Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಪ್ಲಾಸ್ಟಿಕ್ ಪಾತ್ರೆಗಳಲ್ಲಿರುವ ಕಲೆ ಮತ್ತು ವಾಸನೆಯನ್ನು ತೆಗೆದುಹಾಕಲು ಸಿಂಪಲ್ ಟಿಪ್ಸ್
ಮಕ್ಕಳ ಟಿಫಿನ್ ಬಾಕ್ಸ್ ಆಗಿರಲಿ ಅಥವಾ ಮಾಡಿದ ಅಡುಗೆ ಹಾಕಿಡೋ ಪ್ಲಾಸ್ಟಿಕ್ ಅಥವಾ ಮಣ್ಣಿನ ಪಾತ್ರೆಗಳಾಗಲಿ, ಯಾವುದೇ ಕಲೆ ಅದರ ಮೇಲೆ ಉಳಿದಿದ್ದರೆ, ಅದರ ಸೌಂದರ್ಯವು ಹಾಳಾಗುತ್ತದೆ. ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುವ ಜನರು ಯಾವುದೇ ಆಹಾರ ಪದಾರ್ಥವನ್ನು ಅದರಲ್ಲಿ ದೀರ್ಘಕಾಲ ಇಟ್ಟರೆ, ಆಹಾರದ ವಾಸನೆ ಮತ್ತು ಕಲೆಗಳೆರಡೂ ಅದರ ಮೇಲೆ ಉಳಿಯುತ್ತವೆ ಎಂದು ಹೆಚ್ಚಿನವರು ದೂರುತ್ತಾರೆ. ಈ ಸಮಸ್ಯೆ ನೀವು ಅನುಭವಿಸುತ್ತಿದ್ದರೆ, ಈ ತಂತ್ರಗಳನ್ನು ಅನುಸರಿಸುವ ಮೂಲಕ, ಪ್ಲಾಸ್ಟಿಕ್ ಪಾತ್ರೆಗಳಲ್ಲಿನ ಕಲೆ ಮತ್ತು ವಾಸನೆಯನ್ನು ನೀವು ಸುಲಭವಾಗಿ ತೊಡೆದುಹಾಕಬಹುದು. ಹೇಗೆ ಎಂದು ತಿಳಿಯೋಣ.
ಪ್ಲಾಸ್ಟಿಕ್ ಪಾತ್ರೆಗಳಲ್ಲಿನ ಕಲೆ ಮತ್ತು ವಾಸನೆಯನ್ನು ತೆಗದುಹಾಕಲು ಟಿಪ್ಸ್ ಗಳನ್ನು ಈ ಕೆಳಗೆ ನೀಡಲಾಗಿದೆ:

ವಿನೇಗರ್:
ಪ್ಲಾಸ್ಟಿಕ್ ಪಾತ್ರೆಗಳಿಂದ ಕಲೆಗಳನ್ನು ತೆಗೆದುಹಾಕಲು, ನೀವು ವಿನೆಗರ್ ಬಳಸಿ ಅವುಗಳನ್ನು ಹೊಸತರಂತೆ ಮಾಡಬಹುದು. ಇದಕ್ಕಾಗಿ, ಪ್ಲಾಸ್ಟಿಕ್ ಪಾತ್ರೆಗಳಿಗೆ ವಿನೆಗರ್ ಹಾಕಿ ಸ್ವಲ್ಪ ಸಮಯದವರೆಗೆ ಬಿಡಿ. ಸ್ವಲ್ಪ ಸಮಯದ ನಂತರ, ಪಾತ್ರೆಯನ್ನು ಸ್ಕ್ರಬ್ನಿಂದ ಚೆನ್ನಾಗಿ ಉಚ್ಚಿ ಸ್ವಚ್ಛಗೊಳಿಸಿ. ಇದನ್ನು ಮಾಡುವುದರಿಂದ, ಆಹಾರದ ವಾಸನೆಯು ಹೋಗಿ ಕಲೆಗಳೂ ಕಡಿಮೆಯಾಗುತ್ತದೆ. ಇದರಿಂದ ಪಾತ್ರೆ ಮೊದಲಿನಂತೆ ಹೊಳೆಯುತ್ತದೆ.

ಅಡಿಗೆ ಸೋಡಾ:
ಪ್ಲಾಸ್ಟಿಕ್ ಪಾತ್ರೆಗಳಿಂದ ಕಲೆಗಳನ್ನು ತೆಗೆದುಹಾಕಲು ಅಡಿಗೆ ಸೋಡಾ ಸಹ ಪರಿಣಾಮಕಾರಿ ಪರಿಹಾರವಾಗಿದೆ. ಇದಕ್ಕಾಗಿ ಬಿಸಿನೀರನ್ನು ದೊಡ್ಡ ಪಾತ್ರೆಯಲ್ಲಿ ತುಂಬಿಸಿ 3 ರಿಂದ 4 ಟೀ ಚಮಚ ಅಡಿಗೆ ಸೋಡಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ನಿಮ್ಮ ಕೊಳಕು ಪ್ಲಾಸ್ಟಿಕ್ ಪಾತ್ರೆಗಳನ್ನು ಈ ನೀರಿನಲ್ಲಿ ಸ್ವಲ್ಪ ಸಮಯ ಅದ್ದಿಡಿ. ಸುಮಾರು ಅರ್ಧ ಘಂಟೆಯ ನಂತರ, ಈ ಪಾತ್ರೆಗಳನ್ನು ಸ್ಕ್ರಬ್ನಿಂದ ಉಜ್ಜಿ ಶುದ್ಧ ನೀರಿನಿಂದ ತೊಳೆಯಿರಿ. ನಿಮ್ಮ ಪಾತ್ರೆಗಳು ಮೊದಲಿನಂತೆ ಹೊಳೆಯುತ್ತವೆ.

ಬ್ಲೀಚಿಂಗ್ ಪೌಡರ್:
ಪ್ಲಾಸ್ಟಿಕ್ ಪಾತ್ರೆಗಳಿಂದ ಕಲೆಗಳನ್ನು ತೆಗೆದುಹಾಕಲು ನೀವು ಬ್ಲೀಚಿಂಗ್ ಪೌಡರ್ ನ ನೀರನ್ನು ಸಹ ಬಳಸಬಹುದು. ಪ್ಲಾಸ್ಟಿಕ್ ಪಾತ್ರೆಗಳಲ್ಲಿನ ಕಲೆಗಳನ್ನುತೆಗೆಯಲು, ಬ್ಲೀಚ್ ಮತ್ತು ನೀರಿನ ದ್ರಾವಣವನ್ನು ತಯಾರಿಸಿ. ಆ ಮಿಶ್ರಣದಲ್ಲಿ ಪ್ಲಾಸ್ಟಿಕ್ ಪಾತ್ರೆ ಅದ್ದಿಟ್ಟು, ಅರ್ಧ ಘಂಟೆಯವರೆಗೆ ಬಿಡಿ. ಒಂದು ಗಂಟೆಯ ನಂತರ, ಈ ದ್ರಾವಣದಿಂದ ಪಾತ್ರೆಗಳನ್ನು ತೆಗೆದು ಶುದ್ಧ ನೀರಿನಿಂದ ತೊಳೆಯಿರಿ.ಇದನ್ನು ಮಾಡುವುದರಿಂದ ನಿಮ್ಮ ಪ್ಲಾಸ್ಟಿಕ್ ಪಾತ್ರೆಗಳ ಕಲೆಗಳು ದೂರವಾಗುತ್ತವೆ.



Click it and Unblock the Notifications
