್ನು ಬಳಸದಿದ್ದರೆ, ಅದರ ರುಚಿ ಕೆಡಿಸುವುದರ ಜೊತೆಗೆ, ನಿಮ್ಮ ಆರೋಗ್ಯವನ್ನು ಹಾಳು ಮಾಡುವ ಅಪಾಯವಿದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ರುಚಿ ಮತ್ತು ಆರೋಗ್ಯ ಎರಡನ್ನೂ ಗಮನದಲ್ಲಿಟ್ಟುಕೊಂಡು, ಮಾರುಕಟ್ಟೆಯಿಂದ ಕೋಳಿ ಖರೀದಿಸುವಾಗ ಯಾವ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ನಾವು ನಿಮಗೆ ಹೇಳುತ್ತೇವೆ.
ಚಿಕನ್ ಖರೀದಿಸುವಾಗ ಅದರ ತಾಜಾತನದ ಕುರಿತು ಗಮನಿಸಬೇಕಾದ ಅಂಶಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ವಾಸನೆಯನ್ನು ಪರಿಶೀಲಿಸಿ:
ಚಿಕನ್ ಖರೀದಿಸುವಾಗ, ಖಂಡಿತವಾಗಿಯೂ ಅದರ ವಾಸನೆಗೆ ಗಮನ ಕೊಡಿ. ಚಿಕನ್ ನ್ನು ಅರ್ಧ ಗಂಟೆಯ ಮೊದಲು ಕತ್ತರಿಸಿ ಇಟ್ಟಿದ್ದರೆ, ಅದು ಕೆಟ್ಟ ವಾಸನೆಯನ್ನು ಬೀರುವುದಿಲ್ಲ. ಆದರೆ ಅದಕ್ಕಿಂತ ಹೆಚ್ಚು ಸಮಯ ಆಗಿದ್ದರೆ, ಮಾಂಸದಿಂದ ಕೆಟ್ಟ ವಾಸನೆ ಬರಲಿ ಶುರುವಾಗುವುದು. ಆದ್ದರಿಂದ ಚಿಕನ್ ಖರೀದಿಸುವಾಗ ಆದಷ್ಟು ನಿಮ್ಮ ಎದುರೇ ಕತ್ತರಿಸಿದ್ದನ್ನು ತೆಗೆದುಕೊಳ್ಳಲು ಪ್ರಯತ್ನಿಸಿ. ಒಂದು ವೇಳೆ ಅದು ಸಾಧ್ಯಾಗದಿದ್ದರೆ, ಅದರ ವಾಸನೆಯನ್ನು ಒಮ್ಮೆ ಪರಿಶೀಲಿಸಿ.

ಫ್ರಿಜ್ ನಲ್ಲಿ ಇಟ್ಟಿರುವ ಚಿಕನ್ ಬೇಡ:
ಕೆಲವೊಮ್ಮೆ ಅಂಗಡಿಯವರು ಫ್ರಿಜ್ ನಲ್ಲಿ ಇಟ್ಟಿರುವ ಚಿಕನ್ ಕೊಟ್ಟು ಬಿಡುವುದುಂಟು. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ, ಏಕೆಂದರೆ ಇದು ವಿವಿಧ ರೋಗಗಳಿಗೆ ಆಹ್ವಾನ ನೀಡಬಹುದು. ಯಾರಿಗೆ ಗೊತ್ತು, ಆ ಚಿಕನ್ ನ್ನ ಯಾವಾಗ ಕತ್ತರಿಸಿ ಇಟ್ಟಿದ್ದಾರೆಂದು. ಅದು ನಾಲ್ಕೈದು ದಿನ ಹಳೆಯದು ಆಗಿರಬಹುದು. ಆದ್ದರಿಂದ ಫ್ರಿಜ್ ನಲ್ಲಿಟ್ಟ ಚಿಕನ್ ಖರೀದಿಸಬೇಡಿ, ಅಷ್ಟೇ ಅಲ್ಲ, ಖರೀದಿಸಿದ ಮೇಲೂ ಅದನ್ನು ಮನೆಯಲ್ಲಿ ನಾಲ್ಕೈದು ದಿನಗಳ ಕಾಲ ಫ್ರಿಜ್ ನಲ್ಲಿ ಇಟ್ಟು ತಿನ್ನಬೇಡಿ. ಎರಡೂ ಆರೋಗ್ಯಕ್ಕೆ ಹಾನಿಕಾರವೇ.

ಚಿಕನ್ ನ ಬಣ್ಣ:
ತಾಜಾ ಕೋಳಿ ಯಾವಾಗಲೂ ಗುಲಾಬಿ ಬಣ್ಣದಲ್ಲಿರುತ್ತದೆ. ಕೋಳಿಯ ಒಳಭಾಗವು ಗುಲಾಬಿ ಬಣ್ಣದಲ್ಲಿ ಇರದಿದ್ದರೆ, ಆ ಕೋಳಿ ತಾಜಾವಾಗಿಲ್ಲ ಎಂದು ನೀವು ಅರ್ಥಮಾಡಿಕೊಳ್ಳಬಹುದು. ಅದಕ್ಕದೇ ಕೆಲವೊಮ್ಮೆ ಫ್ರಿಜ್ ನಲ್ಲಿ ಇಟ್ಟ ಕೋಳಿ ನಿಧಾನಕ್ಕೆ ಕಂದು ಬಣ್ಣಕ್ಕೆ ತಿರುಗಿರುತ್ತದೆ ಅದನ್ನು ಎಂದಿಗೂ ಖರೀದಿಸಬೇಡಿ, ಏಕೆಂದರೆ ಅದು ಹಾಳಾಗುವ ಹಂತ ತಲುಪಿದೆ ಎನ್ನುವುದರ ಸೂಚನೆಯಾಗಿದೆ. ಇದಲ್ಲದೆ, ರಕ್ತವು ಯಾವಾಗಲೂ ತಾಜಾ ಕೋಳಿಯಲ್ಲಿ ಕಂಡುಬರುತ್ತದೆ. ರಕ್ತವಿಲ್ಲದಿದ್ದರೆ ಅದು ಫ್ರೆಶ್ ಚಿಕನ್ ಅಲ್ಲ ಎಂದರ್ಥ.

ಪ್ಯಾಕೆಟ್ ಮಾಡಿದ ಚಿಕನ್ :
ಪ್ಯಾಕೆಟೆಡ್ ಚಿಕನ್ ಖರೀದಿಸುವಾಗ, ಅದರ ಮೇಲೆ ಬರೆಯಲಾದ ಮುಕ್ತಾಯ ದಿನಾಂಕವನ್ನು ಖಂಡಿತವಾಗಿ ಪರಿಶೀಲಿಸಿ. ಇದರ ನಂತರ, ಪ್ಯಾಕೆಟ್ ತೆರೆಯಿರಿ ಮತ್ತು ಅದರ ವಾಸನೆಯನ್ನು ಪರಿಶೀಲಿಸಿ. ಏಕೆಂದರೆ ಅನೇಕ ಬಾರಿ ಅಂಗಡಿಯವರು ಮುಕ್ತಾಯ ದಿನಾಂಕವನ್ನು ಅಳಿಸಿಹಾಕುತ್ತಾರೆ ಮತ್ತು ಹೊಸ ಅವಧಿ ಮುಗಿಯುವ ದಿನಾಂಕವನ್ನು ಮತ್ತೆ ಬರೆಯುತ್ತಾರೆ ಮತ್ತು ಜನರು ಅದನ್ನು ಸರಿಯಾಗಿ ಪರಿಗಣಿಸಿ ಖರೀದಿಸುತ್ತಾರೆ. ಆದ್ದರಿಂದ ದಿನಾಂಕ ಖರೀದಿಸಿದ ನಂತರವೂ ಅದರ ವಾಸನೆ, ಬಣ್ಣವನ್ನು ನೋಡುವುದು ಒಳ್ಳೆಯದು.

ಬೆರಕೆಯನ್ನು ತಡೆಯಲು ಅಲ್ಲೆ ನಿಂತು ಮಾಡಿಸುವುದು ಉತ್ತಮ:
ಹೆಚ್ಚಾಗಿ ನಾವು ಚಿಕನ್ ಅಂಗಡಿಗೆ ಹೋಗಿ, ಚಿಕನ್ ಹೇಳಿ ಈಗ ಬರುತ್ತೇವೆಂದು ಹೇಳಿ ಬೇರೆಡೆಗೆ ಹೋಗಿ ಬರುವುದುಂಟು. ಆ ಕಾಯುವ ಸಮಯವನ್ನು ಬೇರೆ ಕೆಲಸ ಮಾಡಲು ಬಳಸಹುದು ಎಂಬುದು ಇದರ ಹಿಂದಿನ ಉದ್ದೇಶವಾದರೂ, ನೀವು ಮಾಡುವ ಈ ತಪ್ಪು ಕೆಲವೊಮ್ಮೆ ಅಂಗಡಿಯವರಿಗೆ ಲಾಭವಾಗಬಹುದು. ನೀವಿಲ್ಲದ ಸಮಯದಲ್ಲಿ ತೂಕ ಕಡಿಮೆ ಮಾಡಬಹುದು ಅಥವಾ ಉಳಿದ ಅಥವಾ ಫ್ರಿಜ್ನಲ್ಲಿ ಇಟ್ಟ ಮಾಂಸವನ್ನು ಮಿಕ್ಸ್ ಮಾಡಬಹುದು. ಇದು ಎಲ್ಲಾ ಅಂಗಡಿಯವರು ಮಾಡುತ್ತಾರೆಂದು ಹೇಳುವುದಿಲ್ಲ, ಕೆಲವರಂತೂ ಮಾಡೇ ಮಾಡುತ್ತಾರೆ.



Click it and Unblock the Notifications