Latest Updates
-
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ
ಮನೆಯನ್ನು ಸ್ವಚ್ಛಗೊಳಿಸುವಾಗ ಪಾಲಿಸಬೇಕಾದ ಜ್ಯೋತಿಷ್ಯ ನಿಯಮಗಳು
ನಮ್ಮ ಮನೆಯ ಹಿರಿಯರು ಜ್ಯೋತಿಷ್ಯ ಶಾಸ್ತ್ರದಲ್ಲಿ ನಂಬಿಕೆಯನ್ನಿಟ್ಟಿದ್ದರು. ಮನುಕುಲ ಉನ್ನತಿಯನ್ನು ಪಡೆಯುತ್ತಿದ್ದಂತೆ ನಾವು ಹೆಚ್ಚು ವೈಜ್ಞಾನಿಕ ಅಂಶಗಳಿಗೆ ಒತ್ತು ಕೊಟ್ಟಿದ್ದೇವೆ. ವಿಜ್ಞಾನ ಏನು ಹೇಳುತ್ತದೆಯೋ ಆ ಮಾತಿಗೆ ನಾವು ಮಹತ್ವವನ್ನು ನೀಡುತ್ತಿದ್ದೇವೆ. ಅದಾಗ್ಯೂ ವಾಸ್ತು ಕೂಡ ವೈಜ್ಞಾನಿಕ ಅಂಶಗಳಿಗೆ ಕಟ್ಟು ಬಿದ್ದಿದೆ. ಎಷ್ಟೋ ವಿಷಯಗಳು ಜ್ಯೋತಿಷ್ಯದಲ್ಲಿ ಹೇಳಿರುವಂತಹದ್ದು ವೈಜ್ಞಾನಿಕವಾಗಿ ನಿಜವಾಗಿದೆ. ಆದ್ದರಿಂದ ವಿಜ್ಞಾನದ ಅಡಿಪಾಯ ಕೂಡ ಜ್ಯೋತಿಷ್ಯ ಎಂದೇ ಹೇಳಬಹುದು.
ಇಂದಿನ ತಲೆಮಾರಿನ ಹೆಚ್ಚಿನ ಜನರು ಮನೆಯನ್ನು ಸ್ವಚ್ಛ ಮಾಡುವ ವಿಷಯದಲ್ಲಿ ಜ್ಯೋತಿಷ್ಯ ನಿಯಮಗಳನ್ನು ಪಾಲಿಸುತ್ತಿಲ್ಲ. ಮನೆಯನ್ನು ಸ್ವಚ್ಛ ಮಾಡುವುದೆಂದರೆ ಕಸವನ್ನು ಗುಡಿಸಿ ಅದನ್ನು ಹೊರಹಾಕುವುದು ಎಂದು ನಂಬಿದ್ದಾರೆ. ಆದರೆ ಮನೆಯ ಕಸವನ್ನು ಬಿಸಾಡುವ ಸಮಯದಲ್ಲಿ ಕೆಲವೊಂದು ರೀತಿ ರಿವಾಜುಗಳನ್ನು ನೀವು ಪಾಲಿಸಬೇಕಾಗುತ್ತದೆ ಅಂದರೆ ಮನೆಯ ಸಂಜೆಯ ಸಮಯದಲ್ಲಿ ಲಕ್ಷ್ಮೀಯ ಆಗಮನವಾಗುತ್ತದೆ ಆದ್ದರಿಂದ ನಿಮ್ಮ ಮನಸ್ಸಿಗೆ ತೋಚಿದಂತೆ ಕಸವನ್ನು ಎಸೆಯುವುದಾಗಲೀ ಮನೆಯ ಮೂಲೆಯಲ್ಲಿ ಸಂಗ್ರಹಿಸುವುದಾಗಲೀ ಮಾಡಬಾರದು. ಇಂದಿನ ಲೇಖನದಲ್ಲಿ ಮನೆಯನ್ನು ಶುದ್ಧೀಕರಿಸುವ ಸಮಯದಲ್ಲಿ ಪಾಲಿಸಬೇಕಾದ ಜ್ಯೋತಿಷ್ಯ ನಿಯಮಗಳೇನು ಎಂಬುದನ್ನು ತಿಳಿದುಕೊಳ್ಳೋಣ.

ಮನೆ ಎಂದರೆ ಶಾಂತಿ ನೆಮ್ಮದಿ ಮತ್ತು ಭಾಗ್ಯದ ಸಂಕೇತ
ಲಕ್ಷ್ಮೀಯನ್ನು ಮನೆಯ ಭಾಗ್ಯ ಎಂದು ಕರೆಯುತ್ತಾರೆ. ಮನೆ ಎಂದರೆ ಶಾಂತಿ ನೆಮ್ಮದಿ ಮತ್ತು ಭಾಗ್ಯದ ಸಂಕೇತವಾಗಿದೆ. ಮನೆಯಿಂದ ಹಣ್ಣ ಹೋದರೆ ಅದು ಲಕ್ಷ್ಮೀಯೇ ಹೋದಂತೆ ಎಂದು ನಂಬುತ್ತಾರೆ. ಅದ್ದರಿಂದ ಮನೆಯಲ್ಲಿ ಲಕ್ಷ್ಮೀ ಆವಾಸ ಸದಾಕಾಲ ಇರಬೇಕು ಎಂಬುದೇ ವಾಸ್ತುವು ತಿಳಿಸುವ ಸಲಹೆಯಾಗಿದೆ. ನಮ್ಮ ಮನೆಯನ್ನು ನಾವು ಸ್ವಚ್ಛವಾಗಿರಿಸಿದಲ್ಲಿ ಲಕ್ಷ್ಮೀ ಆ ಮನೆಯಲ್ಲಿ ನೆಲೆನಿಲ್ಲುತ್ತಾರೆ ಎಂದಾಗಿದೆ.
ಮನೆಯನ್ನು ಗುಡಿಸುವ ಸಮಯ
ಮನೆಯನ್ನು ಗುಡಿಸುವುದು ಮನೆಯನ್ನು ಸ್ವಚ್ಛ ಮಾಡುವ ಭಾಗವಾಗಿದೆ. ಮನೆಯ ಕಸಗುಡಿಸುವುದು ಎಂದರೆ ಅದೊಂದು ಸರಳ ಕೆಲಸವಾಗಿದೆ. ಆದರೆ ನಿಮ್ಮ ಮನಸ್ಸಿಗೆ ಬಂದ ಸಮಯದಲ್ಲಿ ಮನೆಯ ಕಸವನ್ನು ಗುಡಿಸಬಾರದು. ಸೂರ್ಯೋದಯದ ನಂತರ ಮಾತ್ರ ಇದನ್ನು ಕೈಗೊಳ್ಳಬೇಕು ಎಂದು ಜ್ಯೋತಿಷ್ಯ ಹೇಳುತ್ತದೆ. ಅಂತೆಯೇ, ಸೂರ್ಯನು ಒಮ್ಮೆ ಮುಳುಗಿದ ನಂತರ, ನೀವು ಕಸ ಗುಡಿಸುವಂತಿಲ್ಲ. ಇದು ಭಾರತೀಯ ಜ್ಯೋತಿಷ್ಯ ಶಾಸ್ತ್ರ ಹೇಳುವುದಾಗಿದೆ. ಇದಕ್ಕೆ ವೈಜ್ಞಾನಿಕ ವಿವರಣೆಯು ವ್ಯಕ್ತಿಯು ನೆಲವನ್ನು ಗುಡಿಸಿದಾಗ, ಯಾವುದೇ ಮಣ್ಣನ್ನು ಅಲ್ಲಿ ಉಳಿಯದಂತೆ ಅತ್ಯಂತ ಎಚ್ಚರಿಕೆಯಿಂದ ಗುಡಿಸಬೇಕಾಗಿದೆ.
ನೆಲವನ್ನು ಗುಡಿಸುವ ಸಮಯದಲ್ಲಿ
ನೆಲವನ್ನು ಗುಡಿಸುವ ಸಮಯದಲ್ಲಿ ಚೂಪಾದ ವಸ್ತುಗಳು ಉಳಿದರೆ ಅದು ಹಾನಿಯನ್ನುಂಟು ಮಾಡುತ್ತದೆ. ಅಂತೆಯೇ ಬೆಳಕಿದ್ದಾಗ ಗುಡಿಸುವ ಕ್ರಿಯೆ ಚೆನ್ನಾಗಿ ನಡೆಯುತ್ತದೆ. ಇನ್ನು ಕೃತಕ ದೀಪದ ಅಡಿಯಲ್ಲಿ ನಾವು ಸ್ವಚ್ಛ ಮಾಡಲೂ ಹೋಗಬಾರದು. ಸೂರ್ಯನ ಬೆಳಕಿನಲ್ಲಿ ಈ ಕೆಲಸವನ್ನು ಮಾಡಬೇಕು.
ತುರ್ತು ಸಮಯದಲ್ಲಿ
ಇನ್ನು ತುರ್ತು ಸಮಯದಲ್ಲಿ ಮನೆಯ ಸ್ವಚ್ಛತೆಯನ್ನು ತುರ್ತಾಗಿ ಮಾಡುವುದರಿಂದ ಕೂಡ ಕೆಲವೊಂದು ವಸ್ತುಗಳು ನೆಲದಲ್ಲಿ ಉಳಿದು ಅದು ಹಾನಿಯನ್ನುಂಟು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಮನೆಯಲ್ಲಿ ಮಕ್ಕಳಿದ್ದರೆ ಅವರಿಗೆ ಅಪಾಯ ಉಂಟಾಗಬಹುದು. ಈ ಸಂದರ್ಭದಲ್ಲಿ ನೀವು ಮನೆಯನ್ನು ಬಟ್ಟೆಯಿಂದ ಒರೆಸಬೇಕು.
ಮನೆಯನ್ನು ಗುಡಿಸಿದ ನಂತರ ಕಸವನ್ನು ಸಂಜೆಯ ವೇಳೆ ಬಿಸಾಡಬೇಡಿ. ಇದರಿಂದ ಮನೆಯಲ್ಲಿರುವ ಲಕ್ಷ್ಮೀ ಮನೆಯಲ್ಲಿರುವ ಸಂಪತ್ತನ್ನು ತನ್ನೊಂದಿಗೆ ತೆಗೆದುಕೊಂಡು ಹೋಗುತ್ತಾರೆ. ಮನೆಯ ಕಸವನ್ನು ಸಂಗ್ರಹಿಸಿ ಮರುದಿನ ಅದನ್ನು ಹೊರಹಾಕಿ. ಇಂತಹ ಸೂಚನೆಗಳನ್ನು ಕೆಲವೊಂದು ಪ್ರಮುಖ ಸಂದರ್ಭಗಳಲ್ಲಿ ಮಾತ್ರ ಮಾಡಿ. ನಿಮ್ಮ ಮನೆಯ ಕೊಠಡಿಯನ್ನು ಬಟ್ಟೆಯಿಂದ ಸ್ವಚ್ಛ ಮಾಡುವ ಕಾಯಕವನ್ನು ಅಭ್ಯಾಸ ಮಾಡಿಕೊಳ್ಳಬೇಡಿ. ಇದರಿಂದ ನಿಮ್ಮ ಮನೆಯ ಸ್ವಚ್ಛತೆ ಆಗುತ್ತದೆ ಇಲ್ಲದಿದ್ದರೆ ಕೊಳೆ ಹಾಗೆಯೇ ಉಳಿಯುತ್ತದೆ.
ಮನೆಯನ್ನು ಸ್ವಚ್ಛತೆಗೆ ಒಂದಿಷ್ಟು ಸಲಹೆಗಳು
ಬೇಡದ ವಸ್ತುಗಳನ್ನು ಮನೆಯಿಂದ ಹೊರಹಾಕಿ ಪ್ರತಿಯೊಂದು ಕೋಣೆಯೊಳಗೆ ಇರುವ ಅರ್ಧದಷ್ಟು ವಸ್ತುಗಳನ್ನು ತೆಗೆದು ಜಾಗ ಮಾಡಿ. ಮನೆ ಸೌಂದರ್ಯ ಹೆಚ್ಚಿಸಲು ಕಡಿಮೆ ಖರ್ಚಿನಲ್ಲಿ ಮಾಡಬಹುದಾದ ಮೊದಲ ಕೆಲಸ ಮನೆಯೊಳಗೆ ಜಾಗವಿರುವಂತೆ ನೋಡಿಕೊಳ್ಳುವುದು. ಮನೆ ಮುಂದಿನ ದ್ವಾರ ಮತ್ತು ಮೆಟ್ಟಿಲುಗಳಲ್ಲಿ ಯಾವುದೇ ಬಿರುಕು ಕಾಣಿಸಿಕೊಂಡಿದ್ದರೆ ಅದಕ್ಕೆ ಸಿಮೆಂಟ್ ಹಾಕಿ ಅಥವಾ ಸಣ್ಣ ಇಟ್ಟಿಗೆಗಳನ್ನು ಜೋಡಿಸಿ ಮೆಟ್ಟಿಲು ರಚಿಸಿದರೆ ಅಂದ ಹೆಚ್ಚುತ್ತದೆ. ಒಂದು ವೇಳೆ ಬಿರುಕುಗಳಿದ್ದರೆ ಸಿಮೆಂಟ್‌ನಿಂದ ತುಂಬಿಸಿ ಅದಕ್ಕೆ ಪೈಂಟ್ ಮಾಡಿ.
ಅಡುಗೆ ಕೋಣೆ ಸಾಮಗ್ರಿಗಳು
ಮನೆಯಲ್ಲಿ ಅಡುಗೆ ಕೋಣೆಗೆ ತನ್ನದೇ ಆದ ಸ್ಥಾನವಿದೆ. ಅಡುಗೆ ಕೋಣೆಯಲ್ಲಿರುವ ಹಳೆಯ ಮತ್ತು ಉಪಯೋಗಕ್ಕೆ ಬಾರದ ವಸ್ತುಗಳನ್ನು ತೆಗೆದು ಅಲ್ಲಿ ಹೊಸ ವಸ್ತುಗಳನ್ನಿಡಿ. ಇದನ್ನು ಮಾರುಕಟ್ಟೆಯಿಂದಲೇ ಖರೀದಿಸಬೇಕೆಂದಿಲ್ಲ. ಸ್ವಚ್ಛಗೊಳಿಸಿದರೆ ಹಳೆ ವಸ್ತುವಿಗೂ ಹೊಸ ಕಳೆ ಬರುತ್ತದೆ. ಇನ್ನು ನಿಮ್ಮ ಅಡುಗೆ ಮನೆಯ ಕೆಲಸಗಳನ್ನು ಮುಗಿಸಿದ ನಂತರ ಅಡುಗೆ ಕಟ್ಟೆಯನ್ನು ಸ್ವಚ್ಛಮಾಡಿ. ಇದಕ್ಕಾಗಿ ಮೃದುವಾದ ಬಟ್ಟೆ ಮತ್ತು ಮನೆಯಲ್ಲೇ ತಯಾರಿಸಿದ ಡಿಟರ್ಜೆಂಟ್ ಅನ್ನು ಬಳಸಿ ಲಿಂಬೆ ರಸವು ದುರ್ಗಂಧವನ್ನು ಹೋಗಲಾಡಿಸುತ್ತದೆ ಮತ್ತು ಅಡುಗೆ ಕಟ್ಟೆಯ ಕಲೆಗಳನ್ನು ನಿವಾರಿಸುತ್ತದೆ. ಅಲ್ಲದೆ ಪ್ರತೀ ದಿನವೂ ಗ್ಯಾಸ್ ಸ್ಟವ್ ಅನ್ನು ನೀವು ಸ್ವಚ್ಛಗೊಳಿಸಬೇಕಾಗುತ್ತದೆ. ನೀವು ಆಹಾರ ತಯಾರಿಸುವಾಗ ಏನಾದರೂ ಗ್ಯಾಸ್ ಮೇಲೆ ಬಿತ್ತೆಂದರೆ ಕೂಡಲೇ ಇದನ್ನು ಒರೆಸಿ. ಹೀಗೆ ಒರೆಸುವುದರಿಂದ ಸ್ಟವ್ ಹಾಳಾಗುವುದನ್ನು ತಪ್ಪಿಸಬಹುದಾಗಿದೆ.
ಮಕ್ಕಳಿರುವ ಮನೆ
ಮಕ್ಕಳಿರುವ ಮನೆಯಲ್ಲಿ ಅಲ್ಲಲ್ಲಿ ಆಟಿಕೆಗಳು, ವಸ್ತುಗಳು ನೆಲದ ಮೇಲೆ ಹರಡಿಕೊಂಡಿರುವುದು ಸಾಮಾನ್ಯ ಅಲ್ವಾ? ಚಿಂತೆ ಬೇಡ. ಅದಕ್ಕೂ ಉಪಾಯವಿದೆ. ಮೊದಲನೆಯದಾಗಿ ಆಟವಾಡಿದ ನಂತರ ಎಲ್ಲಾ ಆಟಿಕೆಗಳನ್ನು ಒಂದು ಪೆಟ್ಟಿಗೆಯಲ್ಲಿ ಇಡಲು ನಿಮ್ಮ ಮಗುವಿಗೆ/ಮಕ್ಕಳಿಗೆ ಅಭ್ಯಾಸ ಮಾಡಿಸಿ. ತುಂಬಾ ಚಿಕ್ಕ ಮಕ್ಕಳಾಗಿದ್ದರೆ,ನೀವು ಕೂಡಾ ಈ ಕೆಲಸವನ್ನು ಮಾಡಬಹುದು. ಪೆಟ್ಟಿಗೆಯೇ ಆಗಬೇಕೆಂದಿಲ್ಲ, ಬಟ್ಟೆಯ ಚೀಲಗಳನ್ನು ಕೂಡಾ ಉಪಯೋಗಿಸಬಹುದು. ಮಕ್ಕಳು ಆಟವಾಡಿದ, ಊಟಮಾಡಿದ ಜಾಗವನ್ನು ಆಗಿಂದಾಗಲೇ ಶುಚಿಗೊಳಿಸಿ. ಮಕ್ಕಳಿಗೆ ಕೈಗೆ ಸಿಕ್ಕ ವಸ್ತುವನ್ನು ಬಾಯಿಗಿಡುವ ಅಭ್ಯಾಸವಿದೆ ಎಂದು ನಾವೆಲ್ಲರೂ ತಿಳಿದಿದ್ದೇವೆ!
ಟಿ.ವಿ. ಸ್ಟ್ಯಾಂಡ್ ಮೇಲೆ ಇದ್ದ ಧೂಳನ್ನು ತೆಗೆಯಿರಿ ಮತ್ತು ವಸ್ತುಗಳನ್ನು ಮರುಹೊಂದಿಸಿ
ವಸ್ತುಗಳ ಮರುಹೊಂದಿಕೆ ಬಹಳ ಸಮಯ ತೆಗೆದುಕೊಳ್ಳುವ ಕೆಲಸ. ಆದರೆ ಅಷ್ಟೆ ಮುಖ್ಯವಾದುದು. ಮನೆಯೊಂದನ್ನು ಆಯೋಜಿಸಲು ಇದು ಒಂದು ಪ್ರಮುಖ ಅಭ್ಯಾಸವಾಗಿದೆ. ಮೇಜಿನ ಮೇಲೆ, ಟಿ.ವಿ. ಸ್ಟ್ಯಾಂಡ್ ಮೇಲೆ ಇದ್ದ ಧೂಳನ್ನು ತೆಗೆಯಿರಿ ಮತ್ತು ವಸ್ತುಗಳನ್ನು ಮರುಹೊಂದಿಸಿ( ಜಾಗ ಬದಲಾಯಿಸಿ). ಮೇಜುಗಳ ಮೇಲೆ ಅಥವಾ ಯಾವುದೇ ಪೀಠೋಪಕರಣಗಳ ಮೇಲೆ ವಸ್ತುಗಳು ಕಡಿಮೆ ಇದ್ದಷ್ಟು ಕ್ಲೀನಿಂಗ್ ಸುಲಭ.
ಮನೆಯನ್ನು ಸ್ವಚ್ಛಮಾಡುವುದಕ್ಕೆ ಇರುವ ಕ್ರಮಗಳೇನು ಎಂಬುದನ್ನು ನೀವು ಇಂದಿನ ಲೇಖನದಲ್ಲಿ ಅರಿತುಕೊಂಡಿದ್ದೀರಿ. ನಿಮ್ಮ ಮನೆಯ ಸದಸ್ಯರ ಆರೋಗ್ಯಕ್ಕಾಗಿ ಈ ಸೂಚನೆಗಳನ್ನು ನೀವು ಪಾಲಿಸಬೇಕಾಗುತ್ತದೆ. ಅಂತೆಯೇ ಜ್ಯೋತಿಷ್ಯ ಶಾಸ್ತ್ರದ ಅಂಶಗಳನ್ನು ನಾವು ಪಾಲಿಸಲೇಬೇಕು ಇದರಿಂದ ನಮ್ಮ ಆರೋಗ್ಯ ಮತ್ತು ಆಯುಷ್ಯ ಕೂಡ ವೃದ್ಧಿಯಾಗುತ್ತದೆ.



Click it and Unblock the Notifications











