Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಡುಗೆ ಮನೆಯ ಸ್ವಚ್ಛತೆಗಾಗಿ ಖರ್ಚಿಲ್ಲದ ಕೆಲವೊಂದು ಸರಳ ಟಿಪ್ಸ್
ಇತ್ತೀಚಿನ ದಿನಗಳಲ್ಲಿ ಜನರು ಸಾಕಷ್ಟು ಹಣ ಖರ್ಚು ಮಾಡಿ ಬಹು ಅಂತಸ್ತಿನ ಮನೆಗಳನ್ನು ಕಟ್ಟಿಸುತ್ತಾರೆ. ಮನೆಯ ಪ್ರತಿಯೊಂದು ಮೂಲೆ ಮೂಲೆಗಳನ್ನು ತನ್ನ ಅಭಿರುಚಿಗೆ ಅನುಗುಣವಾಗಿ ನಿರ್ಮಿಸಿಕೊಳ್ಳುತ್ತಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಒಳಾಂಗಣ ವಿನ್ಯಾಸ, ಮಾಡರ್ನ್ ಅಡುಗೆ ಕೋಣೆ ಮೊದಲಾದ ರೂಪು ರೇಷೆಗಳನ್ನು ತಮ್ಮ ಮನೆಯನ್ನು ಅನ್ವಯಿಸಿಕೊಳ್ಳುತ್ತಾರೆ. ಆದರೆ ಇಷ್ಟು ಪ್ರೀತಿಯಿಂದ ಕಟ್ಟಿಸಿದ ಮನೆಯನ್ನು ಚೆನ್ನಾಗಿ ನಿರ್ವಹಿಸಿಟ್ಟುಕೊಳ್ಳುವುದೂ ಒಂದು ಕಲೆಯಾಗಿದೆ. ಅದರಲ್ಲೂ ಅಡುಗೆ ಮನೆ ಎಂಬುದು ಆಹಾರವನ್ನು ಸಿದ್ಧಪಡಿಸುವ ಸ್ಥಳವಾಗಿರುವುದರಿಂದ ಇಲ್ಲಿ ಹೆಚ್ಚಿನ ನಿಗಾ ವಹಿಸಬೇಕಾಗುತ್ತದೆ. ಅಡುಗೆ ಮನೆಯಲ್ಲಿ ಅಡುಗೆಯನ್ನು ಸಿದ್ಧಪಡಿಸಿದ ನಂತರ ಈ ಸ್ಥಳವನ್ನು ಆಗಿಂದಾಗಲೇ ಸ್ವಚ್ಛವಾಗಿ ಒರೆಸುವುದು ತೊಳೆಯುವುದು ಮೊದಲಾದ ಕಾರ್ಯಗಳನ್ನು ನಡೆಸಿ ಅಡುಗೆ ಮನೆಯನ್ನು ಥಳಥಳ ಹೊಳೆಯುವಂತೆ ಮಾಡಬಹುದಾಗಿದೆ. ಅಡುಗೆ ಮನೆಯ ಸ್ವಚ್ಛತೆ ಎಂದ ಕೂಡಲೇ ನೀವು ದುಬಾರಿ ಸ್ವಚ್ಛತಾ ಪರಿಕರಗಳನ್ನು ಬಳಸಬೇಕು ಎಂದೇನಿಲ್ಲ.
ದೈನಂದಿನ ನಿಮ್ಮ ಕಾರ್ಯಗಳಿಗೆ ಬಳಸುವ ವಸ್ತುಗಳನ್ನು ಉಪಯೋಗಿಸಿಕೊಂಡು ಅಡುಗೆ ಮನೆಯ ಸ್ವಚ್ಛತೆಯನ್ನು ನೀವು ಮಾಡಬಹುದಾಗಿದೆ. ಕೆಲವೊಂದು ನೈಸರ್ಗಿಕ ಸ್ನೇಹಿಯಾಗಿರುವ ಉತ್ಪನ್ನಗಳನ್ನು ಉಪಯೋಗಿಸಿ ನಿಮ್ಮ ಅಡುಗೆ ಮನೆಯನ್ನು ಥಳ ಥಳ ಹೊಳೆಯುವಂತೆ ಮಾಡಬಹುದಾಗಿದೆ. ಈ ವಸ್ತುಗಳು ಬಜೆಟ್ ಬೆಲೆಯಲ್ಲಿ ಬರುತ್ತಿದ್ದು ನೀವು ಈ ವಸ್ತುಗಳ ಬಗ್ಗೆ ಹೆಚ್ಚು ಅರಿವನ್ನು ಪಡೆದುಕೊಂಡುವರಾಗಿರುವಿರಿ. ಬನ್ನಿ ಹಾಗಿದ್ದರೆ ಆ ವಸ್ತುಗಳೇನು ಎಂಬುದನ್ನು ತಿಳಿದುಕೊಳ್ಳೋಣ ಮತ್ತು ಅವುಗಳನ್ನು ಬಳಸುವ ಬಗೆಯ ವಿವರವನ್ನು ಅರಿಯೋಣ.

1. ಬೇಕಿಂಗ್ ಸೋಡ
ಕೇಕ್ ಅಥವಾ ಬ್ರೆಡ್‌ಗಳನ್ನು ತಯಾರಿಸಲು ಬಳಸುವ ಬೇಕಿಂಗ್ ಸೋಡಾವನ್ನು ಉಪಯೋಗಿಸಿ ನಿಮ್ಮ ಅಡುಗೆ ಮನೆಯನ್ನು ಸುಂದರವಾಗಿಸಬಹುದು. ಇದು ಕಡಿಮೆ ದರದ್ದಾಗಿದ್ದು ಪರಸರ ಸ್ನೇಹಿಯಾಗಿದೆ ಮತ್ತು ಅಡುಗೆ ಕಟ್ಟೆಯನ್ನು ತೊಳೆಯುವುದರ ಜೊತೆ ಗ್ಯಾಸ್ ಸ್ಟವ್ ಅನ್ನು ಸ್ವಚ್ಛಮಾಡಬಹುದು. ಬೇಕಿಂಗ್ ಸೋಡಾವನ್ನು ಬಳಸಿ ಅಡುಗೆ ಮನೆಯನ್ನು ಸ್ವಚ್ಛಮಾಡುವುದರಿಂದ ನಿಮ್ಮ ಆರೋಗ್ಯಕ್ಕೆ ಆಗುವ ಹಾನಿಯನ್ನು ತಪ್ಪಿಸಬಹುದು. ರಾಸಾಯನಿಕ ತೊಳೆಯುವ ಪರಿಕರಗಳಿಗಿಂತ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿ.

2. ಅಮೋನಿಯಾ
ನಿಮ್ಮ ಅಡುಗೆಮನೆಯಲ್ಲಿ ಸಾಕಷ್ಟು ಸಮಸ್ಯೆಗಳು ಕಂಡುಬರಬಹುದು ಆದರೆ ನಿಮ್ಮ ಸ್ಟೌವ್ ಬರ್ನರ್‌ನಲ್ಲಿ ಸಂಗ್ರಹಗೊಂಡ ಜಿಡ್ಡು ಮತ್ತು ಅಡುಗೆಯ ಇತರ ಅಂಶಗಳನ್ನು ನಿವಾರಿಸಲು ಅಮೋನಿಯಾವನ್ನು ಬಳಸಬಹುದಾಗಿದೆ. ನೀವು ಪ್ರತೀ ಬಾರಿ ಏನಾದರೂ ಹುರಿಯುವಾಗ ಇಲ್ಲವೇ ಯಾವುದಾದರೂ ಪದಾರ್ಥ ಬಿದ್ದಾಗ ಈ ಬರ್ನರ್‌ಗಳ ಮೇಲೆ ಸಂಗ್ರಹಗೊಳ್ಳುತ್ತದೆ ಮತ್ತು ಇದನ್ನು ಕೂಡಲೆ ಸ್ವಚ್ಛಗೊಳಿಸದೇ ಇದ್ದಲ್ಲಿ ಅದನ್ನು ತೊಳೆಯುವುದು ಕಷ್ಟಾಸಾಧ್ಯವಾಗಿರುತ್ತದೆ. ನಿಮ್ಮ ಹಣ ಮತ್ತು ಸಮಯವನ್ನು ಉಳಿಸುವ ನೈಸರ್ಗಿಕ ಪರಿಕರಗಳನ್ನು ಬಳಸಿ. ನಿಮ್ಮ ಸ್ಟವ್ ಅನ್ನು ಸ್ವಚ್ಛಗೊಳಿಸಲು ಅಮೋನಿಯಾವನ್ನು ಬಳಸಿ. ಇದರಿಂದ ನಿಮ್ಮ ಹಣ ವಿಪರೀತವಾಗಿ ಖರ್ಚಾಗುವುದನ್ನು ಕಡಿಮೆ ಮಾಡಬಹುದಾಗಿದೆ.

3. ಲಿಂಬೆ, ವಿನೇಗರ್ ಮತ್ತು ಸೋಡಾ
ನಿಮ್ಮ ಕಸದ ತೊಟ್ಟಿ ಮತ್ತು ಜಿಡ್ಡುಗಟ್ಟಿದ ಅಡುಗೆ ಕಟ್ಟೆಯನ್ನು ತೊಳೆಯುವುದು ಎಂದರೆ ಅದೊಂದು ಸವಾಲಿನ ಕೆಲಸವಾಗಿದೆ. ಆದರೆ ಈ ಎಲ್ಲಾ ಕೆಲಸಗಳನ್ನು ಸರಾಗವಾಗಿ ಮಾಡಲು ಕೆಲವೊಂದು ವಿಧಾನಗಳನ್ನು ನೀವು ಹುಡುಕಿಕೊಳ್ಳುವುದರಿಂದ ಈ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ನಿಮ್ಮ ಬಜೆಟ್‌ಗೆ ಸರಿಹೊಂದುವಂತಹ ಮತ್ತು ಪರಿಸರ ಸ್ನೇಹಿ ವಸ್ತುವನ್ನು ಇದಕ್ಕಾಗಿ ಹುಡುಕಿ. ಹೆಚ್ಚು ಖರ್ಚಿನ ಪರಿಕರಗಳನ್ನು ಬಳಸುವುದರ ಬದಲಿಗೆ ಲಿಂಬೆ, ವಿನೇಗರ್ ಮತ್ತು ಸೋಡಾದ ಮಿಶ್ರಣವನ್ನು ಬಳಸಿ ಇದನ್ನು ನಿವಾರಿಸಿಕೊಳ್ಳಬಹುದು. ನಿಮ್ಮ ಕಸದ ತೊಟ್ಟಿಯ ಸ್ವಚ್ಛತೆಯಿಂದ ಹಿಡಿದು, ಸಿಂಕ್, ಕಟ್ಟೆಯ ಸ್ವಚ್ಛತೆಯನ್ನು ಈ ಮೂರು ಪರಿಕರಗಳು ಮಾಡುತ್ತವೆ. ಅದಲ್ಲದೆ ಅದ್ಭುತ ಸುವಾಸನೆಯನ್ನು ಈ ಉತ್ಪನ್ನಗಳು ನೀಡುತ್ತವೆ.

4. ಬಿಸಿ ನೀರು + ಲಿಂಬೆ ರಸ!
ಅಡುಗೆ ಮನೆಯ ಸ್ವಚ್ಛತೆ ಎಂದಾಗ ಮೈಕ್ರೊವೇವ್ ಅನ್ನು ನೀಟ್ ಆಗಿ ಇಟ್ಟುಕೊಳ್ಳುವುದನ್ನು ಮರೆಯಬಾರದು. ಮೈಕ್ರೊವೇವ್‌ನ ಸ್ವಚ್ಛತೆ ಎಂದರೆ ಅದೊಂದು ಸವಾಲಿನ ಕೆಲಸವಾಗಿದೆ. ಅಡುಗೆ ಕೋಣೆಯಲ್ಲಿರುವ ಸ್ಟವ್‌ನಂತೆಯೇ ಮೈಕ್ರೊವೇವ್ ಕೂಡ ಕೊಂಚ ಪ್ರಯಾಸವನ್ನೇ ನಮಗೆ ನೀಡುತ್ತದೆ. ಒಂದು ಪಾತ್ರೆಯಲ್ಲಿ ಸ್ವಲ್ಪ ಬಿಸಿ ನೀರನ್ನು ತೆಗೆದುಕೊಂಡು ಅದಕ್ಕೆ ಲಿಂಬೆ ರಸವನ್ನು ಹಿಂಡಿಕೊಳ್ಳಿ. ಈ ನೀರಿನಿಂದ ಮೈಕ್ರೊವೇವ್‌ನ ಒಳಭಾಗವನ್ನು ತೊಳೆಯಿರಿ. ಮೈಕ್ರೊವೇವ್ ಒಳಭಾಗದಲ್ಲಿರುವ ಜಿಡ್ಡು, ಗ್ರೀಸ್ ಅನ್ನು ಈ ನೀರು ಸ್ವಚ್ಛಗೊಳಿಸುತ್ತದೆ.

5. ನೀರು ಮತ್ತು ಟಾರ್ಟರ್ ಕ್ರೀಮ್
ಬೇಕಿಂಗ್ ಸೋಡಾವನ್ನು ಬಳಸಿ ನಿಮ್ಮ ಅಡುಗೆ ಮನೆಯ ಕಟ್ಟೆಯ ಮೇಲಿರುವ ಜಿಡ್ಡನ್ನು ನಿವಾರಣೆ ಮಾಡಿಕೊಳ್ಳಬಹುದು. ಆದರೆ ಸ್ಟೀಲ್ ಟೋಸ್ಟರ್ ಅನ್ನು ನೀವು ಉತ್ತಮ ರೀತಿಯಲ್ಲಿ ಸ್ವಚ್ಛಮಾಡಬೇಕು. ಈ ಸ್ವಚ್ಛತೆಗಾಗಿ ಒಂದೊಳ್ಳೆಯ ಉಪಾಯವನ್ನು ನಾವು ನಿಮಗಾಗಿ ನೀಡುತ್ತಿದ್ದು ಇದನ್ನು ಮನೆಯಲ್ಲಿ ಬಳಸಿ ನೋಡಿ. ಟಾರ್ಟರ್ ಕ್ರೀಮ್ ಬಳಸಿಕೊಂಡು ಈ ಸ್ಟೀಲ್ ಟೋಸ್ಟರ್ ಮೇಲಿನ ಕಲೆಯನ್ನು ನಿವಾರಿಸಿಕೊಳ್ಳಬಹುದಾಗಿದೆ.

6. ಡ್ರೈಯರ್ ಶೀಟ್
ಇಷ್ಟೆಲ್ಲಾ ಸ್ವಚ್ಛತಾ ವಿಧಾನಗಳನ್ನು ನಾವು ತಿಳಿಸಿಕೊಟ್ಟಿದ್ದು ಕೊನೆಯಲ್ಲಿ ಅತ್ಯಂತ ಮುಖ್ಯವಾಗಿರುವ ಸ್ವಚ್ಛತಾ ವಿಧಾನವನ್ನು ತಿಳಿಸುತ್ತಿದ್ದೇವೆ. ನಿಮ್ಮ ಪ್ಯಾನ್‌ಗೆ ಅಂಟಿಕೊಂಡಿರುವ ಕೊಳೆ, ಗ್ರೀಸ್ ಬೇಕ್ ಮಾಡಿದ ಆಹಾರದ ತುಣುಕುಗಳನ್ನು ಸ್ವಚ್ಛಮಾಡಲು ಅದರ ಮೇಲೆ ಡ್ರಯರ್ ಶೀಟ್ ಅನ್ನು ಇರಿಸಿ ನಂತರ ಪ್ಯಾನ್‌ಗೆ ಸ್ವಲ್ಪ ನೀರು ಸೇರಿಸಿ. ಶೀಟ್‌ಗೆ ನೀರು ಸ್ಪರ್ಶವಾಗುತ್ತಿದ್ದಂತೆ ಕೊಳೆ ಮತ್ತು ಗ್ರೀಸ್ ನಿವಾರಣೆಯಾಗಲು ಆರಂಭವಾಗುತ್ತದೆ. ಇದು ಹೆಚ್ಚು ಕಷ್ಟಕರವಾಗಿಲ್ಲದ ಮತ್ತು ಸುಲಭವಾದ ವಿಧಾನವಾಗಿದೆ.



Click it and Unblock the Notifications