Latest Updates
-
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ
Food Safety Day: ಕಿಚನ್‌ನಲ್ಲಿ ನೀವು ಪಾಲಿಸಲೇಬೇಕಾದ ಆಹಾರದ ಸುರಕ್ಷತೆಗಳಿವು
ಆರೋಗ್ಯವಾಗಿರಬೇಕೆಂದರೆ ನಾವು ಯಾವ ಬಗೆಯ ಆಹಾರ ತಿನ್ನುತ್ತೇವೆ ಎನ್ನುವುದು ಎಷ್ಟು ಮುಖ್ಯವೋ, ಆಹಾರ ಸುರಕ್ಷತೆಗೆ ಎಷ್ಟು ಗಮನ ನೀಡಿದ್ದೇವೆ ಎನ್ನುವುದು ಕೂಡ ಮುಖ್ಯ.

ಆಹಾರ ಸುರಕ್ಷತೆ ಎಂದರೆ ಅದನ್ನು ಹೇಗೆ ಸ್ವಚ್ಛ ಮಾಡಬೇಕು, ಬೇಯಿಸುವ ವಿಧಾನ, ಸಂಗ್ರಹಿಸಿಡುವ ವಿಧಾನ, ದೀರ್ಘಕಾಲ ಇಡುವ ಆಹಾರವನ್ನು ಸಂಗ್ರಹಿಸಿಡುವ ವಿಧಾನ ಇವೆಲ್ಲದರ ಬಗ್ಗೆಯೂ ಗಮನ ನೀಡಬೇಕಾಗುತ್ತದೆ. ಇಲ್ಲದಿದ್ದರೆ ಅಂತಹ ಆಹಾರಗಳನ್ನು ತಿನ್ನುವುದರಿಂದ ಫುಡ್ ಪಾಯಿಸನ್ ಅಥವಾ ಮತ್ತಿತರ ಸಮಸ್ಯೆಗಳು ಬರಬಹುದು.
ಆಹಾರದಲ್ಲಿ ಬ್ಯಾಕ್ಟಿರಿಯಾಗಳಿದ್ದರೆ ಗಂಭೀರವಾದ ಆರೋಗ್ಯ ಸಮಸ್ಯೆಗಳು ಬರಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಆಹಾರದ ಸುರಕ್ಷತೆ ಕಡೆಗೆ ಗಮನ ನೀಡದೆ ಪ್ರತೀವರ್ಷಸುಮಾರು 4, 20,000 ಜನರು ಸಾವನ್ನಪ್ಪುತ್ತಿದ್ದಾರೆ ಎಂದು ಹೇಳಿದೆ. ಅದರಲ್ಲೂ ಮಕ್ಕಳಿಗೆ ಕೊಡುವ ಆಹಾರದ ಸುರಕ್ಷತೆ ಕಡೆಗೆ ತುಂಬಾ ಗಮನ ನೀಡಬೇಕಾಗುತ್ತದೆ.
ಆಹಾರವನ್ನು ತೊಳೆಯುವುದರಿಂದ ಹಿಡಿದು ಅದನ್ನು ಬೇಯಿಸುವ ಪಾತ್ರೆ ಹಾಗೂ ಬೇಯಿಸಬೇಕಾದ ವಿಧಾನ ಎಲ್ಲವೂ ಮುಖ್ಯವಾಗಿರುತ್ತದೆ. ಇಲ್ಲಿ ನೀವು ನೀವು ಅಡುಗೆ ಮನೆಯಲ್ಲಿ ಆಹಾರ ಸುರಕ್ಷತೆ ಬಗ್ಗೆ ಗಮನ ಹರಿಸಲೇಬೇಕಾದ ಸಂಗತಿಗಳ ಬಗ್ಗೆ ಹೇಳಿದ್ದೇವೆ ನೋಡಿ:

1. ಆಹಾರ ತಯಾರಿಸುವ ಮುನ್ನ ಸ್ವಚ್ಛತೆ
- ಆಹಾರ ತಯಾರಿಸುವ ಮುನ್ನ ನಿಮ್ಮ ಕೈಗಳನ್ನು ಸೋಪ್ ಹಚ್ಚಿ ತೊಳೆಯಿರಿ. ಯಾವುದೇ ಆಹಾರ ವಸ್ತು ಮುಟ್ಟುವ ಕೈಗಳನ್ನು ತೊಳೆಯಬೇಕು, ಕೈಯಲ್ಲಿರುವ ಬ್ಯಾಕ್ಟಿರಿಯಾಗಳು ಆಹಾರವನ್ನು ಸೇರಿಸದರೆ ಬೇಧಿ ಉಂಟಾಗುವುದು. ಆಹಾರವನ್ನು ತಯಾರಿಸುವ ಮುನ್ನ ಕೈಗಳಿಗೆ ಸೋಪ್ ಹಚ್ಚಿ 20 ಸೆಕೆಂಡ್ ಉಜ್ಜಿ ತೊಳೆಯಬೇಕು.
- ಹಣ್ಣುಗಳು ಹಾಗೂ ತರಕಾರಿಗಳ ಸಿಪ್ಪೆ ಸುಲಿಯುವ ಮುನ್ನ ತೊಳೆಯಬೇಕು, ಇಲ್ಲದಿದ್ದರೆ ಸಿಪ್ಪೆಯಲ್ಲಿರುವ ಕೀಟಾಣುಗಳು ಅಥವಾ ಬ್ಯಾಕ್ಟಿರಿಯಾಗಳು ಆಹಾರದ ಜೊತೆ ಸೇರುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಹಣ್ಣುಗಳನ್ನು ನಾವು ಹಾಗೇ ತಿನ್ನುವುದರಿಂದ ಈ ಬ್ಯಾಕ್ಟಿರಿಯಾಗಳೂ ಹೊಟ್ಟೆಯನ್ನು ಸೇರಿ ವಾಂತಿ-ಬೇಧಿ ಉಂಟು ಮಾಡಬಹುದು.
- ತರಕಾರಿಗಳನ್ನು ಕತ್ತರಿಸುವ ಮುನ್ನ ಕಟ್ಟಿಂಗ್ ಬೋರ್ಡ್ ತೊಳೆಯ ಬೇಕು. ಈ ರೀತಿ ಮಾಡುವುದರಿಂದ ಕಟ್ಟಿಂಗ್ ಬೋರ್ಡ್‌ನಲ್ಲಿ ಒಂದು ವೇಳೆ ಬ್ಯಾಕ್ಟಿರಿಯಾಗಳು ಇದ್ದರೆ ಅವುಗಳನ್ನು ಆಹಾರವನ್ನು ಸೇರುವುದನ್ನು ತಡೆಗಟ್ಟಬಹುದು.
- ಆಹಾರವನ್ನು ಹಾಕುವ ಪಾತ್ರೆಯನ್ನು ತೊಳೆದಿಟ್ಟಿದ್ದರೂ ಮತ್ತೊಮ್ಮೆ ನೀರಿನಲ್ಲಿ ತೊಳೆಯಿರಿ ಹಾಗೂ ಕತ್ತರಿಸಲು ಬಳಸುವ ಚಾಕುಗಳನ್ನು, ಪೀಲಿಂಗ್ ನೈಫ್‌ಗಳನ್ನು ತೊಳೆಯಿರಿ
- ಮಾಂಸ ಹಾಗೂ ಮೀನು ಕತ್ತರಿಸಲು ಪ್ರತ್ಯೇಕ ಕಟ್ಟಿಂಗ್ ಬೋರ್ಡ್ ಇಡಿ.
- ಹಸಿ ಮಾಂಸ ಆಗಷ್ಟೇ ಸ್ವಚ್ಛ ಮಾಡಿದ ಪಾತ್ರೆಗೆ ತೊಳೆದಿದ್ದರೂ ಅದಕ್ಕೆ ಬೇಯಿಸಿದ ಆಹಾರ ಹಾಕಬೇಡಿ.
- ಆಹಾರವನ್ನು ಸರಿಯಾದ ಉಷ್ಣತೆಯಲ್ಲಿ ಬೇಯಿಸಿ. ಆಹಾರವನ್ನು ಚೆನ್ನಾಗಿ ಬೇಯಿಸಿ ತಿನ್ನುವುದು ಒಳ್ಳೆಯದು. ಮೀನು, ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನಿ.
- ಮಾಂಸಾಹಾರ ಸಂಪೂರ್ಣ ಬೆಂದಿರಬೇಕು, ಅದರೊಳಗೆ ಕೆಂಪು-ಕೆಂಪು ಇರಬಾರದು ಹಾಗೂ ಅದರ ಮೂಳೆಯಲ್ಲಿರುವ ರಸ ಕೂಡ ಕಂದು ಅಥವಾ ಕಪ್ಪು ಬಣ್ಣಕ್ಕೆ ತಿರುಗಿರಬೇಕು, ಸ್ವಲ್ಪ ಕೆಂಪು-ಕೆಂಪು ಇರಬಾರದು.
- ಮಾಂಸವನ್ನು ಸುಟ್ಟು ತಿನ್ನುವುದಾರೆ ಅಥವಾ ಗ್ರಿಲ್ಡ್ ಮಾಡಿ ತಿನ್ನುವುದಾದರೆ ಸರಿಯಾದ ರೀತಿಯಲ್ಲಿ ಬೇಯಿಸಿ ತಿನ್ನಿ. ಸರಿಯಾಗಿ ಬೇಯಿಸಿರದ ಆಹಾರ ತಿಂದರೆ ವಾಂತಿ-ಬೇಧಿ ಉಂಟಾಗುವುದು.
- ಈಗಾಗಲೇ ಬೇಯಿಸಿದ ಆಹಾರವನ್ನು 4 ಡಿಗ್ರಿಗಿಂತಲೂ ಕಡಿಮೆ ಉಷ್ಣತೆಯಲ್ಲಿ ಸಂಗ್ರಹಿಸಿಡಿ.
- ಉಳಿದ ಆಹಾರಗಳನ್ನು ಫ್ರಿಡ್ಜ್ ಅಥವಾ ಫ್ರೀಜರ್‌ನಲ್ಲಿ ಇಡಿ.
- ಪೇಸ್ಟ್ರಿ, ಮೊಟ್ಟೆ, ಆಲೂಗಡ್ಡೆ ಈ ರೀತಿಯ ಆಹಾರ ವಸ್ತುಗಳನ್ನು ತಯಾರಿಸಿದ ಮೇಲೆ ಹೊರಗಡೆ ಇಡಬೇಡಿ, ಆಗಲೇ ತಿಂದು ಮುಗಿಸಿ, ಇಲ್ಲಾ ಫ್ರಿಡ್ಜ್‌ನಲ್ಲಿಡಿ.
- ಫ್ರಿಡ್ಜ್ ಅನ್ನು 4 ಡಿಗ್ರಿ Cಗಿಂತಲೂ ಕಡಿಮೆ ತಾಪಮಾನದಲ್ಲಿ ಇಡಿ.
- ಆಹಾರವನ್ನು ತಯಾರಿಸಲು ಸ್ವಚ್ಛವಾದ ನೀರನ್ನು ಬಳಸಿ.
- ತಾಜಾ ಆಹಾರವನ್ನು ಸೇವಿಸಿ.
- ಮೈಕ್ರೋವೇವ್‌ನಲ್ಲಿ ಆಹಾರವನ್ನು ಬೇಯಿಸಿದ ಬಳಿಕ ಸ್ವಲ್ಪ ಹೊತ್ತು ಇಟ್ಟು ನಂತರ ತಿನ್ನಿ.
- ಮೈಕ್ರೋವೇವ್‌ನಲ್ಲಿ ಬೇಯಿಸಿದ ಆಹಾರವನ್ನು ಮತ್ತೆ ಬಿಸಿ ಮಾಡುವಾಗ 165 ಡಿಗ್ರಿ F ಉಷ್ಣತೆಗೆ ಇಟ್ಟು ಬಿಸಿ ಮಾಡಿ.
- ಮಸಾಲೆ ಮಿಶ್ರ ಮಾಡಿದ ಆಹಾರ ಫ್ರಿಡ್ಜ್‌ನಲ್ಲಿಡಿ.
- ಬೆಳಗ್ಗೆ ಮಾಡಿದ ಆಹಾರ ರಾತ್ರಿ ತಿನ್ನುವುದಾದರೆ ಚೆನ್ನಾಗಿ ಬಿಸಿ ಮಾಡಿ ತಿನ್ನಿ.
- ಆಹಾರವನ್ನು ಮುಚ್ಚಳವಿರುವ ಡಬ್ಬದಲ್ಲಿ ಸಂಗ್ರಹಿಸಿಡಿ.

ಆಹಾರವನ್ನು ಪ್ರತ್ಯೇಕಿಸಿ
ನಿಮ್ಮ ಫ್ರಿಡ್ಜ್‌ನಲ್ಲಿ ಆಹಾರವನ್ನು ಇಡುವಾಗ ಬೇಯಿಸಿದ ಆಹಾರ, ಮಾಂಸ, ಮೀನು ಆಹಾರಗಳನ್ನು, ಹಣ್ಣುಗಳು ಹಾಗೂ ತರಕಾರಿಗಳನ್ನು ಪ್ರತ್ಯೇಕವಾಗಿ ಇಡಿ.

ಆಹಾರವನ್ನು ಬೇಯಿಸುವ ವಿಧಾನ

ಸಂಗ್ರಹಿಸಿಡುವುದು

ಆಹಾರ ಸುರಕ್ಷತೆಗೆ ಇತರ ಟಿಪ್ಸ್
ಇತರ ಸಲಹೆ: ಅಡುಗೆ ಕೋಣೆಯಲ್ಲಿ ಜಿರಳೆ, ಹಲ್ಲಿ ಇರದಂತೆ ಎಚ್ಚರವಹಿಸಿ, ಇವುಗಳು ಆಹಾರದ ಮೇಲೆ ಓಡಾಡುವುದು ಅಥವಾ ಆಹಾರದಲ್ಲಿ ಬಿದ್ದರೆ ಅಪಾಯ.



Click it and Unblock the Notifications










