Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಅಡುಗೆ ಮಾಡುವುದು ಕಷ್ಟ ಎನ್ನುವವರಿಗಾಗಿ ಈ ಕಿಚನ್ ಉಪಕರಣಗಳು
ಕೆಲವರಿಗೆ ತಿನ್ನೋದ್ರಂತೆ ಇಷ್ಟ, ಆದ್ರೆ ಅಡುಗೆ ಮಾಡೋದ್ರಂತೆ ಕಷ್ಟ. ಅದಕ್ಕೆ ಕಾರಣಗಳು ಹಲವಾರು ಇರಬಹುದು, ಸೋಮಾರಿತನ, ಸಮಯ ಇಲ್ಲದೇ ಇರುವುದು ಹೀಗೆ.. ಆದರೆ ವಿಧಿಯಿಲ್ಲದೇ, ಇಷ್ಟವಿಲ್ಲದೇ ಕಷ್ಟಪಟ್ಟು ಅಡುಗೆ ಮಾಡುತ್ತೀರಿ. ಅದು ಏನೇ ಇರಲಿ, ನಿಮ್ಮ ಅಡುಗೆ ಪ್ರಕ್ರಿಯೆಯನ್ನು ತುಂಬಾ ಸುಲಭ ಮತ್ತು ವೇಗವಾಗಿ ಮಾಡಲು ಐದು ಉಪಕರಣಗಳ ಈ ಪಟ್ಟಿಯನ್ನು ಇಲ್ಲಿ ನೀಡಿದ್ದೇವೆ. ಇವುಗಳನ್ನು ನಿಮ್ಮ ಅಡುಗೆಮನೆಗಳಲ್ಲಿ ಇಟ್ಟರೆ ಅಡುಗೆ ಮತ್ತಷ್ಟು ಸುಲಭವಾಗುವುದು.
ಅಡುಗೆ ಪ್ರಕ್ರಿಯೆಯನ್ನು ತುಂಬಾ ಸುಲಭ ಮತ್ತು ವೇಗವಾಗಿ ಮಾಡುವ ಉಪಕರಣಗಳ ಬಗ್ಗೆ ಈ ಕೆಳಗೆ ನೀಡಿಲಾಗಿದೆ:

1. ಏರ್ ಫ್ರೈಯರ್:
ಹುರಿದ ಆಹಾರಗಳ ಅತೀ ಕಠಿಣ ಕೆಲಸವೆಂದರೆ ಅವುಗಳನ್ನು ಎಣ್ಣೆಯಲ್ಲಿ ಕರಿಯುವ ಪ್ರಕ್ರಿಯೆ. ಇದು ಹೆಚ್ಚು ಸಮಯ ತೆಗೆದುಕೊಳ್ಳುವುದರ ಜೊತೆಗೆ ಭಯಾನಕವೂ ಹೌದು. ಏರ್ ಫ್ರೈಯರ್ನೊಂದಿಗೆ, ನೀವು ಈ ಎಲ್ಲಾ ಕಷ್ಟಗಳನ್ನ ಬಿಟ್ಟುಬಿಡಬಹುದು ಮತ್ತು ನಿಮ್ಮ ನೆಚ್ಚಿನ ಕರಿದ ಭಕ್ಷ್ಯಗಳನ್ನು ಆನಂದಿಸಬಹುದು. ಡೀಪ್ ಫ್ರೈಯರ್‌ಗಿಂತ ಕಡಿಮೆ ಪ್ರಮಾಣದ ಎಣ್ಣೆಯನ್ನು ಅದು ಬಳಸುತ್ತದೆ ಆದ್ದರಿಂದ ಆಹಾರ ಹೆಚ್ಚು ಆರೋಗ್ಯಕರವಾಗಿರುತ್ತದೆ. ಫ್ರೆಂಚ್ ಫ್ರೈಗಳಿಂದ ಹಿಡಿದು ಹೆಚ್ಚಿನವುಗಳಿಗೆ ಈ ಉಪಕರಣವನ್ನು ಬಳಸಿಕೊಂಡು ಏನು ಬೇಕಾದರೂ ಹುರಿಯಬಹುದು.

2. ಹ್ಯಾಂಡ್ ಪವರ್ಡ್ ಚಾಪರ್:
ಅಡುಗೆ ತುಂಬಾ ಮೋಜಿನ ಸಂಗತಿಯಾಗಿದೆ, ಆದರೆ ನಿಮ್ಮ ನೆಚ್ಚಿನ ಪಾಕವಿಧಾನವನ್ನು ತಯಾರಿಸಲು ಪ್ರಾರಂಭಿಸುವ ಮೊದಲು ತರಕಾರಿಗಳನ್ನು ಕತ್ತರಿಸುವುದು ತುಂಬಾ ತಲೆನೋವಿನ ಸಂಗತಿಯಾಗಿರಬಹುದು. ಅಂತಹವರಿಗೆ ಈ ಸಾಧನ. ಇದನ್ನು ಬಳಸಿ ಆರಾಮವಾಗಿ ತರಕಾರಿಗಳನ್ನು ಕಟ್ ಮಾಡಬಹುದು. ಅವಶ್ಯಕತೆಗಳಿಗನುಗುಣವಾಗಿ ಅದರ ಬ್ಲೇಡ್ ಬದಲಾಯಿಸಿ, ಸುಲಭವಾಗಿ ತರಕಾರಿ ಕತ್ತರಿಸಿ. ಇದರಿಂದ ಕೈಬೆರಳುಗಳಿಗೆ ಯಾವುದೇ ಅಪಾಯವಿಲ್ಲ.

3. ಡಿವೈಡೆಡ್ ಸ್ಕಿಲ್ಲೆಟ್ (ವಿಭಜಿತ ಬಾಣಲೆ):
ನೀವು ಮಾಡಹೊರಟಿರುವ ಆಹಾರಕ್ಕೆ ಬಹು ಪದಾರ್ಥಗಳನ್ನು ಬೇಯಿಸುವ ಅಗತ್ಯವಿದೆಯೇ? ಹಾಗಿದ್ದಲ್ಲಿ, ವಿಭಜಿತ ಬಾಣಲೆಯಲ್ಲಿ (ಡಿವೈಡೆಡ್ ಸ್ಕಿಲ್ಲೆಟ್) ಹೂಡಿಕೆ ಮಾಡುವುದು ಸರಿಯಾದ ಮಾರ್ಗವಾಗಿದೆ. ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ; ಇದು ನಿಮ್ಮ ಗ್ಯಾಸ್ ಉಳಿಸುವುದರ ಜೊತೆಗೆ ಸಮಯವನ್ನು, ಶಕ್ತಿಯನ್ನೂ ಉಳಿಸುವುದು. ಮುಖ್ಯವಾಗಿ ಇದು ನೀವು ತೊಳೆಯಬೇಕಾದ ಪಾತ್ರೆಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ.

4. ಬೆಳ್ಳುಳ್ಳಿ ಪ್ರೆಸ್:
ಬೆಳ್ಳುಳ್ಳಿ ಇಲ್ಲದ ಅಡುಗೆಯೇ ಇರಲು ಸಾಧ್ಯವಿಲ್ಲ. ನೀವು ಭಾರತೀಯ, ಚೈನೀಸ್, ಇಟಾಲಿಯನ್ ಅಥವಾ ಇನ್ನಾವುದೇ ಶೈಲಿಯ ಅಡುಗೆ ಮಾಡುತ್ತಿರಲಿ, ನಿಮ್ಮ ಹೆಚ್ಚಿನ ಪಾಕವಿಧಾನಗಳಲ್ಲಿ ಬೆಳ್ಳುಳ್ಳಿ ಯಾವಾಗಲೂ ಇರುತ್ತದೆ. ಆದರೆ ಅದರ ಸಿಪ್ಪೆ ತೆಗೆಯುವುದು, ಸಣ್ಣಗೆ ಹೆಚ್ಚುವುದು ಹೆಚ್ಚು ಸಮಯ ತೆಗೆದುಕೊಳ್ಳುವ ಭಾಗ ಮತ್ತು ಕಷ್ಟದ ಕೆಲಸ. ಅದಕ್ಕಾಗಿ ಈ ಬೆಳ್ಳುಳ್ಳಿ ಪ್ರೆಸ್ ಬಳಸಿ. ಇದು ಸುಲಭವಾಗಿ ಸಿಪ್ಪೆ ತೆಗೆಯಲು ಸಹಾಯ ಮಾಡುವುದಲ್ಲದೇ, ಆರಾಮದಾಯಕವಾಗಿದೆ.

5. ಹ್ಯಾಂಡ್ಸ್-ಫ್ರೀ ಮಲ್ಟಿ ಪರ್ಪಸ್ ಬ್ಲೆಂಡರ್
ಬಹುಪಯೋಗಿ ಬ್ಲೆಂಡರ್ನಲ್ಲಿ ಹೂಡಿಕೆ ಮಾಡುವುದು ತುಂಬಾ ಪ್ರಯೋಜನಕಾರಿಯಾಗಿದೆ. ಇವುಗಳು ಸಾಮಾನ್ಯವಾಗಿ ನಿಮ್ಮ ಅಗತ್ಯಗಳಿಗೆ ತಕ್ಕಂತೆ ಅನೇಕ ಬ್ಲೆಂಡಿಂಗ್ ಕಪ್ ಮತ್ತು ಬ್ಲೇಡ್‌ಗಳನ್ನು ಹೊಂದಿರುತ್ತವೆ. ನಿಮ್ಮ ಕೈಬೆರಳಿನಿಂದ ಯಾವುದೇ ಕಷ್ಟವಿಲ್ಲದೇ ಚಟ್ನಿಗಳು, ಸ್ಮೂಥಿಗಳು, ಪೇಸ್ಟ್‌ಗಳು ಮತ್ತು ಜ್ಯೂಸ್‌ಗಳನ್ನು ತಯಾರಿಸಲು ನೀವು ಅವುಗಳನ್ನು ಬಳಸಬಹುದು.



Click it and Unblock the Notifications











